• Home
  • »
  • News
  • »
  • business
  • »
  • Elon Musk Friend: ಭಾರತದಲ್ಲಿರುವ ಎಲಾನ್ ಮಸ್ಕ್ ಬೆಸ್ಟ್ ಫ್ರೆಂಡ್ ಯಾರು? ಇಲ್ಲಿದೆ ವಿವರ

Elon Musk Friend: ಭಾರತದಲ್ಲಿರುವ ಎಲಾನ್ ಮಸ್ಕ್ ಬೆಸ್ಟ್ ಫ್ರೆಂಡ್ ಯಾರು? ಇಲ್ಲಿದೆ ವಿವರ

ಎಲೋನ್ ಮಸ್ಕ್ ಗೆಳೆಯ

ಎಲೋನ್ ಮಸ್ಕ್ ಗೆಳೆಯ

ಪ್ರಣಯ್ ಅವರ ಇ-ಮೇಲ್ ಗೆ ಎಲೋನ್ ಮಸ್ಕ್ ಅವರು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದರು. ಆಗ ಶುರುವಾಯ್ತು ನೋಡಿ ಇವರಿಬ್ಬರ ಮಧ್ಯೆ ಸ್ನೇಹ.

  • Trending Desk
  • Last Updated :
  • New Delhi, India
  • Share this:

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ (Elon Musk) ಅವರಿಗೆ ಭಾರತದಲ್ಲಿ (India) ಅಲ್ಲದೇ ವಿಶ್ವದ ಬೇರೆ ಬೇರೆ ದೇಶಗಳಲ್ಲಿ ದೊಡ್ಡ ದೊಡ್ಡ ಹುದ್ದೆಯಲ್ಲಿರುವ ಪ್ರಭಾವಿ ವ್ಯಕ್ತಿಗಳ (Popular Persons) ಪರಿಚಯ ಮತ್ತು ಸ್ನೇಹವಿರುವುದು ಸಾಮಾನ್ಯವಾದ ವಿಚಾರವೇ ಆಗಿದೆ. ಆದರೆ ಭಾರತದಲ್ಲಿ ಮಸ್ಕ್ ಅವರಿಗೆ ಒಬ್ಬ ತುಂಬಾನೇ ಸ್ಪೆಷಲ್ ಸ್ನೇಹಿತ (Elon musk Friend) ಇದ್ದಾರೆ ಅಂತೆ. ಆದರೆ ಯಾರು ಊಹಿಸಿದ ರೀತಿಯಲ್ಲಿ ಒಂದು ಸ್ನೇಹ ಎಲಾನ್ ಮಸ್ಕ್ ಮತ್ತು ಪುಣೆಯ ಒಬ್ಬ ಟೆಕ್ಕಿ (Pune Techie) ಮಧ್ಯೆ ಚಿಗುರೊಡೆದಿದೆ ಅಂತ ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ. ಈ ಸ್ನೇಹ ನಿನ್ನೆ ಮೊನ್ನೆದಲ್ಲ ಬಿಡಿ, 2018 ರಲ್ಲಿ ಟೆಸ್ಲಾ ಅವರ ಸ್ವಯಂಚಾಲಿತ ವಿಂಡ್ಶೀಲ್ಡ್ ವೈಪರ್​​ಗಳಲ್ಲಿನ ದೋಷವನ್ನು ಎತ್ತಿ ತೋರಿಸಿದಾಗ, ಪುಣೆಯ ನಿವಾಸಿ ಪ್ರಣಯ್ ಪಥೋಲೆ (Pranay Pathole) ಅವರಿಗೆ ಆಗ ಕೇವಲ 19 ವರ್ಷ ವಯಸ್ಸಾಗಿತ್ತು. ಪ್ರಣಯ್ ಅವರ ಇ-ಮೇಲ್ ಗೆ ಎಲಾನ್ ಮಸ್ಕ್ ಅವರು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದರು. ಆಗ ಶುರುವಾಯ್ತು ನೋಡಿ ಇವರಿಬ್ಬರ ಮಧ್ಯೆ ಸ್ನೇಹ.


ಈಗ ಆ ಪ್ರಣಯ್ ಪುಣೆಯಲ್ಲಿ ಒಬ್ಬ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಪ್ರಣಯ್ ಪಥೋಲೆ ಅವರು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಅವರೊಂದಿಗಿನ ಅಸಂಭವ ಸ್ನೇಹಕ್ಕೆ ತುಂಬಾನೇ ಹೆಸರುವಾಸಿಯಾಗಿದ್ದಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.


ಈಗ ಪ್ರಣಯ್ ಅವರು ತನ್ನ ಸ್ನೇಹಿತರಾದ ಮಸ್ಕ್ ಅವರ ಪರವಾಗಿ ಮಾತಾಡಿದ್ದಾರೆ ನೋಡಿ. ಎಲೋನ್ ಮಸ್ಕ್ ಅವರು ಪಡೆಯುತ್ತಿರುವ ಆ ದ್ವೇಷವು "ನ್ಯಾಯ ಸಮ್ಮತವಲ್ಲ" ಎಂದು ಮಸ್ಕ್‌ ಬಗ್ಗೆ ಸಮರ್ಥನೆ ಹೇಳಿಕೆ ನೀಡಿದ್ದಾರೆ.


ಟೆಕ್ ದೈತ್ಯ ಎಲಾನ್ ಮಸ್ಕ್ ಅವರು ಅನೇಕರಿಗೆ ಸ್ಫೂರ್ತಿ


ಟೆಕ್ ದೈತ್ಯನನ್ನು "ಸ್ಫೂರ್ತಿ" ಎಂದು ಕರೆದ ಪ್ರಣಯ್ ಪಥೋಲೆ, ಮಸ್ಕ್ ಒಡೆತನದ ಟ್ವಿಟ್ಟರ್ ನಲ್ಲಿ "ಎಲಾನ್ ಮಸ್ಕ್ ಪಡೆಯುತ್ತಿರುವ ದ್ವೇಷವು ನ್ಯಾಯ ಸಮ್ಮತವಾದುದ್ದಲ್ಲ. ಎಲೋನ್ ಈ ತಲೆಮಾರಿನ ಶ್ರೇಷ್ಠ ಎಂಜಿನಿಯರ್ ಗಳಲ್ಲಿ ಒಬ್ಬರು.


ಹವಾಮಾನ ಬದಲಾವಣೆ, ಮರುಬಳಕೆಯ ರಾಕೆಟ್ ಗಳು, ಎಐ, ಸಂಚಾರ ಮತ್ತು ವಾಕ್ ಸ್ವಾತಂತ್ರ್ಯದೊಂದಿಗೆ ಅಸ್ತಿತ್ವದ ಅಪಾಯವನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದಾರೆ. ಅವರೊಬ್ಬ ಸ್ಫೂರ್ತಿ" ಎಂದು ಪ್ರಣಯ್ ಅವರು ಹೇಳಿದ್ದಾರೆ.


ಪಥೋಲೆ ಅನುಸರಿಸುವ ಅಥವಾ ಉಲ್ಲೇಖಿಸುವವರ ಕಾಮೆಂಟ್ ಗಳಿಗೆ ಮಾತ್ರ ಸೀಮಿತವಾಗಿರುವ ಈ ಟ್ವೀಟ್ ಗೆ ಸುಮಾರು 41,000 ಕ್ಕೂ ಹೆಚ್ಚು ಲೈಕ್ ಗಳು ಬಂದಿವೆ ಅಂತ ಹೇಳಬಹುದು.


ಇದನ್ನೂ ಓದಿ:ದಾವಣಗೆರೆ ರೈತನ ಬದುಕು ಬದಲಾಯಿಸಿತು ಈ ಹಣ್ಣು! 5 ವರ್ಷದಲ್ಲಿ 25 ಲಕ್ಷ ಆದಾಯ ಅಂದ್ರೆ ಸುಮ್ನೆನಾ?


ಪ್ರಣಯ್ ಆಗಸ್ಟ್ ನಲ್ಲಿ ಮಸ್ಕ್ ಅವರನ್ನು ಭೇಟಿ ಮಾಡಿದ್ದರು


ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ನಲ್ಲಿ ಕೆಲಸ ಮಾಡುತ್ತಿರುವ ಟೆಕ್ ಉದ್ಯಮಿ ಪ್ರಣಯ್ ಅವರು ಈ ವರ್ಷದ ಆಗಸ್ಟ್ ತಿಂಗಳಿನಲ್ಲಿ ಮಸ್ಕ್ ಅವರನ್ನು ಭೇಟಿಯಾಗುವ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದರು. ಇಬ್ಬರ ನಡುವಿನ ಸ್ನೇಹವು ನೂರಾರು ಟ್ವೀಟ್ ಗಳು ಮತ್ತು ಖಾಸಗಿ ಸಂದೇಶಗಳ ಮೇಲೆ ಹರಡಿದೆ. ಇದರಲ್ಲಿ ಕಂಪನಿಯ ಹೊಸ ಹೊಸ ಅಪ್ಡೇಟ್​​ಗಳು ಮತ್ತು ಜೀವನ ಸಲಹೆಗಳನ್ನು ಸಹ ಹೊಂದಿದೆ ಎಂದು ಹೇಳಬಹುದು.ಎಲಾನ್ ಮಸ್ಕ್ ಅವರು 44 ಬಿಲಿಯನ್ ಡಾಲರ್​​ಗೆ ಖರೀದಿಸಿದ ಟ್ವಿಟ್ಟರ್ ಅನ್ನು ನಾಟಕೀಯವಾಗಿ ವಶಪಡಿಸಿಕೊಂಡ ನಂತರ, ಟೆಸ್ಲಾ ಇಂಕ್ ಬಾಸ್ ಇಂದು ಅದರ ಮುಖ್ಯ ಕಾರ್ಯನಿರ್ವಾಹಕರಾಗಿ ಸೇವೆ ಸಲ್ಲಿಸುವುದಾಗಿ ಹೇಳಿದರು.


ಇದನ್ನೂ ಓದಿ: ಸದ್ಯ ಟ್ರೆಂಡಿಂಗ್​ನಲ್ಲಿರೋ ಉದ್ಯಮ ಇದು, ಕಲೆ ಗೊತ್ತಿದ್ರೆ ಸಾಕು ಲಕ್ಷ ಲಕ್ಷ ಹಣ ಗಳಿಸಬಹುದು!


ರಾಕೆಟ್ ಕಂಪನಿ ಸ್ಪೇಸ್ಎಕ್ಸ್, ಬ್ರೈನ್-ಚಿಪ್ ಸ್ಟಾರ್ಟ್ಅಪ್ ನ್ಯೂರಾಲಿಂಕ್ ಮತ್ತು ಸುರಂಗ ಕೊರೆಯುವ ಸಂಸ್ಥೆ ಬೋರಿಂಗ್ ಕಂಪನಿಯನ್ನು ನಡೆಸುತ್ತಿರುವ ಮಸ್ಕ್, ಟ್ವಿಟರ್ ನ ಹಿಂದಿನ ಮುಖ್ಯಸ್ಥ ಪರಾಗ್ ಅಗರ್ವಾಲ್ ಮತ್ತು ಇತರ ಉನ್ನತ ಕಂಪನಿ ಅಧಿಕಾರಿಗಳನ್ನು ಕಳೆದ ವಾರ ವಜಾಗೊಳಿಸಿದ್ದಾರೆ.

Published by:Mahmadrafik K
First published: