• Home
  • »
  • News
  • »
  • business
  • »
  • Traffic Rules: ವಾಹನ ಸವಾರರೇ ಅಲರ್ಟ್, ಈ ಹಿಂದಿನಂತಲ್ಲ ಟ್ರಾಫಿಕ್​ ರೂಲ್ಸ್​! ಬ್ರೇಕ್​ ಮಾಡಿದ್ರೆ 25 ಸಾವಿರ ದಂಡ

Traffic Rules: ವಾಹನ ಸವಾರರೇ ಅಲರ್ಟ್, ಈ ಹಿಂದಿನಂತಲ್ಲ ಟ್ರಾಫಿಕ್​ ರೂಲ್ಸ್​! ಬ್ರೇಕ್​ ಮಾಡಿದ್ರೆ 25 ಸಾವಿರ ದಂಡ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಏನೋ ಶೋಕಿ ಮಾಡಲು ಹೋಗಿ ಟ್ರಾಫಿಕ್​ ಪೊಲೀಸ (Traffic Police) ರ ಕೈಯಲ್ಲಿ ಸಿಕ್ಕಿ ದೊಡ್ಡ ಮೊತ್ತವನ್ನು ಕಳೆದುಕೊಳ್ಳಬೇಡಿ. ರಸ್ತೆ (Road) ಯಲ್ಲಿ ಸಂಚರಿಸುವಾಗ, ನೀವು ಇತರರ ಜೀವಗಳ ಬಗ್ಗೆಯೂ ಯೋಚನೆ ಮಾಡಬೇಕು.

  • Share this:

Traffic Rules: ಹೊಸ ವರ್ಷ 2023 ರ ಆರಂಭದೊಂದಿಗೆ, ದೇಶಾದ್ಯಂತ ಅನೇಕ ಹೊಸ ಸಂಚಾರ ನಿಯಮಗಳು  (New Traffic Rules) ಜಾರಿಗೆ ಬಂದಿವೆ. ರಸ್ತೆ ಅಪಘಾತಗಳನ್ನು (Accident) ಕಡಿಮೆ ಮಾಡಲು ಈ ಸಂಚಾರ ನಿಯಮಗಳನ್ನು ವಿನ್ಯಾಸಗೊಳಿಸಲಾಗಿದೆ. ಅನೇಕ ಜನರಿಗೆ ಈ ನಿಯಮಗಳ ಬಗ್ಗೆ ತಿಳಿದಿಲ್ಲ. ಇನ್ನೂ ಅನೇಕ ಜನರು ಉದ್ದೇಶಪೂರ್ವಕವಾಗಿ ಅವುಗಳನ್ನು ನಿರ್ಲಕ್ಷಿಸುತ್ತಾರೆ. ಆದ್ದರಿಂದ ಈಗ ನಿಯಮಗಳನ್ನು ನಿರ್ಲಕ್ಷಿಸುವುದರಿಂದ ನಿಮಗೆ ತುಂಬಾ ನಷ್ಟವಾಗಬಹುದು. ನೀವು ₹25,000 ಸಾವಿರ ದಂಡ (Fine) ವನ್ನೂ ಪಾವತಿಸಬೇಕಾಗಬಹುದು. ಏನೋ ಶೋಕಿ ಮಾಡಲು ಹೋಗಿ ಟ್ರಾಫಿಕ್​ ಪೊಲೀಸ (Traffic Police) ರ ಕೈಯಲ್ಲಿ ಸಿಕ್ಕಿ ದೊಡ್ಡ ಮೊತ್ತವನ್ನು ಕಳೆದುಕೊಳ್ಳಬೇಡಿ. ರಸ್ತೆ (Road) ಯಲ್ಲಿ ಸಂಚರಿಸುವಾಗ, ನೀವು ಇತರರ ಜೀವಗಳ ಬಗ್ಗೆಯೂ ಯೋಚನೆ ಮಾಡಬೇಕು.


ಹೊಸ ಟ್ರಾಫಿಕ್​ ರೂಲ್ಸ್​ ಬಗ್ಗೆ ಗೊತ್ತಿದ್ಯಾ?


ಮೊದಲಿಗೆ, ನಮ್ಮೆಲ್ಲರ ಸುರಕ್ಷತೆಗಾಗಿ ಟ್ರಾಫಿಕ್ ನಿಯಮಗಳನ್ನು ಮಾಡಲಾಗಿದೆ ಎಂದು ತಿಳಿಯಿರಿ. ರಸ್ತೆಗಳಲ್ಲಿನ ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡುವುದು ಮತ್ತು ಪ್ರಯಾಣವನ್ನು ಸುರಕ್ಷಿತಗೊಳಿಸುವುದು ಈ ನಿಯಮಗಳ ಉದ್ದೇಶವಾಗಿದೆ. ಆದರೆ ಕೆಲವರು ತಿಳಿದೋ ತಿಳಿಯದೆಯೋ ಈ ಸಂಚಾರಿ ನಿಯಮಗಳನ್ನು ಮುರಿಯುತ್ತಾರೆ. ಆದ್ದರಿಂದ ಅವರು ತಮ್ಮ ಮತ್ತು ಇತರರ ಸುರಕ್ಷತೆಗೆ ಅಪಾಯವನ್ನುಂಟು ಮಾಡುತ್ತಾರೆ. ಇನ್ಮುಂದೆ ಟ್ರಾಫಿಕ್​ ರೂಲ್ಸ್​ ಬ್ರೇಕ್​ ಮಾಡಿದ್ರೆ ನೀವು ಭಾರೀ ದಂಡವನ್ನು ಪಾವತಿಸಬೇಕಾದ 3 ನಿಯಮಗಳು ಇಲ್ಲಿವೆ.


1) ಫ್ಯಾನ್ಸಿ ನಂಬರ್ ಪ್ಲೇಟ್‌ಗಳಿಗೆ ದಂಡ


ಜನವರಿ 1 ರಿಂದ ದೇಶದಲ್ಲಿ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗಿದೆ. ಈಗ ಜನರು 2019 ಕ್ಕಿಂತ ಹಳೆಯ ವಾಹನಗಳಿಗೆ ಸಹ ಅಲಂಕಾರಿಕ ನಂಬರ್ ಪ್ಲೇಟ್‌ಗಳನ್ನು ಹಾಕುವಂತಿಲ್ಲ. ನೀವು ಈ ನಿಯಮವನ್ನು ಅನುಸರಿಸದಿದ್ದರೆ, ನೀವು 10,000 ರೂಪಾಯಿಗಳವರೆಗೆ ದಂಡವನ್ನು ಪಾವತಿಸಬೇಕಾಗಬಹುದು. ಈ ನಿಯಮದ ಪ್ರಕಾರ ದ್ವಿಚಕ್ರ ವಾಹನವಾಗಲಿ ಅಥವಾ ನಾಲ್ಕು ಚಕ್ರದ ವಾಹನಗಳಾಗಲಿ ವಾಹನಕ್ಕೆ ಆರ್‌ಟಿಒ ಪ್ರಮಾಣೀಕರಿಸಿದ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಅನ್ನು ಅಳವಡಿಸಬೇಕಾಗುತ್ತದೆ.


ಇದನ್ನೂ ಓದಿ: ಬ್ಯಾಂಕ್​ಗೆ ಚೆಕ್​ ಹಾಕುವಾಗ ಜೋಪಾನ, ವಂಚಕರಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿ!


2) ಹೆಚ್ಚಿನ ಶಬ್ಧ ಮಾಡುವ ಸೈಲೆನ್ಸರ್​ಗೂ ಭಾರೀ ದಂಡ


ಬುಲೆಟ್ ಉತ್ಸಾಹಿಗಳು ಕೆಲವೊಮ್ಮೆ ತಮ್ಮ ಬೈಕುಗಳನ್ನು ಹೆಚ್ಚು  ಉತ್ತಮವಾಗಿ ಕಾಣುವಂತೆ ಮಾರ್ಪಡಿಸುತ್ತಾರೆ. ಇದಕ್ಕಾಗಿ ಮತ್ತೊಂದು ಅಥವಾ ಹೆಚ್ಚುವರಿ ಸೈಲೆನ್ಸರ್ ಅನ್ನು ಹೆಚ್ಚಾಗಿ ಅಳವಡಿಸಲಾಗುತ್ತದೆ. ಮೋಟಾರು ವಾಹನ ಕಾಯ್ದೆಯ ಪ್ರಕಾರ ಇದನ್ನು ಮಾಡುವುದು ಕಾನೂನುಬಾಹಿರ ಎಂದು ನೀವು ತಿಳಿದುಕೊಳ್ಳಿ. ನಿಮ್ಮ ಬೈಕು ಸಿಕ್ಕಿಬಿದ್ದರೆ, ನಿಮಗೆ ಭಾರಿ ದಂಡ ವಿಧಿಸಲಾಗುತ್ತದೆ.  25,000 ಸಾವಿರವರೆಗೂ ನಿಮಗೆ ದಂಡ ವಿಧಿಸಬಹುದು.


3) ಯಾವುದೇ ರೀತಿಯ ಆಲ್ಟರ್​ ಮಾಡಿಸಿದ್ರೂ ದಂಡ!


ಯಾವುದೇ ರೀತಿಯ ವಾಹನದ ವಿನ್ಯಾಸವನ್ನು ಬದಲಾಯಿಸುವುದು ಮೋಟಾರು ವಾಹನ ಕಾಯ್ದೆಯಲ್ಲಿ ಸಂಚಾರ ನಿಯಮಗಳ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ. ಸಂಚಾರ ಪೊಲೀಸರು ಇದೀಗ ಅಂತಹ ಬೈಕ್, ಕಾರುಗಳನ್ನು ಹಿಡಿದು ದಂಡ ಹಾಕುತ್ತಿದ್ದಾರೆ. ಮಾರ್ಪಾಡು ಎಂದರೆ ಕಂಪನಿ ಮಾಡಿದ ವಿನ್ಯಾಸವನ್ನು ಬದಲಾಯಿಸುವುದು. ಹಾಗೆ ಮಾಡಿದರೆ ನಿಮಗೆ ಭಾರೀ ದಂಡ ವಿಧಿಸಬಹುದು. ಇದಲ್ಲದೆ, ವಾಹನವನ್ನು ವಶಪಡಿಸಿಕೊಳ್ಳಬಹುದು.


ಇದನ್ನೂ ಓದಿ: ಸಂಕ್ರಾಂತಿಗೂ ಮುನ್ನವೇ ಬಂಪರ್​ ಆಫರ್​, ಈ ಕಾರಿನ ಮೇಲೆ 1 ಲಕ್ಷ ಡಿಸ್ಕೌಂಟ್​!


ನೀವು ರಸ್ತೆಗೆ ಇಳಿದ ಕೂಡಲೇ ನಿಮ್ಮ ಬಗ್ಗೆ ಯೋಚನೆ ಮಾಡಿ. ಮನೆಯಲ್ಲಿ ಹೆಂಡತಿ, ಮಕ್ಕಳು, ಅಪ್ಪ-ಅಪ್ಪ, ಅಣ್ಣ, ತಮ್ಮ, ಅಕ್ಕ ತಂಗಿ ಹೀಗೆ ಯಾರಾದರೂ ಒಬ್ಬರು ನಿಮಗಾಗಿ ಕಾಯುತ್ತಿರುತ್ತಾರೆ. ನಿಮ್ಮ ಅತೀ ವೇಗದಿಂದ ಅವರು ಜೀವನ ಪರ್ಯಂತ ಕೊರಗುವಂತೆ ಮಾಡಬೇಡಿ. ನಿಮ್ಮ ಹಾಗೆಯೇ ರಸ್ತೆಗಿಳಿಯುವ ಪ್ರತಿಯೊಬ್ಬರಿಗೂ ಕುಟುಂಬವಿರುತ್ತದೆ.

Published by:ವಾಸುದೇವ್ ಎಂ
First published: