• Home
 • »
 • News
 • »
 • business
 • »
 • ಭಾರತದ ಪ್ರಗತಿ ಕಥೆಯ ಮೂಲದ ಜಾಡು ಹಿಡಿದು: ಆಧುನಿಕ ಭಾರತವನ್ನು ರೂಪಿಸಿದ ದೈತ್ಯ ಕಂಪನಿಗಳು

ಭಾರತದ ಪ್ರಗತಿ ಕಥೆಯ ಮೂಲದ ಜಾಡು ಹಿಡಿದು: ಆಧುನಿಕ ಭಾರತವನ್ನು ರೂಪಿಸಿದ ದೈತ್ಯ ಕಂಪನಿಗಳು

ಭಾರತೀಯ ವಾಹನ ತಯಾರಕರು ಎಲ್ಲಾ ಅಡೆತಡೆಗಳನ್ನು ದಾಟಿ ಇಂದು ವಾರ್ಷಿಕವಾಗಿ ಲಕ್ಷಾಂತರ ಯೂನಿಟ್‌ಗಳಷ್ಟು ಉತ್ಪಾದಿಸಲು ವಾಹನ ತಯಾರಕರಿಗೆ ಅನುವು ಮಾಡಿಕೊಡುವಂತಹ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸಿದ್ದಾರೆ

ಭಾರತೀಯ ವಾಹನ ತಯಾರಕರು ಎಲ್ಲಾ ಅಡೆತಡೆಗಳನ್ನು ದಾಟಿ ಇಂದು ವಾರ್ಷಿಕವಾಗಿ ಲಕ್ಷಾಂತರ ಯೂನಿಟ್‌ಗಳಷ್ಟು ಉತ್ಪಾದಿಸಲು ವಾಹನ ತಯಾರಕರಿಗೆ ಅನುವು ಮಾಡಿಕೊಡುವಂತಹ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸಿದ್ದಾರೆ

ಭಾರತೀಯ ವಾಹನ ತಯಾರಕರು ಎಲ್ಲಾ ಅಡೆತಡೆಗಳನ್ನು ದಾಟಿ ಇಂದು ವಾರ್ಷಿಕವಾಗಿ ಲಕ್ಷಾಂತರ ಯೂನಿಟ್‌ಗಳಷ್ಟು ಉತ್ಪಾದಿಸಲು ವಾಹನ ತಯಾರಕರಿಗೆ ಅನುವು ಮಾಡಿಕೊಡುವಂತಹ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸಿದ್ದಾರೆ

 • Share this:

  ಜೂನ್ 2022 ರಲ್ಲಿ, ಭಾರತದಲ್ಲಿ ತ್ರಿಚಕ್ರ, ದ್ವಿಚಕ್ರ ಮತ್ತು ನಾಲ್ಕು ಚಕ್ರದ ಪ್ರಯಾಣಿಕ ವಾಹನಗಳ ಒಟ್ಟು ಉತ್ಪಾದನೆ 2,081,148 ಯೂನಿಟ್‌ಗಳಷ್ಟಿತ್ತು. ಭಾರತೀಯ ವಾಹನ ಉದ್ಯಮವು 2016-26 ರ ವೇಳೆಗೆ ವಾಹನಗಳ ರಫ್ತನ್ನು ಐದು ಪಟ್ಚು ಹೆಚ್ಚಿಸುವ ಗುರಿ ಹೊಂದಿದೆ ಮತ್ತು ಹಣಕಾಸು ವರ್ಷ 22 ರಲ್ಲಿ, ಭಾರತದ ಒಟ್ಟು ಆಟೋಮೊಬೈಲ್ ರಫ್ತು 5,617,246 ರಷ್ಟಾಗಿತ್ತು. ಭಾರತ ಸರ್ಕಾರವು ಆಟೋಮೊಬೈಲ್ ಕ್ಷೇತ್ರದಲ್ಲಿ 2023 ರ ವೇಳೆಗೆ ಸ್ಥಳೀಯ ಮತ್ತು ವಿದೇಶಿ ಹೂಡಿಕೆಗಳಲ್ಲಿ US$ 8-10 ಬಿಲಿಯನ್‌ಗಳಷ್ಟು ಆಕರ್ಷಿಸುವ ನಿರೀಕ್ಷೆ ಹೊಂದಿದೆ.


  ನೀತಿ ಆಯೋಗ ಮತ್ತು ರಾಕಿ ಮೌಂಟೇನ್ ಇನ್ಸ್‌ಟಿಟ್ಯೂಟ್ (ಆರ್‌ಎಂಐ) ಪ್ರಕಾರ, ಭಾರತದ ಇವಿ ಹಣಕಾಸು ಉದ್ಯಮವು 2023 ರ ವೇಳೆಗೆ ರೂ. 3.7 ಲಕ್ಷ ಕೋಟಿ (US$ 50 ಬಿಲಿಯ) ಗಳಷ್ಟು ಸಾಧಿಸಬಹುದು ಮತ್ತು ಅದೇ ವರ್ಷ, ಭಾರತವು ಇಲೆಕ್ಟ್ರಿಕ್ ಮತ್ತು ಆಟೋನೋಮಸ್ ವಾಹನಗಳಿಗೆ ಅವಕಾಶಗಳನ್ನು ನೀಡುವ ಮೂಲಕ ಸಾರಿಗೆ ಹಂಚಿಕೊಳ್ಳುವಿಕೆ (ಶೇರ್‌ಡ್ ಮೊಬಿಲಿಟಿ)ಯಲ್ಲಿ ಮುಂಚೂಣಿಯಲ್ಲಿರುವ ಸಾಧ್ಯತೆಯಿದೆ.


  ಮಧ್ಯಮ ವರ್ಗದ ಭಾರತೀಯರು ಒಂದು ಕಾಲದಲ್ಲಿ ಕಾರುಗಳೆಂದರೆ (ದ್ವಿಚಕ್ರ ವಾಹನಗಳು ಕೂಡಾ!) ಐಷಾರಾಮಿ ಜೀವನದ ಸಂಕೇತ ಎಂದು ಪರಿಗಣಿಸುತ್ತಿದ್ದುದರಿಂದ ಈ ಸಂಖ್ಯೆಗಳು ವಿಶೇಷವಾಗಿ ಗಮನಾರ್ಹವಾಗಿವೆ. ಇದು ಕೇವಲ 40 ವರ್ಷಗಳ ಹಿಂದಿನ ಮಾತು. ಅಲ್ಲದೇ 1991ರ ವರೆಗೆ, ಭಾರತೀಯ ಉದ್ಯಮಗಳು ಹೆಚ್ಚು ನಿರ್ಬಂಧಿತ ಲೈಸೆನ್ಸ್ ರಾಜ್: ಪರವಾನಗಿಗಳು, ನಿಯಮಗಳು ಮತ್ತು ಅದರ ಜೊತೆಗೆ ರೆಡ್ ಟೇಪ್, ಇದರ ಅಡಿಯಲ್ಲಿ ಕಾರ್ಯ ನಿರ್ವಹಿಸಬೇಕಾಗಿತ್ತು, ಇದು 1947 ಮತ್ತು 1990ರ ನಡುವೆ ಭಾರತದಲ್ಲಿ ಉದ್ಯಮ ಸ್ಥಾಪನೆ ಮತ್ತು  ನಡೆಸುವಿಕೆಗೆ ಅಡ್ಡಿಯಾಗಿತ್ತು ಎಂಬುದನ್ನೂ ನೆನಪಿಟ್ಟುಕೊಳ್ಳಬೇಕಾಗಿದೆ.


  ಲೈಸೆನ್ಸ್ ರಾಜ್ ಎಂಬುದು ಭಾರತದಲ್ಲಿ ಬಡ ರೈತರನ್ನು ಸಬಲೀಕರಣಗೊಳಿಸುವ ಮಾರ್ಗವನ್ನಾಗಿ ಸಮಾಜವಾದವನ್ನು ಪರಿಗಣಿಸಿದ ಭಾರತದ ಚಿಂತಕರ ಕಲ್ಪನೆಯ ಕೂಸಾಗಿತ್ತು. ಸ್ವಾತಂತ್ರ್ಯಾನಂತರ ಈ ಚಿಂತಕರು ಅಧಿಕಾರಕ್ಕೆ ಬಂದಾಗ, ಸಮಾಜವಾದಿ ತತ್ವಗಳು ಲೈಸೆನ್ಸ್ ರಾಜ್‌ನ ನೀತಿಗಳಿಗೆ ತಕ್ಕಂತೆ ತಮ್ಮ ದಾರಿಯನ್ನು ಕಂಡುಕೊಂಡವು. ದುರದೃಷ್ಟವಶಾತ್, ಇದಕ್ಕೆ ವಿರುದ್ಧವಾಗಿ, ಲೈಸೆನ್ಸ್ ರಾಜ್ ಕಾರ್ಯರೂಪಕ್ಕೆ ಬಂದಾಗ ಬಡವರ ಆರ್ಥಿಕ ಬೆಳವಣಿಗೆ ಮತ್ತು ಏಳಿಗೆಗೆ ಹಿನ್ನಡೆಯಾಗುವಂಥ ಕೆಲಸವನ್ನು ಮಾಡಿತು. ಭಾರತೀಯ ಉದ್ಯಮಗಳಲ್ಲಿ, ಯಶಸ್ವಿ ಉದ್ಯಮಗಳಿಗೂ ಬೆಳವಣಿಗೆಯ ಬೆನ್ನತ್ತುವುದು ಕಲ್ಲುಮುಳ್ಳಿನ ರಸ್ತೆಯಾಯಿತು.


  ಆದರೂ ಕೂಡಾ, ಕೆಲವು ಕಂಪನಿಗಳು ಈ ಅಡೆತಡೆಗಳನ್ನು ಮೆಟ್ಟಿನಿಂತು ಮನೆಮಾತಾದವು. ಈ ಕಂಪನಿಗಳು ಉತ್ತಮ ಗುಣಮಟ್ಟದ ಹಾಗೂ ಹೆಚ್ಚಿನ ಬೇಡಿಕೆಯುನ್ನು ಹೊಂದಿರುವ ಉತ್ಪನ್ನಗಳನ್ನು ತಯಾರಿಸುವಂಥವಾಗಿದ್ದವು ಮತ್ತು ಜನರು ಅವುಗಳನ್ನು ಕೊಳ್ಳಲು ತಮ್ಮ ಸರದಿಗಾಗಿ 10 ವರ್ಷಗಳಷ್ಟು ಕಾಲ ಕಾಯುತ್ತಿದ್ದರು. ಭಾರತದ ಆಟೋಮೊಬೈಲ್ ಕ್ಷೇತ್ರವು ಅಂತಹ  ಒಂದು ದೈತ್ಯ ಸಂಸ್ಥೆಯ ನೆಲೆಯಾಗಿತ್ತು.


  1970-90ರ ವರೆಗೆ ಸಾರಿಗೆಯು ಸುಲಭವಾಗಿರಲಿಲ್ಲ. ರಾಜಧಾನಿಯಲ್ಲೂ, ಬಸ್ ಸೇವೆಗಳು ಸರಿಯಾದ ಸಮಯಕ್ಕೆ ಓಡುತ್ತಿರಲಿಲ್ಲ ಮತ್ತು ಕಿಕ್ಕಿರಿದ ಜನರಿಂದ ತುಂಬಿರುತ್ತಿದ್ದವು. ಟ್ಯಾಕ್ಸಿಗಳು ಮತ್ತು ರಿಕ್ಷಾಗಳು ತಮ್ಮದೇ ಇಚ್ಛೆಯಿಂದ ಓಡುತ್ತಿದ್ದವು(ಈಗಲೂ ಓಡುತ್ತಿವೆ) ಮತ್ತು ಭಾರತದ ಹೆಚ್ಚಿನ ನಗರಗಳಲ್ಲಿ, ಅಧಿಕೃತ ದರ ಪಟ್ಟಿಗಿಂತ ವಿಭಿನ್ನ ಶುಲ್ಕವನ್ನು ವಿಧಿಸುತ್ತವೆ. ಅದಕ್ಕೂ ಮಿಗಿಲಾಗಿ ಇವು ತುಂಬಾ ದುಬಾರಿಯಾಗಿರುತ್ತಿದ್ದವು. ಅಲ್ಲದೇ ವಿಶ್ವಾಸಾರ್ಹವಾಗಿರಲಿಲ್ಲ.


  ಆಗ ಮಧ್ಯಮ ವರ್ಗದ ಜನರಿಗೆ, ತಮ್ಮದೇ ಆದ ಒಂದು ಬಜಾಜ್ ಚೇತಕ್ ಸ್ಕೂಟರ್ ಹೊಂದುವುದು ಅವರ ಆಕಾಂಕ್ಷೆಯ ಪರಾಕಾಷ್ಠೆಯಾಗಿತ್ತು. ಇಂದು ತಮ್ಮ ತಂದೆಯ ಬಜಾಜ್ ಚೇತಕ್ ಸ್ಕೂಟರ್‌ನ ಫುಟ್‌ಸ್ಟ್ಯಾಂಡ್‌ನಲ್ಲಿ ನಿಂತುಕೊಂಡು ಶಾಲೆಗೆ ಹೋಗುತ್ತಿದ್ದುದನ್ನು ನೆನಪಿಸಿಕೊಳ್ಳುವ 40 ವರ್ಷ ವಯಸ್ಸಿನವರ ಸಂಪೂರ್ಣ ಪೀಳಿಗೆಯೇ ಇದೆ.


  ಅಮದು ಮಾಡಲಾದ ವೆಸ್ಪಾಗಳು ಮತ್ತು ಲ್ಯಾಂಬ್ರೆಟಾಗಳ (ಇದನ್ನೂ ಬಜಾಜ್ ಆಟೋ ಮೂಲಕ ಭಾರತಕ್ಕೆ ತರಲಾಯಿತು) ಬಗ್ಗೆ ಮಾತ್ರ ತಿಳಿದಿದ್ದ ಭಾರತದ ಮಾರುಕಟ್ಟೆಯಲ್ಲಿ 1972ರಲ್ಲಿ ಪ್ರಾರಂಭಗೊಂಡ ಬಜಾಜ್ ಚೇತಕ್ ಎಲ್ಲರ ಮನಸೆಳೆಯಿತು. ಇದು ವೆಸ್ಪಾ ಸ್ಪ್ರಿಂಟ್ ಮಾದರಿಯಲ್ಲಿದ್ದು, ಮಹಾರಾಣಾ ಪ್ರತಾಪನ ವಿಶ್ವಾಸಾರ್ಹ ಕುದುರೆಯ ಹೆಸರನ್ನು ಇದಕ್ಕೆ ಇಡಲಾಯಿತು. ಸ್ಕೂಟರ್‌ಗಳು ಎಂದರೆ ಹೊಸತನ ಎನ್ನುವಂತಿರಲಿಲ್ಲ ಆದರೆ ಈ ಸ್ಕೂಟರ್ ಮಾತ್ರ ಆಶ್ಚರ್ಯದ ಸಂಗತಿಯಾಗಿತ್ತು. ಪೂರೈಕೆಗೆ ಮೀರಿದ ಬೇಡಿಕೆಯಿತ್ತು.


  ಆದರೆ, ಇದು ಲೈಸೆನ್ಸ್ ರಾಜ್‌ನ ಸಮಯವಾಗಿದ್ದರಿಂದ, ಬೇಡಿಕೆಯನ್ನು ಪೂರೈಸಲು ಬಜಾಜ್ ಆಟೋ ಉತ್ಪಾದನೆಯನ್ನು ಹೆಚ್ಚಿಸಲು ಮುಕ್ತವಾಗಿರಲಿಲ್ಲ. ಅಂದರೆ, ದರಗಳು ದುಪ್ಪಟ್ಟಾದವು, ಮತ್ತು ಶೀಘ್ರದಲ್ಲೇ ಹೊಸ ಬಜಾಜ್ ಚೇತಕ್‌ಗೆ ಕಾಯುವ ಅವಧಿ 10 ವರ್ಷಗಳಷ್ಟು ದೀರ್ಘವಾಯಿತು. ಆದರೆ, ಜನರು ಕಾದರು, ಯಾಕೆಂದರೆ, ಚೇತಕ್ ಯೋಗ್ಯವಾಗಿದೆ ಎಂದು ಜನರಿಗೆ ತಿಳಿದಿತ್ತು. ಇದು ಕೈಗೆಟುಕುವ ಬೆಲೆಯಲ್ಲಿತ್ತು. ಅದು ಬಲಿಷ್ಠವಾಗಿತ್ತು. ಅದು ಕಿಕ್ ಮಾಡಿದಾಗ ಸ್ಟಾರ್ಟ್ ಆಗುತ್ತಿತ್ತು. ಯಾರೂ ಅದನ್ನು ಸರಿಪಡಿಸಬಹುದು ಅನ್ನುವಂತಿತ್ತು. ಅದರ ಮೈಲೇಜ್ ಪರಿಣಾಮಕಾರಿಯಾಗಿತ್ತು. ಸಂಕ್ಷಿಪ್ತವಾಗಿ ಹೇಳುವುದಾದರೆ, ಅದು ಸಮಗ್ರತೆಗೆ ಹೆಸರುವಾಸಿಯಾಗಿದ್ದ ಕಂಪನಿಯಿಂದ ಹೆಚ್ಚಿನ ಗುಣಮಟ್ಟದ ಉತ್ಪನ್ನವಾಗಿತ್ತು.


  ಇದು ಬಜಾಜ್ ಆಟೋ ಇಲ್ಲಿಯವರೆಗೆ ನೋಡಿದ ಅತ್ಯಂತ ದೊಡ್ಡ ಯಶಸ್ಸಾಗಿದ್ದರೂ, ಅದು ಈ ಸಂಚಲನವನ್ನು ಸೃಷ್ಟಿಸಿದ್ದು ಇದೇ ಮೊದಲೇನಲ್ಲ. ಭಾರತದಲ್ಲಿ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಕ್ರಾಂತಿಗೆ ಬಜಾಜ್ ಆಟೋ ಏಕಾಂಗಿಯಾಗಿ ಕಾರಣವಾಗಿದೆ. 1948 ರಲ್ಲಿ, ಅದು ಅಮದು ಮಾಡಿದ ವಾಹನಗಳ ಮಾರಾಟದೊಂದಿಗೆ ಪ್ರಾರಂಭಿಸಿ 1959 ವೇಳೆಗೆ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳನ್ನು ತಯಾರಿಸುವ ಮಟ್ಟಕ್ಕೆ ಏರಿತು. ಅದರ ಯಶಸ್ಸು ಮುನ್ನಡೆದು 1960 ಅದೊಂದು ಪಬ್ಲಿಕ್ ಲಿಮಿಟೆಡ್ ಕಂಪನಿಯಾಯಿತು 1970ರಲ್ಲಿ ಅಂದರೆ ಕೇವಲ ಒಂದು ದಶಕದಲ್ಲಿ ತನ್ನ 1,00,000 ನೇ ವಾಹನವನ್ನು ಬಿಡುಗಡೆ ಮಾಡಿತು. 1977ರಲ್ಲಿ ಹಿಂಬದಿ ಇಂಜಿನ್ ಹೊಂದಿದ್ದ ಆಟೋ-ರಿಕ್ಷಾವು ಕಿಕ್ಕಿರಿದ ಬಸ್‌ಗಳಿಗೆ ಆರಾಮದಾಯಕ ಪರ್ಯಾಯವನ್ನು ಒದಗಿಸಿತು ಹಾಗೂ ಇದ್ದಕ್ಕಿದ್ದಂತೆ ಮಹಿಳೆಯರಿಗೆ ತಮ್ಮಷ್ಟಕ್ಕೇ ಕಾಲೇಜಿಗೆ ಹೋಗುವುದಕ್ಕೆ, ಕೆಲಸಕ್ಕೆ ಹೋಗುವುದಕ್ಕೆ ಅಥವಾ ಮಕ್ಕಳನ್ನು ಶಾಲೆಗೆ ಬಿಡುವುದಕ್ಕೆ ಸುರಕ್ಷಿತವಾಯಿತು.


  ನಂತರ 1991 ರಲ್ಲಿ ಉದಾರೀಕರಣ ಬಂದಿತು. ಬಜಾಜ್ ಆಟೋ ತನ್ನ ಗುಣಮಟ್ಟದ, ಬಾಳಿಕೆ ಬರುವ, ಕೈಗೆಟುಕುವ ದರಗಳಲ್ಲಿ ವಿಶ್ವಾಸಾರ್ಹ ವಾಹನಗಳಿಗೆ ಅಂಟಿಕೊಳ್ಳುವ ಮೂಲಕ ಅಂತರರಾಷ್ಟ್ರೀಯ ಸ್ಫರ್ಧೆಯ ಬಿರುಗಾಳಿಯನ್ನು ಎದುರಿಸಿತು. ಇಂದು ಬಜಾಜ್ ಆಟೋ ರೂ 11,845 ಕೋಟಿಗಳ ವಹಿವಾಟುಗಳನ್ನು ಹೊಂದಿರುವ ಶೇಕಡಾ 50ಕ್ಕಿಂತಲೂ ಹೆಚ್ಚಿನ ದೇಶದ  ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ರಫ್ತಿಗೆ ಕಾರಣವಾಗಿ ಭಾರತೀಯ ಅಟೋಮೊಬೈಲ್ ರಫ್ತಿನಲ್ಲಿ ಮುಂಚೂಣಿಯಲ್ಲಿದೆ, ಹಣಕಾಸು ವರ್ಷ 2019-20 ರಲ್ಲಿ ಶೇಕಡಾ 47 ರಷ್ಟು ಬಜಾಜ್ ಆಟೋ ಉತ್ಪಾದನೆಯನ್ನು ಸುಮಾರು 79ಕ್ಕಿಂತಲೂ ಹೆಚ್ಚಿನ ದೇಶಗಳಿಗೆ ರಫ್ತು ಮಾಡಲಾಗಿದೆ.


  ಅನೇಕ ರೀತಿಯಲ್ಲಿ, ಬಜಾಜ್ ಆಟೋದ ಕಥೆ ಇಂಡಿಯಾ ಇಂಕ್‌ನ  ಬೆಳವಣಿಗೆಯ ಕೆಥೆಗೆ ಸಮಾನಾಂತರವಾಗಿದೆ. ಇಬ್ಬರೂ ಅಡೆತಡೆಗಳನ್ನು ಎದುರಿಸುವುದರಿಂದ ಪ್ರಾರಂಭಿಸಿ ಪ್ರತಿ ಚಿಕ್ಕ ಯಶಸ್ಸಿಗೂ ಇಬ್ಬರೂ ಕಷ್ಟಪಟ್ಟು ಕೆಲಸ ಮಾಡಬೇಕಾಗಿತ್ತು, ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ಬದಲಾಗುತ್ತಿರುವ ವಾತಾವರಣಕ್ಕೆ ತಕ್ಕಂತೆ ತಮ್ಮನ್ನು ನಿರಂತರವಾಗಿ ಹೊಂದಿಸಿಕೊಳ್ಳಬೇಕಾಗಿತ್ತು,ಮತ್ತು ಇದರಿಂದಾಗಿ ಇಬ್ಬರೂ ಬಲಶಾಲಿಗಳಾಗಿ ಹೊರಹೊಮ್ಮಿದರು.


  ಬಜಾಜ್ ಆಟೋ ಲೈಸೆನ್ಸ್ ರಾಜ್ ಅಂತ್ಯದಲ್ಲಿ ಉಳಿದುಕೊಂಡಿರುವ ಕೆಲವೇ ಭಾರತೀಯ ಕಂಪನಿಗಳಲ್ಲಿ ಒಂದು. ಇದಕ್ಕೆ ಒಂದು ಕಾರಣವೆಂದರೆ, ನಿರಂತರವಾಗಿ ಮರುನಿರ್ಮಿಸುವ ಮತ್ತು ತಮ್ಮನ್ನು ತಾವು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಸಾಮರ್ಥ್ಯ. ಆದಾಗ್ಯೂ, ಬಜಾಜ್‌ ಕೊಡುಗೆಯ ಮೂಲ ಅಂಶವು ಯಾವಾಗಲೂ ಗುಣಮಟ್ಟದ್ದಾಗಿದೆ: ಗುಣಮಟ್ಟದ ಉತ್ಪನ್ನ, ಗುಣಮಟ್ಟದ ಸೇವೆ ಮತ್ತು ಪ್ರಶ್ನಾತೀತ ಸಮಗ್ರತೆ.


  ಈ ಬಲವಾದ ನೆಲೆಯನ್ನು ನಿರ್ಮಿಸುವಲ್ಲಿ ಐತಿಹಾಸಿಕ ಉದಾರಿಕರಣದ ಪ್ರಯತ್ನದ ನಂತರ, ಭಾರತವು ಅತ್ಯುನ್ನತ ಅಂತರರಾಷ್ಟ್ರೀಯ ಗುಣಮಟ್ಟದ ಮಾನದಂಡಗಳ ಅನುಸರಣೆ ಮತ್ತು ಅಂಗೀಕಾರಕ್ಕಾಗಿ ಜಾಗತಿಕವಾಗಿ ಸ್ವೀಕಾರಾರ್ಹ ಕಾರ್ಯವಿಧಾನವನ್ನು ರೂಪಿಸುವ ಅಗತ್ಯವಿದ್ದಾಗ, 90ರ ದಶಕದ ಕೊನೆಯಲ್ಲಿ ಆರ್ಥಿಕ ವ್ಯವಸ್ಥೆಯಿಂದ ಬಜಾಜ್ ಆಟೋಗೆ ಹೆಚ್ಚಿನ ನೆರವು ನೀಡಲಾಯಿತು. 1996 ರಲ್ಲಿ, ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ (QCI) ಅನ್ನು ರೂಪಿಸಲಾಯಿತು, ಮತ್ತು QCI ಅನ್ನು ಸಂಸ್ಥೆಯಾಗಿ ರೂಪಿಸಲು GOI ಮುಂಚೂಣಿಯಲ್ಲಿರುವ ಮೂರು ಪ್ರಮುಖ ಉದ್ಯಮ ಸಂಸ್ಥೆಗಳಾದ ASSOCHAM, FICCI ಮತ್ತು CII ನೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸಿತು.


  ಮೊದಲ ಬಾರಿಗೆ ಅಂತರರಾಷ್ಟ್ರೀಯ ಕಂಪನಿಗಳೊಂದಿಗೆ ತೀವ್ರ ಸ್ಪರ್ಧೆಯನ್ನು ಎದುರಿಸುತ್ತಿದ್ದ ಭಾರತೀಯ ಕಂಪನಿಗಳಿಗೆ ಇದು ಅತ್ಯುತ್ತಮ ಸಮಯವಾಗಿತ್ತು. ದೇಶೀ ಕಂಪನಿಗಳು ಸ್ಪರ್ಧಾತ್ಮಕವಾಗಿಯೂ ಇರುವುದಲ್ಲದೇ ಗುಣಮಟ್ಟ ಮತ್ತು ದಕ್ಷತೆಯಲ್ಲಿ ಅಂತರರಾಷ್ಟ್ರೀಯ ಮಾನದಂಡಗಳ ಬಗ್ಗೆ ತಿಳಿದುಕೊಂಡು ಅದಕ್ಕೆ ತಕ್ಕಂತೆ ಹೊಂದಿಕೊಳ್ಳಬೇಕಾಗಿತ್ತು. ಬೆಲೆ ಸೂಕ್ಷ್ಮವುಳ್ಳ ಭಾರತೀಯ ಗ್ರಾಹಕರಿಗೆ ಇದ್ದಕ್ಕಿದ್ದಂತೆ ಆಯ್ಕೆಗಳು ಹೆಚ್ಚಾದವು. ಅವರು ಮಿತವ್ಯಯದ ಮೊರೆ ಹೋದರು. ಈ ತೊಯ್ದಾಟಗಳಿಂದ ಉಳಿದುಕೊಂಡ ಭಾರತೀಯ ಕಂಪನಿಗಳು ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಗ್ರಾಹಕರ ಆದ್ಯತೆಯನ್ನು ಬದಲಾಯಿಸುವ ಸಾಮರ್ಥ್ಯ ಹೊಂದಿದ್ದಲ್ಲದೇ ಉನ್ನತ ಗುಣಮಟ್ಟವನ್ನೂ ಹೊಂದಿದ್ದವು.


  QCI ನಮ್ಮ ಸರಕುಗಳ ಗುಣಮಟ್ಟದ ಮಾನದಂಡಗಳನ್ನು ಖಾತ್ರಿಗೊಳಿಸುವ ಮತ್ತು ಅನೇಕ ಕ್ಷೇತ್ರಗಳ ಉತ್ಪನ್ನಗಳನ್ನು ಪ್ರಮಾಣಿಕರಿಸುವ ಮೂಲಕ ಕಳೆದ 25 ವರ್ಷಗಳಲ್ಲಿ ಭಾರತದಲ್ಲಿ ಗುಣಮಟ್ಟದ ಆಂದೋಲನವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ಚೌಕಟ್ಟನ್ನು ರೂಪಿಸುವ ಮತ್ತು ಅವುಗಳಿಗೆ ಬೇಕಾದ ಸಂಪನ್ಮೂಲಗಳನ್ನು ಒದಗಿಸುವ ಮೂಲಕ ಭಾರತೀಯ ಸಂಸ್ಥೆಗಳು ಗುಣಮಟ್ಟ, ಸಮಗ್ರತೆ ಮತ್ತು ಗ್ರಾಹಕ ಕೇಂದ್ರೀಯತೆಯನ್ನು ಸಾಧಿಸುವ ನಿಟ್ಟಿನಲ್ಲಿ ಹೊಸ ಮಾನದಂಡವನ್ನು ಸ್ಥಾಪಿಸುವಲ್ಲಿ QCI ನೆರವಾಯಿತು.


  ಭಾರತದ ಗುಣಮಟ್ಟದ ಆಂದೋಲನ, ಗುಣವತ್ತಾ ಸೇ ಆತ್ಮನಿರ್ಭರತಾ ಭಾರತೀಯ ಉದ್ಯಮಗಳಿಗೆ ಹೆಚ್ಚಿನ ಗುಣಮಟ್ಟದ ಮಾನದಂಡಗಳು, ಸುಧಾರಿತ ಸ್ಪರ್ಧಾತ್ಮಕತೆ ಮತ್ತು ಎಂದಿಗೂ ಹೆಚ್ಚಿನ ಗ್ರಾಹಕರ ವಿಶ್ವಾಸವನ್ನು ಸಾಧಿಸಲು, ಜಾಗತಿಕ ಮಾರುಕಟ್ಟೆಯಲ್ಲಿ ಯಶಸ್ಸನ್ನು ಸ್ಥಾಪಿಸಲು ಸವಾಲೆಸೆಯುತ್ತಿದೆ. ಪ್ರವರ್ಧಮಾನದಲ್ಲಿರುವ ಭಾರತದ ಉತ್ಪಾದನಾ ಕ್ಷೇತ್ರ,   ಉದ್ಯಮ ನಡೆಸಲು ಸುಲಭವಾಗುವಂಥ ಸುಧಾರಣೆ ಮತ್ತು ಬೆಳೆಯುತ್ತಿರುವ ಮೂಲಸೌಕರ್ಯದೊಂದಿಗೆ ನಮ್ಮ ಎಷ್ಟು ಕಂಪನಿಗಳು ಪರಿಚಿತ ಸ್ಥಳಗಳಲ್ಲಿ ಮಾತ್ರವಲ್ಲದೇ ಜಗತ್ತಿನಾದ್ಯಂತ ಮನೆಮಾತಾಗುವ ಸವಾಲನ್ನು ಸಾಧಿಸುತ್ತಾರೆ ಎಂಬುದನ್ನು ನೋಡಲು ಆಸಕ್ತಿದಾಯಕವಾಗಿದೆ.


  QCI ಮತ್ತು ಭಾರತದ ಗುಣವತ್ತ ಸೇ ಆತ್ಮನಿರ್ಭರತಾ ಉಪಕ್ರಮದ ಕುರಿತು ಇನ್ನಷ್ಟು ಹಾಗೂ ನಮ್ಮ ಜೀವನದ ಮೇಲೆ ಅದು ಅನೇಕ ರೀತಿಯಲ್ಲಿ ಬೀರುವ ಪ್ರಭಾವದ ಕುರಿತು ತಿಳಿದುಕೊಳ್ಳಲು, ಭೇಟಿ ನೀಡಿ: https://www.news18.com/qci/

  First published: