• Home
 • »
 • News
 • »
 • business
 • »
 • ಭಾರತದಲ್ಲಿ Innova Hycross ಬುಕ್ಕಿಂಗ್ ಆರಂಭ: ಇಲ್ಲಿದೆ ಐಷಾರಾಮಿ ಕಾರಿನ ಬಗ್ಗೆ ಮಾಹಿತಿ

ಭಾರತದಲ್ಲಿ Innova Hycross ಬುಕ್ಕಿಂಗ್ ಆರಂಭ: ಇಲ್ಲಿದೆ ಐಷಾರಾಮಿ ಕಾರಿನ ಬಗ್ಗೆ ಮಾಹಿತಿ

Toyota Innova Hycross

Toyota Innova Hycross

ಇನ್ನೋವಾ ಹೈಕ್ರಾಸ್ ಅನ್ನು ಐದು ವೇರಿಯೇಂಟ್‌ ಗಳಲ್ಲಿ ನೀಡಲಾಗುತ್ತಿದ್ದು, ಅವು G, GX, VX, ZX, ಮತ್ತು ZX(O)ಗಳಾಗಿವೆ. ಆದ್ರೆ ನೀವು ಪ್ರಬಲ ಹೈಬ್ರಿಡ್ ಪವರ್‌ಟ್ರೇನ್ ಅನ್ನು ಟಾಪ್-ಸ್ಪೆಕ್ VX ಮತ್ತು ZX ಟ್ರಿಮ್‌ಗಳೊಂದಿಗೆ ಮಾತ್ರ ಆಯ್ಕೆ ಮಾಡಬಹುದಾಗಿದೆ.

 • Trending Desk
 • 2-MIN READ
 • Last Updated :
 • Share this:

  ಪ್ರೀಮಿಯಂ ಕಾರ್‌ (Premium Cars) ಮಾರಾಟದಲ್ಲಿ ಹೆಸರುವಾಸಿಯಾಗಿರುವ ಟೊಯೋಟಾ ಕಂಪನಿಯು (Toyota Company) ಇನ್ನೋವಾ ಕ್ರಿಸ್ಟಾದ (Innova Crysta) ಹೊಸ ತಲೆಮಾರಿನ ಆವೃತ್ತಿಯಾದ ಇನ್ನೋವಾ ಹೈಕ್ರಾಸ್‌ ಅನ್ನು ಅನಾವರಣಗೊಳಿಸಿದೆ. ಎಂವಿಪಿ ಕಾರು ಮಾದರಿಯಾದ ಇನ್ನೋವಾ ಹೈಕ್ರಾಸ್‌ 50 ಸಾವಿರ ಟೋಕನ್‌ ಮೊತ್ತಕ್ಕೆ ಬುಕಿಂಗ್‌ ಆರಂಭಗೊಂಡಿದೆ. ಜನವರಿ ತಿಂಗಳಲ್ಲಿ ಆಟೋ ಎಕ್ಸ್‌ ಪೋದಲ್ಲಿ ಬೆಲೆಯನ್ನು ಘೋಷಿಸುವ ಸಾಧ್ಯತೆ ಇದ್ದು, ಅದೇ ತಿಂಗಳಿಂದ ವಿತರಣೆ ಕೂಡ ಪ್ರಾರಂಭವಾಗುತ್ತದೆ.


  ಇನ್ನೋವಾ ಹೈಕ್ರಾಸ್ ಅನ್ನು ಐದು ವೇರಿಯೇಂಟ್‌ ಗಳಲ್ಲಿ ನೀಡಲಾಗುತ್ತಿದ್ದು, ಅವು G, GX, VX, ZX, ಮತ್ತು ZX(O)ಗಳಾಗಿವೆ. ಆದ್ರೆ ನೀವು ಪ್ರಬಲ-ಹೈಬ್ರಿಡ್ ಪವರ್‌ಟ್ರೇನ್ ಅನ್ನು ಟಾಪ್-ಸ್ಪೆಕ್ VX ಮತ್ತು ZX ಟ್ರಿಮ್‌ಗಳೊಂದಿಗೆ ಮಾತ್ರ ಆಯ್ಕೆ ಮಾಡಬಹುದಾಗಿದೆ.


  ಬದಲಾವಣೆಗೊಂಡ ಬಾಹ್ಯ ವಿನ್ಯಾಸ


  ಹೈಕ್ರಾಸ್‌ ನಲ್ಲಿ ಇನ್ನೋವಾದ ಹೊರಗಿನ ಲುಕ್‌ ಅನ್ನು ಸ್ವಲ್ಪ ಬದಲಾಯಿಸಿ ಇನ್ನಷ್ಟು ಸ್ಟೈಲಿಶ್‌ ಲುಕ್‌ ಕಾಣುವಂತೆ ಮಾಡಲಾಗಿದೆ. ಇನ್ನೋವಾದ ಸಾಂಪ್ರದಾಯಿಕ MPV ಲುಕ್‌ ಅನ್ನು ಬದಲಿಗೆ ಇದು ಒಂಥರಾ ಸೊಂಪಾದ ಟೊಯೋಟಾದಂತೆ ಕಾಣುತ್ತದೆ. ಮುಂಭಾಗದ ಪ್ರೊಫೈಲ್ ಹೆಚ್ಚು ನೇರವಾಗಿದ್ದು, ಜೇನುಗೂಡು ಜಾಲರಿ ಗ್ರಿಲ್ ಮತ್ತು ಸ್ಲೀಕರ್ ಹೆಡ್‌ಲ್ಯಾಂಪ್‌ಗಳು ಇದರ ಜೊತೆಗೆ ದಪ್ಪನೆಯ ಬಂಪರ್‌ ಗಮನ ಸೆಳೆಯುತ್ತದೆ. ಇನ್ನು ಸೈಡ್ ಪ್ರೊಫೈಲ್ ಕೂಡ ಹೈಲೈಟ್‌ ಆಗುತ್ತೆ.
  ದೊಡ್ಡ 18-ಇಂಚಿನ ಮಿಶ್ರಲೋಹಗಳು, ತೆಳುವಾದ ಬಾಡಿ ಕ್ಲಾಡಿಂಗ್ ಜೊತೆಗೆ ವೀಲ್‌ ಗಳ ಕಮಾನು ಗಳಿಂದ ಮತ್ತಷ್ಟು ಎದ್ದು ಕಾಣುತ್ತದೆ. ಅಂದಹಾಗೆ ಇದು ಕ್ರಿಸ್ಟಾಗಿಂತ ಸ್ವಲ್ಪ ದೊಡ್ಡದಾಗಿದೆ. ಈದರಲ್ಲಿ ಗಮನಾರ್ಹ ಬದಲಾವಣೆಯೆಂದರೆ 100 ಎಂಎಂ ಉದ್ದದ ವೀಲ್‌ಬೇಸ್. ಇನ್ನು ಹಿಂಭಾಗದಲ್ಲಿ ಪ್ರೊಫೈಲ್ ಕ್ರಿಸ್ಟಾದಕ್ಕಿಂತ ಸ್ವಲ್ಪ ಭಿನ್ನವಾಗಿದ್ದು ಹೊಸ ಸುತ್ತುವ ಎಲ್ಇಡಿ ಟೈಲ್ ಲೈಟ್‌ ಮತ್ತು ದಪ್ಪನೆಯ ಹಿಂಭಾಗದ ಬಂಪರ್ ಹೊಂದಿರುವುದು ವಿಶೇಷವಾಗಿದೆ.


  ಆಧುನಿಕ ಒಳ ವಿನ್ಯಾಸ !


  ಹೈಕ್ರಾಸ್‌ನ ಇಂಟೀರಿಯರ್‌ ಗೆ ಆಧುನಿಕ ಸ್ಪರ್ಶ ನೀಡಲಾಗಿದೆ. ಇದು ಹೆಚ್ಚು ಆಧುನಿಕ ಮತ್ತು ಹೆಚ್ಚು ಪ್ರೀಮಿಯಂ ನಿಂದಾಗಿ ಎದ್ದು ಕಾಣುತ್ತದೆ. ಇದರ ಒಳಭಾಗದಲ್ಲಿ ಕಪ್ಪು ಮತ್ತು ಕಂದು ಬಣ್ಣದ ಡ್ಯುಯೆಟ್‌ ಟೋನ್‌ ಥೀಮ್‌ ಕಣ್ಣಿಗೆ ತಂಪು ನೀಡುವುದರ ಜೊತೆಗೆ ಹಾಕಲಾಗಿರುವ ಮೆತ್ತನೆಯ ಮಟೀರಿಯಲ್‌ ಗಳು ಮನಸೆಳೆಯುತ್ತವೆ. ಗೇರ್ ಲಿವರ್ ಅನ್ನು ನೇರವಾಗಿ ಸೆಂಟರ್ ಕನ್ಸೋಲ್‌ನಲ್ಲಿ AC ವೆಂಟ್‌ಗಳ ಕೆಳಗೆ ಅಳವಡಿಸಲಾಗಿದೆ.


  ಇದನ್ನೂ ಓದಿ: Car Discount: ಅಬ್ಬಾ, ಈ ಕಾರಿನ ಮೇಲೆ ಈ ಕಾರಿನ ಮೇಲೆ 27 ಲಕ್ಷ ಆಫರ್​! ಕಾರಣ ಇದು


  ಹೊಸ ಪ್ರೀಮಿಯಂ ವೈಶಿಷ್ಟ್ಯಗಳು


  ಇನ್ನೋವಾ ಹೈಕ್ರಾಸ್ ವೈಶಿಷ್ಟ್ಯತೆಯ ವಿಚಾರದಲ್ಲಿ ಕ್ರಿಸ್ಟಾಗಿಂತಲೂ ಒಂದು ಹೆಜ್ಜೆ ಮುಂದಿದೆ. ಇದರಲ್ಲಿರುವ ಹೊಸ ಪ್ರೀಮಿಯಂ ವೈಶಿಷ್ಟ್ಯಗಳು ಯಾವವು ಅನ್ನೋದನ್ನು ನೋಡೋದಾದ್ರೆ,


  · ವಿಶಾಲವಾದ ಸನ್‌ರೂಫ್


  · 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೆ


  · 10-ಇಂಚಿನ ಟಚ್‌ಸ್ಕ್ರೀನ್


  · ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ


  · JBL ಸೌಂಡ್‌ ಸಿಸ್ಟಮ್


  · ಕನೆಕ್ಟೆಡ್‌ ಕಾರ್‌ ಟೆಕ್ನಾಲಜಿ (ಟೆಲಿಮ್ಯಾಟಿಕ್ಸ್)


  · ಮುಂದಿನ ಸೀಟ್‌ ಗಳು ಎಲೆಕ್ಟ್ರಿಕಲಿ ಅಡ್ಜಸ್ಟೇಬಲ್‌ ಆಗಿದ್ದು ಗಾಳಿ ಬರುವಂಥ ವ್ಯವಸ್ಥೆ ಹೊಂದಿವೆ.


  · ಎರಡನೇ ಸಾಲಿನಲ್ಲಿ ಪವರ್ ಹೊಂದಾಣಿಕೆಯ ಕ್ಯಾಪ್ಟನ್ ಸೀಟುಗಳು


  · ಡ್ಯುಯಲ್ 10-ಇಂಚಿನ ಹಿಂಭಾಗದ ಟಚ್‌ಸ್ಕ್ರೀನ್ ವ್ಯವಸ್ಥೆ


  · ಪೂರ್ಣ ಎಲ್ಇಡಿ ಲೈಟಿಂಗ್
  ಹೆಚ್ಚಿನ ಸುರಕ್ಷತಾ ವ್ಯವಸ್ಥೆ


  ಟೊಯೊಟಾ ತನ್ನ ಹೊಸ ಆವೃತ್ತಿ ಹೈಕ್ರಾಸ್ ನಲ್ಲಿ ಹಲವಾರು ಹೊಸ ವೈಶಿಷ್ಟ್ಯಗಳೊಂದಿಗೆ ಸುರಕ್ಷತೆಯ ಅಂಶವನ್ನು ಹೆಚ್ಚಿಸಿದೆ. ಅವುಗಳಲ್ಲಿ ಮುಖ್ಯವಾಗಿ


  *360 ಡಿಗ್ರಿ ಕ್ಯಾಮೆರಾ


  *ADAS - ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಆಟೋಮ್ಯಾಟಿಕ್‌ ತುರ್ತು ಬ್ರೇಕಿಂಗ್, ಲೇನ್ ನಿರ್ಗಮನ ಎಚ್ಚರಿಕೆ, ಲೇನ್ ಕೀಪ್ ಅಸಿಸ್ಟ್, ಆಟೋ ಹೈ ಬೀಮ್ ಅಸಿಸ್ಟ್, ಫಾರ್ವರ್ಡ್ ಡಿಕ್ಕಿಯ ಎಚ್ಚರಿಕೆ


  *ಬ್ಲೈಂಡ್ ಸ್ಪಾಟ್ ಮಾನಿಟರ್


  *6 ಏರ್‌ ಬ್ಯಾಗ್‌ ಗಳು


  *ಬೆಟ್ಟದ ಹಿಡಿತ/ಇಳಿತ ನಿಯಂತ್ರಣ


  *ESP


  *ಆಟೋ ಬ್ರೇಕ್ ಹಿಡಿತದೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್


  ಇನ್ನು, ಇನ್ನೋವಾದಲ್ಲಿ ಪೆಟ್ರೋಲ್ ಎಂಜಿನ್ 2.7-ಲೀಟರ್‌ಗಳಿದ್ದು ಹೈಕ್ರಾಸ್‌ ನಲ್ಲಿ ಇದನ್ನು 2-ಲೀಟರ್ಗೆ ಇಳಿಸಲಾಗಿದೆ. ಇದಲ್ಲದೆ, ಈ ಹೊಸ ಎಂಜಿನ್ ಅನ್ನು ಪ್ರಬಲ-ಹೈಬ್ರಿಡ್ ತಂತ್ರಜ್ಞಾನದೊಂದಿಗೆ ತಯಾರಿಸಲಾಗಿದೆ ಎಂದುವುದು ಗಮನಾರ್ಹವಾಗಿದೆ.

  Published by:Kavya V
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು