Top Motorcycles: ಭಾರತದಲ್ಲಿ ₹10 ಲಕ್ಷದೊಳಗೆ ದೊರೆಯುವ ಟಾಪ್ ಮೋಟಾರ್‌ ಸೈಕಲ್‌ಗಳಿವು

ಅತಿ ಕಡಿಮೆ ಸಮಯದಲ್ಲಿ ಸಾಹಸಕ್ಕೆ ಹಾಗೂ ಪ್ರವಾಸಕ್ಕೆ ಅನುಕೂಲಕರವಾಗಿರುವ ಮೋಟಾರ್‌ ಸೈಕಲ್‌ಗಳು ಜನಪ್ರಿಯತೆ ಪಡೆದುಕೊಂಡಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
2021 ಅನ್ನು ಬದಲಾವಣೆಯ ವರ್ಷವೆಂದೇ ಪರಿಗಣಿಸಲಾಗಿದೆ. (considered )ಕೋವಿಡ್-19 ಸಂಪೂರ್ಣ (Covid-19 )ವಿಶ್ವವನ್ನು ಕಾಡುತ್ತಿರುವ ಇದೇ ಸಂದರ್ಭದಲ್ಲಿ ಪ್ರತಿಯೊಂದು ಕ್ಷೇತ್ರಗಳೂ ಸಾಮಾನ್ಯ ದಿನಚರಿಗೆ ಮರಳಲು ( Back to normal) ಪ್ರಯತ್ನಿಸುತ್ತಿವೆ. ಇನ್ನು ಭಾರತದ ವಾಹನ ಉದ್ಯಮವು (Automotive Industry) ನವೀಕರಣ ಹಾಗೂ ಹೊಸ ಉತ್ಪನ್ನಗಳೆರಡೂ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿಗಳನ್ನು ಕಂಡುಕೊಂಡಿದೆ. ಹೊಸ ವರ್ಷಕ್ಕೆ (New Year) ಇನ್ನೇನು ಕೆಲವೇ ದಿನಗಳ ಕ್ಷಣಗಣನೆ ಬಾಕಿ ಇದ್ದು ಭಾರತದಲ್ಲಿ 10 ಲಕ್ಷ ರೂ. ಒಳಗೆ ದೊರೆಯುವ ಜನಪ್ರಿಯ ಮೋಟಾರ್ ಸೈಕಲ್‌ಗಳ (motorcycles) ಪಟ್ಟಿ ಇಲ್ಲಿದೆ.

ಟ್ರಯಂಫ್ ಟ್ರೈಡೆಂಟ್ 660 (Triumph Trident 660):
ಈ ವರ್ಷದ ಅತ್ಯಂತ ನಿರೀಕ್ಷಿತ ಲಾಂಚ್‌ಗಳಲ್ಲಿ ಟ್ರಯಂಫ್ ಟ್ರೈಡೆಂಟ್ ಒಂದಾಗಿದೆ. ಮಧ್ಯಮ ತೂಕದ 600-cc ಮೋಟಾರ್ ಸೈಕಲ್‌ಗಳೊಂದಿಗೆ ಪೈಪೋಟಿಗಿಳಿಯಲಿರುವ ಟ್ರಯಂಫ್, 660cc ಲಿಕ್ವಿಡ್-ಕೂಲ್ಡ್, ಇನ್-ಲೈನ್ 3-ಸಿಲಿಂಡರ್ ಎಂಜಿನ್‌ನಿಂದ ಚಾಲಿತವಾಗಿದ್ದು ಅದು 10,250 RPMನಲ್ಲಿ 81 PS ಪವರ್ ಮತ್ತು 6,250 RPMನಲ್ಲಿ 64 Nm ಪೀಕ್ ಟಾರ್ಕ್ ಶಕ್ತಿ ಹೊಂದಿದೆ. ಈ ಇಂಜಿನ್ 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಸ್ಲಿಪ್ ಮತ್ತು ಅಸಿಸ್ಟ್ ಕ್ಲಚ್‌ನೊಂದಿಗೆ ಲೈಟ್ ಕ್ಲಚ್ ಲಿವರ್‌ನೊಂದಿಗೆ ಬಂದಿದೆ ಮತ್ತು ಒಂದು ಪರಿಕರವಾಗಿ ಅಪ್ ಮತ್ತು ಡೌನ್ ಕ್ವಿಕ್‌ಶಿಫ್ಟರ್ ಒದಗಿಸುತ್ತದೆ.

ಮೋಟಾರ್‌ಸೈಕಲ್ ರೈಡ್-ಬೈ-ವೈರ್ ಅನ್ನೂ ಹೊಂದಿದ್ದು, ಇದು ಬಹು ರೈಡಿಂಗ್ ಮೋಡ್‌ಗಳನ್ನು ಹೊಂದಲು ಅನುವು ಮಾಡಿಕೊಡುತ್ತದೆ, ಇವೆಲ್ಲವನ್ನೂ ಕಲರ್ TFT ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮೂಲಕ ಸ್ವಿಚ್ ಕ್ಲಸ್ಟರ್-ಮೌಂಟೆಡ್ ನಿಯಂತ್ರಣಗಳನ್ನು ಬಳಸಿ ನಿಯಂತ್ರಿಸಬಹುದು.

ಇದನ್ನೂ ಓದಿ: Bike Mileage: ಬೈಕ್ ಮೈಲೇಜ್ ಹೆಚ್ಚಾಗಬೇಕಾ? ಹಾಗಿದ್ರೆ ಈ ಟ್ರಿಕ್ ಅನುಸರಿಸಿ ನೋಡಿ

ಹೋಂಡಾ CB500X (Honda CB500X):
ಅತಿ ಕಡಿಮೆ ಸಮಯದಲ್ಲಿ ಸಾಹಸಕ್ಕೆ ಹಾಗೂ ಪ್ರವಾಸಕ್ಕೆ ಅನುಕೂಲಕರವಾಗಿರುವ ಮೋಟಾರ್‌ ಸೈಕಲ್‌ಗಳು ಜನಪ್ರಿಯತೆ ಪಡೆದುಕೊಂಡಿವೆ. ಹೋಂಡಾ CB500X ನೊಂದಿಗೆ ತನ್ನ ಅದೃಷ್ಟ ಪರೀಕ್ಷೆಗೆ ಇಳಿದಿದೆ. ಹೆಡ್‌ಲ್ಯಾಂಪ್ ಮತ್ತು ಟೈಲ್ ಲ್ಯಾಂಪ್ ಹಾಗೂ ಕಾಂಪ್ಯಾಕ್ಟ್ ಸಿಗ್ನಲ್ ಸೂಚಕಗಳು ಮತ್ತು ಸ್ಪಷ್ಟವಾದ ಪರದೆಯ ಟೈಲ್ ಲ್ಯಾಂಪ್ ಎರಡನ್ನೂ ಒಳಗೊಂಡಂತೆ ಹೊಸ CB500X ಪೂರ್ಣ ಎಲ್ಇಡಿ ಬೆಳಕನ್ನು ಹೊಂದಿದೆ. ಇದು ಡೈಮಂಡ್-ಆಕಾರದ ಸ್ಟೀಲ್-ಟ್ಯೂಬ್ ಮೇನ್‌ಫ್ರೇಮ್ ಪಡೆಯುತ್ತದೆ, ಇದನ್ನು 4 ಮೌಂಟ್‌ಗಳೊಂದಿಗೆ ಎಂಜಿನ್‌ಗೆ ಕಟ್ಟಲಾಗಿದೆ.

ಮೋಟಾರ್‌ಸೈಕಲ್ ಅನ್ನು ಪವರ್ ಮಾಡುವುದು 8-ವಾಲ್ವ್ ಲಿಕ್ವಿಡ್-ಕೂಲ್ಡ್ ಪ್ಯಾರಲಲ್ ಟ್ವಿನ್-ಸಿಲಿಂಡರ್ ಎಂಜಿನ್ ಆಗಿದ್ದು, ಇದು 8500rpm ನಲ್ಲಿ 35kw ಗರಿಷ್ಠ ಶಕ್ತಿಯನ್ನು ಮತ್ತು 6500rpmನಲ್ಲಿ 43.2Nmನ ಗರಿಷ್ಠ ಟಾರ್ಕ್ ನೀಡುತ್ತದೆ. CB500X ಅಸಿಸ್ಟ್/ಸ್ಲಿಪ್ಪರ್ ಕ್ಲಚ್ ಹೊಂದಿರುವುದರಿಂದ ಅಪ್‌ಶಿಫ್ಟ್‌ಗಳನ್ನು ಸುಗಮಗೊಳಿಸುತ್ತದೆ

ಕವಾಸಕಿ Z650 (Kawasaki Z650):
ಗ್ರೀನ್ ಆರ್ಮಿಯಿಂದ Z650 ಸ್ಟ್ರೀಟ್ ಬೈಕ್ ಆಗಿದ್ದು ಭಾರತದಲ್ಲಿ ಆರಂಭಿಕ ಬೆಲೆ 6,24,000 ರೂ. ಗಳಿಂದ ಲಭ್ಯವಿದೆ. ಒಂದು ಬಣ್ಣದಲ್ಲಿ ಲಭ್ಯವಿದ್ದು 67.31 bhp ಮತ್ತು 64 Nm ಟಾರ್ಕ್ ಅಭಿವೃದ್ಧಿಪಡಿಸುವ 649cc BS6 ಎಂಜಿನ್‌ನಿಂದ ಚಾಲಿತವಾಗಿದೆ. ಮುಂಭಾಗ ಮತ್ತು ಹಿಂಭಾಗದ ಎರಡೂ ಡಿಸ್ಕ್ ಬ್ರೇಕ್‌ಗಳೊಂದಿಗೆ, ಕವಾಸಕಿ Z650 ಆ್ಯಂಟಿ-ಲಾಕಿಂಗ್ ಬ್ರೇಕಿಂಗ್ ಸಿಸ್ಟಮ್‌ನೊಂದಿಗೆ ಬರುತ್ತದೆ. ಈ Z650 ಬೈಕ್ 191 ಕೆಜಿ ತೂಕವಿದ್ದು, 15 ಲೀಟರ್ ಇಂಧನ ಟ್ಯಾಂಕ್ ಸಾಮರ್ಥ್ಯ ಹೊಂದಿದೆ.

ಕವಾಸಕಿ Z650 ತನ್ನ 2022ರ ನವೀಕರಣದ ಭಾಗವಾಗಿ 'ಕ್ಯಾಂಡಿ ಲೈಮ್ ಗ್ರೀನ್ ಟೈಪ್ 3' ಎಂಬ ಹೊಸ ಬಣ್ಣದ ಯೋಜನೆ ಪಡೆಯುತ್ತದೆ. ಈ ಬಣ್ಣವು ಬೂದು ಬಣ್ಣದ ಗ್ರಾಫಿಕ್ಸ್ ಜೊತೆಗೆ ಹಸಿರು ಮತ್ತು ಕಪ್ಪು ಸಂಯೋಜನೆಯಾಗಿದೆ ಮತ್ತು ಹಿಂದೆ ನೀಡಲಾದ ಮೆಟಾಲಿಕ್ ಸ್ಪಾರ್ಕ್ ಕಪ್ಪು ಬಣ್ಣವನ್ನು ಬದಲಾಯಿಸುತ್ತದೆ.

ಡುಕಾಟಿ ಸ್ಕ್ರ್ಯಾಂಬ್ಲರ್ ಐಕಾನ್ (Ducati Scrambler Icon):
ಡುಕಾಟಿ ಸ್ಕ್ರ್ಯಾಂಬ್ಲರ್ ಭಾರತದಲ್ಲಿ ಡುಕಾಟಿಯ ಅತ್ಯಂತ ಜನಪ್ರಿಯ ಮೋಟಾರ್ ಸೈಕಲ್‌ಗಳಲ್ಲಿ ಒಂದಾಗಿದೆ. ಇದು 2 ಆವೃತ್ತಿಗಳು ಮತ್ತು 3 ಬಣ್ಣಗಳಲ್ಲಿ ಲಭ್ಯವಿದೆ ಮತ್ತು ಟಾಪ್ ಆವೃತ್ತಿಯ ಬೆಲೆ 8,49,240 ರೂ ಆಗಿದೆ. ಡುಕಾಟಿ ಸ್ಕ್ರ್ಯಾಂಬ್ಲರ್ ಐಕಾನ್ 803cc BS6 ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದು 71.87 bhp ಮತ್ತು 66.2 Nm ಟಾರ್ಕ್ ಅಭಿವೃದ್ಧಿಪಡಿಸುತ್ತದೆ. ಮುಂಭಾಗ ಮತ್ತು ಹಿಂಭಾಗದ ಎರಡೂ ಡಿಸ್ಕ್ ಬ್ರೇಕ್‌ಗಳೊಂದಿಗೆ, ಡುಕಾಟಿ ಸ್ಕ್ರ್ಯಾಂಬ್ಲರ್ ಐಕಾನ್ ಆ್ಯಂಟಿ-ಲಾಕಿಂಗ್ ಬ್ರೇಕಿಂಗ್ ಸಿಸ್ಟಮ್‌ನೊಂದಿಗೆ ಬರುತ್ತದೆ. ಈ ಸ್ಕ್ರ್ಯಾಂಬ್ಲರ್ ಐಕಾನ್ ಬೈಕ್ 189 ಕೆಜಿ ತೂಕ ಮತ್ತು 13.5 ಲೀಟರ್ ಇಂಧನ ಟ್ಯಾಂಕ್ ಸಾಮರ್ಥ್ಯ ಹೊಂದಿದೆ.

ಸ್ಕ್ರ್ಯಾಂಬ್ಲರ್ ಐಕಾನ್ ಹಿಂದಿನ ಆವೃತ್ತಿಗಳಂತೆಯೇ ರೆಟ್ರೋ ಕ್ಯಾರೆಕ್ಟರ್‌ನೊಂದಿಗೆ ಬಂದಿದ್ದು ಆಧುನಿಕ ಅಂಶಗಳಾದ LED DRLಗಳನ್ನು ಪಡೆದುಕೊಂಡಿದೆ. ಡುಕಾಟಿ 2021ರ ಆವೃತ್ತಿಯನ್ನು ಅಟೊಮಿಕ್ ಟ್ಯಾಂಗರಿನ್ ಪೈಂಟ್ ಸ್ಕ್ರೀಮ್ ಒದಗಿಸುತ್ತಿದ್ದು ಕಪ್ಪು ಬಣ್ಣದ ಫ್ರೇಮ್‌ನೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಇದು ಸ್ಕ್ರ್ಯಾಂಬ್ಲರ್ ಐಕಾನ್‌ಗೆ ವಿಶಿಷ್ಟವಾಗಿರುವ ಕ್ಲಾಸಿಕ್ ಹಳದಿ ಬಣ್ಣದ ಸ್ಕೀಮ್‌ನಲ್ಲಿಯೂ ಬೈಕ್ ಲಭ್ಯವಿದೆ.

ಹೋಂಡಾ CB650R (Honda CB650R):
CB650R ಮೇಲೆ ಹೋಂಡಾ ಹೆಚ್ಚು ಭರವಸೆಯನ್ನಿಟ್ಟುಕೊಂಡಿದೆ. ಭಾರತದಲ್ಲಿ ಈ ವರ್ಷದ ಆರಂಭದಲ್ಲಿ ಹೋಂಡಾ CB650R ಅನ್ನು ಲಾಂಚ್ ಮಾಡಿದೆ. ಮೋಟಾರ್‌ಸೈಕಲ್ 649cc, DOHC 16-ವಾಲ್ವ್ ಎಂಜಿನ್‌ನಿಂದ ಚಾಲಿತವಾಗಿದ್ದು ಅದು 12,000rpmನಲ್ಲಿ 85hp ನೀಡುತ್ತದೆ ಮತ್ತು 8,500 rpmನಲ್ಲಿ 57.5 Nmನ ಗರಿಷ್ಠ ನಿವ್ವಳ ಟಾರ್ಕ್ ನೀಡುತ್ತದೆ. ಇದು ಅಸಿಸ್ಟ್/ಸ್ಲಿಪ್ಪರ್ ಕ್ಲಚ್‌ನೊಂದಿಗೆ ಬರುತ್ತದೆ ಅದು ಅಪ್‌ಶಿಫ್ಟ್‌ಗಳನ್ನು ಸುಲಭಗೊಳಿಸುತ್ತದೆ ಮತ್ತು ಹಾರ್ಡ್ ಡೌನ್ ಬದಲಾವಣೆಗಳನ್ನು ನಿರ್ವಹಿಸುತ್ತದೆ. ಹೊಸ ಸ್ಮಾರ್ಟ್ ಎಮರ್ಜೆನ್ಸಿ ಸ್ಟಾಪ್ ಸಿಗ್ನಲ್ ತಂತ್ರಜ್ಞಾನವು ಹಠಾತ್ ಬ್ರೇಕಿಂಗ್ ಅನ್ನು ಪತ್ತೆ ಮಾಡುತ್ತದೆ ಮತ್ತು ಮುಂಭಾಗ ಮತ್ತು ಹಿಂಭಾಗದ ಅಪಾಯದ ದೀಪಗಳನ್ನು ಸ್ವಯಂಚಾಲಿತವಾಗಿ ಸಕ್ರಿಯಗೊಳಿಸುತ್ತದೆ. ಹೋಂಡಾ ಇಗ್ನಿಶನ್ ಸೆಕ್ಯುರಿಟಿ ಸಿಸ್ಟಮ್ ಹೊಂದಿದ್ದು ಸಮೀಪದಲ್ಲಿರುವ ವಾಹನಗಳ ಕುರಿತು ಎಚ್ಚರಿಕೆ ನೀಡುತ್ತದೆ.

ಇದನ್ನೂ ಓದಿ: TVS Apache RTR 165 RP: ಬೆಲೆಗೆ ತಕ್ಕಂತೆ ಫೀಚರ್ಸ್​.. ಗೂಳಿ ತರ ಇದೆ ಟಿವಿಎಸ್ ಪರಿಚಯಿಸಿದ​ ಹೊಸ ಅಪಾಚೆ ಬೈಕ್​

ಎಲೆಕ್ಟ್ರಾನಿಕ್‌ಗಳ ವಿಷಯದಲ್ಲಿ CB650R ಹೋಂಡಾದ ಆಯ್ದ ಟಾರ್ಕ್ ಕಂಟ್ರೋಲ್‌ನೊಂದಿಗೆ ಬಂದಿದ್ದು ಇದು ಹಿಂದಿನ ಚಕ್ರದಲ್ಲಿ ಟಾರ್ಕ್ ಅತ್ಯುತ್ತಮವಾಗಿಸಲು ಎಂಜಿನ್ ಶಕ್ತಿಯನ್ನು ಸರಿಹೊಂದಿಸುತ್ತದೆ, ಅಂತೆಯೇ ಹಿಂದಿನ ಚಕ್ರ ಸ್ಲಿಪ್ ಕಡಿಮೆ ಮಾಡುತ್ತದೆ. ಎಡ ಸ್ಟೀರಿಂಗ್ ವೀಲ್‌ನಲ್ಲಿ ಟಾರ್ಕ್ ಕಂಟ್ರೋಲ್ ಸ್ವಿಚ್‌ನೊಂದಿಗೆ ಆನ್ / ಆಫ್ ಸೆಟ್ಟಿಂಗ್ ಆಯ್ಕೆ ಮಾಡಲು ಸವಾರ ಆಯ್ಕೆ ಮಾಡಬಹುದು. ಡ್ಯುಯಲ್ ಚಾನೆಲ್ ABS ಆರ್ದ್ರ ಮತ್ತು ಶುಷ್ಕ ಸ್ಥಿತಿಯಲ್ಲಿ ಸುಗಮ ಬ್ರೇಕಿಂಗ್ ನೀಡುತ್ತದೆ.
Published by:vanithasanjevani vanithasanjevani
First published: