Rakesh Jhunjhunwala: ಈ ಟಾಪ್​ ಕಂಪೆನಿಗಳ ಷೇರುಗಳನ್ನು ಹೊಂದಿದ್ದಾರೆ ರಾಕೇಶ್​ ಜುಂಜನ್ವಾಲಾ! 5 ಬಿಲಿಯನ್​​ ಕಥೆ ಏನು?

ರಾಕೇಶ್ ಜುಂಜುನ್ವಾಲಾ ಅವರನ್ನು "ಬಿಗ್ ಬುಲ್ ಆಫ್ ಇಂಡಿಯಾ" ಮತ್ತು "ಕಿಂಗ್ ಆಫ್ ಬುಲ್ ಮಾರ್ಕೆಟ್" ಎಂದು ಪ್ರಖ್ಯಾತಿ ಹೊಂದಿದ್ದಾರೆ. ಅವರ ಷೇರು ಮಾರುಕಟ್ಟೆ ಮುನ್ಸೂಚನೆಗಳು ಮತ್ತು ಷೇರು ಮಾರುಕಟ್ಟೆಯ ಗೂಳಿಯ ದೃಷ್ಟಿಕೋನಗಳಿಗೆ ವ್ಯಾಪಕವಾಗಿ ಹೆಸರುವಾಸಿಯಾಗಿದ್ದರು.

ರಾಕೇಶ್​ ಜುಂಜನ್ವಾಲಾ

ರಾಕೇಶ್​ ಜುಂಜನ್ವಾಲಾ

  • Share this:
ದಿಗ್ಗಜ ಹೂಡಿಕೆದಾರ ರಾಕೇಶ್​ ಜುಂಜುನ್ವಾಲಾ (Rakesh Jujanwala) ಇಂದು ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ. ಬಿಲಿಯನೇರ್ ಹೂಡಿಕೆದಾರ ರಾಕೇಶ್ ಜುಂಜುನ್ವಾಲಾ 62ನೇ ವಯಸ್ಸಿಗೆ ತಮ್ಮ ಜೀವನದ ಆಟ ಮುಗಿಸಿದ್ದಾರೆ. ಷೇರು ಮಾರುಕಟ್ಟೆ (Share Market)) ಯಲ್ಲಿ ತಮ್ಮ ಹೆಸರನ್ನು ಟ್ರೆಂಡ್​ ಮಾಡಿಕೊಂಡಿದ್ದರು ರಾಕೇಶ್​ ಜುಂಜುನ್ವಾಲಾ, ಷೇರುಪೇಟೆಯಲ್ಲಿ ಕಿಂಗ್ (Stock Market King)​ ಎನಿಸಿಕೊಂಡಿದ್ದರು. ಅಷ್ಟೇ ಅಲ್ಲದೇ ಷೇರು ಪೇಟೆಯಲ್ಲಿ ಹೂಡಿಕೆ ಮಾಡಿ, ಸಾಕಷ್ಟು ಹಣ, ಖ್ಯಾತಿ ಗಳಿಸಿದ್ದರು. ಭಾರತದ 36 ನೇ ಶ್ರೀಮಂತ ವ್ಯಕ್ತಿ  ಈ ರಾಕೇಶ್​ ಜುಂಜನ್ವಾಲಾ.  ಹಿರಿಯ ಹೂಡಿಕೆದಾರ ರಾಕೇಶ್ ಜುಂಜುನ್ವಾಲಾ ಭಾನುವಾರ ಬೆಳಗ್ಗೆ ನಿಧನರಾಗಿದ್ದಾರೆ. ಷೇರು ಪೇಟೆಯಲ್ಲಿ ಶೇರ್​ ಖಾನ್​ನಂತೆ ಅಬ್ಬರಿಸಿದ್ದರು ಈ ರಾಕೇಶ್​ ಜುಂಜನ್ವಾಲಾ. ಕಾಲೇಜು ಓದುವಾಗ ಕೇವಲ 5 ಸಾವಿರದಿಂದ ಸ್ಟಾಕ್​ ಮಾರ್ಕೆಟ್​ನಲ್ಲಿ ಇನ್ವೆಸ್ಟ್​ ಶುರು ಮಾಡಿದ್ದರು.

ಷೇರು ಪೇಟೆಯ ಶೇರ್​ ಖಾನ್​ ಈ ರಾಕೇಶ್​ ಜುಂಜನ್ವಾಲಾ!

ರಾಕೇಶ್ ಜುಂಜುನ್ವಾಲಾ ಅವರನ್ನು "ಬಿಗ್ ಬುಲ್ ಆಫ್ ಇಂಡಿಯಾ" ಮತ್ತು "ಕಿಂಗ್ ಆಫ್ ಬುಲ್ ಮಾರ್ಕೆಟ್" ಎಂದು ಪ್ರಖ್ಯಾತಿ ಹೊಂದಿದ್ದಾರೆ. ಅವರ ಷೇರು ಮಾರುಕಟ್ಟೆ ಮುನ್ಸೂಚನೆಗಳು ಮತ್ತು ಷೇರು ಮಾರುಕಟ್ಟೆಯ ಗೂಳಿಯ ದೃಷ್ಟಿಕೋನಗಳಿಗೆ ವ್ಯಾಪಕವಾಗಿ ಹೆಸರುವಾಸಿಯಾಗಿದ್ದರು. 1985 ರಲ್ಲಿ ಕೇವಲ 5,000 ಬಂಡವಾಳದಿಂದ ಪ್ರಾರಂಭವಾದ ಅವರ ಹೂಡಿಕೆ ಇಂದು 5 ಬಿಲಿಯನ್ ವರೆಗೆ ಬೆಳೆದಿದೆ. ಇಷ್ಟು ದೊಡ್ಡ ಸಾಮ್ರಾಜ್ಯ ಕಟ್ಟಲು ರಾಕೇಶ್​ ಜುಂಜನ್ವಾಲಾ ಸಾಕಷ್ಟು ಶ್ರಮ ವಹಿಸಿದ್ದಾರೆ.

ರಾಕೇಶ್​ ಜುಂಜನ್ವಾಲಾ ಇನ್ವೆಸ್ಟ್​ ಮಾಡಿರುವ  ಟಾಪ್​ ಕಂಪನಿಗಳು!

ಸಾಕಷ್ಟು ಕಂಪನಿಗಳಲ್ಲಿ ರಾಕೇಶ್​ ಜುಂಜನ್ವಾಲಾ ಅವರು ಇನ್ವೆಸ್ಟ್​ ಮಾಡಿದ್ದಾರೆ. ದೊಡ್ಡ ದೊಡ್ಡ ಕಂಪೆನಗಳ ಷೇರುಗಳನ್ನು ಹೊಂದಿದ್ದಾರೆ ರಾಕೇಶ್ ಜುಂಜನ್ವಾಲಾ. ಜೊತೆಗೆ ಅವರ ಪತ್ನಿಯೂ ಕೂಡ ಘಟಾನುಘಟಿ ಕಂಪನಿಗಳ ಷೇರುಗಳನ್ನು ಹೊಂದಿದ್ದಾರೆ.











































 ಕಂಪೆನಿ ಹೆಸರುಷೇರುಗಳ ಸಂಖ್ಯೆ
ಟೈಟನ್​ ಕಂಪೆನಿ ಲಿಮಿಟೆಡ್​95,40,575,000
ಮೆಟ್ರೋ ಬ್ರ್ಯಾಂಡ್ಸ್​ ಲಿಮಿಟೆಡ್​2,61,02,394,00
ಸ್ಟಾರ್​ ಹೆಲ್ತ್​ ಕಂಪೆನಿ ಲಿಮಿಟೆಡ್​7,78,70,977,00
ಕ್ರಿಸಿಲ್​ ಲಿಮಿಟೆಡ್18,70,750,00
ಎನ್​ಸಿಸಿ ಲಿಮಿಟೆಡ್/ ಭಾರತ7,83,33,266,00
ಇಂಡಿಯನ್​ ಹೋಟೆಲ್ಸ್ ಕಂಪೆನಿ ಲಿಮಿಟೆಡ್1,42,87,765,00
ಟಾಟಾ ಕಮ್ಯುನಿಕೇಷನ್​ ಲಿಮಿಟೆಡ್30,75,687,00
ಜುಬಿಲೆಂಟ್​ ಪರಮೋವ ಲಿಮಿಟೆಡ್50,20,000,00
ವಾ ಟೆಕ್​ ವಾಬಗ್​ ಲಿಮಿಟೆಡ್50,00,000.00



[caption id="attachment_820189" align="alignnone" width="924"] ರಾಕೇಶ್​ ಜುಂಜನ್ವಾಲಾ ಅವರ ಬಳಿ ಇರುವ ಟಾಪ್​ ಕಂಪೆನಿಗಳ ಷೇರುಗಳ ಸಂಖ್ಯೆ[/caption]

ರಾಕೇಶ್​ ಪತ್ನಿ ರೇಖಾ ಜುಂಜನ್ವಾಲಾ ಅವರ ಬಳಿ ಇರುವ ಷೇರುಗಳು


ಇಷ್ಟೇ ಅಲ್ಲದೇ ಇನ್ನೂ ಸಾಕಷ್ಟು ಕಂಪನಿಗಳ ಷೇರುಗಳನ್ನು ಖರೀದಿಸಿದ್ದಾರೆ ರಾಕೇಶ್​ ಜುಂಜನ್ವಾಲಾ.

ಇದನ್ನೂ ಓದಿ: 5 ಸಾವಿರದಿಂದ 5 ಬಿಲಿಯನ್ ದುಡ್ಡು ಮಾಡಿದ್ದ ಉದ್ಯಮಿ! ಷೇರು ಮಾರುಕಟ್ಟೆ ಶೇರ್ ಖಾನ್ ರಾಕೇಶ್ ಜುಂಜನ್ವಾಲಾ ಜೀವನಗಾಥೆ ಇಲ್ಲಿದೆ

ಮೊದಲ ದೊಡ್ಡ ಲಾಭ 5 ಲಕ್ಷ

1986 ರಲ್ಲಿ ರಾಕೇಶ್ ಜುಂಜುನ್ವಾಲಾ ಅವರ ಮೊದಲ ದೊಡ್ಡ ಲಾಭ 5 ಲಕ್ಷ. 1986 ಮತ್ತು 1989 ರ ನಡುವೆ ಅವರು ಸುಮಾರು 20-25 ಲಕ್ಷ ಲಾಭ ಗಳಿಸಿದರು. 2021 ರ ಹೊತ್ತಿಗೆ, ಅವರ ದೊಡ್ಡ ಹೂಡಿಕೆಯು ಟೈಟಾನ್ ಕಂಪನಿಯಲ್ಲಿ 7,294.8 ಕೋಟಿ ಮೌಲ್ಯದ್ದಾಗಿದೆ. ಅವರು ಭಾರತದ ಇಂಟರ್‍ನ್ಯಾಶನಲ್ ಮೂವ್‍ಮೆಂಟ್ ಟು ಯುನೈಟ್ ನೇಷನ್ಸ್‍ನ ಸಲಹೆಗಾರರ ಮಂಡಳಿಯ ಸದಸ್ಯರಾಗಿದ್ದರು.


2013ರಲ್ಲಿ ಜುಂಜುನ್‍ವಾಲಾ ಅವರು ಮಲಬಾರ್ ಹಿಲ್‍ನಲ್ಲಿರುವ ರಿಡ್ಜ್‍ವೇ ಅಪಾರ್ಟ್‍ಮೆಂಟ್‍ಗಳ 12 ಘಟಕಗಳಲ್ಲಿ 6 ಅನ್ನು ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್‍ನಿಂದ 176 ಕೋಟಿ ರೂ.ಗೆ ಖರೀದಿಸಿದ್ದರು. ನಂತರ 2017ರಲ್ಲಿ ಕಟ್ಟಡದಲ್ಲಿರುವ ಇತರ 6 ಅಪಾರ್ಟ್‍ಮೆಂಟ್‍ಗಳನ್ನು ಎಚ್‍ಎಸ್‍ಬಿಸಿ ಬ್ಯಾಂಕ್‍ನಿಂದ 195 ಕೋಟಿ ರೂ.ಗೆ ಖರೀದಿಸಿದ್ದರು. 2021 ರಲ್ಲಿ ಅವರು ಹಳೆಯ ಕಟ್ಟಡವನ್ನು ಕೆಡವಿದ ನಂತರ ತಮ್ಮ ಹೊಸ 70000 ಚದರ ಅಡಿ 13 ಅಂತಸ್ತಿನ ಮನೆಯ ನಿರ್ಮಾಣವನ್ನು ಪ್ರಾರಂಭಿಸಿದರು.


Published by:Vasudeva M
First published: