ಸಾಮಾನ್ಯವಾಗಿ ಮನುಷ್ಯ ವಯಸ್ಸು (Human Age) ಹಾಗೂ ಶಕ್ತಿ (Power) ಇರುವವರೆಗೂ ದುಡಿಯಬಲ್ಲ ಹಾಗೂ ಅದರಿಂದ ಹಣ (Money) ಸಂಪಾದಿಸಿ ಜೀವನ (Life) ಸಾಗಿಸಬಲ್ಲ. ಆದರೆ ವಯಸ್ಸಾದಂತೆ ಮನುಷ್ಯನಲ್ಲಿ ಮೊದಲಿನಂತಹ ಶಕ್ತಿ ಹಾಗೂ ಉತ್ಸಾಹ ಇರುವುದಿಲ್ಲ. ಈ ಸಂದರ್ಭದಲ್ಲಿ ಮುಂಚಿನಂತೆ ಕೆಲಸ (Work) ಮಾಡಲಾಗದೆ ಬದುಕು ಸವಿಸುವುದು ಕಷ್ಟಕರವಾಗುತ್ತದೆ. ಹಾಗಾಗಿಯೇ ಸಾಕಷ್ಟು ಜನರು ಮುಂಚಿನಿಂದಲೇ ಪ್ಲ್ಯಾನ್ ಮಾಡುತ್ತಾರೆ ಹಾಗೂ ಹಿರಿಯ ನಾಗರಿಕರಾದಂಥವರು (Senior Citizen) ತಮಗೆ ನಿಯಮಿತವಾಗಿ ಹಾಗೂ ಸುರಕ್ಷಿತವಾಗಿ ಆದಾಯ ನೀಡುವ ಯಾವುದಾದರೂ ಯೋಜನೆಗಳಲ್ಲಿ ಲಂಪ್ಸಮ್ ಮೊತ್ತವನ್ನು ಹೂಡಲು ಯೋಚಿಸುತ್ತಿರುತ್ತಾರೆ.
ಈ ಸಂದರ್ಭದಲ್ಲಿ ಮೊತ್ತವನ್ನು ನಿಶ್ಚಿತ ಠೇವಣಿಯಾಗಿ ಇರಿಸುವುದನ್ನು ಅನೇಕ ಹಿರಿಯ ನಾಗರಿಕರು ಇಷ್ಟಪಡುತ್ತಾರೆ, ಏಕೆಂದರೆ ಅವರಿಗೆ ಹೆಚ್ಚಿನ ಆದಾಯಕ್ಕಿಂತಲೂ ರೆಗ್ಯೂಲರ್ ಆಗಿ ಹಣ ಪಡೆಯುವುದು ಬಲು ಮುಖ್ಯವಾಗಿರುತ್ತದೆ ಹಾಗೂ ಈ ವಿಷಯದಲ್ಲಿ ಬ್ಯಾಂಕುಗಳು ಸಾಕಷ್ಟು ಆಕರ್ಷಕ ಹಾಗೂ ವಿಶ್ವಾಸಾರ್ಹ ಹೂಡಿಕೆಯ ಸ್ಥಾನಗಳಾಗಿರುತ್ತವೆ.
ಹಿರಿಯ ನಾಗರಿಕರಿಗೆ ಅತ್ಯುತ್ತಮ ಬಡ್ಡಿದರ!
ಸದ್ಯ ಈಗ ಬ್ಯಾಂಕುಗಳು ಬಡ್ಡಿದರವನ್ನು ಏರಿಸಿದ್ದು ಹಿರಿಯ ನಾಗರಿಕರಿಗೆ ಇದೊಂದು ವರದಾನವಾಗಿದೆ. ಇತ್ತೀಚೆಗೆ ಭಾರತೀಯ ರಿಸರ್ವ್ ಬ್ಯಾಂಕ್ ರೆಪೊ ದರವನ್ನು ಏರಿಸಿದೆ. ಕಳೆದ ಆರು ತಿಂಗಳುಗಳಲ್ಲಿ 6.25% ಪ್ರತಿಶತದೊಂದಿಗೆ ರೆಪೊ ದರವು 225 ಪಾಯಿಂಟ್ಸ್ ಗಳಷ್ಟು ಏರಿರುವುದನ್ನು ಗಮನಿಸಬಹುದು. ಪ್ರಸ್ತುತ ಹಣದುಬ್ಬರವು ಸಾಕಷ್ಟು ನಿಯಂತ್ರಣದಲ್ಲಿದೆಯಾದರೂ ವಿತ್ತೀಯ ನೀತಿ ಸಮೀತಿಯು ನಾಳೆಯವರೆಗೆ 25 ಬಿಪಿಎಸ್ ಗಳಷ್ಟು ರೆಪೊ ದರದ ಹೆಚ್ಚಳವನ್ನು ಘೋಷಿಸಬಹುದೆಂದು ತಜ್ಞರು ನಿರೀಕ್ಷೆ ಮಾಡುತ್ತಿರುವುದಾಗಿ ತಿಳಿದುಬಂದಿದೆ.
ಭಾರತದ ಹಲವು ಬ್ಯಾಂಕುಗಳು ಸದ್ಯ ಯಾವ ರೀತಿ ಬಡ್ಡಿದರವನ್ನು ನಿಶ್ಚಿತ ಠೇವಣಿಗಳ ಮೇಲೆ ನೀಡುತ್ತಿದೆ ಎಂಬುದನ್ನು ಈ ಕೆಳಗೆ ತಿಳಿಯಿರಿ. ಈ ದರಗಳು ಕೇವಲ ಹಿರಿಯ ನಾಗರಿಕರಿಗೆ ಮಾತ್ರ ಅನ್ವಯವಾಗುತ್ತವೆ.
ಇದನ್ನೂ ಓದಿ: ಗ್ರಾಹಕರಿಗೆ ಬಿಗ್ ಶಾಕ್ ನೀಡಿದ 2 ಪ್ರಮುಖ ಬ್ಯಾಂಕ್ಗಳು!
ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್
ಬಡ್ಡಿದರ (%) : 8.76
ಅವಧಿ: 999 ದಿನಗಳು
ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್
ಬಡ್ಡಿದರ (%) : 8.75
ಅವಧಿ: 80 ವಾರಗಳು
ಬಂಧನ್ ಬ್ಯಾಂಕ್
ಬಡ್ಡಿದರ (%) : 8.5
ಅವಧಿ: 600 ದಿನಗಳು
ಇಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್
ಬಡ್ಡಿದರ (%) : 8.5
ಅವಧಿ: 888 ದಿನಗಳು
ಡಿಸಿಬಿ ಬ್ಯಾಂಕ್
ಬಡ್ಡಿದರ (%) : 8.35
ಅವಧಿ: 700 ದಿನಗಳಿಂದ 36 ತಿಂಗಳುಗಳು
ಆರ್‌ಬಿಎಲ್ ಬ್ಯಾಂಕ್
ಬಡ್ಡಿದರ (%) : 8.30
ಅವಧಿ: 15 ತಿಂಗಳುಗಳಿಂದ 725 ದಿನಗಳು
ಸಿಟಿ ಬ್ಯಾಂಕ್
ಬಡ್ಡಿದರ (%) : 8.27
ಅವಧಿ: 91-150 ದಿನಗಳು
ಇಂಡಸ್ ಇಂಡ್ ಬ್ಯಾಂಕ್
ಬಡ್ಡಿದರ (%) : 8.25
ಅವಧಿ: 2 ವರ್ಷಗಳಿಂದ 3 ವರ್ಷಗಳು 3 ತಿಂಗಳುಗಳು
ಯಸ್ ಬ್ಯಾಂಕ್
ಬಡ್ಡಿದರ (%) : 8.25
ಅವಧಿ: 35 ತಿಂಗಳುಗಳು
ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್
ಬಡ್ಡಿದರ (%) : 8.25
ಅವಧಿ: 24 ತಿಂಗಳುಗಳು 1 ದಿನದಿಂದ 45 ತಿಂಗಳುಗಳು
ಕ್ಯಾಥೋಲಿಕ್ ಸಿರಿಯನ್ ಬ್ಯಾಂಕ್
ಬಡ್ಡಿದರ (%) : 8.10
ಅವಧಿ: 444 ದಿನಗಳು
ಆಕ್ಸಿಸ್ ಬ್ಯಾಂಕ್
ಬಡ್ಡಿದರ (%) : 8.01
ಅವಧಿ: 2 ವರ್ಷಗಳು <30 ತಿಂಗಳುಗಳು
ಸಿಟಿ ಯುನಿಯನ್ ಬ್ಯಾಂಕ್
ಬಡ್ಡಿದರ (%) : 8
ಅವಧಿ: 365 ದಿನಗಳಿಂದ 443 ದಿನಗಳು
ಐಡಿಎಫ್‍ಸಿ ಫಸ್ಟ್ ಬ್ಯಾಂಕ್
ಬಡ್ಡಿದರ (%) : 8
ಅವಧಿ: 549 ದಿನಗಳಿಂದ 3 ವರ್ಷಗಳು
ಸಾಮಾನ್ಯವಾಗಿ ಜನರು ತಾವು ಮಾಡುವ ಕೆಲಸದಿಂದ ನಿವೃತ್ತಿ ಪಡೆದ ನಂತರ ಸಿಕ್ಕಂತಹ ಮೊತ್ತವನ್ನು ಸಾಂಪ್ರದಾಯಿಕವಾದಂತಹ ನಿಶ್ಚಿತ ಠೇವಣಿಗಳಲ್ಲಿ ಇರಿಸುತ್ತಾರೆ. ಇಲ್ಲಿ ಅಂಥವರಿಗೆ ಒಂದು ಉತ್ತಮವಾದ ಸಲಹೆ ಏನೆಂದರೆ ಆಗಾಗ ಅವರು ಸದ್ಯದ ವಿದ್ಯಮಾನಗಳನ್ನು ಗಮನಿಸುತ್ತ ಹೆಚ್ಚು ಹೆಚ್ಚು ಬಡ್ಡಿ ನೀಡುವ ಕೆಲವು ಮ್ಯುಚುವಲ್ ಫಂಡ್ ಗಳಲ್ಲಿ ಸ್ವಲ್ಪ ಮೊತ್ತಗಳನ್ನು ಇರಿಸುತ್ತಿದ್ದರೆ ಒಳಿತು.
ಸಿನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್, ಪಿಪಿಎಫ್ ನಂತಹವುಗಳಲ್ಲಿ ಹೂಡಿಕೆ ಮಾಡುವುದು ಒಳಿತಾಗಬಹುದು. ಇವುಗಳಲ್ಲೂ ಸಹ ಉತ್ತಮ ಬಡ್ಡಿದರ ಸಿಗುತ್ತಿರುತ್ತವೆ. ಹಾಗಾಗಿ ಇದಕ್ಕೆ ಸಂಬಂಧಿಸಿದಂತೆ ಮಾಡಲಗುವ ಘೋಷನೆಗಳತ್ತ ಗಮನ ಹರಿಸುವುದು ಒಳ್ಳೆಯ ಅಭ್ಯಾಸ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ