• Home
  • »
  • News
  • »
  • business
  • »
  • Layoff - Recession: ಹೇಳದೇ ಕೇಳದೇ ಇಷ್ಟು ಮಂದಿ ಕೆಲಸದಿಂದ ವಜಾ, ಹೀಗಾದ್ರೆ ಮುಂದೇನ್​ ಕಥೆ ಅಂತಿದ್ದಾರೆ ಭಾರತೀಯರು!

Layoff - Recession: ಹೇಳದೇ ಕೇಳದೇ ಇಷ್ಟು ಮಂದಿ ಕೆಲಸದಿಂದ ವಜಾ, ಹೀಗಾದ್ರೆ ಮುಂದೇನ್​ ಕಥೆ ಅಂತಿದ್ದಾರೆ ಭಾರತೀಯರು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈ ವರ್ಷದಲ್ಲಿ ಯಾವೆಲ್ಲ ಕಂಪನಿಗಳು, ಎಷ್ಟೆಲ್ಲಾ ಉದ್ಯೋಗಿಗಳನ್ನು ವಜಾ ಮಾಡಿದೆ ಅಂತ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ ನೋಡಿ.

  • Share this:

ಕಾಯಕವೇ ಕೈಲಾಸ ಅಂತಾರೆ. ಕೆಲಸ (Job) ಕೊಡುವ ಕಂಪನಿ (Company) ಯಲ್ಲಿ ನಿಯತ್ತಾಗಿ ಕೆಲಸ ಮಾಡಿದರೆ ಯಾವುದೇ ತೊಂದರೆ ಇಲ್ಲ ಅನ್ನುತ್ತಾರೆ. ಆದರೆ ಈಗಿನ ಪರಿಸ್ಥಿತಿ ನೋಡಿದರೆ ಯಾರ ಕೆಲಸ, ಯಾವಾಗ, ಎಲ್ಲಿ, ಹೇಗೆ ಹೋಗುತ್ತೆ ಅಂತಾನೇ ಗೊತ್ತಾಗಲ್ಲ. ಯಾಕಂದರೆ ವಿಶ್ವದ ದೊಡ್ಡ ದೊಡ್ಡ ಕಂಪನಿಗಳು ತನ್ನ ಉದ್ಯೋಗಿಗಳನ್ನು ಏಕಾಏಕಿ ಕೆಲಸದಿಂದ ವಜಾ  ಮಾಡುತ್ತಿದೆ. ಇದರಲ್ಲಿ ಭಾರತೀಯರೇ ಹೆಚ್ಚು ಎನ್ನುವುದು ಬೇಸರದ ಸಂಗತಿ. ವಿಶ್ವದಾದ್ಯಂತ ಉದ್ಯೋಗಿಗಳ ವಜಾ (Layoffs) ಪರ್ವ ನಿಲ್ಲುವಂತೆ ಕಾಣುತ್ತಿಲ್ಲ. ಒಂದೊಂದೇ ಪ್ರತಿಷ್ಠಿತ ಕಂಪನಿಗಳು (Big Company Layoffs) ತನ್ನ ವೆಚ್ಚವನ್ನು ನೀಗಿಸಲು, ಆರ್ಥಿಕ ಹಿಂಜರಿತ (Recession) ಎದುರಿಸಲು ತನ್ನ ಉದ್ಯೋಗಿಗಳನ್ನು ನಡು ನೀರಿನಲ್ಲಿ ಕೈಬಿಡುತ್ತಿದೆ (Job Cut). 


ಹೀಗೆ ಆಗ್ತಿದ್ರೆ ಮುಂದೆ ಏನ್​ ಕಥೆ?


ಈ ರೀತಿ ದೊಡ್ಡ ದೊಡ್ಡ ಕಂಪನಿಗಳು ತನ್ನ ಉದ್ಯೋಗಿಗಳನ್ನು ವಜಾಗೊಳಿಸಿದರೆ, ನಿರುದ್ಯೋಗ ಸೃಷ್ಟಿಯಾಗುವ ಸಂಭವ ಹೆಚ್ಚಿದೆ.


ಟ್ವಿಟ್ಟರ್​, ಮೆಟಾ, ಅಮೇಜಾನ್​ನಿಂದ ಉದ್ಯೋಗಿಗಳು ವಜಾ!


ಮೊದಲಿಗೆ ತನ್ನ ತೆಕ್ಕೆಗೆ ಟ್ವಿಟರ್​ ಬರುತ್ತಿದ್ದಂತೆ ಎಲಾನ್​ ಮಸ್ಕ್​ ತನ್ನ ಹಾರಾಟವನ್ನು ಶುರು ಮಾಡಿದ್ದರು. ಟ್ವಿಟ್ಟರ್​ನಿಂದ ಸಾವಿರಾರು ಭಾರತೀಯ ಉದ್ಯೋಗಿಗಳು ಸೇರಿದಂತೆ ಹಲವರನ್ನು ಕೆಲಸದಿಂದ ವಜಾ ಮಾಡಿದ್ದರು. ಇದಾದ ನಂತರ ಮಾರ್ಕ್​ ಜುಕರ್​ಬರ್ಗ್​ ಒಡೆತನದ ಮೆಟಾ ಕೂಡ 11 ಸಾವಿರ ಉದ್ಯೋಗಿಗಳನ್ನು ವಜಾ ಮಾಡಿತ್ತು. ಇದಾದ ಬಳಿಕ ಕೆಲ ದೊಡ್ಡ ಕಂಪನಿಗಳು ಕೂಡ ಉದ್ಯೋಗಿಗಳನ್ನು ವಜಾ ಮಾಡಲು ಮುಂದಾಗಿದೆ. ಇದರ ಸಾಲಲ್ಲಿ ಮೊದಲು ಅಮೇಜಾನ್ ಕಂಪನಿಯಿದೆ. ಈ ವರ್ಷದಲ್ಲಿ ಯಾವೆಲ್ಲ ಕಂಪನಿಗಳು, ಎಷ್ಟೆಲ್ಲಾ ಉದ್ಯೋಗಿಗಳನ್ನು ವಜಾ ಮಾಡಿದೆ ಅಂತ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ ನೋಡಿ.


ಇದನ್ನೂ ಓದಿ:ಅಮೆಜಾನ್​​ನಿಂದ ಬಿಗ್ ಶಾಕ್: ಬರೋಬ್ಬರಿ 10 ಸಾವಿರ ಉದ್ಯೋಗಿಗಳ ವಜಾಕ್ಕೆ ಮುಂದಾದ ಕಂಪನಿ

ಕ್ರಮ ಸಂಖ್ಯೆಕಂಪನಿ ಹೆಸರುವಜಾ ಆದ  ಉದ್ಯೋಗಿಗಳ ಸಂಖ್ಯೆ
1)ಮೆಟಾ11,000
2)ಟ್ವಿಟರ್​6,000+4400
3)ಸ್ನ್ಯಾಪ್​6,000
4)ಸೇಲ್ಸ್​ಫೋರ್ಸ್​2,100
5)ಲಿಫ್ಟ್​600
6)ಸ್ಟ್ರೈಪ್​1,100
7)ಮೈಕ್ರೋಸಾಫ್ಟ್​1,000
8)ಶಾಪಿಫೈ 1,000
 9) ಕಾಯಿನ್​ಬೇಸ್​ 600
10)ಅಮೇಜಾನ್​10,000 ಉದ್ಯೋಗಿಗಳ ವಜಾಗೆ ಸಿದ್ಧತೆ

ಎಲ್ಲಾ ಕಂಪನಿಗಳ ವಜಾ ಲಿಸ್ಟ್ ಒಟ್ಟುಗೂಡಿಸಿದರೆ 1 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲಾಗಿದೆ.


ಅಮೇಜಾನ್​ 10 ಸಾವಿರ ಉದ್ಯೋಗಿಗಳು ವಜಾ!?


Amazon.com Inc ಈ ವಾರದಿಂದಲೇ ಕಾರ್ಪೊರೇಟ್ ಮತ್ತು ತಂತ್ರಜ್ಞಾನ ಉದ್ಯೋಗಗಳಲ್ಲಿ ಸುಮಾರು 10,000 ಜನರನ್ನು ವಜಾಗೊಳಿಸಲು ಯೋಜಿಸುತ್ತಿದೆ ಎಂದು ಮೂಲಗಳನ್ನು ಉಲ್ಲೇಖಿಸಿ. ನ್ಯೂಯಾರ್ಕ್ ಟೈಮ್ಸ್ ಸೋಮವಾರ ವರದಿ ಮಾಡಿದೆ. ಕಂಪನಿಯಿಂದ ಉದ್ಯೋಗ ಕಡಿತ ಒಂದು ಕಡೆಯಾದರೆ, ಇತ್ತ ವರ್ಷದ ಉಳಿದ ಅವಧಿಗೆ ತನ್ನ ರಿಟೇಲ್ ವ್ಯವಹಾರದಲ್ಲಿ ಕಾರ್ಪೊರೇಟ್ ನೇಮಕಾತಿಯನ್ನು ಸಹ ಸ್ಥಗಿತಗೊಳಿಸಿದೆ.


ಇದನ್ನೂ ಓದಿ: ಮೆಟಾದಿಂದ ವಜಾಗೊಂಡ ಭಾರತೀಯ ಉದ್ಯೋಗಿಗಳಿಗೆ ಆಪತ್ತು! ಅವರ ಮಕ್ಕಳಿಗೂ ಇಲ್ವಾ ಭವಿಷ್ಯ?


ಅಲೆಕ್ಸಾದಲ್ಲೂ ಉದ್ಯೋಗ ಕಡಿತ!?


ಉದ್ಯೋಗಿಗಳ ಕಡಿತವು ಇ-ಕಾಮರ್ಸ್ ದೈತ್ಯ ಸಾಧನಗಳ ಘಟಕವನ್ನು ಕೇಂದ್ರೀಕರಿಸುತ್ತದೆ, ಇದು ಧ್ವನಿ-ಸಹಾಯಕ ಅಲೆಕ್ಸಾವನ್ನು ಹೊಂದಿದೆ, ಜೊತೆಗೆ ಅದರ ಚಿಲ್ಲರೆ ವಿಭಾಗ ಮತ್ತು ಮಾನವ ಸಂಪನ್ಮೂಲಗಳನ್ನು ಹೊಂದಿದೆ. ಉದ್ಯೋಗಿಗಳ ವಜಾ ಕುರಿತಾಗಿ ಅಮೆಜಾನ್​ನಿಂದ ಅಧಿಕೃತ ಪ್ರತಿಕ್ರಿಯೆಗಾಗಿ ಕಾಯಲಾಗುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ

Published by:ವಾಸುದೇವ್ ಎಂ
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು