Indians Earning: ಪ್ರತಿ ತಿಂಗಳು 25 ಸಾವಿರ ದುಡಿಯುತ್ತೀರಾ? ಹಾಗಾದರೆ ಭಾರತದ ಟಾಪ್ 10% ಜನರಲ್ಲಿ ನೀವೂ ಒಬ್ಬರು!

ಭಾರತದ ಶೇಕಡಾ 3ರಷ್ಟು ಜನರು ಮಾತ್ರ ವಾರ್ಷಿಕವಾಗಿ 3 ಲಕ್ಷಕ್ಕಿಂತ ಹೆಚ್ಚು ಆದಾಯ ಹೊಂದಿದ್ದಾರೆ. ಆದರೆ ಸುಮಾರು 15 ಪ್ರತಿಶತದಷ್ಟು ದುಡಿಯುವ ಜನಸಂಖ್ಯೆಯು ತಿಂಗಳಿಗೆ ₹ 5,000 ಗಿಂತ ಕಡಿಮೆ ಆದಾಯವನ್ನು ಪಡೆಯುತ್ತಿದೆ ಎಂದು ವರದಿ ಆಘಾತಕಾರಿ ಮಾಹಿತಿಯನ್ನು ಬಹಿರಂಗಪಡಿಸಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

 • Share this:
  ನೀವು ಯಾರದ್ದಾದರೂ ಸಂಬಳ ಅಥವಾ ಆದಾಯದ ವಿಷಯಕ್ಕೆ ಬಂದರೆ ಒಮ್ಮೆ ಎಲ್ಲರ ಕಿವಿಯೂ ನೆಟ್ಟಗಾಗುವುದು, ಒಮ್ಮೆ ಎಲ್ಲರ ಹುಬ್ಬೂ ಒಮ್ಮೆ ಹಾರುವುದು ಖಚಿತ. ಅದರಲ್ಲೂ ನಮ್ಮ ಪರಿಚಯದವರ ಸಂಬಳ ಎಷ್ಟಿರಬಹುದು ಎಂಬ ಕುತೂಹಲವಂತೂ ಎಲ್ಲರಿಗೂ ಇದ್ದೇ ಇರುತ್ತೆ. ಸಂಬಳದ ಬಗ್ಗೆ ಒಂದು ಆಸಕ್ತಿಕರ ವರದಿ ಬಿಡುಗಡೆಗೊಂಡಿದೆ. ಭಾರತದಲ್ಲಿ ಸಂಬಳ (Indians Salary) ಸಿಗುವ ಕೆಲಸ ಮಾಡುತ್ತಿರುವವರ ಪೈಕಿ ಶೇಕಡಾ 10ರಷ್ಟು ಜನರು ಪ್ರತಿ ತಿಂಗಳು ಗಳಿಸುವ ಸಂಬಳ ಅಥವಾ ಆದಾಯ (Income Of Indian) 25 ಸಾವಿರ ರೂಪಾಯಿ ಎಂದು ವರದಿಯೊಂದು ತಿಳಿಸಿದೆ.  ಒಂದು ವರ್ಷಕ್ಕೆ 3 ಲಕ್ಷ ರೂಪಾಯಿಗಳನ್ನು ಗಳಿಸುವ ಓರ್ವ ಭಾರತೀಯ ಪ್ರಜೆ ದೇಶದ ವೇತನದಾರರಲ್ಲಿ ಅಗ್ರ 10 ಪ್ರತಿಶತ ಗುಂಪಿನಲ್ಲಿ ಸ್ಥಾನ ಪಡೆಯುತ್ತಿರುವುದು ತಿಳಿದುಬಂದಿದೆ.

  ಇನ್‌ಸ್ಟಿಟ್ಯೂಟ್ ಫಾರ್ ಕಾಂಪಿಟೇಶನ್ನ ಭಾರತದ ಅಂಗವು ಸಿದ್ಧಪಡಿಸಿದ ಭಾರತದಲ್ಲಿ ಅಸಮಾನತೆಯ ಸ್ಥಿತಿಯ ವರದಿಯ ಭಾಗವಾಗಿ ಈ ವರದಿ ಬಿಡುಗಡೆಯಾಗಿದೆ. ಭಾರತದ ಶೇಕಡಾ 3ರಷ್ಟು ಜನರು ಮಾತ್ರ ವಾರ್ಷಿಕವಾಗಿ 3 ಲಕ್ಷಕ್ಕಿಂತ ಹೆಚ್ಚು ಆದಾಯ ಹೊಂದಿದ್ದಾರೆ.

  ಕೆಲಸದ ಸ್ವರೂಪದಿಂದ ಆದಾಯದಲ್ಲಿ ವ್ಯತ್ಯಾಸ
  ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯ ಅಧ್ಯಕ್ಷ ಬಿಬೇಕ್ ಡೆಬ್ರಾಯ್ ಬುಧವಾರ ಈ ಕುತೂಹಲಕರ ವರದಿಯನ್ನು ಬಿಡುಗಡೆ ಮಾಡಿದ್ದಾರೆ. ಅಸಮಾನತೆಯನ್ನು ಕಡಿಮೆ ಮಾಡುವ ಮಾರ್ಗವಾಗಿ ನಗರ ನಿರುದ್ಯೋಗಿಗಳಿಗೆ ಮತ್ತು ಸಾರ್ವತ್ರಿಕ ಮೂಲ ಆದಾಯಕ್ಕಾಗಿ ಒಂದು ಯೋಜನೆಯನ್ನು ವರದಿ ಶಿಫಾರಸು ಮಾಡಿದೆ. ಒಬ್ಬರ ಕೆಲಸದ ಸ್ವರೂಪವು ಆದಾಯದಲ್ಲಿ ವ್ಯತ್ಯಾಸವನ್ನು ಉಂಟುಮಾಡಬಹುದು ಎಂದು ವರದಿ ತಿಳಿಸಿದೆ.

  ತಿಂಗಳಿಗೆ ₹ 5,000 ಗಿಂತ ಕಡಿಮೆ ಆದಾಯ ಪಡೆಯುವವರ ಪ್ರಮಾಣ ಎಷ್ಟು?
  ದೇಶದಲ್ಲಿ ಅತಿ ಹೆಚ್ಚು ವೇತನ ಪಡೆಯುವ ಶೇಕಡ ಒಂದು ಭಾಗವು ರಾಷ್ಟ್ರೀಯ ಆದಾಯದ 5 ರಿಂದ 7 ಪ್ರತಿಶತದಷ್ಟಿದೆ ಎಂದು ವರದಿ ಹೇಳುತ್ತದೆ. ಆದರೆ ಸುಮಾರು 15 ಪ್ರತಿಶತದಷ್ಟು ದುಡಿಯುವ ಜನಸಂಖ್ಯೆಯು ತಿಂಗಳಿಗೆ ₹ 5,000 ಗಿಂತ ಕಡಿಮೆ ಆದಾಯವನ್ನು ಪಡೆಯುತ್ತಿದೆ ಎಂದು ವರದಿ ಆಘಾತಕಾರಿ ಮಾಹಿತಿಯನ್ನು ಬಹಿರಂಗಪಡಿಸಿದೆ.

  Traffic Rule: ಹೆಲ್ಮೆಟ್ ಧರಿಸದೇ ಬೈಕ್ ಸವಾರಿ ಮಾಡಿದರೆ 2 ಸಾವಿರ ದಂಡ ಪಾವತಿಸಲು ರೆಡಿಯಾಗಿ!

  ಟಾಪ್ 10 ವೇತನ ಪಡೆಯುವವರ ವೇತನ ಎಷ್ಟು?
  ತಿಂಗಳಿಗೆ ಸರಾಸರಿ ₹ 25,000 ಗಳಿಸುವವರು ಗಳಿಸಿದ ಒಟ್ಟು ವೇತನದ ಟಾಪ್ 10 ವೇತನ ಪಡೆಯುವವ ಪ್ರತಿಶತಕ್ಕೆ ಸೇರುತ್ತಾರೆ. ಇದು ಒಟ್ಟು ಆದಾಯದ ಸುಮಾರು 30-35 ಪ್ರತಿಶತದಷ್ಟಿದೆ. ರಾಷ್ಟ್ರೀಯ ಕುಟುಂಬ ಮತ್ತು ಆರೋಗ್ಯ ಸಮೀಕ್ಷೆ (NFHS) 2015-16 ರ ಅಂಕಿಅಂಶಗಳ ಪ್ರಕಾರ, ಗ್ರಾಮೀಣ ಮತ್ತು ನಗರ ಸ್ಥಳಗಳ ನಡುವೆ ಸಂಪತ್ತಿನಲ್ಲಿ ದೊಡ್ಡ ಅಂತರ ಏರ್ಪಟ್ಟಿದೆ.

  5,000 ರೂ.ಗಿಂತ ಕಡಿಮೆ ಆದಾಯದ ಶ್ರೇಣಿಯಲ್ಲಿ ಯಾರಿದ್ದಾರೆ?
  ವರದಿಯ ಪ್ರಕಾರ ಆದಾಯದ ಮಟ್ಟ ಹೆಚ್ಚಾಗುತ್ತಿದ್ದಂತೆ, ಸಂಬಳ ಪಡೆಯುವ ವರ್ಗದ ಪಾಲು ಹೆಚ್ಚಾಗುತ್ತದೆ. 5,000 ರೂ.ಗಿಂತ ಕಡಿಮೆ ಆದಾಯದ ಶ್ರೇಣಿಯಲ್ಲಿ, 75.58 ರಷ್ಟು ಜನರು ಸ್ವಯಂ ಉದ್ಯೋಗಿಗಳಾಗಿದ್ದಾರೆ. ಆದರೆ, 21.6 ಶೇಕಡಾ ಸಂಬಳ ಪಡೆಯುವ ವ್ಯಕ್ತಿಗಳಾಗಿದ್ದಾರೆ. ಅಂದರೆ ಉದ್ಯೋಗಿಗಳಾಗಿದ್ದಾರೆ.

  ಗಮನಾರ್ಹವಾಗಿ 50 ಪ್ರತಿಶತಕ್ಕಿಂತಲೂ ಹೆಚ್ಚಿನ ಕುಟುಂಬಗಳು ಸಂಪತ್ತಿನ ಕೇಂದ್ರೀಕರಣದ ಅಂದರೆ ಸುಮಾರು 54.9 ಪ್ರತಿಶತಕ್ಕಿಂತ ಕಡಿಮೆ ಅನುಪಾತದಲ್ಲಿ ಇವೆ ಎಂದು ತಿಳಿದುಬಂದಿದೆ.

  ಇದನ್ನೂ ಓದಿ:Uber Trips: ಉಬರ್ ಪ್ರಯಾಣಿಕರಿಗೆ, ಡ್ರೈವರ್​ಗಳಿಗೆ ಭರ್ಜರಿ ಸಂತಸದ ಸುದ್ದಿ ಘೋಷಿಸಿದ ಕಂಪನಿ!

  ಬಿಬೇಕ್ ಡೆಬ್ರಾಯ್ ಅವರ ಪ್ರಕಾರ, ಆರ್ಥಿಕ ಅಸಮಾನತೆಯು ದೇಶದ ಅತ್ಯಂತ ಪ್ರಮುಖ ಸಮಸ್ಯೆಯಾಗಿದೆ. ಬಡತನವನ್ನು ಕಡಿಮೆ ಮಾಡಲು ಮತ್ತು ಉದ್ಯೋಗವನ್ನು ಹೆಚ್ಚಿಸಲು, ಮೇ 2014 ರಿಂದ, ಕೇಂದ್ರ ಸರ್ಕಾರವು ಮೂಲಭೂತ ಅವಶ್ಯಕತೆಗಳ ನಿಬಂಧನೆಯಾಗಿ ಸೇರ್ಪಡೆಯನ್ನು ವ್ಯಾಖ್ಯಾನಿಸುವ ವಿವಿಧ ಕ್ರಮಗಳನ್ನು ಪರಿಚಯಿಸಿದೆ. ಇದು ಕೋವಿಡ್ -19 ಸಾಂಕ್ರಾಮಿಕದಿಂದ ಉಂಟಾದ ವಿವಿದ ರೀತಿಯ ಆಘಾತಗಳಿಂದ ದೇಶವನ್ನು ಪಾರುಮಾಡಲು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ.
  Published by:guruganesh bhat
  First published: