Gold-Silver Price Today : ಚಿನ್ನ ಖರೀದಿಸೋರಿಗೆ ಕೊಂಚ ನಿರಾಳ, ಇಂದಿನ ರೇಟ್​ ಎಷ್ಟು ಅಂತೀರಾ? ಇಲ್ಲಿದೆ ದರ ಪಟ್ಟಿ

Gold and Silver price on August 16, 2022: ಇಂದು ಭಾರತದ ಮಾರುಕಟ್ಟೆಯಲ್ಲಿ ಪ್ರತಿ ಗ್ರಾಂ ಆಭರಣ ಚಿನ್ನದ ಬೆಲೆ ರೂ. 4,815 ಆಗಿದೆ. ಈಗಾಗಲೇ ಭಾರತವು ಚಿನ್ನದ ಮೇಲಿನ ಆಮದು ಸುಂಕ ಹೆಚ್ಚಿಸಿದ್ದು ಮುಂಬರುವ ದಿನಗಳಲ್ಲಿ ಚಿನ್ನ ಮತ್ತೆ ಏರಿಕೆಯಾಗುವ ಸಾಧ್ಯತೆಯನ್ನೂ ಅಲ್ಲಗಳೆಯಲು ಆಗಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು(ಆ.16): ಕೆಲ ದಿನಗಳಿಂದ ಚಿನ್ನ-ಬೆಳ್ಳಿ ದರಗಳ ಏರಿಳಿತಗಳ ಕಣ್ಣು ಮುಚ್ಚಾಲೆ ಆಟ ಮುಂದುವರೆದೇ ಇದೆ. ಕಳೆದ ವಾರಕ್ಕೆ ಹೋಲಿಸಿದರೆ ಈ ವಾರದ ಆರಂಭದಿಂದಲೇ ಆಭರಣ ಚಿನ್ನದ ಬೆಲೆ (Gold Rate) ಪ್ರತಿ ಗ್ರಾಂಗೆ ನೂರು ರೂ.ಗಿಂತಲೂ ಹೆಚ್ಚಾಗಿದೆ.  ಇಂದು ಭಾರತದ ಮಾರುಕಟ್ಟೆಯಲ್ಲಿ ಪ್ರತಿ ಗ್ರಾಂ ಆಭರಣ ಚಿನ್ನದ ಬೆಲೆ ರೂ. 4,815 ಆಗಿದೆ. ಈಗಾಗಲೇ ಭಾರತವು ಚಿನ್ನದ ಮೇಲಿನ ಆಮದು ಸುಂಕ ಹೆಚ್ಚಿಸಿದ್ದು ಮುಂಬರುವ ದಿನಗಳಲ್ಲಿ ಚಿನ್ನ ಮತ್ತೆ ಏರಿಕೆಯಾಗುವ ಸಾಧ್ಯತೆಯನ್ನೂ ಅಲ್ಲಗಳೆಯಲು ಆಗಲ್ಲ. ಅಲ್ಲದೆ, ಕಳೆದ ಕೆಲ ಸಮಯದಿಂದ ಚಿನ್ನದ ಬೆಲೆಗಳಲ್ಲಿ ಅಲ್ಪ ಪ್ರಮಾಣದ ಏರಿಳಿತಗಳು ಆಗುತ್ತಲೇ ಇದ್ದು ಇದಕ್ಕೆ ಪ್ರಮುಖ ಕಾರಣ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ (International Market) ಉಂಟಾಗುತ್ತಿರುವ ಮಾರುಕಟ್ಟೆ ಸಂಬಂಧಿತ ವಿದ್ಯಮಾನಗಳು ಹಾಗೂ ಕಚ್ಚಾ ತೈಲದಲ್ಲಾಗಿರುವ ಬೆಲೆ ಏರಿಕೆ ಹಾಗೂ ಇತರೆ ಜಾಗತಿಕ ಅಂಶಗಳೇ ಆಗಿವೆ.

ಇನ್ನೂ, ಈ ಬಂಗಾರದ ಮೌಲ್ಯ ಜಾಗತಿಕ ಮಾರುಕಟ್ಟೆಯಲ್ಲೂ ಅಪಾರವಾಗಿದೆ. ಸಾಕಷ್ಟು ದೇಶಗಳು ವಿದೇಶಿ ವಿನಿಮಯ ರೂಪದಲ್ಲಿ ಚಿನ್ನದ ಸಂಗ್ರಹ ಹೊಂದಿರುವುದು ಎಲ್ಲರಿಗೂ ಗೊತ್ತೆ ಇದೆ, ಏಕೆಂದರೆ ಚಿನ್ನ ಎಲ್ಲ ದೇಶಗಳಲ್ಲೂ ಮಾನ್ಯತೆ ಪಡೆದಿದ್ದು ಎಲ್ಲರಿಂದಲೂ ಸ್ವೀಕರಿಸಲ್ಪಡುತ್ತದೆ. ಅದರಲ್ಲೂ ವಿಶೇಷವಾಗಿ ಭಾರತ ದೇಶ ಎಂದರೆ ಕೇಳಬೇಕೆ? ಮೊದಲಿನಿಂದಲೂ ಭಾರತದಲ್ಲಿ ಬಂಗಾರಕ್ಕಿರುವ ವಿಶೇಷತೆಯೇ ಬೇರೆ.

ಇದನ್ನೂ ಓದಿ:  Business Idea: ಈ ಬೆಳೆಗೆ ಜಸ್ಟ್​ 2 ಲಕ್ಷ ಖರ್ಚು! 1 ಕೋಟಿವರೆಗೂ ಲಾಭ ಸಿಗುತ್ತೆ, ಇನ್ಯಾಕೆ ತಡ ಶುರು ಮಾಡಿ

ಆರ್ಥಿಕ ಸಂಕಷ್ಟದ ಕಾಲದಲ್ಲಿ ಕೈಯನ್ನು ಹಿಡಿಯುವ ನಂಬಿಕಸ್ಥ ಗೆಳೆಯ ಎಂದು ನಂಬಲಾಗಿರುವ ಚಿನ್ನವು ಈಗ ಹೂಡಿಕೆಯ ವಸ್ತುವಾಗಿಯೂ ಪ್ರಾಮುಖ್ಯತೆ ಪಡೆದಿದೆ. ಹಾಗಾಗಿ, ನಮ್ಮ ದೇಶದಲ್ಲಷ್ಟೆ ಅಲ್ಲ, ಜಗತ್ತಿನಾದ್ಯಂತ ಬಂಗಾರಕ್ಕೆ ಇರುವ ಬೇಡಿಕೆ ಅಷ್ಟಿಷ್ಟಲ್ಲ. ಭಾರತದ ಮಾರುಕಟ್ಟೆಗಳಲ್ಲಿ ಇಂದು ಚಿನ್ನ ಖರೀದಿ ಸಹಜ ಸಂಗತಿಯಾಗಿದ್ದು ದಿನದಲ್ಲೇ ಕೋಟ್ಯಂತರ ರೂಪಾಯಿಗಳಷ್ಟು ವ್ಯವಹಾರವನ್ನು ಈ ವ್ಯವಹಾರ ಹೊಂದಿದೆ. ಬೆಂಗಳೂರಿನಲ್ಲಿ ಇಂದು ಪ್ರತಿ 10 ಗ್ರಾಂ ಆಭರಣ ಚಿನ್ನದ ಬೆಲೆ ರೂ. 48,200 ಆಗಿದೆ.

ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳ ಕುರಿತು ಒಂದು ನೋಟ

ಒಂದು ಗ್ರಾಂ (1GM)

22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 4,815

24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,253

ಎಂಟು ಗ್ರಾಂ (8GM)

22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 38,520

24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 42,024

ಹತ್ತು ಗ್ರಾಂ (10GM)

22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 48,150

24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 52,530

ನೂರು ಗ್ರಾಂ (100GM)

22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 4,81,500

24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,25,300

ರಾಜಧಾನಿ ನಗರ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 48,200 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 49,140, ರೂ. 48,150, ರೂ. 48,150 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 48,300 ರೂ. ಆಗಿದೆ.



ಬೆಳ್ಳಿ ದರ

ಚಿನ್ನದಂತೆ ಸಾಮಾನ್ಯವಾಗಿ ಬೆಳ್ಳಿ ದರಗಳಲ್ಲೂ ವ್ಯತ್ಯಾಸ ಆಗುತ್ತಲೇ ಇರುತ್ತದೆ. ನಿನ್ನೆಗೆ ಹೋಲಿಸಿದರೆ ಇಂದು ಭಾರತದಲ್ಲಿ ಬೆಳ್ಳಿ ಬೆಲೆಯಲ್ಲಿ ಯಾವ ಬದಲಾವಣೆ ಆಗಿಲ್ಲ. ಆದಾಗ್ಯೂ, ಕಳೆದ ತಿಂಗಳಿನಲ್ಲಿ ಅಂದರೆ ಜುಲೈ ಆರಂಭದಲ್ಲಿ ಬೆಳ್ಳಿಯ ಗರಿಷ್ಠ ಬೆಲೆ ಪ್ರತಿ ಕೆಜಿಗೆ ರೂ. 62,000 ಕ್ಕೆ ತಲುಪಿತ್ತು ಹಾಗೂ ಜುಲೈ 26 ರಂದು ಕನಿಷ್ಠ ಬೆಲೆ ರೂ. 54,500ಕ್ಕೆ ಕುಸಿದಿತ್ತು. ಒಟ್ಟಿನಲ್ಲಿ ಸ್ವಲ್ಪ ಕುಸಿತದತ್ತ ಬೆಲೆ ವಾಲಿದೆ ಎಂದು ಹೇಳಬಹುದು.

ಇದೀಗ ಈ ತಿಂಗಳಿನಲ್ಲಿ ಬೆಳ್ಳಿ ದರ ಯಾವ ರೀತಿ ಪ್ರದರ್ಶನ ತೋರಲಿದೆ ಎಂಬುದನ್ನು ಕಾದು ನೋಡಬೇಕಷ್ಟೆ. ಅಷ್ಟಕ್ಕೂ ಇಂದು ಭಾರತದ ಮಾರುಕಟ್ಟೆಯಲ್ಲಿ ಒಂದು ಕೆಜಿಗೆ ಬೆಳ್ಳಿ ಬೆಲೆ 59,300 ರೂ. ಆಗಿದೆ. ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಅವಲಂಬಿತವಾಗಿದ್ದು ಏರಿಕೆ, ಇಳಿಕೆಗಳು ಆಗುತ್ತಿರುತ್ತವೆ.

ಇದನ್ನೂ ಓದಿ:  India @ 75: 12 ಪೈಸೆಗೆ ಒಂದು ಕೆಜಿ ಅಕ್ಕಿ, 80 ರೂಪಾಯಿಗೆ 1 ತೊಲ ಚಿನ್ನ! ಸ್ವಾತಂತ್ರ್ಯ ಬಂದಾಗಿನಿಂದ ಏನೆಲ್ಲಾ ಬದಲಾವಣೆಯಾಗಿದೆ ನೋಡಿ

ಬೆಂಗಳೂರು ನಗರದಲ್ಲಿ ಇಂದು ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ದರಗಳು ಕ್ರಮವಾಗಿ ರೂ. 648, ರೂ. 6,480 ಹಾಗೂ ರೂ. 64,800 ಗಳಾಗಿವೆ. ಇನ್ನುಳಿದಂತೆ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 64,800 ಆಗಿದ್ದರೆ ದೆಹಲಿಯಲ್ಲಿ ರೂ. 59,300 ಮುಂಬೈನಲ್ಲಿ ರೂ. 59,300 ಹಾಗೂ ಕೊಲ್ಕತ್ತದಲ್ಲೂ ರೂ. 59,300 ಗಳಾಗಿದೆ.

ವಿ.ಸೂ: ಇಲ್ಲಿ ಕೊಡಲಾದ ಎಲ್ಲ ದರಗಳು ಮಾರುಕಟ್ಟೆಯ ಬೆಲೆಗಳನ್ನು ಪ್ರತಿನಿಧಿಸುತ್ತವೆ ಹಾಗೂ ಜಿಎಸ್‍ಟಿ, ಟಿಸಿಎಸ್ ಹಾಗೂ ಇನ್ನಿತರೆ ಇರಬಹುದಾದ ಶುಲ್ಕಗಳನ್ನು ಒಳಗೊಂಡಿಲ್ಲ. ಹೆಚ್ಚು ನಿಖರ ಬೆಲೆಗಳಿಗಾಗಿ ನಿಮ್ಮ ಹತ್ತಿರದ ಆಭರಣ ವ್ಯಾಪಾರಿಗಳನ್ನು ಸಂಪರ್ಕಿಸಿ.
First published: