Gold And Silver Rate on March 6, 2022: ಇತ್ತೀಚೆಗೆ ದೇಶದಲ್ಲಿ ಬಂಗಾರ (Gold), ಬೆಳ್ಳಿ (Silver) ದರದಲ್ಲಿ (Price) ಭಾರಿ ಏರುಪೇರು ಉಂಟಾಗುತ್ತಿದೆ. ರಷ್ಯಾ (Russia) ಹಾಗೂ ಉಕ್ರೇನ್ (Ukraine) ನಡುವಿನ ಯುದ್ಧದ (War) ಪರಿಣಾಮ, ಭಾರತದ ಷೇರುಪೇಟೆಯಲ್ಲಿ (Share Market) ಅಲ್ಲೋಲ ಕಲ್ಲೋಲ - ಮುಂತಾದ ಕಾರಣಗಳಿಂದ ಈ ವ್ಯತ್ಯಾಸಗಳಾಗುತ್ತಿದೆ ಎನ್ನಲಾಗುತ್ತಿದೆ. ಇದೇ ರೀತಿ ದೇಶದಲ್ಲಿಂದು ಚಿನ್ನದ ಬೆಲೆಯಲ್ಲಿ (Gold Price) ಏರಿಕೆಯಾಗಿದೆ. ಬೆಂಗಳೂರಿನಲ್ಲಿ (Bengaluru) ಸಹ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ಇಂದು 24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 52,800 ರೂಪಾಯಿ ಆಗಿದೆ. ಹಾಗೆಯೇ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 48,400 ರೂಪಾಯಿ ಆಗಿದೆ. ಬೆಂಗಳೂರಿನಲ್ಲಿ ಇಂದು ಬೆಳ್ಳಿಯ ಬೆಲೆಯಲ್ಲೂ ಸ್ಲಲ್ಪ ವ್ಯತ್ಯಾಸವಾಗಿದೆ. ನಿನ್ನೆ ಒಂದು ಕೆಜಿ ಬೆಳ್ಳಿಗೆ 72,500 ರೂಪಾಯಿ ಇತ್ತು. ಇಂದು 1 ಕೆಜಿ ಬೆಳ್ಳಿಯ ಬೆಲೆ 73,400 ರೂಪಾಯಿಗೆ ಏರಿಕೆಯಾಗಿದೆ.
ಇನ್ನು ರಾಜ್ಯದ ವಿವಿಧ ನಗರಗಳಲ್ಲಿ ಚಿನ್ನ ಹಾಗೂ ಬಂಗಾರದ ಬೆಲೆ ಎಷ್ಟಿದೆ ನೋಡೋಣ…
ಬೆಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟು?
ಇಂದು ಬೆಂಗಳೂರಿನಲ್ಲಿ ಚಿನ್ನದ ದರದಲ್ಲಿ ಏರಿಕೆಯಾಗಿದೆ. ನಿನ್ನೆ 24 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 52,040 ರೂಪಾಯಿ ಆಗಿತ್ತು. ಇಂದು 24 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 52,800 ರೂಪಾಯಿ ಆಗಿದೆ. ಇನ್ನು ನಿನ್ನೆ 22 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 47,700 ರೂಪಾಯಿ ಆಗಿದ್ದರೆ, ಇಂದು 48,400 ರೂಪಾಯಿ ಆಗಿದೆ. ಇನ್ನು ಪ್ರಮುಖ ಮಹಾನಗರಗಳಾದ ಮೈಸೂರು, ಮಂಗಳೂರಿನಲ್ಲಿ ಸರಿಸುಮಾರು ಇದೇ ಬೆಲೆ ಇದೆ.
ದೇಶದ ಪ್ರಮುಖ ನಗರಗಳಲ್ಲಿ ಇಂದು ಬಂಗಾರದ ಬೆಲೆ ಎಷ್ಟು?
ದೇಶದ ಪ್ರಮುಖ ನಗರಗಳಲ್ಲೂ ಇಂದು ಬಂಗಾರದ ಬೆಲೆಯಲ್ಲಿ ಏರಿಕೆಯಾಗಿದೆ. 24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ ಚೆನ್ನೈನಲ್ಲಿ 54,220 ರೂಪಾಯಿ ಇದ್ದರೆ, ಮುಂಬೈ ಮಹಾನಗರದಲ್ಲಿ 52,800 ರೂಪಾಯಿ ಆಗಿದೆ. ಇನ್ನು ದೆಹಲಿಯಲ್ಲಿ 24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 52,800 ರೂಪಾಯಿ ಆಗಿದ್ದರೆ, ಕೊಲ್ಕತ್ತಾದಲ್ಲೂ ಬಂಗಾರಕ್ಕೆ ಇಂದು ಅಷ್ಟೇ ಬೆಲೆ ಇದೆ.
ಇದನ್ನೂ ಓದಿ: Petrol Price Today: ರಾಜ್ಯದ ಹಲವು ಭಾಗಗಳಲ್ಲಿ ಪೆಟ್ರೋಲ್ ದರ ಕೊಂಚ ಇಳಿಕೆ, ಹೀಗಿದೆ ಇಂದಿನ ಬೆಲೆ
ಬೆಂಗಳೂರಿನಲ್ಲಿ ಎಷ್ಟಿದೆ ಇಂದು ಸಿಲ್ವರ್ ರೇಟ್?
ಬೆಂಗಳೂರಿನಲ್ಲಿ ಇಂದು ಬೆಳ್ಳಿಯ ಬೆಲೆಯಲ್ಲೂ ಸ್ಲಲ್ಪ ವ್ಯತ್ಯಾಸವಾಗಿದೆ. ನಿನ್ನೆ ಒಂದು ಕೆಜಿ ಬೆಳ್ಳಿಗೆ 72,500 ರೂಪಾಯಿ ಇತ್ತು. ಇಂದು 1 ಕೆಜಿ ಬೆಳ್ಳಿಯ ಬೆಲೆ 73,400 ರೂಪಾಯಿಗೆ ಏರಿಕೆಯಾಗಿದೆ. ಇನ್ನು ಮಂಗಳೂರು, ಮೈಸೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲೂ ಸರಿ ಸುಮಾರು ಇದೇ ಬೆಲೆ ಇದೆ.
ಇಂದು ದೇಶದಲ್ಲಿ ಬೆಳ್ಳಿ ಬೆಲೆಯಲ್ಲೂ ಏರಿಕೆ
ಇಂದು 1 ಕೆಜಿ ಬೆಳ್ಳಿಗೆ 2000 ರೂಪಾಯಿ ಹೆಚ್ಚಳವಾಗಿದೆ. ಭಾರತದಲ್ಲಿ 1 ಕೆಜಿ ಬೆಳ್ಳಿ ದರ 70,000 ರೂ. ಇನ್ನು ದೇಶದ ಪ್ರಮುಖ ಮಹಾನಗರಗಳಾದ ಮುಂಬೈನಲ್ಲಿ 70,000 ರೂಪಾಯಿ ಇದೆ. ಚೆನ್ನೈನಲ್ಲಿ 73,400 ರೂಪಾಯಿ ಇದ್ದರೆ, , ದೆಹಲಿಯಲ್ಲಿ 1 ಕೆಜಿ ಬೆಳ್ಳಿ ಬೆಲೆ 70,000 ರೂ ಆಗಿದೆ.
ಇದನ್ನೂ ಓದಿ: LIC ಸಂಸ್ಥೆಯ IPO ಮತ್ತಷ್ಟು ತಡವಾಗಲಿದೆಯೇ.. ಯುದ್ಧಕ್ಕೂ ಇದಕ್ಕೂ ಏನು ಸಂಬಂಧ?
ಸೂಚನೆ - ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ಸೇರಿ ಹಲವು ಕಾರಣಗಳಿಂದ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ. ಷೇರು ಮಾರುಕಟ್ಟೆಯ ಪ್ರಭಾವದಿಂದಲೂ ಚಿನ್ನದ ಬೆಲೆ ಏರಿಕೆ - ಇಳಿಕೆಯಾಗಬಹುದು.
ಜೊತೆಗೆ ಭಾರತದ ಷೇರುಪೇಟೆಯಲ್ಲಿ ಅಲ್ಲೋಲ ಕಲ್ಲೋಲ - ಮುಂತಾದ ಕಾರಣಗಳಿಂದ ಈ ವ್ಯತ್ಯಾಸಗಳಾಗುತ್ತಿದೆ ಎನ್ನಲಾಗುತ್ತಿದೆ. ಇದೇ ರೀತಿ ದೇಶದಲ್ಲಿಂದು ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ