Gold Price: ಇಂದು ಏರಿಕೆಯಾಯ್ತು ಚಿನ್ನದ ಬೆಲೆ! ಇಂದಿನ ಗೋಲ್ಡ್, ಸಿಲ್ವರ್ ರೇಟ್ ಎಷ್ಟಿದೆ ನೋಡಿ

ಭಾರತೀಯ ಚಿನ್ನದ ಮಾರುಕಟ್ಟೆಯಲ್ಲಿ (Indian Gold Market) 24 ಕ್ಯಾರೆಟ್‌ನ 1 ಗ್ರಾಂ ಬಂಗಾರದ ಬೆಲೆ 5,095 ರೂ. ಆಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿಯೂ (Bengaluru) 24 ಕ್ಯಾರೆಟ್‌ನ 1 ಗ್ರಾಂ ಚಿನ್ನದ ಬೆಲೆ 5,095 ರೂಪಾಯಿ ನಿಗದಿಯಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Gold and Silver price on May 21, 2022: ಇಂದು ವೀಕೆಂಡ್ (Weekend), ಇಂದು ಸ್ವಲ್ಪ ಆಭರಣ (Jewellery) ಖರೀದಿ ಮಾಡೋಣ ಅಂತ ಪ್ಲಾನ್ ಮಾಡಿದ್ರಾ? ಹಾಗಿದ್ರೆ ನಿಮಗೆ ಇಲ್ಲಿದೆ ಶಾಕಿಂಗ್ ನ್ಯೂಸ್ (Shocking news). ಯಾಕೆಂದ್ರೆ ಇಂದು ಚಿನ್ನದ ಬೆಲೆ (Gold Price) ಹಾಗೂ ಬೆಳ್ಳಿ ಬೆಲೆಯಲ್ಲಿ (Silver Price) ಏರಿಕೆಯಾಗಿದೆ. ದೇಶದಲ್ಲಿ ಚಿನ್ನದ ಬೆಲೆಯಲ್ಲಿ (Gold Price) ಕಳೆದೆರೆಡು ದಿನಗಳಲ್ಲಿ ಹಾವು ಏಣಿ ಆಟ ನಡೆಸುತ್ತಿದೆ. ಇಂದು ಮಾರುಕಟ್ಟೆಯಲ್ಲಿ (Market) ಚಿನ್ನದ ಬೆಲೆಯಲ್ಲಿ ಮತ್ತೆ ಹೆಚ್ಚಳವಾಗಿದೆ (Hike).  ಇಂದು ಬೆಳಗಿನ ವೇಳೆಗೆ ಭಾರತೀಯ ಚಿನ್ನದ ಮಾರುಕಟ್ಟೆಯಲ್ಲಿ (Indian Gold Market) 24 ಕ್ಯಾರೆಟ್‌ನ 1 ಗ್ರಾಂ ಬಂಗಾರದ ಬೆಲೆ 5,095 ರೂ. ಆಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿಯೂ (Bengaluru) 24 ಕ್ಯಾರೆಟ್‌ನ 1 ಗ್ರಾಂ ಚಿನ್ನದ ಬೆಲೆ 5,095 ರೂಪಾಯಿ ನಿಗದಿಯಾಗಿದೆ. ದೇಶದಲ್ಲಿ ಬೆಳ್ಳೆ ದರದ ಒಂದು ಕೆಜಿಗೆ 61,700 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 65,900 ರೂ. ಇದೆ. ಪ್ರಸಕ್ತ ನಡೆಯುತ್ತಿರುವ ಹಣದುಬ್ಬರ, ಕೆಲವು ರಾಷ್ಟ್ರಗಳಲ್ಲಿ, ಯುದ್ಧ (War), ಆರ್ಥಿಕ ಬಿಕ್ಕಟ್ಟು, ಜಾಗತಿಕ ಬೆಲೆ ಏರಿಕೆ ಅಂಶಗಳು ಚಿನ್ನ ಹಾಗೂ ಬೆಳ್ಳಿ ದರಗಳ ಮೇಲೆ ಪ್ರಭಾವ ಬೀರುತ್ತಿವೆ.


ಇಂದು ಎಷ್ಟಿದೆ ಬಂಗಾರದ ಬೆಲೆ?

ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಏರಿಕೆ ಕಂಡುಬಂದರೆ, ಬೆಳ್ಳಿ ಬೆಲೆಯಲ್ಲಿಯೂ ಬಹುತೇಕ ನಗರಗಳಲ್ಲಿ ಬೆಲೆ ಏರಿಕೆ ಕಂಡುಬಂದು ಉಳಿದೆಡೆ ಏಕರೂಪವಿದೆ. ನಂತರ ಮತ್ತೆ ಬೆಲೆ ವ್ಯತ್ಯಯವಾಗುವ ಸಾಧ್ಯತೆ ಇದೆ.

ಇಂದು ಬೆಳಗಿನ ವೇಳೆಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್‌) ಚಿನ್ನದ ಬೆಲೆಗೆ 46,700 ರೂಪಾಯಿ ನಿಗದಿಯಾಗಿದೆ. ಬೆಂಗಳೂರಿನಲ್ಲಿ 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್‌) ಬೆಲೆ 50,950 ರೂಪಾಯಿ ದಾಖಲಾಗಿದೆ.

ಇದನ್ನೂ ಓದಿ: Petrol-Diesel Price Today: 15 ಜಿಲ್ಲೆಗಳಲ್ಲಿ ಪೆಟ್ರೋಲ್ ದರ ಏರಿಕೆ, ಇಂದಿನ ಇಂಧನ ಬೆಲೆ ಹೀಗಿದೆ

ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ

ಬೆಂಗಳೂರು: 46,700 ರೂ. (22 ಕ್ಯಾರಟ್‌) - 50,950 ರೂ.  (24 ಕ್ಯಾರಟ್‌), ಚೆನ್ನೈ: 47,860 ರೂ. (22 ಕ್ಯಾರಟ್‌) - 52,210 ರೂ. (24 ಕ್ಯಾರಟ್‌), ದೆಹಲಿ 46,700 ರೂ. (22 ಕ್ಯಾರಟ್‌) - 50,950 ರೂ. (24 ಕ್ಯಾರಟ್‌), ಹೈದರಾಬಾದ್: 46,700 ರೂ. (22 ಕ್ಯಾರಟ್‌) - 50,950 ರೂ. (24ಕ್ಯಾರಟ್‌), ಕೋಲ್ಕತಾ:  46,700 ರೂ. (22 ಕ್ಯಾರಟ್‌) - 50,950 ರೂ. (24 ಕ್ಯಾರಟ್‌)
ಮಂಗಳೂರು: 46,700 (22 ಕ್ಯಾರಟ್‌) - ₹50,950 (24 ಕ್ಯಾರಟ್‌), ಮುಂಬೈ: 46,700 ರೂ. (22 ಕ್ಯಾರಟ್‌) - 50,950 ರೂ. (24 ಕ್ಯಾರಟ್‌) ಹಾಗೂ ಮೈಸೂರಿನಲ್ಲಿ 46,700 ರೂ. (22 ಕ್ಯಾರಟ್‌) ಹಾಗೂ 50,950 ರೂ. (24 ಕ್ಯಾರಟ್‌) ಬೆಲೆ ಇದೆ.

ಇಂದು ಬೆಳ್ಳಿ ದರ ಎಷ್ಟಿದೆ?

ದೇಶದಲ್ಲಿ ಇಂದು ಒಂದು ಕೆಜಿ ಬೆಳ್ಳಿಗೆ 61,700 ರೂಪಾಯಿ ಬೆಲೆ ಇದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 65,900 ರೂ. ಇದೆ. ಇನ್ನು ಚೆನ್ನೈ, ವಿಜಯವಾಡ, ಹೈದರಾಬಾದ್, ವಿಶಾಖಪಟ್ಟಣಂದಲ್ಲಿಯೂ 65,900 ರೂ. ಬೆಲೆ ನಿಗದಿಯಾಗಿದೆ.

ಇದನ್ನೂ ಓದಿ: Traffic Rule: ಹೆಲ್ಮೆಟ್ ಧರಿಸದೇ ಬೈಕ್ ಸವಾರಿ ಮಾಡಿದರೆ 2 ಸಾವಿರ ದಂಡ ಪಾವತಿಸಲು ರೆಡಿಯಾಗಿ!

ಒಟ್ಟಾರೆ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ಸೇರಿ ಹಲವು ಕಾರಣಗಳಿಂದ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ. ಷೇರು ಮಾರುಕಟ್ಟೆಯ ಪ್ರಭಾವದಿಂದಲೂ ಚಿನ್ನದ ಬೆಲೆ ಏರಿಕೆ-ಇಳಿಕೆ ಆಗಬಹುದು.  ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವನ್ನು ಆಧರಿಸಿ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ.
Published by:Annappa Achari
First published: