Gold Price: ಶುಕ್ರವಾರ ಬಂಗಾರ ಪ್ರಿಯರಿಗೆ ಶಾಕಿಂಗ್ ನ್ಯೂಸ್! ಇಂದು ಚಿನ್ನದ ದರದಲ್ಲಿ ಏರಿಕೆ

ನಿನ್ನೆಯಷ್ಟೆ ರೂ. 4,610 ಆಗಿದ್ದ ಒಂದು ಗ್ರಾಂ ಆಭರಣ ಚಿನ್ನದ ಬೆಲೆಯು ಇಂದು 4,630 ರೂಪಾಯಿ ಆಗಿದೆ. ನಿನ್ನೆ ಕೊಂಚ ಇಳಿಕೆ ಕಂಡಿದ್ದ ಚಿನ್ನ, ಮತ್ತೆ ಇಂದು ತುಟ್ಟಿಯಾಗಿದೆ. ಬಂಗಾರದಂತೆ ಬೆಳ್ಳಿ ಬೆಲೆಯಲ್ಲೂ ಏರಿಕೆ ಆಗಿದೆ.

ಬಂಗಾರದ ಆಭರಣಗಳ ಸಂಗ್ರಹ ಚಿತ್ರ

ಬಂಗಾರದ ಆಭರಣಗಳ ಸಂಗ್ರಹ ಚಿತ್ರ

 • Share this:
  Gold and Silver price on May 20, 2022: ದೇಶದಲ್ಲಿ ಚಿನ್ನದ ಬೆಲೆಯಲ್ಲಿ (Gold Price) ಕಳೆದೆರೆಡು ದಿನಗಳಲ್ಲಿ ಹಾವು ಏಣಿ ಆಟ ನಡೆಸುತ್ತಿದೆ. ಇಂದು ಮಾರುಕಟ್ಟೆಯಲ್ಲಿ (Market) ಚಿನ್ನದ ಬೆಲೆಯಲ್ಲಿ ಮತ್ತೆ ಹೆಚ್ಚಳವಾಗಿದೆ (Hike). ನಿನ್ನೆಯಷ್ಟೆ ರೂ. 4,610 ಆಗಿದ್ದ ಒಂದು ಗ್ರಾಂ ಆಭರಣ (Jewellery) ಚಿನ್ನದ ಬೆಲೆಯು ಇಂದು 4,630 ರೂಪಾಯಿ ಆಗಿದೆ. ನಿನ್ನೆ ಕೊಂಚ ಇಳಿಕೆ ಕಂಡಿದ್ದ ಚಿನ್ನ ಮತ್ತೆ ಇಂದು ತುಟ್ಟಿಯಾಗಿದೆ. ಬಂಗಾರದಂತೆ ಬೆಳ್ಳಿ ಬೆಲೆಯಲ್ಲೂ (Silver Price) ಹೆಚ್ಚಳವಾಗಿದೆ. ನಿನ್ನೆ ಒಂದು ಕೆಜಿಗೆ ಬೆಳ್ಳಿ ಬೆಲೆ 61,000 ಇದ್ದದ್ದು ಇಂದು ರೂ. 65,000 ಆಗಿದೆ.

  ಒಂದು ಗ್ರಾಂ (1GM)
  22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 4,630
  24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,051

  ಎಂಟು ಗ್ರಾಂ (8GM)
  22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 37,040
  24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 40,408

  ಹತ್ತು ಗ್ರಾಂ (10GM)
  22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 46,300
  24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 50,510

  ನೂರು ಗ್ರಾಂ (100GM)
  22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 4,63,000
  24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,05,100

  ಇದನ್ನೂ ಓದಿ: Shark Tank India: ಶಾರ್ಕ್ ಟ್ಯಾಂಕ್ ಇಂಡಿಯಾದಿಂದ ಸ್ಟಾರ್ಟ್​ಅಪ್​ಗಳ ಆದಾಯದಲ್ಲಿ ಹೆಚ್ಚಳ! ಈ ಅದ್ಭುತ ಸಾಧ್ಯವಾಗಿದ್ದು ಹೇಗೆ?

  ದೇಶದ ಪ್ರಮುಖ ನಗರಗಳಲ್ಲಿನ ಚಿನ್ನದ ದರ
  ರಾಜಧಾನಿ ನಗರ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 46,300 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 47,550, ರೂ. 46,300, ರೂ. 46,300 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 46,300 ರೂ. ಆಗಿದೆ.

  ಇಂದಿನ ಬೆಳ್ಳಿ ದರ

  ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಅವಲಂಬಿತವಾಗಿದ್ದು ಏರಿಕೆ, ಇಳಿಕೆಗಳು ಆಗುತ್ತಿರುತ್ತವೆ. ಅಲ್ಲದೆ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನವೂ ಸಹ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಲೆ ಇರುತ್ತದೆ. ಭಾರತದಲ್ಲಿ ಚಿನ್ನದಂತೆ ಬೆಳ್ಳಿಗೂ ಬೇಡಿಕೆ ಹೆಚ್ಚಿದೆ. ಹೀಗಾಗಿ ಬಂಗಾರದಂತೆ ಬೆಳ್ಳಿ ಬೆಲೆಯಲ್ಲೂ ಏರಿಕೆ ಹೆಚ್ಚಳವಾಗಿದೆ. ನಿನ್ನೆ ಒಂದು ಕೆಜಿಗೆ ಬೆಳ್ಳಿ ಬೆಲೆ 61,000 ಇದ್ದದ್ದು ಇಂದು ರೂ. 65,000 ಆಗಿದೆ.

  ಬೆಂಗಳೂರು ಸೇರಿ ಪ್ರಮುಖ ನಗರದಲ್ಲಿ ಸಿಲ್ವರ್ ರೇಟ್

  ಪ್ರಸ್ತುತ, ಭಾರತದಲ್ಲಿ ಇಂದು 1gm, 10gm, 100 gm, 1000gm (1ಕೆಜಿ) ಬೆಳ್ಳಿ ದರಗಳು ಕ್ರಮವಾಗಿ ರೂ. 65, ರೂ. 650, ಹಾಗೂ ರೂ. 6,500 ಮತ್ತು 65,000 ಇನ್ನುಳಿದಂತೆ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 65,000 ಆಗಿದ್ದರೆ ದೆಹಲಿಯಲ್ಲಿ ರೂ. 60,600 ಮುಂಬೈನಲ್ಲಿ ರೂ. 65,000 ಹಾಗೂ ಕೊಲ್ಕತ್ತದಲ್ಲೂ ರೂ. 61,400 ಗಳಾಗಿದೆ.

  ಇದನ್ನೂ ಓದಿ: SBI Car Loan Offer: ಕಾರು ಖರೀದಿಸಲು ಇದಕ್ಕಿಂತ ಒಳ್ಳೆ ಆಫರ್ ಇನ್ಯಾರೂ ಕೊಡಲ್ಲ ಅಂತಿದೆ ಎಸ್​ಬಿಐ!

  ಒಟ್ಟಾರೆ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ಸೇರಿ ಹಲವು ಕಾರಣಗಳಿಂದ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ. ಷೇರು ಮಾರುಕಟ್ಟೆಯ ಪ್ರಭಾವದಿಂದಲೂ ಚಿನ್ನದ ಬೆಲೆ ಏರಿಕೆ-ಇಳಿಕೆ ಆಗಬಹುದು.  ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವನ್ನು ಆಧರಿಸಿ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ.
  Published by:Annappa Achari
  First published: