Gold and Silver Price on May 19, 2022: ಆಭರಣ (Jewellery) ಪ್ರಿಯರಿಗೆ ಇಂದು ಗುರುವಾರ (Thursday) ಗುಡ್ ನ್ಯೂಸ್ (Good News) ಸಿಕ್ಕಿದೆ. ಯಾಕೆಂದರೆ ಇಂದು ಮಾರುಕಟ್ಟೆಯಲ್ಲಿ (Market) ಚಿನ್ನದ ಬೆಲೆಯಲ್ಲಿ (Gold Price) ಇಳಿಕೆ ಕಂಡಿದೆ. ನಿನ್ನೆಯಷ್ಟೆ ರೂ. 4,655 ಆಗಿದ್ದ ಒಂದು ಗ್ರಾಂ ಆಭರಣ ಚಿನ್ನದ ಬೆಲೆಯು ಇಂದು 4,610 ರೂಪಾಯಿ ಆಗಿದೆ. ಎರಡು, ಮೂರು ದಿನದಿಂದ ಯಥಾಸ್ಥಿತಿ ಕಾಯ್ದಿರಿಸಿಕೊಂಡಿದ್ದ ಚಿನ್ನ ಬೆಲೆಯಲ್ಲಿ ಇಂದು ಇಳಿಕೆ ಕಂಡಿದೆ. ಪ್ರಸಕ್ತ ನಡೆಯುತ್ತಿರುವ ಹಣದುಬ್ಬರ, ಕೆಲವು ರಾಷ್ಟ್ರಗಳಲ್ಲಿ, ಯುದ್ಧ (War), ಆರ್ಥಿಕ ಬಿಕ್ಕಟ್ಟು, ಜಾಗತಿಕ ಬೆಲೆ ಏರಿಕೆ ಅಂಶಗಳು ಚಿನ್ನ ಹಾಗೂ ಬೆಳ್ಳಿ ದರಗಳ (Silver Price) ಮೇಲೆ ಪ್ರಭಾವ ಬೀರುತ್ತಿವೆ. ದೇಶದಲ್ಲಿ ಇಂದು 10 ಗ್ರಾಂ ಚಿನ್ನದ ಬೆಲೆ ರೂ. 46100 ಆಗಿದೆ.
ಒಂದು ಗ್ರಾಂ (1GM)
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 4,610
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,078
ಎಂಟು ಗ್ರಾಂ (8GM)
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 36,880
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 40,232
ಹತ್ತು ಗ್ರಾಂ (10GM)
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 46,100
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 50,290
ನೂರು ಗ್ರಾಂ (100GM)
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 4,61,000
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,02,900
ಇದನ್ನೂ ಓದಿ: Indian Railways: ಹಿರಿಯ ನಾಗರಿಕರ ವಿನಾಯಿತಿ ರದ್ದು; 1,500 ಕೋಟಿಗಿಂತಲೂ ಹೆಚ್ಚು ಆದಾಯ ಗಳಿಸಿದ ಭಾರತೀಯ ರೈಲ್ವೆ
ರಾಜಧಾನಿ ಬೆಂಗಳೂರಿನಲ್ಲಿ ಇಂದು 22 ಕ್ಯಾರೆಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 46,100 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 47390, ರೂ. 46,100, ರೂ. 47,550 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 46,100 ರೂ. ಆಗಿದೆ.
ಇಂದು ಬೆಳ್ಳಿ ದರ ಎಷ್ಟಿದೆ?
ಭಾರತದ ಇತರ ನಗರಗಳ ಜೊತೆಗೇ ಬೆಂಗಳೂರಿನಲ್ಲಿಯೂ ಬೆಳ್ಳಿಯ ಬೇಡಿಕೆ ಹೆಚ್ಚುತ್ತಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ ಕಳೆದ ಕೆಲವು ವರ್ಷಗಳಲ್ಲಿ ಚಿನ್ನದ ಬೆಲೆ ಗಗನಕ್ಕೇರಿದ್ದು ಇದನ್ನು ಭರಿಸಲಾಗದ ಮಧ್ಯಮವರ್ಗ ಬೆಳ್ಳಿಯತ್ತ ಚಿತ್ತ ಹರಿಸಿರುವುದು. ಏಕೆಂದರೆ ಬೆಳ್ಳಿಯ ಬೆಲೆ ಚಿನ್ನಕ್ಕಿಂತಲೂ ಕಡಿಮೆ ಇದ್ದು ಮಧ್ಯಮವರ್ಗದ ಜನರು ಭರಿಸುವಂತಿದೆ.
ಬಂಗಾರದಂತೆ ಬೆಳ್ಳಿ ಬೆಲೆಯಲ್ಲೂ ಏರಿಕೆ ಹೆಚ್ಚಳವಾಗಿದೆ. ನಿನ್ನೆ ಒಂದು ಕೆಜಿಗೆ ಬೆಳ್ಳಿ ಬೆಲೆ 61,000 ಇದ್ದದ್ದು ಇಂದು ಸಹ ರೂ. 61,550 ಆಗಿದೆ. ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಅವಲಂಬಿತವಾಗಿದ್ದು ಏರಿಕೆ, ಇಳಿಕೆಗಳು ಆಗುತ್ತಿರುತ್ತವೆ. ಅಲ್ಲದೆ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನವೂ ಸಹ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಲೆ ಇರುತ್ತದೆ.
ಬೆಂಗಳೂರಿನಲ್ಲಿ ಇಂದಿನ ಸಿಲ್ವರ್ ರೇಟ್
ಪ್ರಸ್ತುತ, ಇಂದು 1gm, 10gm, 100 gm, 1000gm (1ಕೆಜಿ) ಬೆಳ್ಳಿ ದರಗಳು ಕ್ರಮವಾಗಿ ರೂ. 61, ರೂ. 610, ಹಾಗೂ ರೂ. 6,100 ಮತ್ತು 61,000 ಇನ್ನುಳಿದಂತೆ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 65,400 ಆಗಿದ್ದರೆ ದೆಹಲಿಯಲ್ಲಿ ರೂ. 61,000 ಮುಂಬೈನಲ್ಲಿ ರೂ. 61,000 ಹಾಗೂ ಕೊಲ್ಕತ್ತದಲ್ಲೂ ರೂ. 61,000 ಗಳಾಗಿದೆ.
ಇದನ್ನೂ ಓದಿ: GST Deadline Extended: ಮತ್ತೆ ತಾಂತ್ರಿಕ ದೋಷ ಶುರು, ಜಿಎಸ್ಟಿ ಫೈಲಿಂಗ್ ಗಡುವು ವಿಸ್ತರಣೆ
ಒಟ್ಟಾರೆ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ಸೇರಿ ಹಲವು ಕಾರಣಗಳಿಂದ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ. ಷೇರು ಮಾರುಕಟ್ಟೆಯ ಪ್ರಭಾವದಿಂದಲೂ ಚಿನ್ನದ ಬೆಲೆ ಏರಿಕೆ-ಇಳಿಕೆ ಆಗಬಹುದು. ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವನ್ನು ಆಧರಿಸಿ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ