Gold and Silver Price on June 25, 2022: ವೀಕೆಂಡ್ನಲ್ಲಿ (Weekend) ಆಭರಣ (Jewellery) ಖರೀದಿ ಮಾಡ್ಬೇಕು ಅಂತ ಪ್ಲಾನ್ ಮಾಡಿದ್ದೀರಾ? ಹಾಗಿದ್ರೆ ನಿಮಗೆ ಇಲ್ಲಿದೆ ಗುಡ್ ನ್ಯೂಸ್ (Good News). ಅದೇನಪ್ಪಾ ಅಂದ್ರೆ ಇಂದು ಚಿನ್ನ (Gold) ಹಾಗೂ ಬೆಳ್ಳಿ ಬೆಲೆಯಲ್ಲಿ (Silver Piece) ಕೊಂಚ ಇಳಿಕೆಯಾಗಿದೆ. ಇಂದು 10 ಗ್ರಾಂ ಬಂಗಾರದ (24 ಕ್ಯಾರೆಟ್) ಬೆಲೆಯಲ್ಲಿ 230 ರೂಪಾಯಿ ಇಳಿಕೆಯಾಗಿದೆ. ಇಂದು 24 ಕ್ಯಾರೆಟ್ ಬಂಗಾರದ ಬೆಲೆ 10 ಗ್ರಾಂಗೆ 51,760 ರೂ ಆಗಿದೆ. ಹಾಗೆಯೇ 22 ಕ್ಯಾರೆಟ್ ಬಂಗಾರದ ಬೆಲೆ 10 ಗ್ರಾಂ ಗೆ 47,450 ರೂ. ಆಗಿದೆ. ಇನ್ನು ಬೆಳ್ಳಿ ಕೆಜಿಗೆ 200 ರೂಪಾಯಿ ಇಳಿಕೆಯಾಗಿದೆ. ಇಂದು ದೇಶದ ಚೀನಿವಾರ ಪೇಟೆಯಲ್ಲಿ ಬೆಳ್ಳಿ ಬೆಲೆ ಒಂದು ಕೆಜಿಗೆ 60,000 ರೂಪಾಯಿ ದಾಖಲಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ (International Market) ಉಂಟಾಗುತ್ತಿರುವ ಕಚ್ಚಾ ತೈಲದಲ್ಲಾಗುತ್ತಿರುವ ಬೆಲೆ ಏರಿಕೆ ಹಾಗೂ ಇತರೆ ಜಾಗತಿಕ ಅಂಶಗಳು ಚಿನ್ನ ಹಾಗೂ ಬೆಳ್ಳಿ ದರಗಳ (Silver Price) ಮೇಲೆ ಪ್ರಭಾವ ಬೀರುತ್ತಿವೆ.
ಭಾರತದಲ್ಲಿ ಇಂದು ಎಷ್ಟಿದೆ ಬಂಗಾರದ ಬೆಲೆ?
ಇಂದು 1 ಗ್ರಾಂ (24 ಕ್ಯಾರೆಟ್) ಬಂಗಾರದ ಬೆಲೆ 5,176 ರೂ. ದಾಖಲಾಗಿದೆ. ಬೆಂಗಳೂರಿನಲ್ಲಿ 1 ಗ್ರಾಂ (24 ಕ್ಯಾರೆಟ್) ಬಂಗಾರಕ್ಕೆ 5,182 ರೂಪಾಯಿ ನಿಗದಿಯಾಗಿದೆ. ಹಾಗೆಯೇ 24 ಕ್ಯಾರೆಟ್ ಬಂಗಾರದ ಬೆಲೆ 10 ಗ್ರಾಂಗೆ 51,760 ರೂ ಆಗಿದೆ. ಹಾಗೆಯೇ 22 ಕ್ಯಾರೆಟ್ ಬಂಗಾರದ ಬೆಲೆ 10 ಗ್ರಾಂ ಗೆ 47,450 ರೂ. ಆಗಿದೆ.
ಬೆಂಗಳೂರಲ್ಲಿ ಎಷ್ಟಿದೆ ಬಂಗಾರದ ಬೆಲೆ?
ಬೆಂಗಳೂರಿನಲ್ಲಿ ಇಂದು 10 ಗ್ರಾಂ (22 ಕ್ಯಾರೆಟ್) ಚಿನ್ನದ ಬೆಲೆಗೆ 47,500 ರೂಪಾಯಿ ನಿಗದಿಯಾಗಿದೆ. 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರೆಟ್) ಬೆಲೆ 51,820 ರೂಪಾಯಿ ದಾಖಲಾಗಿದೆ. ಇನ್ನು ಮಂಗಳೂರು: 47,500 (22 ಕ್ಯಾರೆಟ್) - 51,820 (24 ಕ್ಯಾರೆಟ್) ಹಾಗೂ ಮೈಸೂರು 47,500 (22 ಕ್ಯಾರೆಟ್) - 51,820 (24 ಕ್ಯಾರೆಟ್) ಬೆಲೆ ದಾಖಲಾಗಿದೆ.
ಇದನ್ನೂ ಓದಿ: Multibagger Stock: 2 ವರ್ಷದಲ್ಲಿ ಮ್ಯಾಜಿಕ್! 20 ರೂಪಾಯಿ ಇದ್ದ ಸ್ಟಾಕ್ ಬೆಲೆ ಈಗ ಲಕ್ಷ-ಲಕ್ಷ ಸ್ವಾಮಿ
ಇತರೇ ಮಹಾನಗರಗಳಲ್ಲಿ ಎಷ್ಟಿದೆ ಗೋಲ್ಡ್ ರೇಟ್?
ಇನ್ನು ಇಂದು ಚೆನ್ನೈ: 47,530 (22 ಕ್ಯಾರೆಟ್) - 51,850 (24 ಕ್ಯಾರೆಟ್), ದೆಹಲಿ 47,500 (22 ಕ್ಯಾರೆಟ್) - 51,820 (24 ಕ್ಯಾರೆಟ್), ಹೈದರಾಬಾದ್: 47,450 (22 ಕ್ಯಾರೆಟ್) - 51,760 (24 ಕ್ಯಾರೆಟ್), ಕೋಲ್ಕತಾ: 47,500 (22 ಕ್ಯಾರೆಟ್) - 51,820 (24 ಕ್ಯಾರೆಟ್) ಹಾಗೂ ಮುಂಬೈನಲ್ಲಿ 47,450 (22 ಕ್ಯಾರೆಟ್) - 51,760 (24 ಕ್ಯಾರೆಟ್) ಬೆಲೆ ದಾಖಲಾಗಿದೆ.
ಇಂದು ಎಷ್ಟಿದೆ ಸಿಲ್ವರ್ ರೇಟ್?
ಇಂದು ಬೆಳ್ಳೆ ಬೆಲೆ ಚೆನ್ನೈ 66,000, ಮುಂಬೈ 60,000, ದೆಹಲಿ 60,000, ಕೋಲ್ಕತ್ತಾ 60,000, ಬೆಂಗಳೂರು 66,000, ಹೈದರಾಬಾದ್ 66,000 ಹಾಗೂ ಕೇರಳ 66,000 ರೂಪಾಯಿ ಬೆಲೆ ಇದೆ.
ಇದನ್ನೂ ಓದಿ: Petrol-Diesel Price Today: ಕೊಡಗು, ಕೋಲಾರ ಸೇರಿ 12 ಕಡೆ ಬೆಲೆ ಏರಿಕೆ, ಹೀಗಿದೆ ಇಂದಿನ ಪೆಟ್ರೋಲ್-ಡೀಸೆಲ್ ಬೆಲೆ
ಒಟ್ಟಾರೆ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ಸೇರಿ ಹಲವು ಕಾರಣಗಳಿಂದ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ. ಷೇರು ಮಾರುಕಟ್ಟೆಯ ಪ್ರಭಾವದಿಂದಲೂ ಚಿನ್ನದ ಬೆಲೆ ಏರಿಕೆ-ಇಳಿಕೆ ಆಗಬಹುದು. ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವನ್ನು ಆಧರಿಸಿ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ