Gold Price: "ಚಿನ್ನಾ" ಅಂತ ಕರೆಯೋಕಷ್ಟೇ ಚೆನ್ನ! ಇಂದಿನ ಗೋಲ್ಡ್ ರೇಟ್ ನೋಡಿ ಖರೀದಿಗೆ ಹೋಗೋ ಮುನ್ನ

ಇಂದೇನಾದ್ರೂ ಚಿನ್ನ ಕೊಳ್ಳುವ ಆಲೋಚನೆ ಮಾಡಿದ್ದೀರಾ? ಶುಭ ಶುಕ್ರವಾರವೇ ಮನೆಗೆ ಚಿನ್ನ ಬರಲಿ ಅಂತ ಯೋಚಿಸಿದ್ದೀರಾ? ಹಾಗಿದ್ರೆ ಈ ಸುದ್ದಿ ಓದಿ.. ಭಾರತದ ಮಾರುಕಟ್ಟೆಯಲ್ಲಿ ಇಂದು ಹತ್ತು ಗ್ರಾಂ ಆಭರಣ ಚಿನ್ನದ ದರದಲ್ಲಿ 600 ರೂ. ಏರಿಕೆಯಾಗಿದೆ.

ಚಿನ್ನದ ಆಭರಣಗಳು

ಚಿನ್ನದ ಆಭರಣಗಳು

 • Share this:
  Gold and Silver Price, March 25, 2022: ಇಂದು ಮತ್ತೆ ಚಿನ್ನ (Gold) ಹಾಗೂ ಬೆಳ್ಳಿ (Silver) ದರಗಳಲ್ಲಿ (Rate) ಏರಿಕೆಯಾಗಿದೆ. ಮಾರುಕಟ್ಟೆಯಲ್ಲಿ ಒಂದೆಡೆ ಇಂಧನ ಬೆಲೆಗಳಲ್ಲಿ (Fuel Price) ಏರಿಕೆಯಾಗಿದ್ದರೆ ಇನ್ನೊಂದೆಡೆ ಚಿನ್ನ ಹಾಗೂ ಬೆಳ್ಳಿ ದರಗಳಲ್ಲಿ ಮತ್ತೆ ಏರಿಕೆಯಾಗುತ್ತಿದೆ. ಕಳೆದ ಕೆಲ ದಿನಗಳಿಂದ ಚಿನ್ನ ಹಾಗೂ ಬೆಳ್ಳಿ ದರಗಳು ಏರಿಕೆ-ಇಳಿಕೆಗಳನ್ನು ಸ್ವಲ್ಪ ಮಟ್ಟಿಗೆ ಕಾಣುತ್ತಲೇ ಇವೆ. ಆದಾಗ್ಯೂ ಚಿನ್ನ ಒಂದು ಸುರಕ್ಷಿತ ಹೂಡಿಕೆಯೇ (Safe Investment) ಆಗಿದೆ. ನಿನ್ನೆಗೆ ಹೋಲಿಸಿದರೆ ಪ್ರತಿ ಗ್ರಾಂ ಆಭರಣ  (Jewellery) ಚಿನ್ನದ ಬೆಲೆಯಲ್ಲಿ ಇಂದು 60 ರೂ. ಏರಿಕೆಯಾಗಿದೆ. ಅಂದರೆ ಭಾರತದ ಮಾರುಕಟ್ಟೆಯಲ್ಲಿ ಇಂದು ಹತ್ತು ಗ್ರಾಂ ಆಭರಣ ಚಿನ್ನದ ದರದಲ್ಲಿ 600 ರೂ. ಏರಿಕೆಯಾಗಿದೆ.

  ರಷ್ಯಾ-ಉಕ್ರೇನ್ ಯುದ್ಧದ ಪರಿಣಾಮದಿಂದಾಗಿ ಎಲ್ಲೆಡೆ ಷೇರು ಮಾರುಕಟ್ಟೆಯಲ್ಲಿ ವ್ಯತ್ಯಾಸವಾಗುತ್ತಿದ್ದು ಇದರ ಪ್ರಭಾವ ಚಿನ್ನ ಬೆಳ್ಳಿ ದರಗಳ ಮೇಲೂ ಬೀಳುತ್ತಿದೆ. ಕಳೆದ ಕೆಲ ದಿನಗಳಿಂದ ಚಿನ್ನ-ಬೆಳ್ಳಿ ದರಗಳು ಕಣ್ಣುಮುಚ್ಚಾಲೆ ಆಟ ಆಡುತ್ತಿವೆ ಎಂದೇ ಹೇಳಬಹುದು. ಆದಾಗ್ಯೂ ಇಂದು ಭಾರತದ ಮಾರುಕಟ್ಟೆಯಲ್ಲಿ ಬಂಗಾರದ ದರದಲ್ಲಿ ನಿನ್ನೆಗೆ ಹೋಲಿಸಿದರೆ ಇಂದು ಕುಸಿತ ಕಂಡುಬಂದಿದೆ. ದೇಶದಲ್ಲಿ ಒಂದು ಗ್ರಾಂ ಆಭರಣ ಚಿನ್ನದ ಬೆಲೆ ಇಂದು ರೂ. 4,795 ಆಗಿದೆ.

  ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳ ಕುರಿತು ಬನ್ನಿ ತಿಳಿದುಕೊಳ್ಳೋಣ…

  ಒಂದು ಗ್ರಾಂ (1GM)

  22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 4,795

  24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,231

  ಎಂಟು ಗ್ರಾಂ (8GM)

  22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 38,360

  24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 41,848

  ಹತ್ತು ಗ್ರಾಂ (10GM)

  22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 47,950

  24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 52,310

  ನೂರು ಗ್ರಾಂ (100GM)

  22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 4,79,500

  24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,23,100

  ಇದನ್ನೂ ಓದಿ: Petrol Price Today: ನಿಮ್ಮೂರಲ್ಲಿ ಇಂದು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಎಷ್ಟಿದೆ ಅಂತ ನೋಡ್ಬಿಡಿ

  ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ

  ರಾಜಧಾನಿ ನಗರ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಆಭರಣ ಚಿನ್ನದ ಬೆಲೆ (ಹತ್ತು ಗ್ರಾಂ) ರೂ. 47,950 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೋಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ.48,310, ರೂ. 47,950, ರೂ. 47,950 ಆಗಿದೆ. ದೆಹಲಿಯಲ್ಲಿ ಚಿನ್ನದ ಬೆಲೆ ಇಂದು ರೂ. 47,950 ಆಗಿದೆ.

  ಬೆಳ್ಳಿ ದರ

  ನಿನ್ನೆಗೆ ಹೋಲಿಸಿದರೆ ಇಂದು ಭಾರತದಲ್ಲಿ ಬೆಳ್ಳಿ ದರದಲ್ಲಿ ಕೊಂಚ ಏರಿಕೆ ಕಂಡುಬಂದಿದೆ. ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಅವಲಂಬಿತವಾಗಿದ್ದು ಏರಿಕೆ, ಇಳಿಕೆಗಳು ಆಗುತ್ತಿರುತ್ತವೆ. ಅಲ್ಲದೆ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನವೂ ಸಹ ಚಿನ್ನೆ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಲೆ ಇರುತ್ತದೆ.

  ಮಹಾನಗರಗಳಲ್ಲಿ ಎಷ್ಟಿದೆ ಸಿಲ್ವರ್ ರೇಟ್?

  ಇಂದು, ಬೆಂಗಳೂರಿನಲ್ಲಿ ಬೆಳ್ಳಿಯ ದರದಲ್ಲಿ ನಿನ್ನೆಗೆ ಹೋಲಿಸಿದರೆ ಇಳಿಕೆ ಕಂಡುಬಂದಿದೆ ಹಾಗೂ 10gm, 100gm, 1000gm (1ಕೆಜಿ) ಬೆಳ್ಳಿ ದರ ಕ್ರಮವಾಗಿ ರೂ. 728, ರೂ. 7,280 ಹಾಗೂ ರೂ. 72,800 ಗಳಾಗಿವೆ. ಇನ್ನುಳಿದಂತೆ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ 72,800 ಆಗಿದ್ದರೆ ದೆಹಲಿಯಲ್ಲಿ 68,500 ಮುಂಬೈನಲ್ಲಿ 68,500 ಹಾಗೂ ಕೋಲ್ಕತ್ತದಲ್ಲೂ ರೂ.68,500 ಗಳಾಗಿದೆ.

  ಇದನ್ನೂ ಓದಿ: ನಿಮ್ಮ ಮೆಡಿಕಲ್ ಬಿಲ್​​ಗಳನ್ನು Health Credit Card ಮೂಲಕ ಪಾವತಿಸಿದರೆ ಎಷ್ಟೆಲ್ಲಾ ಲಾಭ ಇದೆ ನೋಡಿ..

  ಒಟ್ಟಾರೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರದ ಬೆಲೆಯಲ್ಲಿ ಏರಿಕೆ - ಇಳಿಕೆಯ ಹಾವು ಏಣಿ ಆಟ ಮುಂದುವರಿದಿದೆ. ಬೆಳ್ಳಿ ದರ ಕೂಡ ಏರಿಳಿತ ಕಾಣುತ್ತಿದೆ. ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ಸೇರಿ ಹಲವು ಕಾರಣಗಳಿಂದ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ. ಷೇರು ಮಾರುಕಟ್ಟೆಯ ಪ್ರಭಾವದಿಂದಲೂ ಚಿನ್ನದ ಬೆಲೆ ಏರಿಕೆ - ಇಳಿಕೆಯಾಗಬಹುದು.
  Published by:Annappa Achari
  First published: