Gold Price: ಗುರುವಾರ ನಿಮಗೆ ಗುಡ್ ನ್ಯೂಸ್, ಚಿನ್ನದ ಬೆಲೆಯಲ್ಲಿ ಇಳಿಕೆ! ಹಾಗಿದ್ರೆ ಇಂದು ಗೋಲ್ಡ್ ರೇಟ್ ಎಷ್ಟು?

ನಿನ್ನೆಗೆ ಹೋಲಿಸಿದರೆ ಪ್ರತಿ ಗ್ರಾಂ ಆಭರಣ ಚಿನ್ನದ ಬೆಲೆಯಲ್ಲಿ ಇಂದು 40 ರೂ. ಇಳಿಕೆಯಾಗಿದೆ. ಅಂದರೆ ಭಾರತದ ಮಾರುಕಟ್ಟೆಯಲ್ಲಿ ಇಂದು ಹತ್ತು ಗ್ರಾಂ ಆಭರಣ ಚಿನ್ನದ ದರದಲ್ಲಿ 400 ರೂ. ಕುಸಿತವಾಗಿದ್ದು ಚಿನ್ನ ಖರೀದಿಸ ಬೇಕೆಂದಿರುವವರು ಇಂದು ಖರೀದಿ ಮಾಡಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    Gold and Silver Price, March 24, 2022: ಮಾರುಕಟ್ಟೆಯಲ್ಲಿ ಒಂದೆಡೆ ಇಂಧನ (Fule) ಬೆಲೆಗಳಲ್ಲಿ (Rate) ಏರಿಕೆಯಾಗಿದ್ದರೆ, ಇನ್ನೊಂದೆಡೆ ಚಿನ್ನ (Gold) ಹಾಗೂ ಬೆಳ್ಳಿ ದರಗಳಲ್ಲಿ (Silver Price) ಮತ್ತೆ ಏರಿಕೆಯಾಗುತ್ತಿದೆ. ಕಳೆದ ಕೆಲ ದಿನಗಳಿಂದ ಚಿನ್ನ ಹಾಗೂ ಬೆಳ್ಳಿ ದರಗಳು ಏರಿಕೆ-ಇಳಿಕೆಗಳನ್ನು ಸ್ವಲ್ಪ ಮಟ್ಟಿಗೆ ಕಾಣುತ್ತಲೇ ಇವೆ. ಆದಾಗ್ಯೂ ಚಿನ್ನ ಒಂದು ಸುರಕ್ಷಿತ ಹೂಡಿಕೆಯೇ ಆಗಿದೆ. ನಿನ್ನೆಗೆ ಹೋಲಿಸಿದರೆ ಪ್ರತಿ ಗ್ರಾಂ ಆಭರಣ (Jewellery) ಚಿನ್ನದ ಬೆಲೆಯಲ್ಲಿ ಇಂದು 40 ರೂ. ಇಳಿಕೆಯಾಗಿದೆ. ಅಂದರೆ ಭಾರತದ ಮಾರುಕಟ್ಟೆಯಲ್ಲಿ ಇಂದು ಹತ್ತು ಗ್ರಾಂ ಆಭರಣ ಚಿನ್ನದ ದರದಲ್ಲಿ 400 ರೂ. ಕುಸಿತವಾಗಿದ್ದು ಚಿನ್ನ ಖರೀದಿಸ ಬೇಕೆಂದಿರುವವರು ಇಂದು ಖರೀದಿ ಕೆಲಸ ಮಾಡಬಹುದು.

    ರಷ್ಯಾ-ಉಕ್ರೇನ್ ಯುದ್ಧದ ಪರಿಣಾಮದಿಂದಾಗಿ ಎಲ್ಲೆಡೆ ಷೇರು ಮಾರುಕಟ್ಟೆಯಲ್ಲಿ ವ್ಯತ್ಯಾಸವಾಗುತ್ತಿದ್ದು ಇದರ ಪ್ರಭಾವ ಚಿನ್ನ ಬೆಳ್ಳಿ ದರಗಳ ಮೇಲೂ ಬೀಳುತ್ತಿದೆ. ಕಳೆದ ಕೆಲ ದಿನಗಳಿಂದ ಚಿನ್ನ-ಬೆಳ್ಳಿ ದರಗಳು ಕಣ್ಣುಮುಚ್ಚಾಲೆ ಆಟ ಆಡುತ್ತಿವೆ ಎಂದೇ ಹೇಳಬಹುದು. ಆದಾಗ್ಯೂ ಇಂದು ಭಾರತದ ಮಾರುಕಟ್ಟೆಯಲ್ಲಿ ಬಂಗಾರದ ದರದಲ್ಲಿ ನಿನ್ನೆಗೆ ಹೋಲಿಸಿದರೆ ಇಂದು ಕುಸಿತ ಕಂಡುಬಂದಿದೆ. ದೇಶದಲ್ಲಿ ಒಂದು ಗ್ರಾಂ ಆಭರಣ ಚಿನ್ನದ ಬೆಲೆ ಇಂದು ರೂ. 4,735 ಆಗಿದೆ.

    ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳ ಕುರಿತು ತಿಳಿದುಕೊಳ್ಳೋಣ

    ಒಂದು ಗ್ರಾಂ (1GM)

    22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 4,735

    24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,167

    ಎಂಟು ಗ್ರಾಂ (8GM)

    22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 37,880

    24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 41,336

    ಹತ್ತು ಗ್ರಾಂ (10GM)

    22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 47,350

    24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 51,670

    ನೂರು ಗ್ರಾಂ (100GM)

    22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 4,73,500

    24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,16,700

    ಇದನ್ನೂ ಓದಿ: Petrol Price Today: ಪೆಟ್ರೋಲ್ ಬೆಲೆಯಲ್ಲಿ ದಾಖಲೆಯ 3 ರೂ. ಹೆಚ್ಚಳ, ವಿವಿಧ ನಗರಗಳಲ್ಲಿ ಇಂದಿನ ದರ ಹೀಗಿದೆ

    ಬೆಂಗಳೂರು ಸೇರಿದಂತೆ ಮಹಾನಗರಗಳಲ್ಲಿ ಚಿನ್ನದ ಬೆಲೆ

    ರಾಜಧಾನಿ ನಗರ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಆಭರಣ ಚಿನ್ನದ ಬೆಲೆ (ಹತ್ತು ಗ್ರಾಂ) ರೂ. 47,350 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೋಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ.47,810, ರೂ. 47,350, ರೂ. 47,350 ಆಗಿದೆ. ದೆಹಲಿಯಲ್ಲಿ ಚಿನ್ನದ ಬೆಲೆ ಇಂದು ರೂ. 47,350 ಆಗಿದೆ.

    ಬೆಳ್ಳಿ ದರ

    ನಿನ್ನೆಗೆ ಹೋಲಿಸಿದರೆ ಇಂದು ಭಾರತದಲ್ಲಿ ಬೆಳ್ಳಿ ದರದಲ್ಲಿ ಕುಸಿತ ಉಂಟಾಗಿದೆ. ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಅವಲಂಬಿತವಾಗಿದ್ದು ಏರಿಕೆ, ಇಳಿಕೆಗಳು ಆಗುತ್ತಿರುತ್ತವೆ. ಅಲ್ಲದೆ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನವೂ ಸಹ ಚಿನ್ನೆ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಲೆ ಇರುತ್ತದೆ.

    ದೇಶದ ಮಹಾನಗರಗಳಲ್ಲಿ ಬೆಳ್ಳಿ ರೇಟ್ ಎಷ್ಟಿದೆ?

    ಇಂದು, ಬೆಂಗಳೂರಿನಲ್ಲಿ ಬೆಳ್ಳಿಯ ದರದಲ್ಲಿ ನಿನ್ನೆಗೆ ಹೋಲಿಸಿದರೆ ಇಳಿಕೆ ಕಂಡುಬಂದಿದೆ ಹಾಗೂ 10gm, 100gm, 1000gm (1ಕೆಜಿ) ಬೆಳ್ಳಿ ದರ ಕ್ರಮವಾಗಿ ರೂ. 719, ರೂ. 7,190 ಹಾಗೂ ರೂ. 71,900 ಗಳಾಗಿವೆ. ಇನ್ನುಳಿದಂತೆ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ 71,900 ಆಗಿದ್ದರೆ ದೆಹಲಿಯಲ್ಲಿ 67,600 ಮುಂಬೈನಲ್ಲಿ 67,600 ಹಾಗೂ ಕೋಲ್ಕತ್ತದಲ್ಲೂ ರೂ. 67,600 ಗಳಾಗಿದೆ.

    ಇದನ್ನೂ ಓದಿ: Fixed Deposits: ನಿಮ್ಮ 1 ಲಕ್ಷ ರೂ. ಮೇಲೆ ₹20 ಸಾವಿರಕ್ಕೂ ಹೆಚ್ಚು ಬಡ್ಡಿ ನೀಡುತ್ತವೆ ಈ ಬ್ಯಾಂಕ್​​ಗಳು!

    ಒಟ್ಟಾರೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರದ ಬೆಲೆಯಲ್ಲಿ ಏರಿಕೆ - ಇಳಿಕೆಯ ಹಾವು ಏಣಿ ಆಟ ಮುಂದುವರಿದಿದೆ. ಬೆಳ್ಳಿ ದರ ಕೂಡ ಏರಿಳಿತ ಕಾಣುತ್ತಿದೆ. ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ಸೇರಿ ಹಲವು ಕಾರಣಗಳಿಂದ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ. ಷೇರು ಮಾರುಕಟ್ಟೆಯ ಪ್ರಭಾವದಿಂದಲೂ ಚಿನ್ನದ ಬೆಲೆ ಏರಿಕೆ - ಇಳಿಕೆಯಾಗಬಹುದು.
    Published by:Annappa Achari
    First published: