Gold Price Today: ಮತ್ತಷ್ಟು ಕುಸಿದ ಚಿನ್ನ-ಬೆಳ್ಳಿ ಬೆಲೆ, ಆಭರಣ ಖರೀದಿಗೆ ಇಂದೇ ಪರ್ಫೆಕ್ಟ್ ಟೈಮ್!

ಇಂದು ಭಾರತದ ಮಾರುಕಟ್ಟೆಯಲ್ಲಿ ಬಂಗಾರದ ದರದಲ್ಲಿ ನಿನ್ನೆಗೆ ಹೋಲಿಸಿದರೆ ಇಂದು ದರ ಕುಗ್ಗಿದೆ. ಒಂದು ಗ್ರಾಂ 22 ಕ್ಯಾರಟ್ ನ ಬಂಗಾರದ ಬೆಲೆ ರೂ. ರೂ. 4,820 ಆಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  Gold And Silver Price Today:  ರಷ್ಯಾ (Russia) ಉಕ್ರೇನ್ (Ukraine) ಯುದ್ಧದ (War) ಪರಿಣಾಮ ಕೇವಲ ಕಚ್ಚಾ ತೈಲದ (Oil) ಮೇಲೆಯಲ್ಲದೆ ಜಾಗತಿಕವಾಗಿ ಚಿನ್ನ(Gold) ಬೆಳ್ಳಿ (Silver) ದರಗಳ (Price) ಮೇಲೆಯೂ ಬೀಳುತ್ತಿದೆ. ಕಳೆದ ಎರಡ್ಮೂರು ದಿನಗಳಿಂದ ಚಿನ್ನದ ಬೆಲೆಯಲ್ಲಿ ಹೆಚ್ಚಳವಾಗುತ್ತಲೇ ಇತ್ತು. ನಿನ್ನೆಗೆ ಹೋಲಿಸಿದರೆ ಇಂದು ಚಿನ್ನದ ಬೆಲೆಯಲ್ಲಿ ಗಮನಾರ್ಹ ಇಳಿಕೆಯಾಗಿದೆ. ಇಂದು ಭಾರತದ ಮಾರುಕಟ್ಟೆಯಲ್ಲಿ ಬಂಗಾರದ ದರದಲ್ಲಿ ನಿನ್ನೆಗೆ ಹೋಲಿಸಿದರೆ ಇಂದು ದರ ಕುಗ್ಗಿದೆ. ಒಂದು ಗ್ರಾಂ 22 ಕ್ಯಾರಟ್ ನ ಬಂಗಾರದ ಬೆಲೆ ರೂ. ರೂ. 4,820 ಆಗಿದೆ.

  ಹೆಚ್ಚಿದ ಚಿನ್ನದ ಮೇಲಿನ ಹೂಡಿಕೆ

  ಕಳೆದ ಹಲವು ಸಮಯದಿಂದ ಚಿನ್ನವು ಮಾರುಕಟ್ಟೇಯಲ್ಲಿ ಒಂದು ಉತ್ತಮ ಹೂಡಿಕೆಯ ವಸ್ತುವಾಗಿ ಗುರುತಿಸಿಕೊಂಡಿದೆ. ಇಂದು ಚಿನ್ನದ ಹೂಡಿಕೆ ಬಹು ಸುರಕ್ಷಿತ ಹೂಡಿಕೆ ಎಂದೇ ಹಲವು ತಜ್ಞರು ಹೇಳುತ್ತಾರೆ. ಹಾಗಾಗಿ ಅದರಲ್ಲೂ ವಿಶೇಷವಾಗಿ ಭರತೀಯರಿಗೆ ಚಿನ್ನದ ಆಕರ್ಷಣೆ ತುಸು ಹೆಚ್ಚೇ ಎಂದು ಹೇಳಬಹುದು. ಆರ್ಥಿಕ ಸಂಕಷ್ಟದ ಕಾಲದಲ್ಲಿ ಕೈಯನ್ನು ಹಿಡಿಯುವ ನಂಬಿಕಸ್ಥ ಗೆಳೆಯ ಎಂದು ನಂಬಲಾಗಿರುವ ಚಿನ್ನವು ಈಗ ಹೂಡಿಕೆಯ ವಸ್ತುವಾಗಿಯೂ ಪ್ರಾಮುಖ್ಯತೆ ಪಡೆದಿದೆ. ಹಾಗಾಗಿ, ನಮ್ಮ ದೇಶದಲ್ಲಷ್ಟೆ ಅಲ್ಲ, ಜಗತ್ತಿನಾದ್ಯಂತ ಬಂಗಾರಕ್ಕೆ ಇರುವ ಬೇಡಿಕೆ ಅಷ್ಟಿಷ್ಟಲ್ಲ.

  ಅದರಲ್ಲೂ ವಿಶೇಷವಾಗಿ ಭಾರತ ದೇಶ ಎಂದರೆ ಕೇಳಬೇಕೆ? ಮೊದಲಿನಿಂದಲೂ ಭಾರತದಲ್ಲಿ ಬಂಗಾರಕ್ಕಿರುವ ವಿಶೇಷತೆಯೇ ಬೇರೆ. ಮದುವೆಯಿಂದ ಹಿಡಿದು ಅನೇಕ ಇತರೆ ಶುಭ ಕಾರ್ಯಗಳಲ್ಲಿ ಭಾರತೀಯರು ಬಂಗಾರವನ್ನು ಯಥೇಚ್ಚವಾಗಿ ಬಳಸುತ್ತಾರೆ. ಅದರಲ್ಲೂ ನವಜಾತ ಶಿಷು ಇರಲಿ ಅಥವಾ ಹೊಸದಾಗಿ ಮದುವೆ ಮಾಡಿಕೊಂಡ ದಂಪತಿಗಳಿರಲಿ ಅವರಲ್ಲಿ ಬಂಗಾರದ ಯಾವುದಾದರೂ ವಸ್ತು ಅಥವಾ ಸಿಂಗಾರದ ಸಾಮಾನು ಇದ್ದೆ ಇರುತ್ತದೆ.

  ಇದನ್ನೂ ಓದಿ: Petrol Price Today : ನಿಮ್ಮ ನಿಮ್ಮ ನಗರಗಳಲ್ಲಿ ಇಂದಿನ ಪೆಟ್ರೋಲ್-ಡೀಸೆಲ್ ದರಗಳು ಈ ರೀತಿಯಾಗಿವೆ

  ರಷ್ಯಾ-ಉಕ್ರೇನ್ ಯುದ್ಧದ ಪರಿಣಾಮದಿಂದಾಗಿ ಎಲ್ಲೆಡೆ ಷೇರು ಮಾರುಕಟ್ಟೆಯಲ್ಲಿ ವ್ಯತ್ಯಾಸವಾಗುತ್ತಿದ್ದು ಇದರ ಪ್ರಭಾವ ಚಿನ್ನ ಬೆಳ್ಳಿ ದರಗಳ ಮೇಲೂ ಬೀಳುತ್ತಿದೆ. ಈಗ ಪ್ರಸ್ತುತ ಮತ್ತೆ ಚಿನ್ನ ಏರುಮುಖ ಮಾಡಿ ಸಾಗುತ್ತಿದೆ. ಇಂದು ಭಾರತದ ಮಾರುಕಟ್ಟೆಯಲ್ಲಿ ಬಂಗಾರದ ದರದಲ್ಲಿ ನಿನ್ನೆಗೆ ಹೋಲಿಸಿದರೆ ಇಂದು ದರ ಕುಗ್ಗಿದೆ. ಒಂದು ಗ್ರಾಂ 22 ಕ್ಯಾರಟ್ ನ ಬಂಗಾರದ ಬೆಲೆ ರೂ. ರೂ. 4,820 ಆಗಿದೆ.

  ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳ ಕುರಿತು ಬನ್ನಿ ಒಂದು ಪಕ್ಷಿ ನೋಟ ಬೀರೋಣ.

  ಒಂದು ಗ್ರಾಂ (1GM) ಚಿನ್ನದ ಬೆಲೆ

  22 ಕ್ಯಾರಟ್ ಬಂಗಾರದ ಬೆಲೆ - ರೂ. 4,820

  24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,258

  ಎಂಟು ಗ್ರಾಂ (8GM) ಚಿನ್ನದ ಬೆಲೆ

  22 ಕ್ಯಾರಟ್ ಬಂಗಾರದ ಬೆಲೆ - ರೂ. 38,560

  24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 42,064

  ಹತ್ತು ಗ್ರಾಂ (10GM) ಚಿನ್ನದ ಬೆಲೆ

  22 ಕ್ಯಾರಟ್ ಬಂಗಾರದ ಬೆಲೆ - ರೂ. 48,200

  24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 52,580

  ನೂರು ಗ್ರಾಂ (100GM) ಚಿನ್ನದ ಬೆಲೆ

  22 ಕ್ಯಾರಟ್ ಬಂಗಾರದ ಬೆಲೆ - ರೂ. 4,82,000

  24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,25,800

  ರಾಜಧಾನಿ ನಗರ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ ರೂ. 48,200 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೋಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ.48,250, ರೂ. 48,200, ರೂ. 48,200 ರಷ್ಟಿದೆ.

  ಬೆಳ್ಳಿ ದರ

  ನಿನ್ನೆಗೆ ಹೋಲಿಸಿದರೆ ಇಂದು ಭಾರತದಲ್ಲಿ ಬೆಳ್ಳಿ ದರದಲ್ಲಿ ಮತ್ತೆ ಇಳಿಮುಖವಾಗಿದೆ. ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಅವಲಂಬಿತವಾಗಿದ್ದು ಏರಿಕೆ, ಇಳಿಕೆಗಳು ಆಗುತ್ತಿರುತ್ತವೆ. ಅಲ್ಲದೆ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನವೂ ಸಹ ಚಿನ್ನೆ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಲೆ ಇರುತ್ತದೆ.

  ಇಂದು, ಬೆಂಗಳೂರಿನಲ್ಲಿ ಬೆಳ್ಳಿಯ ದರದಲ್ಲಿ ನಿನ್ನೆಗೆ ಹೋಲಿಸಿದರೆ ಮತ್ತಷ್ಟು ಇಳಿಕೆಯಾಗಿದ್ದು 10gm, 100gm, 1000gm (1ಕೆಜಿ) ಬೆಳ್ಳಿ ದರ ಕ್ರಮವಾಗಿ ರೂ. 741, ರೂ. 7,410 ಹಾಗೂ ರೂ. 74,100 ಗಳಾಗಿವೆ. ಇನ್ನುಳಿದಂತೆ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ 74,100 ಆಗಿದ್ದರೆ ದೆಹಲಿಯಲ್ಲಿ 69,400 ಮುಂಬೈನಲ್ಲಿ 769,400 ಹಾಗೂ ಕೋಲ್ಕತ್ತದಲ್ಲೂ ರೂ. 69,400 ಗಳಾಗಿದೆ.

  ಇದನ್ನೂ ಓದಿ: Student Investment Plans: ವಿದ್ಯಾರ್ಥಿಗಳೇ,100 ರೂಪಾಯಿಯಲ್ಲೂ ಹೂಡಿಕೆ ಮಾಡಿ! ಹೇಗೆಂದು ತಿಳಿಯಿರಿ

  ಬೆಲೆಯಲ್ಲಿ ಏರಿಕೆ-ಇಳಿಕೆ ಆಗಬಹುದು

  ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ಸೇರಿ ಹಲವು ಕಾರಣಗಳಿಂದ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ. ಷೇರು ಮಾರುಕಟ್ಟೆಯ ಪ್ರಭಾವದಿಂದಲೂ ಚಿನ್ನದ ಬೆಲೆ ಏರಿಕೆ - ಇಳಿಕೆಯಾಗಬಹುದು.
  Published by:Annappa Achari
  First published: