Gold And Silver Price: ರಷ್ಯಾ (Russia), ಉಕ್ರೇನ್ (Ukraine) ಯುದ್ಧದ (War) ಪರಿಣಾಮ (Effect) ಕೇವಲ ಕಚ್ಚಾ ತೈಲದ (Oil) ಮೇಲೆಯಲ್ಲದೆ ಜಾಗತಿಕವಾಗಿ ಚಿನ್ನ(Gold), ಬೆಳ್ಳಿ (Silver) ದರಗಳ (Price) ಮೇಲೆಯೂ ಬೀಳುತ್ತಿದೆ. ಕಳೆದ ಎರಡ್ಮೂರು ದಿನಗಳಿಂದ ಚಿನ್ನದ ಬೆಲೆಯಲ್ಲಿ ಹೆಚ್ಚಳವಾಗುತ್ತಲೇ ಸಾಗಿದೆ. ನಿನ್ನೆಗೆ ಹೋಲಿಸಿದರೆ ಇಂದು ಬೆಂಗಳೂರಿನಲ್ಲಿ (Bengaluru) ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಕಳೆದ ಹಲವು ವರ್ಷಗಳಿಂದ ಚಿನ್ನ ಒಂದು ಆಕರ್ಷಕ ಹೂಡಿಕೆಯ ವಸ್ತುವಾಗಿ ಹೂಡಿಕೆದಾರರ ಗಮನಸೆಳೆಯುತ್ತಿದೆ. ಇಂದು ಚಿನ್ನದ ಹೂಡಿಕೆ ಬಹು ಸುರಕ್ಷಿತ ಹೂಡಿಕೆ ಎಂದೇ ಹಲವು ತಜ್ಞರು ಹೇಳುತ್ತಾರೆ. ಹಾಗಾಗಿ ಅದರಲ್ಲೂ ವಿಶೇಷವಾಗಿ ಭರತೀಯರಿಗೆ ಚಿನ್ನದ ಆಕರ್ಷಣೆ ತುಸು ಹೆಚ್ಚೇ ಎಂದು ಹೇಳಬಹುದು. ಕೇವಲ ಹೂಡಿಕೆಗೆ ಮಾತ್ರವಲ್ಲದೆ ಚಿನ್ನವು ಆರ್ಥಿಕ ಸಂಕಷ್ಟದ ಕಾಲದಲ್ಲಿ ಕೈಯನ್ನು ಹಿಡಿಯುವ ನಂಬಿಕಸ್ಥ ಗೆಳೆಯ ಕೂಡ ಹೌದು. ಹಾಗಾಗಿ, ನಮ್ಮ ದೇಶದಲ್ಲಷ್ಟೆ ಅಲ್ಲ, ಜಗತ್ತಿನಾದ್ಯಂತ ಬಂಗಾರಕ್ಕೆ ಇರುವ ಬೇಡಿಕೆ ಅಷ್ಟಿಷ್ಟಲ್ಲ.
ರಷ್ಯಾ-ಉಕ್ರೇನ್ ಯುದ್ಧದ ಪರಿಣಾಮದಿಂದಾಗಿ ಎಲ್ಲೆಡೆ ಷೇರು ಮಾರುಕಟ್ಟೆಯಲ್ಲಿ ವ್ಯತ್ಯಾಸವಾಗುತ್ತಿದ್ದು ಇದರ ಪ್ರಭಾವ ಚಿನ್ನ ಬೆಳ್ಳಿ ದರಗಳ ಮೇಲೂ ಬೀಳುತ್ತಿದೆ. ಈಗ ಪ್ರಸ್ತುತ ಮತ್ತೆ ಚಿನ್ನ ಏರುಮುಖ ಮಾಡಿ ಸಾಗುತ್ತಿದೆ. ಇಂದು ಭಾರತದ ಮಾರುಕಟ್ಟೆಯಲ್ಲಿ ಬಂಗಾರದ ದರದಲ್ಲಿ ನಿನ್ನೆಗೆ ಹೋಲಿಸಿದರೆ ಭಾರಿ ವ್ಯತ್ಯಾಸವೇನೂ ಆಗಿಲ್ಲ. ಒಂದು ಗ್ರಾಂ 22 ಕ್ಯಾರಟ್ ನ ಬಂಗಾರದ ಬೆಲೆ ರೂ. ರೂ. 4,940 ಆಗಿದೆ.
ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳ ಕುರಿತು ಬನ್ನಿ ತಿಳಿಯೋಣ
ಒಂದು ಗ್ರಾಂ (1GM)
22 ಕ್ಯಾರೆಟ್ ಬಂಗಾರದ ಬೆಲೆ - ರೂ. 4,940
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,389
ಎಂಟು ಗ್ರಾಂ (8GM)
22 ಕ್ಯಾರೆಟ್ ಬಂಗಾರದ ಬೆಲೆ - ರೂ. 39,520
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 43,112
ಹತ್ತು ಗ್ರಾಂ (10GM)
22 ಕ್ಯಾರೆಟ್ ಬಂಗಾರದ ಬೆಲೆ - ರೂ. 49,400
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 53,890
ನೂರು ಗ್ರಾಂ (100GM)
22 ಕ್ಯಾರೆಟ್ ಬಂಗಾರದ ಬೆಲೆ - ರೂ. 4,94,000
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,38,900
ಇದನ್ನೂ ಓದಿ: Petrol Price Today : ದುಬಾರಿ ಆಗುವ ಮುನ್ನ ನಿಮ್ಮ ನಗರಗಳಲ್ಲಿಂದು ಪೆಟ್ರೋಲ್-ಡೀಸೆಲ್ ದರ ಹೀಗಿದೆ ನೋಡಿ
ಬೆಂಗಳೂರು ಹಾಗೂ ಇತರೇ ನಗರಗಳಲ್ಲಿ ಬೆಲೆ ಎಷ್ಟಿದೆ?
ರಾಜಧಾನಿ ನಗರ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ ರೂ. 49,400 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೋಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ.50,200, ರೂ. 49,400, ರೂ. 49,400 ರಷ್ಟಿದೆ. ಹಾಗೆ ನೋಡಿದರೆ ಚೆನ್ನೈನಲ್ಲಿ ನಿನ್ನೆಗೆ ಹೋಲಿಸಿದರೆ ಇಂದು ಚಿನ್ನದ ಬೆಲೆಯಲ್ಲಿ 500 ರೂಪಾಯಿಗಳಷ್ಟು ಇಳಿಕೆಯಾಗಿದೆ.
ಬೆಳ್ಳಿ ದರ
ನಿನ್ನೆಗೆ ಹೋಲಿಸಿದರೆ ಇಂದು ಭಾರತದಲ್ಲಿ ಬೆಳ್ಳಿ ದರದಲ್ಲಿ ಸ್ವಲ್ಪ ಇಳಿಕೆಯಾಗಿದೆ. ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಅವಲಂಬಿತವಾಗಿದ್ದು ಏರಿಕೆ, ಇಳಿಕೆಗಳು ಆಗುತ್ತಿರುತ್ತವೆ. ಅಲ್ಲದೆ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನವೂ ಸಹ ಚಿನ್ನೆ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಲೆ ಇರುತ್ತದೆ.
ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ಎಷ್ಟಿದೆ?
ಇಂದು, ಬೆಂಗಳೂರಿನಲ್ಲಿ ಬೆಳ್ಳಿಯ ದರದಲ್ಲಿ ಕೊಂಚ ಇಳಿಕೆಯಾಗಿದ್ದು 10gm, 100gm, 1000gm (1ಕೆಜಿ) ಬೆಳ್ಳಿ ದರ ಕ್ರಮವಾಗಿ ರೂ. 746, ರೂ. 7,460 ಹಾಗೂ ರೂ. 74,600 ಗಳಾಗಿವೆ. ಇನ್ನುಳಿದಂತೆ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ 74,600 ಆಗಿದ್ದರೆ ದೆಹಲಿಯಲ್ಲಿ 70,000 ಮುಂಬೈನಲ್ಲಿ 70,000 ಹಾಗೂ ಕೋಲ್ಕತ್ತದಲ್ಲೂ ರೂ. 74,600 ಗಳಾಗಿದೆ.
ಇದನ್ನೂ ಓದಿ: PPF Account Rules: ನಿಮ್ಮ ಹೆಸರಿನಲ್ಲಿ ಎರಡೆರೆಡು PPF ಖಾತೆಗಳಿದ್ದರೆ ಎಚ್ಚರ.. ಹಣ ಕಳೆದುಕೊಳ್ಳುತ್ತೀರಿ!
ಕೆಲ ದಶಕಗಳಿಂದ ಜಾಗತಿಕ ಮಾರುಕಟ್ಟೆಯಾಗಲಿ ಅಥವಾ ದೇಶೀಯ ಮಾರುಕಟ್ಟೆಯಾಗಲಿ, ಹೂಡಿಕೆದಾರರು ಬಂಗಾರದ ನಿವೇಶನದ ಕುರಿತು ಹೆಚ್ಚು ಆಸಕ್ತರಾಗಿದ್ದಾರೆ. ಹಣದುಬ್ಬರದ ವಿರುದ್ಧವೂ ಸಹ ಬಂಗಾರ ಖರೀದಿ ಒಂದೊಳ್ಳೆಯ ಮಾರ್ಗವಾಗಿದೆ ಎಂಬುದು ಹಲವು ಮಾರುಕಟ್ಟೆ ತಜ್ಞರ ಅಭಿಪ್ರಾಯವಾಗಿದೆ. ಹಾಗಾಗಿ, ಇಂದು ಬಹು ಜನರು ಬಂಗಾರವನ್ನು ಒಂದು ಪ್ರಮುಖ ಹೂಡಿಕೆಯ ಮಾರ್ಗವಾಗಿ ಗುರುತಿಸುತ್ತಿದ್ದಾರೆ.
ಹಾಗಾಗಿಯೇ ಇಂದಿಗೂ ಭಾರತದ ಮಾರುಕಟ್ಟೆಗಳಲ್ಲಿ ಬಂಗಾರ ಖರೀದಿ ಎಂಬುದು ಬಹು ಸಾಮಾನ್ಯ ಸಂಗತಿಯಾಗಿದ್ದು ದಿನದಲ್ಲೇ ಕೋಟ್ಯಂತರ ರೂಪಾಯಿಗಳಷ್ಟು ವ್ಯವಹಾರವನ್ನು ಬಂಗಾರ ಹೊಂದಿದೆ. ಇನ್ನು ಪೆಟ್ರೋಲ್ ಡೀಸೆಲ್ ಗಳಂತೆ ಬಂಗಾರದ ಬೆಲೆಗಳಲ್ಲೂ ಆಗಾಗ ವ್ಯತ್ಯಾಸಗಳು ಆಗುತ್ತಲೇ ಇರುತ್ತವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ