Gold Price: ವೀಕೆಂಡ್‌ನಲ್ಲಿ ಆಭರಣ ಪ್ರಿಯರಿಗೆ ಶಾಕ್! ಇಂದು ಚಿನ್ನ-ಬೆಳ್ಳಿ ಬೆಲೆಯಲ್ಲಿ ಏರಿಕೆ

ಆಭರಣ ಪ್ರಿಯರಿಗೆ ಇಂದು ಶಾಕಿಂಗ್‌ ನ್ಯೂಸ್! ಯಾಕೆಂದರೆ ಚಿನ್ನದ ಬೆಲೆಯಲ್ಲಿ ಇಂದು 330 ರೂ. ಏರಿಕೆ ಕಂಡಿದೆ. ಇನ್ನು ಬೆಳ್ಳಿಯ ಬೆಲೆ ಇಂದು 200 ರೂ. ಏರಿಕೆಯಾಗಿದೆ. ಹಾಗಾದ್ರೆ ನಿಮ್ಮ ನಗರದಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ತಿಳಿದುಕೊಳ್ಳಿ...

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Gold and Silver Price on May 8, 2022: ವೀಕೆಂಡ್‌ನಲ್ಲಿ (Weekend) ಆಭರಣ (Jewellery) ಪ್ರಿಯರಿಗೆ ಒಂದು ಶಾಕಿಂಗ್ ನ್ಯೂಸ್ (Shocking News) ಎದುರಾಗಿದೆ. ಕಳೆದ ನಾಲೈದು ದಿನಗಳಿಂದ ಇಳಿಮುಖವಾಗಿದ್ದ ಚಿನ್ನ (Gold) ಹಾಗೂ ಬೆಳ್ಳಿ ಬೆಲೆ (Silver Price) ಇಂದು ಮತ್ತೊಮ್ಮೆ ಏರಿಕೆಯಾಗಿದೆ. ಪ್ರಸಕ್ತ ನಡೆಯುತ್ತಿರುವ ರಷ್ಯಾ (Russia) ಹಾಗೂ ಉಕ್ರೇನ್ (Ukraine) ಯುದ್ಧದ (War) ಸನ್ನಿವೇಶದಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉಂಟಾಗುತ್ತಿರುವ ಕಚ್ಚಾ ತೈಲದಲ್ಲಾಗುತ್ತಿರುವ ಬೆಲೆ ಏರಿಕೆ ಹಾಗೂ ಇತರೆ ಜಾಗತಿಕ ಅಂಶಗಳು ಚಿನ್ನ ಹಾಗೂ ಬೆಳ್ಳಿ ದರಗಳ ಮೇಲೆ ಪ್ರಭಾವ ಬೀರುತ್ತಿವೆ. ಚಿನ್ನದ ಬೆಲೆಯಲ್ಲಿ ಇಂದು 330 ರೂ. ಏರಿಕೆ ಕಂಡಿದೆ. ಇನ್ನು ಬೆಳ್ಳಿಯ ಬೆಲೆ ಇಂದು 200 ರೂ. ಏರಿಕೆಯಾಗಿದೆ.

ಭಾರತದಲ್ಲಿ ಇಂದು ಎಷ್ಟಿದೆ ಗೋಲ್ಡ್ ರೇಟ್?

ಭಾರತದಲ್ಲಿ ನಿನ್ನೆ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 47,100 ರೂಪಾಯಿ ಇತ್ತು. ಇಂದು ಅದೇ ಚಿನ್ನಕ್ಕೆ 77,400 ರೂಪಾಯಿ ಬೆಲೆ ಇದೆ. ಇನ್ನು 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ನಿನ್ನೆ 51,380 ರೂಪಾಯಿ ಇದ್ದುದು ಇಂದು 51,710 ರೂಪಾಯಿ ಆಗಿದೆ.

ಬೆಂಗಳೂರು ಎಷ್ಟಿದೆ ಚಿನ್ನದ ಬೆಲೆ?

ಬೆಂಗಳೂರಿನಲ್ಲಿ ಇಂದು 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 47,400 ರೂಪಾಯಿ ಆಗಿದೆ. ಮಂಗಳೂರು ಹಾಗೂ ಮೈಸೂರಿನಲ್ಲೂ ಕೂಡ ಇಂದು 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 47,400 ನಿಗದಿಯಾಗಿದೆ. ಬೆಂಗಳೂರಿನಲ್ಲಿ ಇಂದು 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 51,710 ರೂಪಾಯಿ ಆಗಿದೆ. ಅತ್ತ ಮಂಗಳೂರಿನಲ್ಲಿ 51,710 ರೂಪಾಯಿ ಇದ್ದರೆ, ಮೈಸೂರಿನಲ್ಲೂ 51,710 ರೂಪಾಯಿ ಬೆಲೆ ಇದೆ.

ಇದನ್ನೂ ಓದಿ: India Post: ಪೋಸ್ಟ್ ಆಫೀಸ್ ಗ್ರಾಹಕರೇ ಅಲರ್ಟ್, ಇನ್ಮುಂದೆ ಈ ಸೇವೆಗಳು ಆನ್​​ಲೈನ್​ನಲ್ಲೇ ಲಭ್ಯ

ಇತರೇ ಮಹಾನಗರಗಳಲ್ಲಿ ಎಷ್ಟಿದೆ ಚಿನ್ನದ ರೇಟ್?

22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ ಇಂದು ಚೆನ್ನೈ- 48,770 ರೂ. ಮುಂಬೈ- 47,400 ರೂ, ದೆಹಲಿ- 47,400 ರೂ, ಕೋಲ್ಕತ್ತಾ- 47,400 ರೂ,  ಹೈದರಾಬಾದ್- 47,400 ರೂ, ಕೇರಳ- 47,400 ರೂಪಾಯಿ ಇದ್ದರೆ, ಪುಣೆಯಲ್ಲಿ 47,550 ರೂಪಾಯಿ ಇದೆ.

24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ಎಷ್ಟು?

ಇನ್ನು 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ಇಂದು ಚೆನ್ನೈ- 53,200 ರೂ, ಮುಂಬೈ- 51,710 ರೂ, ದೆಹಲಿ- 51,710 ರೂ, ಕೋಲ್ಕತ್ತಾ- 51,710 ರೂ, ಹೈದರಾಬಾದ್- 51,710 ರೂ, ಕೇರಳ- 51,710 ರೂಪಾಯಿ ಇದ್ದರೆ, ಪುಣೆಯಲ್ಲಿ 51,860 ರೂಪಾಯಿ ಆಗಿದೆ.

ಭಾರತದಲ್ಲಿ ಎಷ್ಟಿದೆ ಬೆಳ್ಳಿ ಬೆಲೆ?

ಇಂದು 1 ಕೆಜಿ ಬೆಳ್ಳಿ ಬೆಲೆ 200 ರೂ. ಏರಿಕೆಯಾಗಿದೆ. ಭಾರತದಲ್ಲಿ ನಿನ್ನೆ 1 ಕೆಜಿ ಬೆಳ್ಳಿಯ ದರ 62,300 ರೂ. ಇದ್ದುದು ಇಂದು 62,500 ರೂ.ಗೆ ಏರಿಕೆಯಾಗಿದೆ.

ಪ್ರಮುಖ ನಗರಗಳಲ್ಲಿ ಎಷ್ಟಿದೆ ಸಿಲ್ವರ್ ರೇಟ್?

ಸಿಲ್ವರ್ ರೇಟ್ ಇಂದು ಬೆಂಗಳೂರು- 66,800 ರೂ, ಮೈಸೂರು- 56,800 ರೂ., ಮಂಗಳೂರು- 66,800 ರೂ., ಮುಂಬೈ- 62,500 ರೂ, ಚೆನ್ನೈ- 66,800 ರೂ, ದೆಹಲಿ- 62,500 ರೂ, ಹೈದರಾಬಾದ್- 66,800 ರೂ, ಕೊಲ್ಕತ್ತಾ- 62,500 ರೂ. ಆಗಿದೆ

ಇದನ್ನೂ ಓದಿ: Amazon Sale: ಅಮೆಜಾನ್ ಸೇಲ್‍ನಲ್ಲಿ ಮಹಿಳೆಯರ ಈ ಏಳು ಬ್ಯಾಗುಗಳ ಮೇಲೆ ಭರ್ಜರಿ ಆಫರ್! ಈಗಲೇ ಶಾಪಿಂಗ್ ಶುರು ಮಾಡಿ

ಒಟ್ಟಾರೆ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ಸೇರಿ ಹಲವು ಕಾರಣಗಳಿಂದ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ. ಷೇರು ಮಾರುಕಟ್ಟೆಯ ಪ್ರಭಾವದಿಂದಲೂ ಚಿನ್ನದ ಬೆಲೆ ಏರಿಕೆ-ಇಳಿಕೆ ಆಗಬಹುದು.  ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವನ್ನು ಆಧರಿಸಿ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ.
Published by:Annappa Achari
First published: