• Home
 • »
 • News
 • »
 • business
 • »
 • Gold Price: ಮತ್ತೆ ದುಬಾರಿಯಾಯ್ತು ಚಿನ್ನ! ಇಂದಿನ ಗೋಲ್ಡ್-ಸಿಲ್ವರ್ ರೇಟ್ ಎಷ್ಟಿದೆ ಅಂತ ನೋಡಿ

Gold Price: ಮತ್ತೆ ದುಬಾರಿಯಾಯ್ತು ಚಿನ್ನ! ಇಂದಿನ ಗೋಲ್ಡ್-ಸಿಲ್ವರ್ ರೇಟ್ ಎಷ್ಟಿದೆ ಅಂತ ನೋಡಿ

ಚಿನ್ನದ ಆಭರಣಗಳ ಸಂಗ್ರಹ ಚಿತ್ರ

ಚಿನ್ನದ ಆಭರಣಗಳ ಸಂಗ್ರಹ ಚಿತ್ರ

ನಿನ್ನೆ ಒಂದು ಗ್ರಾಂ ಆಭರಣದ ಚಿನ್ನದ ಬೆಲೆ ರೂ. 4,775 ಇದ್ದದ್ದು ಇಂದು ಸಹ 4,775 ರೂಪಾಯಿಯ ಸಹಜ ಸ್ಥಿತಿಯನ್ನು ಕಾಯ್ದುಕೊಂಡು ಬಂದಿದೆ. ಇಂದು ಬೆಂಗಳೂರಿನಲ್ಲಿ (Bengaluru) 10 ಗ್ರಾಂ ಆಭರಣ ಚಿನ್ನದ ಬೆಲೆ ರೂ. 47,775 ಆಗಿದೆ.

 • Share this:

  Gold and Silver Price on May 30: ಚಿನ್ನದ (Gold) ವಿಷಯಕ್ಕೆ ಬಂದಾಗ ಇಂದು ಇದ್ದ ಬೆಲೆ (Price) ನಾಳೆ ಇರಲ್ಲ, ನಾಳೆ ಇದ್ದ ಬೆಲೆ ಮುಂದೊಂದಿನ ಇರಲ್ಲ. ಬೆಳ್ಳಿ ಬಂಗಾರ ದರದಲ್ಲಿ (Silver Price) ಹಾವು-ಏಣಿ ಆಟ ಸಹಜ. ಹೀಗಾಗಿ ಚಿನ್ನ ಖರೀದಿಸುವ ಮುನ್ನ ಬೆಲೆಯನ್ನು ಒಮ್ಮೆ ತಿಳಿದುಕೊಳ್ಳುವುದು ಉತ್ತಮ. ಮಾರುಕಟ್ಟೆಯಲ್ಲಿ (Market) ಮೂರ್ನಾಲ್ಕು ದಿನಗಳಿಂದ ಕೊಂಚ ತಗ್ಗಿದ ಬೆಲೆ ಮತ್ತೆ ಏರಿಕೆಯಾಗಿದೆ. ನಿನ್ನೆ ಒಂದು ಗ್ರಾಂ ಆಭರಣದ ಚಿನ್ನದ ಬೆಲೆ ರೂ. 4,775 ಇದ್ದದ್ದು ಇಂದು ಸಹ 4,775 ರೂಪಾಯಿಯ ಸಹಜ ಸ್ಥಿತಿಯನ್ನು ಕಾಯ್ದುಕೊಂಡು ಬಂದಿದೆ. ಕಳೆದ ಕೆಲ ಸಮಯದಿಂದ ಚಿನ್ನದ ಬೆಲೆಗಳಲ್ಲಿ ಅಲ್ಪ ಪ್ರಮಾಣದ ಏರಿಳಿತಗಳು ಆಗುತ್ತಲೇ ಇದ್ದು ಇದಕ್ಕೆ ಪ್ರಮುಖ ಕಾರಣ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉಂಟಾಗುತ್ತಿರುವ ಕಚ್ಚಾ ತೈಲದಲ್ಲಾಗುತ್ತಿರುವ ಬೆಲೆ ಏರಿಕೆ ಹಾಗೂ ಇತರೆ ಜಾಗತಿಕ ಅಂಶಗಳೇ ಆಗಿವೆ. ಇಂದು ಬೆಂಗಳೂರಿನಲ್ಲಿ (Bengaluru) 10 ಗ್ರಾಂ ಆಭರಣ ಚಿನ್ನದ ಬೆಲೆ ರೂ. 47,775 ಆಗಿದೆ.


  ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳ ಕುರಿತು ಬನ್ನಿ ತಿಳಿದುಕೊಳ್ಳೋಣ…


  ಒಂದು ಗ್ರಾಂ (1GM)
  22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 4,775
  24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,209


  ಎಂಟು ಗ್ರಾಂ (8GM)
  22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 38,200
  24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 41,672


  ಹತ್ತು ಗ್ರಾಂ (10GM)
  22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 47,750
  24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 52,090


  ನೂರು ಗ್ರಾಂ (100GM)
  22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 4,77,500
  24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,20,900


  ಇದನ್ನೂ ಓದಿ: Gold Hallmark: ಆಭರಣ ಖರೀದಿ ಮಾಡಬೇಕೇ? ಜೂನ್ 1ರಿಂದ ಹೊಸ ನಿಯಮ ಬರಲಿದೆ ಗಮನಿಸಿ


  ಬೆಂಗಳೂರಿನಲ್ಲಿ ಇಂದು ಎಷ್ಟಿದೆ ಬಂಗಾರದ ಬೆಲೆ?


  ರಾಜಧಾನಿ ನಗರ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 47,750 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 47,800, ರೂ. 47,750, ರೂ. 47,750 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 47,750 ರೂ. ಆಗಿದೆ.


  ಇಂದಿನ ಬೆಳ್ಳಿ ದರ


  ಒಂದು ವಾರದಿಂದ ಭಾರತದಲ್ಲಿ ಬೆಳ್ಳಿ ದರದಲ್ಲಿ ಏರಿಳಿತ ಕಂಡುಬಂದಿದೆ. ನಿನ್ನೆಗೆ ಹೋಲಿಸಿದರೆ ಇಂದು ಬೆಳ್ಳಿ ದರದಲ್ಲಿ ಅತ್ಯಲ್ಪ ಇಳಿಕೆಯಾಗಿದೆ. ಇಂದು ಭಾರತದ ಮಾರುಕಟ್ಟೆಯಲ್ಲಿ ಒಂದು ಕೆಜಿಗೆ ಬೆಳ್ಳಿ ಬೆಲೆ 62,200 ರೂ. ಆಗಿದೆ. ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಅವಲಂಬಿತವಾಗಿದ್ದು ಏರಿಕೆ, ಇಳಿಕೆಗಳು ಆಗುತ್ತಿರುತ್ತವೆ. ಅಲ್ಲದೆ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನವೂ ಸಹ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಲೆ ಇರುತ್ತದೆ.


  ಇದನ್ನೂ ಓದಿ: Microsoft: ಉದ್ಯೋಗಿಗಳ ಸಂಬಳ ಜಾಸ್ತಿ ಮಾಡುತ್ತಂತೆ ಮೈಕ್ರೋಸಾಫ್ಟ್! ಸಿಇಒ ಸತ್ಯ ನಾಡೆಲ್ಲಾ ಘೋಷಣೆ!


  ಬೆಂಗಳೂರಿನಲ್ಲಿ ಎಷ್ಟಿದೆ ಸಿಲ್ವರ್ ರೇಟ್?


  ಪ್ರಸ್ತುತ, ಬೆಂಗಳೂರು ನಗರದಲ್ಲಿ ಇಂದು 10gm, 100gm, 1000gm (1ಕೆಜಿ) ಬೆಳ್ಳಿ ದರಗಳು ಕ್ರಮವಾಗಿ ರೂ. 670, ರೂ. 6,700 ಹಾಗೂ ರೂ. 67,000 ಗಳಾಗಿವೆ. ಇನ್ನುಳಿದಂತೆ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 67,000 ಆಗಿದ್ದರೆ ದೆಹಲಿಯಲ್ಲಿ ರೂ. 62,200 ಮುಂಬೈನಲ್ಲಿ ರೂ. 62,200 ಹಾಗೂ ಕೊಲ್ಕತ್ತದಲ್ಲೂ ರೂ. 62,200 ಗಳಾಗಿದೆ.

  Published by:Annappa Achari
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು