Gold Price: ವೀಕೆಂಡ್‌ನಲ್ಲೂ ಆಭರಣ ಪ್ರಿಯರಿಗೆ ಬೆಲೆ ಏರಿಕೆ ಬಿಸಿ! ಇಂದು ಮತ್ತಷ್ಟು ತುಟ್ಟಿಯಾಯ್ತು ಚಿನ್ನ-ಬೆಳ್ಳಿ

ನಿನ್ನೆ 24 ಕ್ಯಾರೆಟ್ ಚಿನ್ನದ ಬೆಲೆ 51,980 ರೂ. ಇತ್ತು. ಆದರೆ ಇಂದು 110 ರೂಪಾಯಿ ಏರಿಕೆಯಾಗಿದೆ. ಇಂದಿನ ಬಂಗಾರದ ಬೆಲೆ 52,090 ರೂ. ಆಗಿದೆ. ಇನ್ನು ಬೆಳ್ಳೆ ಬೆಲೆಯೂ 50 ರೂಪಾಯಿ ಏರಿಕೆಯಾಗಿದೆ. ಇಂದು ಭಾರತದ ಮಾರುಕಟ್ಟೆಯಲ್ಲಿ ಒಂದು ಕೆಜಿ ಬೆಳ್ಳಿಗೆ 62,600 ರೂಪಾಯಿ ಆಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  Gold and Silver price on May 29, 2022: ವಾರವೆಲ್ಲ ಚಿನ್ನ (Gold) ಹಾಗೂ ಬೆಳ್ಳಿ (Silver) ದರ ಹಾವು-ಏಣಿ ಆಟ ಆಡಿದ್ದಾಯ್ತು, ಈ ವಾರದ ಅಂತ್ಯದಲ್ಲಾದರೂ (Weekend) ಬೆಲೆ ಕಡಿಮೆ ಆಗುತ್ತೆ ಅಂತ ಆಭರಣ ಪ್ರಿಯರು ನಿರೀಕ್ಷೆ ಮಾಡಿದ್ದರು. ಆದರೆ ಅವರ ನಿರೀಕ್ಷೆ ಹುಸಿಯಾಗಿದೆ. ಇಂದೂ ಕೂಡ ಚಿನ್ನದ ಬೆಲೆ (Gold Price) ಹಾಗೂ ಬೆಳ್ಳಿ ಬೆಲೆಯಲ್ಲಿ (Silver Price) ಏರಿಕೆಯಾಗಿದೆ. ಭಾರತದ ಚಿನ್ನದ ಮಾರುಕಟ್ಟೆಯಲ್ಲಿ (Market) ನಿನ್ನೆ 24 ಕ್ಯಾರೆಟ್ ಚಿನ್ನದ ಬೆಲೆ 51,980 ರೂ. ಇತ್ತು. ಆದರೆ ಇಂದು 110 ರೂಪಾಯಿ ಏರಿಕೆಯಾಗಿದೆ. ಇಂದಿನ ಬಂಗಾರದ ಬೆಲೆ 52,090 ರೂ. ಆಗಿದೆ. ಇನ್ನು ಬೆಳ್ಳೆ ಬೆಲೆಯೂ 50 ರೂಪಾಯಿ ಏರಿಕೆಯಾಗಿದೆ. ಇಂದು ಭಾರತದ ಮಾರುಕಟ್ಟೆಯಲ್ಲಿ ಒಂದು ಕೆಜಿ ಬೆಳ್ಳಿಗೆ 62,600 ರೂಪಾಯಿ ಆಗಿದೆ.

  ಭಾರತದಲ್ಲಿ ಇಂದು ಬಂಗಾರದ ಬೆಲೆ ಎಷ್ಟಿದೆ?

  ಇಂದು ಮೇ 29 ಭಾನುವಾರ ಬೆಳಗಿನ ವೇಳೆಗೆ ದೇಶದ ಚೀನಿವಾರ ಪೇಟೆಯಲ್ಲಿ 24 ಕ್ಯಾರೆಟ್‌ನ 1 ಗ್ರಾಂ ಬಂಗಾರದ ಬೆಲೆ 5,209 ರೂ. ದಾಖಲಾಗಿದೆ. ಹಾಗೆಯೇ 22 ಕ್ಯಾರೆಟ್‌ನ 1 ಗ್ರಾಂ ಬಂಗಾರದ ಬೆಲೆ 4775 ರೂಪಾಯಿ ಇದೆ.

  ಬೆಂಗಳೂರಿನಲ್ಲಿ ಎಷ್ಟಿದೆ ಗೋಲ್ಡ್ ರೇಟ್?

  ಇಂದು ಬೆಂಗಳೂರಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ  47,750 ರೂಪಾಯಿ ಇದ್ದರೆ, ಮಂಗಳೂರಲ್ಲಿ 47,750 ರೂ, ಹಾಗೂ ಮೈಸೂರು- 47,750 ರೂಪಾಯಿ ಇದೆ. ಅದೇ ರೀತಿ ಬೆಂಗಳೂರಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 52,090 ರೂಪಾಯಿ ಇದೆ. ಇನ್ನು ಮಂಗಳೂರು- 52,090 ರೂ, ಮೈಸೂರು- 52,090 ರೂ. ಆಗಿದೆ.

  ಇದನ್ನೂ ಓದಿ: Inflation: ಜೂನ್ ನಿಂದ ಬದಲಾಗ್ತಿವೆ ಈ 5 ನಿಯಮಗಳು; ಇದು ನಿಮ್ಮ ಜೇಬಿನ ಮೇಲೆ ಪರಿಣಾಮ ಬೀರುತ್ತೆ

  ಇತರೇ ಮಹಾನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ?

  24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ ಚೆನ್ನೈ 47,800 ರೂ. ಮುಂಬೈ- 47,750 ರೂ, ದೆಹಲಿ- 47,750 ರೂ, ಕೊಲ್ಕತ್ತಾ- 47,750 ರೂ, ಹೈದರಾಬಾದ್- 47,750 ರೂ, ಕೇರಳ- 47,750 ರೂಪಾಯಿ ಹಾಗೂ ಪುಣೆ- 47,850 ರೂಪಾಯಿ ಬೆಲೆ ಇದೆ. ಇನ್ನು 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ ಚೆನ್ನೈ- 52,150 ರೂ, ಮುಂಬೈ- 52,090 ರೂ, ದೆಹಲಿ- 52,090 ರೂ, ಕೊಲ್ಕತ್ತಾ- 52,090 ರೂ, ಹೈದರಾಬಾದ್- 52,090 ರೂ, ಕೇರಳ- 52,090 ರೂಪಾಯಿ ಹಾಗೂ ಪುಣೆ- 52,190 ರೂಪಾಯಿ ಬೆಲೆ ನಿಗದಿಯಾಗಿದೆ.

  ಇಂದಿನ ಬೆಳ್ಳಿ ಬೆಲೆ ಎಷ್ಟಿದೆ?

  ನಿನ್ನೆ 650 ರೂ. ಏರಿಕೆಯಾಗಿದ್ದ ಬೆಳ್ಳಿ ಬೆಲೆ ಇಂದು ಕೇವಲ 50 ರೂ. ಏರಿಕೆಯಾಗಿದೆ. ಭಾರತದಲ್ಲಿ ನಿನ್ನೆ 1 ಕೆಜಿ ಬೆಳ್ಳಿಯ ದರ 62.150 ರೂ. ಇದ್ದುದು ಇಂದು 62.200 ರೂ. ಆಗಿದೆ. ಇನ್ನು ಬೆಂಗಳೂರು- 67,000 ರೂ. ಮೈಸೂರು- 67,000 ರೂ.. ಮಂಗಳೂರು- 67,000 ರೂ.  ಮುಂಬೈ- 62,200 ರೂ, ಚೆನ್ನೈ- 67,000 ರೂ. ದೆಹಲಿ- 62.200 ರೂ, ಹೈದರಾಬಾದ್- 67,000 ರೂ, ಕೊಲ್ಕತ್ತಾ- 62,200 ರೂಪಾಯಿ ಬೆಲೆ ನಿಗದಿಯಾಗಿದೆ.

  ಇದನ್ನೂ ಓದಿ: Amul Product: ಮಾರುಕಟ್ಟೆಗೆ ಬರಲಿದೆ ಅಮುಲ್ ಗೋಧಿ ಹಿಟ್ಟು; ಬೆಲೆ ಎಷ್ಟು ಗೊತ್ತಾ?

  ಒಟ್ಟಾರೆ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ಸೇರಿ ಹಲವು ಕಾರಣಗಳಿಂದ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ. ಷೇರು ಮಾರುಕಟ್ಟೆಯ ಪ್ರಭಾವದಿಂದಲೂ ಚಿನ್ನದ ಬೆಲೆ ಏರಿಕೆ-ಇಳಿಕೆ ಆಗಬಹುದು.  ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವನ್ನು ಆಧರಿಸಿ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ.
  Published by:Annappa Achari
  First published: