Gold and Silver price on May 18, 2022: ದೇಶದಲ್ಲಿ ನಿರಂತರವಾಗಿ ಚಿನ್ನದ ಬೆಲೆಯು (Gold Price) ಕುಸಿತ ಕಾಣುತ್ತಿತ್ತು. ಆದರೆ ಇಂದು ಮಾರುಕಟ್ಟೆಯಲ್ಲಿ (Market) ಚಿನ್ನದ ಬೆಲೆಯಲ್ಲಿ ಕೊಂಚ ಹೆಚ್ಚಳವಾಗಿದೆ. ನಿನ್ನೆಯಷ್ಟೆ ರೂ. 4,625 ಆಗಿದ್ದ ಒಂದು ಗ್ರಾಂ ಆಭರಣ (Jewellery) ಚಿನ್ನದ ಬೆಲೆಯು ಇಂದು 4,655 ರೂಪಾಯಿ ಆಗಿದೆ. ಎರಡು ದಿನದಿಂದ ಯಥಾಸ್ಥಿತಿ ಕಾಯ್ದಿರಿಸಿಕೊಂಡಿದ್ದ ಚಿನ್ನ ಇಂದು ಬೆಲೆ ಏರಿಕೆ ಕಂಡಿದೆ. ಬಂಗಾರದಂತೆ ಬೆಳ್ಳಿ ಬೆಲೆಯಲ್ಲೂ (Silver Price) ಏರಿಕೆ ಹೆಚ್ಚಳವಾಗಿದೆ. ನಿನ್ನೆ ಒಂದು ಕೆಜಿಗೆ ಬೆಳ್ಳಿ ಬೆಲೆ 59,400 ಇದ್ದದ್ದು ಇಂದು ಸಹ ರೂ. 61,550 ಆಗಿದೆ. ಪ್ರಸಕ್ತ ನಡೆಯುತ್ತಿರುವ ಹಣದುಬ್ಬರ, ಕೆಲವು ರಾಷ್ಟ್ರಗಳಲ್ಲಿ, ಯುದ್ಧ (War), ಆರ್ಥಿಕ ಬಿಕ್ಕಟ್ಟು, ಜಾಗತಿಕ ಬೆಲೆ ಏರಿಕೆ ಅಂಶಗಳು ಚಿನ್ನ ಹಾಗೂ ಬೆಳ್ಳಿ ದರಗಳ ಮೇಲೆ ಪ್ರಭಾವ ಬೀರುತ್ತಿವೆ.
ಇಂದು ಎಷ್ಟಿದೆ ಬಂಗಾರದ ಬೆಲೆ?
ಪೆಟ್ರೋಲ್ ಡೀಸೆಲ್ ಗಳಂತೆ ಬಂಗಾರದ ಬೆಲೆಗಳಲ್ಲೂ ಆಗಾಗ ವ್ಯತ್ಯಾಸಗಳು ಆಗುತ್ತಲೇ ಇರುತ್ತವೆ. ದೇಶದಲ್ಲಿ ಇಂದು 10 ಗ್ರಾಂ ಚಿನ್ನದ ಬೆಲೆ ರೂ. 46,550 ಆಗಿದೆ.
ಒಂದು ಗ್ರಾಂ (1GM)
22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 4,655
24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,078
ಎಂಟು ಗ್ರಾಂ (8GM)
22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 37,240
24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 40,624
ಹತ್ತು ಗ್ರಾಂ (10GM)
22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 46,550
24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 50,780
ನೂರು ಗ್ರಾಂ (100GM)
22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 4,65,500
24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,07,800
ಇದನ್ನೂ ಓದಿ: Petrol-Diesel Price Today: ಹೆಚ್ಚಿನ ಕಡೆಗಳಲ್ಲಿ ಇಂಧನ ಬೆಲೆ ಸ್ಥಿರ, ಎಲ್ಲೆಲ್ಲಿ ಪೆಟ್ರೋಲ್-ಡಿಸೇಲ್ ಬೆಲೆ ಇಳಿಕೆ?
ಬೆಂಗಳೂರಿನಲ್ಲಿ ಬಂಗಾರಕ್ಕೆಷ್ಟು ರೇಟ್?
ರಾಜಧಾನಿ ನಗರ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 46,550 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 47,640, ರೂ. 46,550, ರೂ. 47,550 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 46,550 ರೂ. ಆಗಿದೆ.
ಇಂದಿನ ಬೆಳ್ಳಿ ದರ
ಬಂಗಾರದಂತೆ ಬೆಳ್ಳಿ ಬೆಲೆಯಲ್ಲೂ ಏರಿಕೆ ಹೆಚ್ಚಳವಾಗಿದೆ. ನಿನ್ನೆ ಒಂದು ಕೆಜಿಗೆ ಬೆಳ್ಳಿ ಬೆಲೆ 59,400 ಇದ್ದದ್ದು ಇಂದು ಸಹ ರೂ. 61,550 ಆಗಿದೆ. ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಅವಲಂಬಿತವಾಗಿದ್ದು ಏರಿಕೆ, ಇಳಿಕೆಗಳು ಆಗುತ್ತಿರುತ್ತವೆ. ಅಲ್ಲದೆ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನವೂ ಸಹ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಲೆ ಇರುತ್ತದೆ.
ಇದನ್ನೂ ಓದಿ: Salary Hike: ಲಕ್ಷ ಲಕ್ಷ ಸಂಬಳವನ್ನೂ ಕಣ್ಮುಚ್ಚಿ ಕೊಡೋಕೆ ರೆಡಿ ಇವೆಯಂತೆ ಕಂಪನಿಗಳು!
ಬೆಂಗಳೂರಲ್ಲಿ ಇಂದಿನ ಸಿಲ್ವರ್ ರೇಟ್
ಬೆಂಗಳೂರಿನಲ್ಲಿ ಇಂದು 1gm, 10gm, 100 gm, 1000gm (1ಕೆಜಿ) ಬೆಳ್ಳಿ ದರಗಳು ಕ್ರಮವಾಗಿ ರೂ. 61.55, ರೂ. 615, ಹಾಗೂ ರೂ. 6,115 ಮತ್ತು 61,550 ಇನ್ನುಳಿದಂತೆ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 65,600 ಆಗಿದ್ದರೆ ದೆಹಲಿಯಲ್ಲಿ ರೂ. 61,550 ಮುಂಬೈನಲ್ಲಿ ರೂ. 61,550 ಹಾಗೂ ಕೊಲ್ಕತ್ತದಲ್ಲೂ ರೂ. 61,550 ಗಳಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ