Gold and Silver price on May 15, 2022: ನಿನ್ನೆಗೆ ಹೋಲಿಸಿದರೆ ಇಂದು ಮಾರುಕಟ್ಟೆಯಲ್ಲಿ (Market) ಚಿನ್ನದ ಬೆಲೆಯಲ್ಲಿ (Gold Price) ಮತ್ತೆ ಇಳಿಕೆಯಾಗಿದೆ. ನಿನ್ನೆ 22 ಕ್ಯಾರೆಟ್ನ 10 ಗ್ರಾಂ ಆಭರಣ (Jewellery) ಚಿನ್ನದ ಬೆಲೆ 46,450 ಇತ್ತು. ಇಂದು 46,250 ರೂಪಾಯಿ ಆಗಿದೆ. ಅದೇ ರೀತಿ 24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ ನಿನ್ನೆ 50,670 ರೂಪಾಯಿ ಇತ್ತು. ಇಂದು 50,450 ರೂಪಾಯಿ ಆಗಿದೆ. ಇನ್ನು ಇಂದು ಬೆಳ್ಳಿ ಬೆಲೆಯಲ್ಲಿ ಕೊಂಚ ಏರಿಕೆಯಾಗಿದೆ. ನಿನ್ನೆ ಒಂದು ಕೆಜಿ ಬೆಳ್ಳಿ ಬೆಲೆ 58,700 ರೂ.ಗಳಷ್ಟಿತ್ತು. ಆದರೆ ಇಂದು ಒಂದು ಕೆಜಿ ಬೆಳ್ಳಿಗೆ 63,700 ಆಗಿದೆ. ಕಳೆದ ಮೂರು ದಿನಗಳಿಂದ ಚಿನ್ನದ ಬೆಲೆಯಲ್ಲಿ ಕುಸಿತ ಕಂಡುಬಂದಿತ್ತು. ಇನ್ನು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ (International Market) ಉಂಟಾಗುತ್ತಿರುವ ಕಚ್ಚಾ ತೈಲದಲ್ಲಾಗುತ್ತಿರುವ ಬೆಲೆ ಏರಿಕೆ ಹಾಗೂ ಇತರೆ ಜಾಗತಿಕ ಅಂಶಗಳು ಚಿನ್ನ ಹಾಗೂ ಬೆಳ್ಳಿ ದರಗಳ (Silver Price) ಮೇಲೆ ಪ್ರಭಾವ ಬೀರುತ್ತಿವೆ.
ಇಂದು ಎಷ್ಟಿದೆ ಬಂಗಾರದ ಬೆಲೆ?
ಒಂದು ಗ್ರಾಂ (1GM)
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 4625
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 5045
ಎಂಟು ಗ್ರಾಂ (8GM)
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 37,000
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 40,360
ಹತ್ತು ಗ್ರಾಂ (10GM)
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 46,250
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 50,450
ನೂರು ಗ್ರಾಂ (100GM)
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 4.62, 500
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,04, 500
ಇದನ್ನೂ ಓದಿ: Petrol-Diesel Price Today: ಭಾನುವಾರ ಕೊಂಚ ವ್ಯತ್ಯಾಸಗೊಂಡ ಇಂಧನ ಬೆಲೆ, ಹೀಗಿದೆ ಇಂದಿನ ಪೆಟ್ರೋಲ್-ಡಿಸೇಲ್ ಬೆಲೆ
ಬೆಂಗಳೂರು ಹಾಗೂ ಇತರೇ ನಗರಗಳಲ್ಲಿ ಚಿನ್ನದ ದರ ಎಷ್ಟು?
ರಾಜಧಾನಿ ನಗರ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 46,250 ಆಗಿದ್ದರೆ ಚೆನ್ನೈ, ಮುಂಬೈ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ.47,370, ರೂ. 46,250 ರೂ.ಆಗಿದೆ.
ಇಂದಿನ ಬೆಳ್ಳಿ ದರ ಎಷ್ಚಿದೆ?
ಬೆಂಗಳೂರು ಸೇರಿದಂತೆ ದಕ್ಷಿಣ ಭಾರತದಲ್ಲಿ ಬೆಳ್ಳಿಯಂತಹ ಲೋಹದ ಎರಡನೇ ಅತಿ ದೊಡ್ಡ ಮಾರುಕಟ್ಟೆಯಾಗಿದೆ. ಬೆಂಗಳೂರಿನಲ್ಲಿ ಬೆಳ್ಳಿ ಖರೀದಿಸಲು ಯೋಜಿಸುವಾಗ, ಬ್ರ್ಯಾಂಡೆಡ್ ಆಭರಣಗಳನ್ನು ಮಾರಾಟ ಮಾಡುವ ಪ್ರಮಾಣೀಕೃತ ಆಭರಣ ವ್ಯಾಪಾರಿಗಳನ್ನು ಸಂಪರ್ಕಿಸುವುದು ಉತ್ತಮ. ಬೆಂಗಳೂರಿನಲ್ಲಿ ಹೂಡಿಕೆ ಉದ್ದೇಶಗಳಿಗಾಗಿ ಬೆಳ್ಳಿ ಅತ್ಯಂತ ಜನಪ್ರಿಯ ವಸ್ತು.
ಬೆಂಗಳೂರಲ್ಲಿ ಎಷ್ಚಿದೆ ಸಿಲ್ವರ್ ರೇಟ್?
ನಿನ್ನೆ ಒಂದು ಕೆಜಿ ಬೆಳ್ಳಿ ಬೆಲೆ 58,700 ರೂ.ಗಳಷ್ಟಿತ್ತು. ಆದರೆ ಇಂದು ಒಂದು ಕೆಜಿ ಬೆಳ್ಳಿಗೆ 63,700 ಆಗಿದೆ. ಇಂದು ಬೆಂಗಳೂರಿನಲ್ಲಿ 10 gm ಬೆಳ್ಳಿಗೆ 637, ರೂ, 100 gm ಬೆಳ್ಳಿಗೆ 6,370 ರೂಪಾಯಿ ಹಾಗೂ 1 ಕೆಜಿ ಬೆಳ್ಳಿ ದರ 63,700 ರೂಪಾಯಿ ಆಗಿದೆ.
ಇದನ್ನೂ ಓದಿ: Voter ID Aadhaar Link: ವೋಟರ್ ಐಡಿ-ಆಧಾರ್ ಲಿಂಕ್: ಬಿಗ್ ಅಪ್ಡೇಟ್ ಇಲ್ಲಿದೆ
ಒಟ್ಟಾರೆ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ಸೇರಿ ಹಲವು ಕಾರಣಗಳಿಂದ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ. ಷೇರು ಮಾರುಕಟ್ಟೆಯ ಪ್ರಭಾವದಿಂದಲೂ ಚಿನ್ನದ ಬೆಲೆ ಏರಿಕೆ-ಇಳಿಕೆ ಆಗಬಹುದು. ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವನ್ನು ಆಧರಿಸಿ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ