Gold Price: ಅಲ್ಪ ಬೆಲೆ ಏರಿಕೆ ಕಂಡ ಚಿನ್ನ, ಇಳಿಕೆ ಕಂಡ ಬೆಳ್ಳಿ! ಇಂದಿನ ದರಗಳ ವಿವರ ಹೀಗಿದೆ

ನಿನ್ನೆ ಒಂದು ಗ್ರಾಂ ಆಭರಣ (Jewellery) ಚಿನ್ನದ ಬೆಲೆಯು 4,740 ರೂಪಾಯಿ ಇದ್ದದ್ದು ಇಂದು 4,750 ರೂ. ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉಂಟಾಗುತ್ತಿರುವ ಕಚ್ಚಾ ತೈಲದಲ್ಲಾಗುತ್ತಿರುವ ಬೆಲೆ ಏರಿಕೆ (Price Hike) ಹಾಗೂ ಇತರೆ ಜಾಗತಿಕ ಅಂಶಗಳು ಚಿನ್ನ ಹಾಗೂ ಬೆಳ್ಳಿ ದರಗಳ (Silver Price) ಮೇಲೆ ಪ್ರಭಾವ ಬೀರುತ್ತಿವೆ.

ಚಿನ್ನದ ಆಭರಣಗಳ ಸಂಗ್ರಹ ಚಿತ್ರ

ಚಿನ್ನದ ಆಭರಣಗಳ ಸಂಗ್ರಹ ಚಿತ್ರ

  • Share this:
    Gold and Silver Price on May 10, 2022: ನಿನ್ನೆಗೆ ಹೋಲಿಸಿದರೆ ಭಾರತೀಯ ಇಂದು ಮಾರುಕಟ್ಟೆಯಲ್ಲಿ (India Market) ಚಿನ್ನದ ಬೆಲೆಯಲ್ಲಿ (Gold Price) ಸ್ವಲ್ಪ ಹೆಚ್ಚಳವಾಗಿದೆ. ನಿನ್ನೆ ಒಂದು ಗ್ರಾಂ ಆಭರಣ (Jewellery) ಚಿನ್ನದ ಬೆಲೆಯು 4,740 ರೂಪಾಯಿ ಇದ್ದದ್ದು ಇಂದು 4,750 ರೂ. ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉಂಟಾಗುತ್ತಿರುವ ಕಚ್ಚಾ ತೈಲದಲ್ಲಾಗುತ್ತಿರುವ ಬೆಲೆ ಏರಿಕೆ (Price Hike) ಹಾಗೂ ಇತರೆ ಜಾಗತಿಕ ಅಂಶಗಳು ಚಿನ್ನ ಹಾಗೂ ಬೆಳ್ಳಿ ದರಗಳ (Silver Price) ಮೇಲೆ ಪ್ರಭಾವ ಬೀರುತ್ತಿವೆ.

    ಇಂದು ಎಷ್ಟಿದೆ ಬಂಗಾರದ ಬೆಲೆ?

    ಇನ್ನು ಪೆಟ್ರೋಲ್ ಡೀಸೆಲ್ ಗಳಂತೆ ಬಂಗಾರದ ಬೆಲೆಗಳಲ್ಲೂ ಆಗಾಗ ವ್ಯತ್ಯಾಸಗಳು ಆಗುತ್ತಲೇ ಇರುತ್ತವೆ. ದೇಶದಲ್ಲಿ ಇಂದು 10 ಗ್ರಾಂ ಆಭರಣ ಚಿನ್ನದ ಬೆಲೆ ರೂ. 47,500 ಆಗಿದೆ. ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳ ಕುರಿತು ಬನ್ನಿ ಒಂದು ಪಕ್ಷಿ ನೋಟ ಬೀರೋಣ.

    ಒಂದು ಗ್ರಾಂ (1GM)

    22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 4,750

    24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,181

    ಎಂಟು ಗ್ರಾಂ (8GM)

    22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 38,000

    24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 41,448

    ಹತ್ತು ಗ್ರಾಂ (10GM)

    22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 47,500

    24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 51,810

    ನೂರು ಗ್ರಾಂ (100GM)

    22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 4,75,000

    24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,18,100

    ರಾಜಧಾನಿ ನಗರ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 47,500 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 48,950, ರೂ. 47,500, ರೂ. 47,500 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 47,500 ರೂ. ಆಗಿದೆ.

    ಇದನ್ನೂ ಓದಿ: Interest Rate Hiked: ರೆಪೋ ರೇಟ್ ಏರಿಕೆ ಎಫೆಕ್ಟ್! ಯಾವ ಬ್ಯಾಂಕ್​ಗಳ ಬಡ್ಡಿದರ ಹೆಚ್ಚಳವಾಗಿದೆ ಚೆಕ್ ಮಾಡಿ

    ಇಂದಿನ ಬೆಳ್ಳಿ ದರ

    ಒಂದು ವಾರದಿಂದ ಭಾರತದಲ್ಲಿ ಬೆಳ್ಳಿ ದರದಲ್ಲಿ ಏರಿಳಿತ ಕಂಡುಬಂದಿದೆ. ನಿನ್ನೆಗೆ ಹೋಲಿಸಿದರೆ ಇಂದು ಬೆಳ್ಳಿ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಒಂದು ಕೆಜಿಗೆ ಬೆಳ್ಳಿ ಬೆಲೆ ಇಂದು ರೂ. 62,500 ಆಗಿದೆ. ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಅವಲಂಬಿತವಾಗಿದ್ದು ಏರಿಕೆ, ಇಳಿಕೆಗಳು ಆಗುತ್ತಿರುತ್ತವೆ.

    ಬೆಂಗಳೂರಲ್ಲಿ ಎಷ್ಟಿದೆ ಇಂದು ಬೆಳ್ಳಿ ದರ?

    ಬೆಳ್ಳಿ ದರ ನಿನ್ನೆಗೆ ಹೋಲಿಸಿದರೆ ಅಲ್ಪ ಇಳಿತ ಕಂಡುಬಂದಿದೆ. ಪ್ರಸ್ತುತ, ನಗರದಲ್ಲಿ ಇಂದು 10gm, 100gm, 1000gm (1ಕೆಜಿ) ಬೆಳ್ಳಿ ದರಗಳು ಕ್ರಮವಾಗಿ ರೂ. 665, ರೂ. 6,650 ಹಾಗೂ ರೂ. 66,500 ಗಳಾಗಿವೆ. ಇನ್ನುಳಿದಂತೆ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 66,500 ಆಗಿದ್ದರೆ ದೆಹಲಿಯಲ್ಲಿ ರೂ. 62,500 ಮುಂಬೈನಲ್ಲಿ ರೂ. 62,500 ಹಾಗೂ ಕೊಲ್ಕತ್ತದಲ್ಲೂ ರೂ. 62,500 ಗಳಾಗಿದೆ.

    ಇದನ್ನೂ ಓದಿ: Startup Fund Raise: ನಿಮ್ಮ ಕನಸಿನ ಸ್ಟಾರ್ಟ್​ಅಪ್​ಗೆ ಫಂಡ್ ಸಂಗ್ರಹಿಸೋದು ಹೇಗೆ?


    ಒಟ್ಟಾರೆ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ಸೇರಿ ಹಲವು ಕಾರಣಗಳಿಂದ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ. ಷೇರು ಮಾರುಕಟ್ಟೆಯ ಪ್ರಭಾವದಿಂದಲೂ ಚಿನ್ನದ ಬೆಲೆ ಏರಿಕೆ-ಇಳಿಕೆ ಆಗಬಹುದು.  ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವನ್ನು ಆಧರಿಸಿ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ.

    Published by:Annappa Achari
    First published: