Gold Price: ಬಂಗಾರ ಪ್ರಿಯರಿಗೆ ಶನಿವಾರದ ಶಾಕ್! ಇಂದು ಚಿನ್ನ-ಬೆಳ್ಳಿ ಬೆಲೆಯಲ್ಲಿ ಏರಿಕೆ

ಇಂದು ಚಿನ್ನದ ದರ (Gold Price) ಹಾಗೂ ಬೆಳ್ಳಿ ದರ (Silver Price) ಎರಡೂ ಏರಿಕೆಯಾಗಿದೆ. ಭಾರತದ ಚೀನಿವಾರ ಪೇಟೆಯಲ್ಲಿಂದು ಚಿನ್ನದ ಬೆಲೆ 230 ರೂಪಾಯಿ ಏರಿಕೆಯಾಗಿದ್ದರೆ, ಬೆಳ್ಳೆ ಬೆಲೆಯಲ್ಲಿ 250 ರೂಪಾಯಿ ಹೆಚ್ಚಾಗಿದೆ.

ಬಂಗಾರದ ಆಭರಣಗಳ ಸಂಗ್ರಹ ಚಿತ್ರ

ಬಂಗಾರದ ಆಭರಣಗಳ ಸಂಗ್ರಹ ಚಿತ್ರ

  • Share this:
Gold and Silver price on June 18, 2022: ಆಭರಣ ಪ್ರಿಯರಿಗೆ ಇಂದು ಶಾಕ್ (Shock) ಎದುರಾಗಿದೆ. ವೀಕೆಂಡ್‌ನಲ್ಲಿ (Weekend) ಸ್ವಲ್ಪ ಬೆಳ್ಳಿ (Silver), ಬಂಗಾರ (Gold) ಖರೀದಿ ಮಾಡಬೇಕು ಎಂದುಕೊಂಡವರಿಗೆ ಬೆಲೆ ಏರಿಕೆಯ (Price Hike) ಬಿಸಿ ತಟ್ಟಿದೆ. ಯಾಕೆಂದ್ರೆ ಇಂದು ಚಿನ್ನದ ದರ (Gold Price) ಹಾಗೂ ಬೆಳ್ಳಿ ದರ (Silver Price) ಎರಡೂ ಏರಿಕೆಯಾಗಿದೆ. ಭಾರತದ ಚೀನಿವಾರ ಪೇಟೆಯಲ್ಲಿಂದು ಚಿನ್ನದ ಬೆಲೆ 230 ರೂಪಾಯಿ ಏರಿಕೆಯಾಗಿದ್ದರೆ, ಬೆಳ್ಳೆ ಬೆಲೆಯಲ್ಲಿ 250 ರೂಪಾಯಿ ಹೆಚ್ಚಾಗಿದೆ. ಇನ್ನು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ (International Market) ಉಂಟಾಗುತ್ತಿರುವ ಕಚ್ಚಾ ತೈಲದಲ್ಲಾಗುತ್ತಿರುವ ಬೆಲೆ ಏರಿಕೆ ಹಾಗೂ ಇತರೆ ಜಾಗತಿಕ ಅಂಶಗಳು ಚಿನ್ನ ಹಾಗೂ ಬೆಳ್ಳಿ ದರಗಳ (Silver Price) ಮೇಲೆ ಪ್ರಭಾವ ಬೀರುತ್ತಿವೆ.

ಭಾರತದಲ್ಲಿ ಎಷ್ಟಿದೆ ಇಂದಿನ ಬಂಗಾರದ ಬೆಲೆ?

ಭಾರತದ ಮಾರುಕಟ್ಟೆಯಲ್ಲಿ ಇಂದು ಬಂಗಾರದ ಬೆಲೆಯಲ್ಲಿ ಏರಿಕೆಯಾಗಿದೆ. ನಿನ್ನೆ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 51,870 ರೂ. ಇತ್ತು. ಆದರೆ ಇಂದು ಅದೇ ಬಂಗಾರಕ್ಕೆ 52,100 ರೂಪಾಯಿ ಬೆಲೆ ಇದೆ. ಹಾಗೇ ನಿನ್ನೆ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 47,550 ರೂ. ಇತ್ತು. ಇಂದು ಬೆಲೆ ಏರಿಕೆಯಾಗಿ, 47,750 ರೂಪಾಯಿ ನಿಗದಿಯಾಗಿದೆ.

ಬೆಂಗಳೂರಿನಲ್ಲಿ ಇಂದಿನ ಬಂಗಾರದ ಬೆಲೆ

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಬಂಗಾರದ ಬೆಲೆ ಬೆಂಗಳೂರು- 47,780 ರೂಪಾಯಿ ಇದೆ. ಹಾಗೆಯೇ ಮಂಗಳೂರು - 47,780 ರೂ. ಹಾಗೂ  ಮೈಸೂರು - 47,780 ರೂಪಾಯಿ ಬೆಲೆ ಇದೆ. ಇನ್ನು ಬೆಂಗಳೂರಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಬಂಗಾರದ ಬೆಲೆ 52,120 ರೂ. ಇದ್ದರೆ, ಮಂಗಳೂರು -  52,100 ರೂ. ಹಾಗೂ ಮೈಸೂರು- 52,100 ರೂಪಾಯಿ ಬೆಲೆ ನಿಗದಿಯಾಗಿದೆ.

ಇದನ್ನೂ ಓದಿ: Gold: ಬ್ರೆಡ್‌ನ ಬದಲು ಚಿನ್ನ ಕೊಟ್ಟ ಮಹಿಳೆ, ಗಟ್ಟಿಯಾಗಿದೆ ತಿನ್ನೋದಕ್ಕೆ ಆಗಲ್ಲ ಅಂತ ಎಸೆದು ಹೋದ ಭಿಕ್ಷುಕಿ!

ಇತರೇ ನಗರಗಳಲ್ಲಿ ಎಷ್ಟಿದೆ ಗೋಲ್ಡ್ ರೇಟ್?

ಇನ್ನು 22 ಕ್ಯಾರೆಟ್‌ನ 10 ಗ್ರಾಂ ಬಂಗಾರಕ್ಕೆ ಚೆನ್ನೈ- 47,850 ರೂ. ಮುಂಬೈ- 47,750 ರೂ, ದೆಹಲಿ- 47,780 ರೂ, ಕೊಲ್ಕತ್ತಾ- 47,780 ರೂ, ಹೈದರಾಬಾದ್- 47,750 ರೂ, ಕೇರಳ- 47,750 ರೂ, ಪುಣೆ- 47,820 ರೂಪಾಯಿ ಬೆಲೆ ಇದೆ. ಹಾಗೆಯೇ 24 ಕ್ಯಾರೆಟ್‌ನ 10 ಗ್ರಾಂ ಬಂಗಾರಕ್ಕೆ ಚೆನ್ನೈ- 52.180 ರೂ, ಮುಂಬೈ- 52,100 ರೂ, ದೆಹಲಿ- 52,120 ರೂ, ಕೊಲ್ಕತ್ತಾ- 52,100 ರೂ, ಹೈದರಾಬಾದ್- 52,100 ರೂ, ಕೇರಳ- 52,100 ರೂಪಾಯಿ ಹಾಗೂ ಪುಣೆ - 52,150 ರೂಪಾಯಿ ಬೆಲೆ ಫಿಕ್ಸ್ ಆಗಿದೆ.

ಇಂದು ಎಷ್ಟಿದೆ ಬೆಳ್ಳಿ ಬೆಲೆ?

ಭಾರತದ ಮಾರುಕಟ್ಟೆಯಲ್ಲಿ ಇಂದು ಬೆಳ್ಳಿ ದುಬಾರಿಯಾಗಿದೆ. ಇಂದು 350 ರೂ. ಏರಿಕೆಯಾಗಿ, ಒಂದು ಕೆಜಿ ಬೆಳ್ಳಿಗೆ 61,500 ರೂ. ಆಗಿದೆ. ನಿನ್ನೆ ಕೆಜಿ ಬೆಳ್ಳಿಗೆ 61,150 ರೂಪಾಯಿ ಬೆಲೆ ಇತ್ತು.

ಪ್ರಮುಖ ನಗರಗಳಲ್ಲಿ ಇಂದಿನ ಸಿಲ್ವರ್ ರೇಟ್

ಇನ್ನು ಇಂದು 1 ಕೆಜಿ ಬೆಳ್ಳಿಗೆ ಬೆಂಗಳೂರು -66,000 ರೂ, ಮೈಸೂರು- 66,000 ರೂ.. ಮಂಗಳೂರು- 66,000 ರೂ., ಮುಂಬೈ- 61,500 ರೂ, ಚೆನ್ನೈ- 66,000 ರೂ, ದೆಹಲಿ- 61,500 ರೂ. ಹೈದರಾಬಾದ್- 66,000 ರೂ. ಕೊಲ್ಕತ್ತಾ- 61.500 ರೂ. ಬೆಲೆ ಫಿಕ್ಸ್ ಆಗಿದೆ.

ಇದನ್ನೂ ಓದಿ: WhatsApp Scam: ವಾಟ್ಸ್​ಆ್ಯಪ್ ವಂಚನೆ! ಹಣ ಕಳೆದುಕೊಳ್ಬೇಡಿ ಹುಷಾರು

ಒಟ್ಟಾರೆ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ಸೇರಿ ಹಲವು ಕಾರಣಗಳಿಂದ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ. ಷೇರು ಮಾರುಕಟ್ಟೆಯ ಪ್ರಭಾವದಿಂದಲೂ ಚಿನ್ನದ ಬೆಲೆ ಏರಿಕೆ-ಇಳಿಕೆ ಆಗಬಹುದು.  ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವನ್ನು ಆಧರಿಸಿ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ.
Published by:Annappa Achari
First published: