Gold Price: ಚಿನ್ನ ಖರೀದಿಸುವ ಮುನ್ನ ನೂರು ಬಾರಿ ಯೋಚಿಸಿದ್ರೆ ಚೆನ್ನ ! ಇಂದು ಬೆಳ್ಳಿ-ಬಂಗಾರದ ಬೆಲೆಯಲ್ಲಿ ಏರಿಕೆ

ನಿನ್ನೆ ಕೊಂಚ ಇಳಿಕೆ ಕಂಡಿದ್ದ ಬಂಗಾರ ಹಾಗೂ ಬೆಳ್ಳಿ ಬೆಲೆಯಲ್ಲಿ ಇಂದು ಮತ್ತೆ ಏರಿಕೆಯಾಗಿದೆ. ಇಂದು ಭಾರತದ ಮಾರುಕಟ್ಟೆಯಲ್ಲಿ 24 ಕ್ಯಾರೆಟ್‌ನ 1 ಗ್ರಾಂ ಬಂಗಾರದ ಬೆಲೆ 5,275 ರೂ. ಆಗಿದೆ. ಇನ್ನು ದೇಶದಲ್ಲಿ ಬೆಳ್ಳಿ ಬೆಲೆ ಒಂದು ಕೆಜಿಗೆ 62,000 ರೂಪಾಯಿ ದಾಖಲಾಗಿದೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Gold and Silver price on June 12, 2022: old and Silver Price on June 11, 2022: ಕಳೆದ ಕೆಲ ಸಮಯದಿಂದ ಚಿನ್ನದ ಬೆಲೆಗಳಲ್ಲಿ (Gold Price) ಅಲ್ಪ ಪ್ರಮಾಣದ ಏರಿಳಿತಗಳು ಆಗುತ್ತಲೇ ಇದ್ದು ಇದಕ್ಕೆ ಪ್ರಮುಖ ಕಾರಣ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ (International Market) ಉಂಟಾಗುತ್ತಿರುವ ಕಚ್ಚಾ ತೈಲ (Crude oil) ದಲ್ಲಾಗುತ್ತಿರುವ ಬೆಲೆ ಏರಿಕೆ (Price hike) ಹಾಗೂ ಇತರೆ ಜಾಗತಿಕ ಅಂಶಗಳೇ ಆಗಿವೆ. ನಿನ್ನೆ ಕೊಂಚ ಇಳಿಕೆ ಕಂಡಿದ್ದ ಬಂಗಾರ ಹಾಗೂ ಬೆಳ್ಳಿ ಬೆಲೆಯಲ್ಲಿ ಇಂದು ಮತ್ತೆ ಏರಿಕೆಯಾಗಿದೆ. ಇಂದು ಭಾರತದ ಮಾರುಕಟ್ಟೆಯಲ್ಲಿ 24 ಕ್ಯಾರೆಟ್‌ನ 1 ಗ್ರಾಂ ಬಂಗಾರದ ಬೆಲೆ 5,275 ರೂ. ಆಗಿದೆ. ಇನ್ನು ದೇಶದಲ್ಲಿ ಬೆಳ್ಳಿ ಬೆಲೆ ಒಂದು ಕೆಜಿಗೆ 62,000 ರೂಪಾಯಿ ದಾಖಲಾಗಿದೆ. 

ಭಾರತದ ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ಬೆಲೆ

ಭಾರತದ ಮಾರುಕಟ್ಟೆಯಲ್ಲಿ 1 ಗ್ರಾಂ (24 ಕ್ಯಾರೆಟ್‌) ಬಂಗಾರದ ಬೆಲೆ 5,275 ರೂಪಾಯಿ ಇದೆ. ಹಾಗೆಯೇ 24 ಕ್ಯಾರೆಟ್‌ನ 1 ಗ್ರಾಂ ಬಂಗಾರದ ಬೆಲೆ 52,82 ರೂಪಾಯಿ ನಿಗದಿಯಾಗಿದೆ.

ಬೆಂಗಳೂರು ಹಾಗೂ ಇತರೆಡೆ ಎಷ್ಟಿದೆ ಗೋಲ್ಡ್ ರೇಟ್?

ಇಂದು ಬೆಂಗಳೂರಿನಲ್ಲಿಯೂ 1 ಗ್ರಾಂ (24 ಕ್ಯಾರೆಟ್‌) ಬಂಗಾರಕ್ಕೆ 5,275 ರೂಪಾಯಿ ನಿಗದಿಯಾಗಿದೆ. ಇನ್ನು ಬೆಂಗಳೂರು: 48,350 (22 ಕ್ಯಾರೆಟ್‌) - 52,750 (24 ಕ್ಯಾರೆಟ್‌), ಮಂಗಳೂರು: 48,350 (22 ಕ್ಯಾರೆಟ್‌) - 52,750 (24 ಕ್ಯಾರೆಟ್‌), ಮೈಸೂರು: 48,350 (22 ಕ್ಯಾರೆಟ್‌) - 52,750 (24 ಕ್ಯಾರೆಟ್‌) ಬೆಲೆ ನಿಗದಿಯಾಗಿದೆ.

ಇದನ್ನೂ ಓದಿ: Petrol-Diesel Price Today: 12 ಜಿಲ್ಲೆಗಳಲ್ಲಿ ಪೆಟ್ರೋಲ್ ಬೆಲೆ ವ್ಯತ್ಯಾಸವಾಗಿಲ್ಲ! ಇಂದಿನ ಪೆಟ್ರೋಲ್-ಡಿಸೇಲ್ ದರ ಹೀಗಿದೆ ನೋಡಿ

ಪ್ರಮುಖ ನಗರಗಳಲ್ಲಿ ಎಷ್ಟಿದೆ ಬಂಗಾರದ ಬೆಲೆ?

ಇನ್ನು ಮುಂಬೈ: 48,350 (22 ಕ್ಯಾರೆಟ್‌) - 52,750 (24 ಕ್ಯಾರೆಟ್‌), ಚೆನ್ನೈ: 48,420 (22 ಕ್ಯಾರೆಟ್‌) - 52,820 (24 ಕ್ಯಾರೆಟ್‌), ದೆಹಲಿ 48,350 (22 ಕ್ಯಾರೆಟ್) - 52,750 (24 ಕ್ಯಾರೆಟ್‌), ಹೈದರಾಬಾದ್‌: 48,350 (22 ಕ್ಯಾರೆಟ್‌) - ₹52,750 (24 ಕ್ಯಾರೆಟ್‌), ಕೋಲ್ಕತಾ: 48,350 (22 ಕ್ಯಾರೆಟ್‌) - 52,750 (24 ಕ್ಯಾರೆಟ್‌) ಬೆಲೆ ಇದೆ.

ಇಂದು ಭಾರತದಲ್ಲಿ ಎಷ್ಟಿದೆ ಸಿಲ್ವರ್ ರೇಟ್?

ಭಾರತದ ಮಾರುಕಟ್ಟೆಯಲ್ಲಿ ಮೊನ್ನೆ 1 ಕೆಜಿ ಬೆಳ್ಳಿಯ ದರ 62,200 ರೂಪಾಯಿ ಇತ್ತು. ನಿನ್ನೆ ಕೊಂಚ ಇಳಿಕೆಯಾಗಿ 61,000 ರೂಪಾಯಿ ಬೆಲೆ ನಿಗದಿಯಾಗಿತ್ತು. ಆದರೆ ಇಂದು ಬೆಳ್ಳಿ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದೆ. ಇಂದು ಒಂದು ಕೆಜಿ ಬೆಳ್ಳಿಗೆ 62,000 ರೂಪಾಯಿ ಬೆಲೆ ನಿಗದಿಯಾಗಿದೆ.

ಬೆಂಗಳೂರು ಹಾಗೂ ಇತರೆಡೆ ಇಂದಿನ ಬೆಳ್ಳಿ ಬೆಲೆ ಎಷ್ಟು?

ಇಂದು ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 67,000 ರೂ. ಇದೆ. ಇನ್ನು ಚೆನ್ನೈ, ವಿಜಯವಾಡ, ಹೈದರಾಬಾದ್, ವಿಶಾಖಪಟ್ಟಣಂನಲ್ಲಿಯೂ ಒಂದು ಕೆಜಿ ಬೆಳ್ಳಿ ಬೆಲೆ 67,000 ರೂ. ನಿಗದಿಯಾಗಿದೆ.

ಇದನ್ನೂ ಓದಿ: Credit Cards: ಕ್ರೆಡಿಟ್ ಕಾರ್ಡ್ ಬಳಕೆದಾರರೇ ಎಚ್ಚರ; ಈ ಸಲಹೆಗಳನ್ನ ಪಾಲಿಸಿ ಹಣ ಉಳಿಸಿ

ಒಟ್ಟಾರೆ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ಸೇರಿ ಹಲವು ಕಾರಣಗಳಿಂದ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ. ಷೇರು ಮಾರುಕಟ್ಟೆಯ ಪ್ರಭಾವದಿಂದಲೂ ಚಿನ್ನದ ಬೆಲೆ ಏರಿಕೆ-ಇಳಿಕೆ ಆಗಬಹುದು.  ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವನ್ನು ಆಧರಿಸಿ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ.
Published by:Annappa Achari
First published: