Gold and Silver price, July 23, 2022: ನಿನ್ನೆಗೆ ಹೋಲಿಸಿದರೆ ಇಂದು ಭಾರತದ ಮಾರುಕಟ್ಟೆಯಲ್ಲಿ (Indian Market) ಚಿನ್ನದ ಬೆಲೆಯಲ್ಲಿ (Gold Price) ಸ್ವಲ್ಪ ಏರಿಕೆಯಾಗಿದೆ. ಈ ಮೂಲಕ ಇಂದು ವೀಕೆಂಡ್ನಲ್ಲಿ ಆಭರಣ ಖರೀದಿಸಬೇಕು ಎಂದುಕೊಂಡಿದ್ದ ಆಭರಣ ಪ್ರಿಯರಿಗೆ ಶಾಕ್ ಕೊಟ್ಟಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ (International Market) ಉಂಟಾಗುತ್ತಿರುವ ಕಚ್ಚಾ ತೈಲದಲ್ಲಾಗುತ್ತಿರುವ ಬೆಲೆ ಏರಿಕೆ ಹಾಗೂ ಇತರೆ ಜಾಗತಿಕ ಅಂಶಗಳು ಚಿನ್ನ ಹಾಗೂ ಬೆಳ್ಳಿ ದರಗಳ (Silver Price) ಮೇಲೆ ಪ್ರಭಾವ ಬೀರುತ್ತಿವೆ. ಹೀಗಾಗಿ ಇಂದು ಬಂಗಾರದ ದರ ಏರಿಕೆಯಾಗಿದೆ. ಆದರೆ ಬೆಳ್ಳಿ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದ್ದು, ಆಭರಣ ಪ್ರಿಯರಿಗೆ ಸಮಾಧಾನ ತಂದಿದೆ. ಭಾರತವು ಚಿನ್ನದ ಮೇಲಿನ ಆಮದು ಸುಂಕ ಹೆಚ್ಚಿಸಿದ್ದು ಮುಂಬರುವ ದಿನಗಳಲ್ಲಿ ಚಿನ್ನ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಚಿನ್ನದ ದರ ಏರಿಕೆ, ಬೆಳ್ಳಿ ಬೆಲೆ ಸ್ವಲ್ಪ ಇಳಿಕೆ
ಇಂದು 10 ಗ್ರಾಂ ಚಿನ್ನದ ಬೆಲೆ 440 ರೂ. ಹೆಚ್ಚಳವಾಗಿದೆ. ದೇಶದಲ್ಲಿ ಇಂದು 24 ಕ್ಯಾರೆಟ್ನ 10 ಗ್ರಾಂ ಬಂಗಾರದ ಬೆಲೆ 50,620 ರೂಪಾಯಿ ಇದೆ. ಬೆಳ್ಳಿ ಬೆಲೆ ನಿನ್ನೆ 300 ರೂ. ಕುಸಿತವಾಗಿತ್ತು. ಇಂದು ಮತ್ತೆ ಬೆಳ್ಳಿ ದರದಲ್ಲಿ 200 ರೂ. ಕುಸಿತವಾಗಿದೆ. ಇಂದು ಒಂದು ಕೆಜಿ ಬೆಳ್ಳಿ ಬೆಲೆ 55,400 ರೂಪಾಯಿ ದಾಖಲಾಗಿದೆ.
ಬೆಂಗಳೂರಿನಲ್ಲಿ ಎಷ್ಟಿದೆ ಚಿನ್ನದ ದರ?
22 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ ಬೆಂಗಳೂರಿನಲ್ಲಿ ಇಂದು ಬೆಂಗಳೂರು- 46,450 ರೂಪಾಯಿ ಬೆಲೆ ಇದೆ. ಅದೇ ರೀತಿ ಮಂಗಳೂರು- 46,450 ರೂಪಾಯಿ ಹಾಗೂ ಮೈಸೂರು- 46,450 ರೂಪಾಯಿ ಬೆಲೆ ನಿಗದಿಯಾಗಿದೆ. ಇನ್ನು 24 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ ಬೆಂಗಳೂರಿನಲ್ಲಿ ಇಂದು 50,670 ರೂಪಾಯಿ ಆಗಿದ್ದರೆ, ಮಂಗಳೂರು- 50.670 ರೂಪಾಯಿ ಹಾಗೂ ಮೈಸೂರು- 50,670 ರೂಪಾಯಿ ಫಿಕ್ಸ್ ಆಗಿದೆ.
ಇದನ್ನೂ ಓದಿ: Savitri Jindal: ಭಾರತದ ಅತ್ಯಂತ ಶ್ರೀಮಂತ ಮಹಿಳೆ ಸಾವಿತ್ರಿ ಜಿಂದಾಲ್: ಇವರ ಬಗ್ಗೆ ನಿಮಗೆಷ್ಟು ಗೊತ್ತು?
ಇತರೇ ಮಹಾನಗರಗಳಲ್ಲಿ ಇಂದಿನ ಚಿನ್ನದ ಬೆಲೆ
ಇನ್ನು ದೇಶದ ಪ್ರಮುಖ ಮಹಾನಗರಗಳಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ ಎಷ್ಟು ಬೆಲೆ ಇದೆ ಅತಂ ನೋಡೋದಾದ್ರೆ., ಚೆನ್ನೈ- 46,660 ರೂ. ಮುಂಬೈ- 46,400 ರೂ, ದೆಹಲಿ- 46,400 ರೂ, ಕೊಲ್ಕತ್ತಾ- 46,400 ರೂ, ಹೈದರಾಬಾದ್- 46,400 ರೂ, ಕೇರಳ- 46,400 ರೂಪಾಯಿ ಹಾಗೂ ಪುಣೆ- 46,420 ರೂಪಾಯಿ ಬೆಲೆ ಇದೆ. ಅದೇ ರೀತಿ 24 ಕ್ಯಾರೆಟ್ನ 10 ಗ್ರಾಂ ಬಂಗಾರಕ್ಕೆ ಚೆನ್ನೈ- 50,900 ರೂ, ಮುಂಬೈ- 50,620 ರೂ, ದೆಹಲಿ- 50,620 ರೂ. ಕೊಲ್ಕತ್ತಾ 50,620 ರೂ, ಹೈದರಾಬಾದ್- 50,620 ರೂ, ಕೇರಳ- 50,620 ರೂಪಾಯಿ ಹಾಗೂ ಪುಣೆ- 50,640 ರೂಪಾಯಿ ಬೆಲೆ ಇದೆ.
ಇಂದಿನ ಬೆಳ್ಳಿ ಬೆಲೆ ಎಷ್ಟಿದೆ?
ದೇಶದಲ್ಲಿ ಬೆಳ್ಳಿ ಬೆಲೆ ಒಂದು ಕೆಜಿಗೆ 55,400 ರೂಪಾಯಿ ದಾಖಲಾಗಿದೆ. ಇಂದು ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 61,600 ರೂ. ಇದೆ. ಇನ್ನು ಚೆನ್ನೈ, ವಿಜಯವಾಡ, ಹೈದರಾಬಾದ್, ವಿಶಾಖಪಟ್ಟಣಂದಲ್ಲಿಯೂ 61,600 ರೂಪಾಯಿ ಬೆಲೆ ನಿಗದಿಯಾಗಿದೆ.
ಒಟ್ಟಾರೆ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ಸೇರಿ ಹಲವು ಕಾರಣಗಳಿಂದ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ. ಷೇರು ಮಾರುಕಟ್ಟೆಯ ಪ್ರಭಾವದಿಂದಲೂ ಚಿನ್ನದ ಬೆಲೆ ಏರಿಕೆ-ಇಳಿಕೆ ಆಗಬಹುದು. ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವನ್ನು ಆಧರಿಸಿ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ. ದಾಖಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ