Gold Price: ಆಭರಣ ಪ್ರಿಯರಿಗೆ ಭಾನುವಾರ ಬಂಗಾರದಂತ ಸುದ್ದಿ! ಇಂದು ಚಿನ್ನ, ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ

ಭಾರತೀಯ ಮಾರುಕಟ್ಟೆಯಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಬಂಗಾರದ ಬೆಲೆ 5,0400 ರೂಪಾಯಿ ಇದೆ. ಅದೇ ರೀತಿ 22 ಕ್ಯಾರೆಟ್‌ನ 10 ಗ್ರಾಂ ಬಂಗಾರದ ಬೆಲೆ 46,300 ರೂಪಾಯಿ ಇದೆ. ಇಂದು ಒಂದು ಕೆಜಿ ಬೆಳ್ಳಿ ಬೆಲೆ 55,600 ರೂಪಾಯಿ ಇದೆ.

ಬಂಗಾರದ ಆಭರಣಗಳ ಸಂಗ್ರಹ ಚಿತ್ರ

ಬಂಗಾರದ ಆಭರಣಗಳ ಸಂಗ್ರಹ ಚಿತ್ರ

  • Share this:
Gold and Silver Price on July 17, 2022: ಈ ಭಾನುವಾರ (Sunday) ಆಭರಣ ಪ್ರಿಯರಿಗೆ (Jewellery Lovers) ಬಂಗಾರದಂತಾ ನ್ಯೂಸ್ ಸಿಕ್ಕಿದೆ. ಇಂದು ಚಿನ್ನದ ಬೆಲೆ (Gold Price) ಹಾಗೂ ಬೆಳ್ಳಿ ಬೆಲೆಯಲ್ಲಿ (Silver Price) ಭಾರೀ ಇಳಿಕೆ ಆಗಿದೆ. ನೀವೇನಾದರೂ ಇಂದು ಚಿನ್ನ, ಬೆಳ್ಳಿ ಖರೀದಿಸಬೇಕು ಅಂತ ಪ್ಲಾನ್ (Plan) ಮಾಡಿದ್ದರೆ ಚಿನ್ನದ ಮಳಿಗೆಗಳಿಗೆ ಈಗಲೇ ಹೊರಡುವುದು ಒಳ್ಳೆಯದು. ಭಾರತವು ಚಿನ್ನದ ಮೇಲಿನ ಆಮದು ಸುಂಕ ಹೆಚ್ಚಿಸುತ್ತಿದ್ದು ಮುಂಬರುವ ದಿನಗಳಲ್ಲಿ ಚಿನ್ನ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಹಾಗಾಗಿ ಚಿನ್ನ ಇನ್ನಷ್ಟು ದುಬಾರಿ ಆಗೋ ಮುಂಚೆ ಇಂದೇ ಅದನ್ನುಕೊಳ್ಳಲು ಉತ್ತಮ ಸಮಯ. ಅಲ್ಲದೆ, ಕಳೆದ ಕೆಲ ಸಮಯದಿಂದ ಚಿನ್ನದ ಬೆಲೆಗಳಲ್ಲಿ ಅಲ್ಪ ಪ್ರಮಾಣದ ಏರಿಳಿತಗಳು ಆಗುತ್ತಲೇ ಇದ್ದು ಇದಕ್ಕೆ ಪ್ರಮುಖ ಕಾರಣ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ (International Market)  ಉಂಟಾಗುತ್ತಿರುವ ಮಾರುಕಟ್ಟೆ ಸಂಬಂಧಿತ ವಿದ್ಯಮಾನಗಳು ಹಾಗೂ ಕಚ್ಚಾ ತೈಲದಲ್ಲಾಗಿರುವ ಬೆಲೆ ಏರಿಕೆ ಹಾಗೂ ಇತರೆ ಜಾಗತಿಕ ಅಂಶಗಳೇ ಆಗಿವೆ.

 ಭಾರತದಲ್ಲಿ ಇಂದು ಚಿನ್ನ, ಬೆಳ್ಳಿ ಬೆಲೆ ಎಷ್ಟಿದೆ?

ಭಾರತೀಯ ಮಾರುಕಟ್ಟೆಯಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಬಂಗಾರದ ಬೆಲೆ 5,0400 ರೂಪಾಯಿ ಇದೆ. ಅದೇ ರೀತಿ 22 ಕ್ಯಾರೆಟ್‌ನ 10 ಗ್ರಾಂ ಬಂಗಾರದ ಬೆಲೆ 46,300 ರೂಪಾಯಿ ಇದೆ. ಇಂದು ಒಂದು ಕೆಜಿ ಬೆಳ್ಳಿ ಬೆಲೆ 55,600 ರೂಪಾಯಿ ಇದೆ.

ಬೆಂಗಳೂರಿನಲ್ಲಿ ಇಂದಿನ ಗೋಲ್ಡ್ ರೇಟ್

ಬೆಂಗಳೂರಿನ ಚೀನಿವಾರ ಪೇಟೆಯಲ್ಲಿಂದು ಚಿನ್ನದ ಬೆಲೆ 46,300 (22 ಕ್ಯಾರೆಟ್‌) - 50,510 (24 ಕ್ಯಾರೆಟ್‌) ರೂಪಾಯಿ ನಿಗದಿಯಾಗಿದೆ. ಅತ್ತ ಮಂಗಳೂರಲ್ಲಿ 46,200 (22 ಕ್ಯಾರೆಟ್‌) ರೂಪಾಯಿ, 50,510 (24 ಕ್ಯಾರೆಟ್‌) ರೂಪಾಯಿ ಇದ್ದರೆ, ಮೈಸೂರಲ್ಲಿ 46,200 (22 ಕ್ಯಾರೆಟ್‌) ರೂಪಾಯಿ ಹಾಗೂ 50,510 (24 ಕ್ಯಾರೆಟ್‌) ರೂಪಾಯಿ ಬೆಲೆ ಫಿಕ್ಸ್ ಆಗಿದೆ.

ಇದನ್ನೂ ಓದಿ: Business Idea: ಈ ಅಕ್ಕಿಗೆ ಮಾರ್ಕೆಟ್​ನಲ್ಲಿ ಡಿಮ್ಯಾಂಡಪ್ಪೋ ಡಿಮ್ಯಾಂಡ್​! ಒಂದು ಕೆಜಿಗೆ 500 ರೂಪಾಯಿ

ಇತರೇ ಮಹಾನಗರಗಳಲ್ಲಿ ಬಂಗಾರದ ಬೆಲೆ ಎಷ್ಟಿದೆ?

ಇನ್ನು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 46,200 (22 ಕ್ಯಾರೆಟ್‌) - 50,400 (24 ಕ್ಯಾರೆಟ್) ರೂಪಾಯಿ ಬೆಲೆ ಇದ್ದರೆ, ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ 46,200 (22 ಕ್ಯಾರೆಟ್‌) - 50,400 (24 ಕ್ಯಾರೆಟ್‌) ರೂಪಾಯಿ ಬೆಲೆ ಇದೆ. ಇನ್ನುಳಿದಂತೆ ಚೆನ್ನೈ 46,270 (22 ಕ್ಯಾರೆಟ್‌) - 50,480 (24 ಕ್ಯಾರೆಟ್‌), ಹೈದರಾಬಾದ್‌ 46,200 (22 ಕ್ಯಾರೆಟ್‌) - 50,400 (24 ಕ್ಯಾರೆಟ್‌), ಕೋಲ್ಕತಾ 46,200 (22 ಕ್ಯಾರೆಟ್‌) - 50,400 (24 ಕ್ಯಾರೆಟ್‌) ರೂಪಾಯಿ ಬೆಲೆ ಇದೆ.

ಇಂದಿನ ಬೆಳ್ಳಿ ಬೆಲೆ ಎಷ್ಟಿದೆ?

ದೇಶದ ಮಾರುಕಟ್ಟೆಯಲ್ಲಿ ಇಂದು ಬೆಳ್ಳಿ ಬೆಲೆಯಲ್ಲೂ ಕೂಡ ಇಳಿಕೆಯಾಗಿದೆ. ಇಂದು ಒಂದು ಕೆಜಿ ಬೆಳ್ಳಿಗೆ 55,600 ರೂಪಾಯಿ ಬೆಲೆ ಇದೆ.

ಮಹಾನಗರಗಳಲ್ಲಿ ಇಂದಿನ ಸಿಲ್ವರ್ ರೇಟ್

ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 60,700 ರೂ. ಇದೆ. ಇನ್ನು ಚೆನ್ನೈ, ವಿಜಯವಾಡ, ಹೈದರಾಬಾದ್, ವಿಶಾಖಪಟ್ಟಣಂನಲ್ಲೂ ಕೂಡ ಬೆಳ್ಳಿ ಬೆಲೆ 60,700 ರೂಪಾಯಿ ನಿಗದಿಯಾಗಿದೆ.

ಇದನ್ನೂ ಓದಿ: Axis Credit Card : ಈ ಕ್ರೆಡಿಟ್ ಕಾರ್ಡ್ ಇದ್ರೆ ಫ್ರೀಯಾಗಿ ಸಿಗುತ್ತೆ 53 ಲೀಟರ್​ ಪೆಟ್ರೋಲ್​! ನಿಮ್ಮ ಹತ್ರಾನೂ ಇದ್ಯಾ ನೋಡ್ಕೋಳಿ

ಒಟ್ಟಾರೆ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ಸೇರಿ ಹಲವು ಕಾರಣಗಳಿಂದ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ. ಷೇರು ಮಾರುಕಟ್ಟೆಯ ಪ್ರಭಾವದಿಂದಲೂ ಚಿನ್ನದ ಬೆಲೆ ಏರಿಕೆ-ಇಳಿಕೆ ಆಗಬಹುದು.  ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವನ್ನು ಆಧರಿಸಿ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ. ದಾಖಲಾಗಿದೆ.
Published by:Annappa Achari
First published: