• Home
  • »
  • News
  • »
  • business
  • »
  • Gold and Silver Price: ಇಂದು ಯಥಾಸ್ಥಿತಿ ಕಾಯ್ದುಕೊಂಡ ಚಿನ್ನ-ಬೆಳ್ಳಿ! ಇಂದಿನ ಬೆಲೆ ಎಷ್ಟಿದೆ ತಿಳಿಯಿರಿ

Gold and Silver Price: ಇಂದು ಯಥಾಸ್ಥಿತಿ ಕಾಯ್ದುಕೊಂಡ ಚಿನ್ನ-ಬೆಳ್ಳಿ! ಇಂದಿನ ಬೆಲೆ ಎಷ್ಟಿದೆ ತಿಳಿಯಿರಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಾಜಧಾನಿ ನಗರ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 47,250 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 48,150, ರೂ. 47,200, ರೂ. 47,200 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 47,350 ರೂ. ಆಗಿದೆ.

ಮುಂದೆ ಓದಿ ...
  • Share this:

    Gold and Silver Price on August 01, 2022: ನಿನ್ನೆಗೆ ಹೋಲಿಸಿದರೆ ಇಂದು ಭಾರತದ ಮಾರುಕಟ್ಟೆಯಲ್ಲಿ (Indian Market) ಚಿನ್ನದ ಬೆಲೆಯಲ್ಲಿ (Gold Rate) ಯಾವುದೇ ವ್ಯತ್ಯಾಸವಾಗಿಲ್ಲ. ಆದಾಗ್ಯೂ ಕಳೆದ ಹಲವು ದಿನಗಳಿಂದ ಚಿನ್ನವು ಮುಂಚೆ ಇದ್ದ ಬೆಲೆಗಿಂತ ಹೆಚ್ಚು-ಕಡಿಮೆ ಕುಸಿತವನ್ನೇ ಕಾಣುತ್ತಿದೆ ಎನ್ನಬಹುದು. ಹಾಗಾಗಿ ಚಿನ್ನ ಕೊಳ್ಳಲು ಪ್ರಸ್ತುತ ಸಮಯ ಸ್ವಲ್ಪ ಪರ್ಫೆಕ್ಟ್ ಟೈಮ್ ಎಂದೇ ಹೇಳಬಹುದು. ಇಂದು ಪ್ರತಿ ಗ್ರಾಂ ಆಭರಣ (Jewellery) ಚಿನ್ನದ ಬೆಲೆ ರೂ. 4,720 ಆಗಿದೆ. ಈಗಾಗಲೇ ಭಾರತವು ಚಿನ್ನದ ಮೇಲಿನ ಆಮದು ಸುಂಕ ಹೆಚ್ಚಿಸಿದ್ದು ಮುಂಬರುವ ದಿನಗಳಲ್ಲಿ ಚಿನ್ನ ಮತ್ತೆ ಏರಿಕೆಯಾಗುವ ಸಾಧ್ಯತೆಯನ್ನೂ ಅಲ್ಲಗಳೆಯಲು ಆಗಲ್ಲ. ಹಾಗಾಗಿ ಚಿನ್ನ ಇನ್ನಷ್ಟು ದುಬಾರಿ ಆಗೋ ಮುಂಚೆ ಇಂದೇ ಅದನ್ನು ಕೊಳ್ಳಲು ಉತ್ತಮ ಸಮಯ ಇದಾಗಿದೆ ಎನ್ನಬಹುದು. ಬೆಂಗಳೂರಿನಲ್ಲಿ ಇಂದು ಪ್ರತಿ 10 ಗ್ರಾಂ ಆಭರಣ ಚಿನ್ನದ ಬೆಲೆ ರೂ. 47,250 ಆಗಿದೆ.


    ಹಾಗಾದರೆ ಭಾರತದ ಮಾರುಕಟ್ಟೆಯಲ್ಲಿ ಇಂದು ಬಂಗಾರದ ದರ ಎಷ್ಟಿದೆ ಅಂತ ತಿಳಿಯೋಣ…


    ಒಂದು ಗ್ರಾಂ (1GM)


    22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 4,720


    24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,149


    ಎಂಟು ಗ್ರಾಂ (8GM)


    22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 37,760


    24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 41,192


    ಹತ್ತು ಗ್ರಾಂ (10GM)


    22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 47,200


    24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 51,490


    ನೂರು ಗ್ರಾಂ (100GM)


    22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 4,72,000


    24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,14,900


    ಇದನ್ನೂ ಓದಿ: Business Idea: 10 ಸಾವಿರದಿಂದ ಈ ಬ್ಯುಸಿನೆಸ್​ ಶುರು ಮಾಡಿ, ಶುಚಿ-ರುಚಿ ಇದ್ರೆ ಪ್ರಾಫಿಟ್​ ಹೆಚ್ಚಾಗುತ್ತೆ!


    ಬೆಂಗಳೂರಿನಲ್ಲಿ ಎಷ್ಟಿದೆ ಚಿನ್ನದ ಬೆಲೆ?


    ರಾಜಧಾನಿ ನಗರ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 47,250 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 48,150, ರೂ. 47,200, ರೂ. 47,200 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 47,350 ರೂ. ಆಗಿದೆ.


    ಇಂದಿನ ಬೆಳ್ಳಿ ದರ


    ಚಿನ್ನದಂತೆ ಸಾಮಾನ್ಯವಾಗಿ ಬೆಳ್ಳಿ ದರಗಳಲ್ಲೂ ವ್ಯತ್ಯಾಸ ಆಗುತ್ತಲೇ ಇರುತ್ತದೆ. ನಿನ್ನೆಗೆ ಹೋಲಿಸಿದರೆ ಇಂದು ಭಾರತದಲ್ಲಿ ಬೆಳ್ಳಿ ಬೆಲೆಯಲ್ಲೂ ಸಹ ವ್ಯತ್ಯಾಸ ಕಂಡುಬಂದಿಲ್ಲ. ಆದಾಗ್ಯೂ ಕಳೆದ ತಿಂಗಳಿನಲ್ಲಿ ಅಂದರೆ ಜುಲೈ ಆರರಂದು ಬೆಳ್ಳಿಯ ಗರಿಷ್ಠ ಬೆಲೆ ಪ್ರತಿ ಕೆಜಿಗೆ ರೂ. 62,000ಕ್ಕೆ ತಲುಪಿತ್ತು ಹಾಗೂ ಜುಲೈ 26 ರಂದು ಕನಿಷ್ಠ ಬೆಲೆ ರೂ. 54,500ಕ್ಕೆ ಕುಸಿದಿತ್ತು. ಇಂದು ಭಾರತದ ಮಾರುಕಟ್ಟೆಯಲ್ಲಿ ಒಂದು ಕೆಜಿಗೆ ಬೆಳ್ಳಿ ಬೆಲೆ 58,400 ರೂ. ಆಗಿದೆ.


    ಬೆಂಗಳೂರಿನಲ್ಲಿ ಇಂದು ಬೆಳ್ಳಿ ಬೆಲೆ ಎಷ್ಟಿದೆ?


    ಬೆಂಗಳೂರು ನಗರದಲ್ಲಿ ಇಂದು ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ದರಗಳು ಕ್ರಮವಾಗಿ ರೂ. 637, ರೂ. 6,370 ಹಾಗೂ ರೂ. 63,700 ಗಳಾಗಿವೆ. ಇನ್ನುಳಿದಂತೆ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 63,700 ಆಗಿದ್ದರೆ ದೆಹಲಿಯಲ್ಲಿ ರೂ. 58,400 ಮುಂಬೈನಲ್ಲಿ ರೂ. 58,400 ಹಾಗೂ ಕೊಲ್ಕತ್ತದಲ್ಲೂ ರೂ. 58,400 ಗಳಾಗಿದೆ.


    ಇದನ್ನೂ ಓದಿ: Post Office Scheme: ಅಂಚೆ ಕಚೇರಿಯಲ್ಲಿ ಹಣ ಉಳಿಸಿ, ನಿವೃತ್ತಿ ವೇಳೆಗೆ ನೀವು ಆಗ್ತೀರಿ ಕೋಟ್ಯಧಿಪತಿ


    ವಿ.ಸೂ: ಇಲ್ಲಿ ಕೊಡಲಾದ ಎಲ್ಲ ದರಗಳು ಮಾರುಕಟ್ಟೆಯ ಬೆಲೆಗಳನ್ನು ಪ್ರತಿನಿಧಿಸುತ್ತವೆ ಹಾಗೂ ಜಿಎಸ್‍ಟಿ, ಟಿಸಿಎಸ್ ಹಾಗೂ ಇನ್ನಿತರೆ ಇರಬಹುದಾದ ಶುಲ್ಕಗಳನ್ನು ಒಳಗೊಂಡಿಲ್ಲ. ಹೆಚ್ಚು ನಿಖರ ಬೆಲೆಗಳಿಗಾಗಿ ನಿಮ್ಮ ಹತ್ತಿರದ ಆಭರಣ ವ್ಯಾಪಾರಿಗಳನ್ನು ಸಂಪರ್ಕಿಸಿ.

    Published by:Annappa Achari
    First published: