Gold Price: ಶ್, ಯಾರಿಗೂ ಹೇಳ್ಬೇಡಿ.. ಚಿನ್ನ, ಬೆಳ್ಳಿ ರೇಟ್ ಕಡಿಮೆ ಆಗಿದ್ಯಂತೆ ಕಣ್ರೀ! ಈಗ್ಲೇ ನಿಮ್ಮ ಮನೆಯವರೊಂದಿಗೆ ಹೋಗಿ ಬಂಗಾರ ಖರೀದಿಸಿ

ಯುಗಾದಿ ಹಬ್ಬ ಬಂತು, ಸ್ವಲ್ಪ ಚಿನ್ನ ಖರೀದಿ ಮಾಡಿ ಇಟ್ಟುಕೊಳ್ಳಬೇಕು ಅಂತ ನೀವು ಯೋಚಿಸುತ್ತಾ ಇದ್ದೀರಾ? ಹಾಗಿದ್ರೆ ಇಂದೇ ಆ ಕೆಲಸ ಮಾಡಿ. ಯಾಕೆಂದ್ರೆ ಚಿನ್ನ, ಬೆಳ್ಳಿ ದರ ಕೊಂಚ ಇಳಿಕೆಯಾಗಿದೆ.

ಬಂಗಾರದ ಆಭರಣಗಳ ಸಂಗ್ರಹ ಚಿತ್ರ

ಬಂಗಾರದ ಆಭರಣಗಳ ಸಂಗ್ರಹ ಚಿತ್ರ

 • Share this:
  Gold Rate on March 30, 2022: ಮಾರ್ಚ್‌ ತಿಂಗಳಲ್ಲಿ ಚಿನ್ನ (Gold), ಬೆಳ್ಳಿ ದರದಲ್ಲಿ (Sliver Rate) ಭಾರಿ ವ್ಯತ್ಯಾಸವಾಗುತ್ತಿದೆ. ಹಲವು ದಿನಗಳ ಕಾಲ ಗಗನಮುಖಿಯಾಗಿದ್ದ ಬಂಗಾರ, ಬೆಳ್ಳಿ ದರ ತಿಂಗಳ ಕೊನೆಯ ವಾರದಲ್ಲಿ ಮತ್ತೆ ಇಳಿಕೆಯ ಹಾದಿಯಲ್ಲಿದೆ. ಕಳೆದ 2 ದಿನಗಳಿಂದ ಬಂಗಾರ, ಬೆಳ್ಳಿ ಮೌಲ್ಯ ಮತ್ತೆ ಕಡಿಮೆಯಾಗುತ್ತಿದೆ. ಹೌದು, ದೇಶದಲ್ಲಿಂದು ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ (Bengaluru) ಸಹ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. ಭಾರತದಲ್ಲಿ (India) ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 47,950 ರೂ. ಇತ್ತು. ಇಂದು 200 ರೂ. ಇಳಿಕೆಯಾಗಿ 47,750 ರೂ. ಆಗಿದೆ. ಅಂತೆಯೇ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 52,310 ರೂ. ಇತ್ತು. ಇಂದು 210 ರೂ. ಇಳಿಕೆಯಾಗಿ 52,100 ರೂ. ಆಗಿದೆ.

  ಯುಗಾದಿ ಹಬ್ಬ ಬಂತು, ಸ್ವಲ್ಪ ಚಿನ್ನ ಖರೀದಿ ಮಾಡಿ ಇಟ್ಟುಕೊಳ್ಳಬೇಕು ಅಂತ ನೀವು ಯೋಚಿಸುತ್ತಾ ಇದ್ದೀರಾ? ಹಾಗಿದ್ರೆ ಇಂದೇ ಆ ಕೆಲಸ ಮಾಡಿ. ಯಾಕೆಂದ್ರೆ ಚಿನ್ನ, ಬೆಳ್ಳಿ ದರ ಕೊಂಚ ಇಳಿಕೆಯಾಗಿದೆ. ಹಾಗಾದ್ರೆ ದೇಶದ ಪ್ರಮುಖ ನಗರಗಳಲ್ಲಿ ಇಂದು ಚಿನ್ನಕ್ಕೆ ಎಷ್ಟು ಬೆಲೆ ಇದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

   ಬೆಂಗಳೂರಿನಲ್ಲಿ ಚಿನ್ನದ ಬೆಲೆ ಎಷ್ಟಿದೆ?

  ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಚಿನ್ನದ ಬೆಲೆ 52,310 ರೂ. ಇತ್ತು. ಇಂದು 210 ರೂ. ಇಳಿಕೆಯಾಗಿ 52,100 ರೂ. ಇತ್ತು. ಅದೇ ರೀತಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 47,950 ರೂ. ಇತ್ತು. ಇಂದು 200 ರೂ. ಇಳಿಕೆಯಾಗಿ 47,750 ರೂ. ಆಗಿದೆ. ರಾಜ್ಯದ ಇತರೆ ಪ್ರಮುಖ ನಗರಗಳಾದ ಮೈಸೂರು, ಮಂಗಳೂರಿನಲ್ಲೂ ಇದೇ ಬೆಲೆ ಇದೆ.

  ಇತರೇ ಪ್ರಮುಖ ನಗರಗಳಲ್ಲಿ ಎಷ್ಟಿದೆ ಗೋಲ್ಡ್ ರೇಟ್?

  ಇನ್ನು, ದೇಶದ ಇತರೆ ನಗರಗಳಾದ ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆ, ಕೊಯಮತ್ತೂರು, ಮಧುರೈ, ಚಂಡೀಗಢ, ಸೂರತ್‌, ನಾಶಿಕ್‌ನಲ್ಲೂ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 52 ಸಾವಿರದ ಆಸುಪಾಸಿನಲ್ಲೇ ಇದೆ.

  ಇದನ್ನೂ ಓದಿ: Business: ಆಡುವ ವಯಸ್ಸಲ್ಲಿ ಬ್ಯುಸಿನೆಸ್ ಮಾಡಿ ತಿಂಗಳಿಗೆ ಲಕ್ಷಗಟ್ಟಲೆ ದುಡಿಯುತ್ತಿರುವ 13ರ ಪೋರಿ

  ಈ ಮಧ್ಯೆ, ದೇಶದ ಮೆಟ್ರೋಪಾಲಿಟನ್‌ ನಗರಗಳಾದ ಚೆನ್ನೈನಲ್ಲಿ 24 ಕ್ಯಾರೆಟ್‌ ಚಿನ್ನದ ಬೆಲೆ 52,290 ರೂ. ಇದ್ದರೆ, ರಾಷ್ಟ್ರ ರಾಜಧಾನಿ ದೆಹಲಿ, ಮುಂಬೈ ಹಾಗೂ ಕೋಲ್ಕತ್ತದಲ್ಲಿ 24 ಕ್ಯಾರೆಟ್‌ ಬಂಗಾರದ ಬೆಲೆ 52,100 ರೂ. ಆಗಿದೆ.

  ಇಂದಿನ ಬೆಳ್ಳಿ ದರ

  ದೇಶದಲ್ಲಿಂದು ಚಿನ್ನದ ಬೆಲೆ ಕಡಿಮೆಯಾದಂತೆ ಬೆಳ್ಳಿ ದರ (Silver Rate) ದಲ್ಲೂ ಇಳಿಕೆಯಾಗಿದೆ. ನಿನ್ನೆ 1 ಕೆಜಿ ಬೆಳ್ಳಿಗೆ 68,400 ರೂ. ಇತ್ತು. ಇಂದು 400 ರೂ. ಇಳಿಕೆಯಾಗಿ 68,000 ರೂ. ಆಗಿದೆ.

  ಬೆಂಗಳೂರು ಹಾಗೂ ಇತರೇ ನಗರಗಳಲ್ಲಿ ಸಿಲ್ವರ್ ರೇಟ್

  ಇದೇ ರೀತಿ ಬೆಂಗಳೂರು, ಮೈಸೂರು ಹಾಗೂ ಮಂಗಳೂರಿನಲ್ಲಿ ಸಹ ಬೆಳ್ಳಿಯ ದರ 600 ರೂ. ಕಡಿಮೆಯಾಗಿದ್ದು 1 ಕೆಜಿ ಬೆಳ್ಳಿಯ ಬೆಲೆ 72,100 ರೂ. ಆಗಿದೆ. ಇದೇ ರೀತಿ ಚೆನ್ನೈ, ಹೈದರಾಬಾದ್, ವಿಜಯವಾಡ, ವಿಶಾಖಪಟ್ಟಣಂ, ಕೊಯಮತ್ತೂರು, ಮಧುರೈನಲ್ಲಿ ಸಹ 1 ಕೆಜಿ ಬೆಳ್ಳಿಯ ಬೆಲೆ 72,100 ರೂ. ಆಗಿದೆ.

  ಈ ಮಧ್ಯೆ, ರಾಷ್ಟ್ರ ರಾಜಧಾನಿ ದೆಹಲಿ, ವಾಣಿಜ್ಯ ರಾಜಧಾನಿ ಮುಂಬೈ ಹಾಗೂ ಕೋಲ್ಕತ್ತದಲ್ಲಿ ಬೆಳ್ಳಿ ದರ 68,000 ರೂ. ಆಗಿದೆ.

  ಇದನ್ನೂ ಓದಿ: ನಿಮ್ಮ ವೃತ್ತಿಜೀವನದ ಆರಂಭದಲ್ಲೇ ಮನೆ ಖರೀದಿಸೋ ಪ್ಲಾನ್ ಮಾಡಿದ್ದೀರಾ? ಹಾಗಾದ್ರೆ ಈ ವಿಚಾರ ತಿಳಿಯಲೇಬೇಕು

  ಒಟ್ಟಾರೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರದ ಬೆಲೆಯಲ್ಲಿ ಏರಿಕೆ - ಇಳಿಕೆಯ ಹಾವು ಏಣಿ ಆಟ ಮುಂದುವರಿದಿದೆ. ಬೆಳ್ಳಿ ದರ ಕೂಡ ಏರಿಳಿತ ಕಾಣುತ್ತಿದೆ. ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ಸೇರಿ ಹಲವು ಕಾರಣಗಳಿಂದ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ. ಷೇರು ಮಾರುಕಟ್ಟೆಯ ಪ್ರಭಾವದಿಂದಲೂ ಚಿನ್ನದ ಬೆಲೆ ಏರಿಕೆ - ಇಳಿಕೆಯಾಗಬಹುದು.
  Published by:Annappa Achari
  First published: