Gold And Silver Price on April 9, 2022: ಇಂದು ನೀವೇನಾದರೂ ಚಿನ್ನ ಅಥವಾ ಬೆಳ್ಳಿ ಖರೀದಿ ಮಾಡಬೇಕು ಅಂತ ಯೋಚನೆ ಮಾಡಿದ್ದೀರಾ? ಹಾಗಿದ್ರೆ ಸ್ವಲ್ಪ ನಿಧಾನಿಸಿ, ಈ ಸುದ್ದಿಯನ್ನು ಓದಿ. ಯಾಕೆ ಅಂದರೆ ನಿನ್ನೆಗೆ ಹೋಲಿಸಿದರೆ ಇಂದು ಭಾರತದ ಮಾರುಕಟ್ಟೆಯಲ್ಲಿ (Indian Market) ಆಭರಣ (Jewellery) ಚಿನ್ನದ ಬೆಲೆಯಲ್ಲಿ (Gold rate) ಏರಿಕೆಯಾಗಿದೆ. ಕಳೆದ ಎರಡು ದಿನಗಳಿಂದ ಸ್ಥಿರವಾದ ಬೆಲೆ ಕಾಯ್ದುಕೊಂಡಿದ್ದ ಚಿನ್ನ, ಇಂದು ಹತ್ತು ಗ್ರಾಂಗಳಿಗೆ 260 ರೂ. ಜಾಸ್ತಿಯಾಗಿದೆ. ಕಳೆದ ಒಂದು ತಿಂಗಳಿಗಿಂತಲೂ ಅಧಿಕ ಸಮಯದಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ (International Market) ಉಂಟಾಗುತ್ತಿರುವ ಕಚ್ಚಾ ತೈಲದ ಬೆಲೆ ಏರಿಕೆ ಮತ್ತು ಮುಂದುವರೆದಿರುವ ರಷ್ಯಾ-ಉಕ್ರೇನ್ ಯುದ್ಧದ (Russia-Ukraine War) ಪರಿಣಾಮವು ಜಾಗತಿಕ ಮಟ್ಟದಲ್ಲಿ ಚಿನ್ನ ಹಾಗೂ ಬೆಳ್ಳಿ ದರಗಳ ಮೇಲೆ ಬೀರುತ್ತಿದೆ. ಕಳೆದ ಹತ್ತು ದಿನಗಳಲ್ಲಿ ಚಿನ್ನ ಹಾಗೂ ಬೆಳ್ಳಿ ದರಗಳು (Silver Rate) ಒಂದು ರೀತಿಯಲ್ಲಿ ಕಣ್ಣು ಮುಚ್ಚಾಲೆ ಆಟ ಆಡುತ್ತಿತ್ತು. ನಿನ್ನೆ 200 ರೂಪಾಯಿ ಜಾಸ್ತಿಯಾಗಿದ್ದರೆ, ಇಂದು 260ನಷ್ಟು ಚಿನ್ನದ ಬೆಲೆ ಏರಿಕೆಯಾಗಿದೆ.
ಭಾರತದಲ್ಲಿ ಇಂದು ಎಷ್ಟಿದೆ ಬಂಗಾರದ ಬೆಲೆ?
ಇಂದು ಭಾರತದಾದ್ಯಂತ ಚಿನ್ನದ ಮಾರುಕಟ್ಟೆಗಳಲ್ಲಿ ಆಭರಣ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ಇಂದು ದೇಶದಲ್ಲಿ24 ಕ್ಯಾರೆಟ್ನ 1 ಗ್ರಾಂ ಬಂಗಾರದ ಬೆಲೆ 5,263 ರೂಪಾಯಿ ಆಗಿದೆ. ಹಾಗೆಯೇ 22 ಕ್ಯಾರೆಟ್ನ 1 ಗ್ರಾಂ ಬಂಗಾರದ ಬೆಲೆ 4825 ರೂಪಾಯಿಗಳು ಆಗಿವೆ.
ಬೆಂಗಳೂರು ಹಾಗೂ ಇತರೇ ನಗರಗಳಲ್ಲಿ ಎಷ್ಟಿದೆ ಗೋಲ್ಡ್ ರೇಟ್?
ಇಂದು ಬೆಂಗಳೂರಿನಲ್ಲಿ 24 ಕ್ಯಾರೆಟ್ನ 1 ಗ್ರಾಂ ಬಂಗಾರಕ್ಕೆ 5,263 ರೂಪಾಯಿ ಆಗಿದೆ. ಇನ್ನು 22 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 52,630 ರೂಪಾಯಿ ಬೆಲೆ ನಿಗದಿಯಾಗಿದೆ. ಮಂಗಳೂರಿನಲ್ಲಿ 48,250, ಮೈಸೂರಿನಲ್ಲಿ 48,250 ರೂಪಾಯಿ ಬೆಲೆ ಇದೆ. 24 ಕ್ಯಾರೆಟ್ ಚಿನ್ನಕ್ಕೆ ಮಂಗಳೂರು ಹಾಗೂ ಮೈಸೂರಿನಲ್ಲಿ 52,630 ರೂಪಾಯಿ ಬೆಲೆ ಇದೆ.
ಇದನ್ನೂ ಓದಿ: Multibagger Stock: ಟಾಟಾ ಗ್ರೂಪ್ನ ಈ ಮಲ್ಟಿಬ್ಯಾಗರ್ ಸ್ಟಾಕ್ನ್ನು 315 ರೂಪಾಯಿಗೆ ಖರೀದಿಸಬಹುದಂತೆ!
ಪ್ರಮುಖ ನಗರಗಳಲ್ಲಿ ಚಿನ್ನದ ದರ
ಇನ್ನು ಚೆನ್ನೈನಲ್ಲಿ 24 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 53,260 ರೂ., ದೆಹಲಿಯಲ್ಲಿ 52,630 ರೂ, ಹೈದ್ರಾಬಾದ್ನಲ್ಲಿ 52,630 ರೂಪಾಯಿ ಬೆಲೆ ಇದೆ. ಇನ್ನುಳಿದಂತೆ ಕೋಲ್ಕತ್ತಾದಲ್ಲಿ 52,630 ರೂ, ಮುಂಬೈನಲ್ಲಿ 52,630 ರೂಪಾಯಿ ಬೆಲೆ ಇದೆ.
22 ಕ್ಯಾರೆಟ್ ಚಿನ್ನಕ್ಕೆ ಎಷ್ಟಿದೆ ದರ?
ಇನ್ನು 10 ಗ್ರಾಂ ತೂಕದ 22 ಕ್ಯಾರೆಟ್ ಚಿನ್ನಕ್ಕೆ ಚೆನ್ನೈ 48,820 ರೂ, ದೆಹಲಿ 48,250 ರೂ., ಹೈದರಾಬಾದ್ 48,250 ರೂ., ಕೋಲ್ಕತಾ 48,250 ರೂ., ಮುಂಬೈ 48,250 ರೂಪಾಯಿ ಬೆಲೆ ನಿಗದಿಯಾಗಿದೆ.
ಇಂದು ಎಷ್ಟಿದೆ ಬೆಳ್ಳಿ ಬೆಲೆ?
ದೇಶದಲ್ಲಿ ಬೆಳ್ಳಿ ಬೆಲೆ ಇಂದು ಒಂದು ಕೆಜಿಗೆ 66,800 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 71,300 ರೂ. ಇದೆ. ದೇಶಾದ್ಯಂತ ಕೆಲವು ನಗರಗಳನ್ನು ಹೊರತುಪಡಿಸಿ ಅನೇಕ ಕಡೆ ಬೆಳ್ಳಿ ಬೆಲೆಯಲ್ಲಿ ಏಕರೂಪವಿದೆ. ಚೆನ್ನೈ, ವಿಜಯವಾಡ, ಹೈದರಾಬಾದ್, ವಿಶಾಖಪಟ್ಟಣಂದಲ್ಲಿಯೂ 71,300 ರೂ. ನಿಗದಿಯಾಗಿದೆ.
ಇದನ್ನೂ ಓದಿ: ಕೃಷಿ ಆದಾಯದ ಮೇಲೂ Tax! ಶ್ರೀಮಂತ ರೈತರ ಮೇಲೆ ತೆರಿಗೆ ಇಲಾಖೆಯ ಹದ್ದಿನ ಕಣ್ಣು
ಒಟ್ಟಾರೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರದ ಬೆಲೆಯಲ್ಲಿ ಏರಿಕೆ - ಇಳಿಕೆಯ ಹಾವು ಏಣಿ ಆಟ ಮುಂದುವರಿದಿದೆ. ಬೆಳ್ಳಿ ದರ ಕೂಡ ಏರಿಳಿತ ಕಾಣುತ್ತಿದೆ. ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ಸೇರಿ ಹಲವು ಕಾರಣಗಳಿಂದ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ. ಷೇರು ಮಾರುಕಟ್ಟೆಯ ಪ್ರಭಾವದಿಂದಲೂ ಚಿನ್ನದ ಬೆಲೆ ಏರಿಕೆ - ಇಳಿಕೆಯಾಗಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ