Gold Price: ಆಭರಣ ಪ್ರಿಯರ ಪಾಲಿಗೆ ಶುಭವಾಗದ ಶುಕ್ರವಾರ! ಇಂದು ದುಬಾರಿಯಾಯ್ತು ಚಿನ್ನ-ಬೆಳ್ಳಿ

ಇಂದು ಭಾರತದ ಮಾರುಕಟ್ಟೆಯಲ್ಲಿ ಬಂಗಾರದ (22 ಕ್ಯಾರೆಟ್) ದರದಲ್ಲಿ ನಿನ್ನೆಗೆ ಹೋಲಿಸಿದರೆ ಬದಲಾವಣೆ ಕಂಡುಬಂದಿಲ್ಲ. ದೇಶದಲ್ಲಿ ಇಂದು ಒಂದು ಗ್ರಾಂ ಆಭರಣ ಚಿನ್ನದ ಬೆಲೆ  4,800 ರೂಪಾಯಿ ಆಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    Gold And Silver Price on April 8, 2022: ನಿನ್ನೆಗೆ ಹೋಲಿಸಿದರೆ ಇಂದು ಭಾರತದ ಮಾರುಕಟ್ಟೆಯಲ್ಲಿ (Indian Market) ಆಭರಣ (Jwerllery) ಚಿನ್ನದ ಬೆಲೆಯಲ್ಲಿ (Gold rate) ಸ್ವಲ್ಪ ಹೆಚ್ಚಳ ಕಂಡುಬಂದಿದೆ. ಕಳೆದ ಎರಡು ದಿನಗಳಿಂದ ಸ್ಥಿರವಾದ ಬೆಲೆ ಕಾಯ್ದುಕೊಂಡಿದ್ದ ಚಿನ್ನ, ಇಂದು ಹತ್ತು ಗ್ರಾಂಗಳಿಗೆ 200 ರೂ. ಜಾಸ್ತಿಯಾಗಿದೆ. ಕಳೆದ ಒಂದು ತಿಂಗಳಿಗಿಂತಲೂ ಅಧಿಕ ಸಮಯದಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ (International Market) ಉಂಟಾಗುತ್ತಿರುವ ಕಚ್ಚಾ ತೈಲದ ಬೆಲೆ ಏರಿಕೆ ಮತ್ತು ಮುಂದುವರೆದಿರುವ ರಷ್ಯಾ-ಉಕ್ರೇನ್ ಯುದ್ಧದ (Russia-Ukraine War) ಪರಿಣಾಮವು ಜಾಗತಿಕ ಮಟ್ಟದಲ್ಲಿ ಚಿನ್ನ ಹಾಗೂ ಬೆಳ್ಳಿ ದರಗಳ ಮೇಲೆ ಬೀರುತ್ತಿದೆ. ಕಳೆದ ಹತ್ತು ದಿನಗಳಲ್ಲಿ ಚಿನ್ನ ಹಾಗೂ ಬೆಳ್ಳಿ ದರಗಳು (Silver Rate) ಒಂದು ರೀತಿಯಲ್ಲಿ ಕಣ್ಣು ಮುಚ್ಚಾಲೆ ಆಟ ಆಡುತ್ತಿದ್ದರೂ ಕಳೆದ ಎರಡು ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಸ್ಥಿರತೆ ಕಂಡು ಬಂದಿತ್ತು.

    ಇಂದು ಎಷ್ಟಿದೆ ಬಂಗಾರದ ಬೆಲೆ?

    ಇಂದಿಗೂ ಭಾರತದ ಮಾರುಕಟ್ಟೆಗಳಲ್ಲಿ ಬಂಗಾರ ಖರೀದಿ ಎಂಬುದು ಬಹು ಸಾಮಾನ್ಯ ಸಂಗತಿಯಾಗಿದ್ದು ದಿನದಲ್ಲೇ ಕೋಟ್ಯಂತರ ರೂಪಾಯಿಗಳಷ್ಟು ವ್ಯವಹಾರವನ್ನು ಬಂಗಾರ ಹೊಂದಿದೆ. ಇನ್ನು ಪೆಟ್ರೋಲ್ ಡೀಸೆಲ್ ಗಳಂತೆ ಬಂಗಾರದ ಬೆಲೆಗಳಲ್ಲೂ ಆಗಾಗ ವ್ಯತ್ಯಾಸಗಳು ಆಗುತ್ತಲೇ ಇರುತ್ತವೆ.

    ಇಂದು ಭಾರತದ ಮಾರುಕಟ್ಟೆಯಲ್ಲಿ ಬಂಗಾರದ (22 ಕ್ಯಾರೆಟ್) ದರದಲ್ಲಿ ನಿನ್ನೆಗೆ ಹೋಲಿಸಿದರೆ ಬದಲಾವಣೆ ಕಂಡುಬಂದಿಲ್ಲ. ದೇಶದಲ್ಲಿ ಇಂದು ಒಂದು ಗ್ರಾಂ ಆಭರಣ ಚಿನ್ನದ ಬೆಲೆ  4,800 ರೂಪಾಯಿ ಆಗಿದೆ.

     ಒಂದು ಗ್ರಾಂ (1GM)

    22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 4,800

    24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,237

     ಎಂಟು ಗ್ರಾಂ (8GM)

    22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 38,400

    24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 41,896

    ಇದನ್ನೂ ಓದಿ: 70 ಶತಕೋಟಿ ಡಾಲರ್ ಸಂಗ್ರಹಿಸಲು Flipkart IPO ಸಜ್ಜು! ಬಿಡುಗಡೆ ಯಾವಾಗ?

    ಹತ್ತು ಗ್ರಾಂ (10GM)

    22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 48,000

    24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 52,370

     ನೂರು ಗ್ರಾಂ (100GM)

    22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 4,80,000

    24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,23,700

     ಬೆಂಗಳೂರು ಹಾಗೂ ಇತರೆಡೆ ಇಂದಿನ ಗೋಲ್ಡ್ ರೇಟ್

    ರಾಜಧಾನಿ ನಗರ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 48,000 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೋಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ.48,590, ರೂ. 48,000, ರೂ. 48,000 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 48,000 ರೂ. ಆಗಿದೆ.

     ಇಂದಿನ ಬೆಳ್ಳಿ ದರ

    ನಿನ್ನೆಗೆ ಹೋಲಿಸಿದರೆ ಇಂದು ಭಾರತದಲ್ಲಿ ಬೆಳ್ಳಿ ದರದಲ್ಲಿ ಹೆಚ್ಚಳವಾಗಿದೆ. ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಅವಲಂಬಿತವಾಗಿದ್ದು ಏರಿಕೆ, ಇಳಿಕೆಗಳು ಆಗುತ್ತಿರುತ್ತವೆ. ಅಲ್ಲದೆ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನವೂ ಸಹ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಲೆ ಇರುತ್ತದೆ.

    ಬೆಂಗಳೂರು ಹಾಗೂ ಇತರೆಡೆ ಸಿಲ್ವರ್ ರೇಟ್

     ಇಂದು, ಬೆಂಗಳೂರಿನಲ್ಲಿ 10 gm, 100 gm, 1000 gm (1ಕೆಜಿ) ಬೆಳ್ಳಿ ದರ ಕ್ರಮವಾಗಿ ರೂ. 710, ರೂ. 7,100 ಹಾಗೂ ರೂ. 71,000 ಗಳಾಗಿವೆ. ಇನ್ನುಳಿದಂತೆ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ 71,000 ಆಗಿದ್ದರೆ ದೆಹಲಿಯಲ್ಲಿ 66,300 ಮುಂಬೈನಲ್ಲಿ 71,000 ಹಾಗೂ ಕೋಲ್ಕತ್ತದಲ್ಲೂ ರೂ. 66,300 ಗಳಾಗಿದೆ.

    ಇದನ್ನೂ ಓದಿ: Solar Auto: ಸೂರ್ಯನ ಶಕ್ತಿಯಿಂದ ಚಲಿಸುವ ಆಟೋವನ್ನು ಹೊರತಂದ ಮಲಯಾಳಿ ಉದ್ಯಮಿಗಳು..!

    ಒಟ್ಟಾರೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರದ ಬೆಲೆಯಲ್ಲಿ ಏರಿಕೆ - ಇಳಿಕೆಯ ಹಾವು ಏಣಿ ಆಟ ಮುಂದುವರಿದಿದೆ. ಬೆಳ್ಳಿ ದರ ಕೂಡ ಏರಿಳಿತ ಕಾಣುತ್ತಿದೆ. ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ಸೇರಿ ಹಲವು ಕಾರಣಗಳಿಂದ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ. ಷೇರು ಮಾರುಕಟ್ಟೆಯ ಪ್ರಭಾವದಿಂದಲೂ ಚಿನ್ನದ ಬೆಲೆ ಏರಿಕೆ - ಇಳಿಕೆಯಾಗಬಹುದು.
    Published by:Annappa Achari
    First published: