Gold And Silver Price On April 5, 2022: ನಿನ್ನೆಗೆ ಹೋಲಿಸಿದರೆ ಇಂದು ಭಾರತದ ಮಾರುಕಟ್ಟೆಯಲ್ಲಿ (Indain Market) ಆಭರಣ (Jewellery) ಚಿನ್ನದ ಬೆಲೆಯಲ್ಲಿ (Gold Price) ಕುಸಿತವಾಗಿದ್ದು ಯಾರಾದರೂ ಬಂಗಾರ ಖರೀದಿಸಬೇಕೆಂದಿದ್ದರೆ ಇಂದೇ ಆ ಕೆಲಸ ಮಾಡಬಹುದು. ಕೇವಲ ಕಚ್ಚಾ ತೈಲದ (Crude Oil) ಮೇಲೆ ಮಾತ್ರವಲ್ಲದೆ ರಷ್ಯಾ-ಉಕ್ರೇನ್ ಯುದ್ಧದ (Russia-Ukraine War) ಪರಿಣಾಮ ಜಾಗತಿಕವಾಗಿ ಚಿನ್ನ-ಬೆಳ್ಳಿ ದರಗಳ (Gold-Silver Price) ಮೇಲೆಯೂ ಬೀಳುತ್ತಿದೆ. ಕಳೆದ ಹತ್ತು ದಿನಗಳಲ್ಲಿ ಚಿನ್ನ ಹಾಗೂ ಬೆಳ್ಳಿ ದರಗಳು ಒಂದು ರೀತಿಯಲ್ಲಿ ಕಣ್ಣು ಮುಚ್ಚಾಲೆ ಆಟ ಆಡುತ್ತಿವೆ. ಆದಾಗ್ಯೂ, ಬೆಲೆಯಲ್ಲಿ ಅಷ್ಟೊಂದು ದೊಡ್ಡ ಬದಲಾವಣೆಗಳು ಕಂಡುಬರುತ್ತಿಲ್ಲ. ನಿನ್ನೆಗೆ ಹೋಲಿಸಿದರೆ ಇಂದು ಹತ್ತು ಗ್ರಾಂ ಆಭರಣ ಚಿನ್ನದ ಬೆಲೆಯಲ್ಲಿ 150 ರೂಪಾಯಿಗಳ ಕುಸಿತವಾಗಿದೆ.
ಇಂದು ಭಾರತದ ಮಾರುಕಟ್ಟೆಯಲ್ಲಿ ಬಂಗಾರದ (22 ಕ್ಯಾರಟ್) ದರದಲ್ಲಿ ನಿನ್ನೆಗೆ ಹೋಲಿಸಿದರೆ ಬದಲಾವಣೆ ಕಂಡುಬಂದಿಲ್ಲ. ದೇಶದಲ್ಲಿ ಒಂದು ಗ್ರಾಂ ಆಭರಣ ಚಿನ್ನದ ಬೆಲೆ ಇಂದು ರೂ. 4,780 ಆಗಿದೆ. ಹಾಗಾದರೆ ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳ ಕುರಿತು ಬನ್ನಿ ತಿಳಿದುಕೊಳ್ಳೋಣ…
ಒಂದು ಗ್ರಾಂ (1GM)
22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 4,780
24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,214
ಎಂಟು ಗ್ರಾಂ (8GM)
22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 38,240
24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 41,712
ಹತ್ತು ಗ್ರಾಂ (10GM)
22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 47,800
24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 52,140
ಇದನ್ನೂ ಓದಿ: Petrol Price Today: ಇಂದೂ ಹೆಚ್ಚಳ ಕಾಯ್ದುಕೊಂಡ ಪೆಟ್ರೋಲ್-ಡೀಸೆಲ್, ನಿಮ್ಮ ಜಿಲ್ಲೆಗಳಲ್ಲಿ ಇಂದಿನ ದರ ಹೀಗಿದೆ
ನೂರು ಗ್ರಾಂ (100GM)
22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 4,78,000
24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,21,400
ಮಹಾನಗರಗಳಲ್ಲಿ ಎಷ್ಟಿದೆ ಬಂಗಾರದ ಬೆಲೆ?
ರಾಜಧಾನಿ ನಗರ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 47,800 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೋಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ.48,030, ರೂ. 47,800, ರೂ. 47,800 ಆಗಿದೆ.
ಮಾರುಕಟ್ಟೆಯಲ್ಲಿ ಇಂದಿನ ಬೆಳ್ಳಿ ದರ
ನಿನ್ನೆಗೆ ಹೋಲಿಸಿದರೆ ಇಂದು ಭಾರತದಲ್ಲಿ ಬೆಳ್ಳಿ ದರದಲ್ಲೂ ಸ್ವಲ್ಪ ಕುಸಿತ ಕಂಡುಬಂದಿದೆ. ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಅವಲಂಬಿತವಾಗಿದ್ದು ಏರಿಕೆ, ಇಳಿಕೆಗಳು ಆಗುತ್ತಿರುತ್ತವೆ. ಅಲ್ಲದೆ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನವೂ ಸಹ ಚಿನ್ನೆ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಲೆ ಇರುತ್ತದೆ.
ಮಹಾನಗರಗಳಲ್ಲಿ ಇಂದಿನ ಸಿಲ್ವರ್ ರೇಟ್
ಇಂದು, ಬೆಂಗಳೂರಿನಲ್ಲಿ 10gm, 100gm, 1000gm (1ಕೆಜಿ) ಬೆಳ್ಳಿ ದರ ಕ್ರಮವಾಗಿ ರೂ. 714, ರೂ. 7,140 ಹಾಗೂ ರೂ. 71,400 ಗಳಾಗಿವೆ. ಇನ್ನುಳಿದಂತೆ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ 71,400 ಆಗಿದ್ದರೆ ದೆಹಲಿಯಲ್ಲಿ 71,400 ಮುಂಬೈನಲ್ಲಿ 66,600 ಹಾಗೂ ಕೋಲ್ಕತ್ತದಲ್ಲೂ ರೂ. 66,600 ಗಳಾಗಿದೆ.
ಇದನ್ನೂ ಓದಿ: Natural Farming: 4 ಸಾವಿರ ಎಕರೆಯಲ್ಲಿ ಸರ್ಕಾರದಿಂದಲೇ ನೈಸರ್ಗಿಕ ಕೃಷಿ! ಯಾವ ಊರಲ್ಲಿ ತಿಳಿಯಿರಿ
ಒಟ್ಟಾರೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರದ ಬೆಲೆಯಲ್ಲಿ ಏರಿಕೆ - ಇಳಿಕೆಯ ಹಾವು ಏಣಿ ಆಟ ಮುಂದುವರಿದಿದೆ. ಬೆಳ್ಳಿ ದರ ಕೂಡ ಏರಿಳಿತ ಕಾಣುತ್ತಿದೆ. ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ಸೇರಿ ಹಲವು ಕಾರಣಗಳಿಂದ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ. ಷೇರು ಮಾರುಕಟ್ಟೆಯ ಪ್ರಭಾವದಿಂದಲೂ ಚಿನ್ನದ ಬೆಲೆ ಏರಿಕೆ - ಇಳಿಕೆಯಾಗಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ