Gold and Silver Price on April 2, 2022: ಯುಗಾದಿ ಹಬ್ಬದ (Yugadi Festival) ದಿನ ಚಿನ್ನ (Gold) ಖರೀದಿಸುವುದು ಶ್ರೇಯಸ್ಸು ಅಂತಾರೆ ಹಿರಿಯರು. ಹಾಗಂತ ಇಂದು ಚಿನ್ನ ಅಥವಾ ಬೆಳ್ಳಿ (Silver) ಖರೀದಿಸೋಣ ಅಂತ ಏನಾದ್ರೂ ಯೋಚನೆ ಮಾಡಿದ್ದೀರಾ? ಹಾಗಿದ್ರೆ ಆಭರಣದ ಅಂಗಡಿಗೆ (Jewellery Shop) ಹೋಗುವ ಮುನ್ನ ಇಂದು ಚಿನ್ನ, ಬೆಳ್ಳಿ ದರ (Price) ಎಷ್ಟಿದೆ ಅಂತ ತಿಳಿದುಕೊಂಡರೆ ಉತ್ತಮ. ಯಾಕೆಂದ್ರೆ ಕಳೆದ ಎರಡು ಮೂರು ದಿನಗಳಿಂದ ಇಳಿಕೆ ಆಗಿದ್ದ ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಇಂದು ಏರಿಕೆಯಾಗಿದೆ. ಇಂದು ಚಿನ್ನದ ದರದಲ್ಲಿ 10 ಗ್ರಾಂಗೆ 450 ರೂ. ಏರಿಕೆಯಾಗಿದೆ. ನಿನ್ನೆ ದಾಖಲೆಯ ಕುಸಿತ ಕಂಡಿದ್ದ ಬೆಳ್ಳಿಯ ಬೆಲೆ ಇಂದು ಒಂದೇ ದಿನದಲ್ಲಿ 800 ರೂಪಾಯಿಗಳಷ್ಟು ಏರಿಕೆ ಕಂಡಿದೆ.
ಇಂದು ಚಿನ್ನದ ಬೆಲೆಯಲ್ಲಿ ಏರಿಕೆ!
ಇಂದು ಯುಗಾದಿ ಹಬ್ಬದ ದಿನವೇ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ಭಾರತದಲ್ಲಿ ನಿನ್ನೆ 22 ಕ್ಯಾರೆಟ್ ಚಿನ್ನದ ಬೆಲೆ 47,650 ರೂ. ಇದ್ದುದು, ಇಂದು 48,100 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 51,980 ರೂ ಇದ್ದದ್ದು, ಇಂದು 52,470 ರೂ. ಆಗಿದೆ.
ಬೆಂಗಳೂರಿನಲ್ಲಿ ಇಂದು ಎಷ್ಟಿದೆ ಬಂಗಾರದ ಬೆಲೆ?
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿಂದು 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 48,100 ರೂಪಾಯಿ ಆಗಿದೆ. ಹಾಗೆಯೇ ಮಂಗಳೂರು ಹಾಗೂ ಮೈಸೂರಿನಲ್ಲೂ ಇದೇ ಬೆಲೆ ಇದೆ. ಇನ್ನು ಬೆಂಗಳೂರಿನಲ್ಲಿ 24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ ಬೆಂಗಳೂರು- 52,470 ರೂ ಆಗಿದ್ದರೆ, ಮಂಗಳೂರಿನಲ್ಲೂ 52,470 ರೂಪಾಯಿ ಹಾಗೂ ಮೈಸೂರಿನಲ್ಲೂ 52,470 ರೂಪಾಯಿ ಬೆಲೆ ಇದೆ.
ಇದನ್ನೂ ಓದಿ: ಮಾರ್ಚ್ನಲ್ಲಿ ₹ 1,42,095 ಕೋಟಿ GST ಸಂಗ್ರಹ! ಸಾರ್ವಕಾಲಿಕ ಗರಿಷ್ಠ ಮಟ್ಟದ ದಾಖಲೆ
ಇತರೇ ಮಹಾನಗರಗಳಲ್ಲಿ ಚಿನ್ನದ ದರ ಎಷ್ಟಿದೆ?
ಇನ್ನು ದೇಶದ ಇತರೇ ಮಹಾನಗರಗಳಲ್ಲಿ 22 ಕ್ಯಾರೆಟ್ ಬಂಗಾರದ ಬೆಲೆ ಎಷ್ಟಿದೆ ಅನ್ನೋದನ್ನು ನೋಡೋಣ. ಇಂದು ಚೆನ್ನೈ- 48,340 ರೂ. ಮುಂಬೈ- 48,100 ರೂ, ದೆಹಲಿ- 48,100 ರೂ, ಕೊಲ್ಕತ್ತಾ- 48,100 ರೂ, ಹೈದರಾಬಾದ್- 48,100 ರೂ, ಕೇರಳ- 48,100 ರೂ, ಹಾಗೂ ಪುಣೆಲ್ಲಿ 48,180 ರೂಪಾಯಿ ಬೆಲೆ ಇದೆ.
24 ಕ್ಯಾರೆಟ್ ಚಿನ್ನದ ಬೆಲೆ
24 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ ಇಂದು ಚೆನ್ನೈ- 52,730 ರೂ, ಮುಂಬೈ- 52,470 ರೂ, ದೆಹಲಿ- 52,470 ರೂ, ಕೊಲ್ಕತ್ತಾ- 52,470 ರೂ, ಹೈದರಾಬಾದ್- 52,470 ರೂ, ಕೇರಳ- 52,470 ರೂಪಾಯಿ ಹಾಗೂ ಪುಣೆಯಲ್ಲಿ 52,550 ರೂಪಾಯಿ ಬೆಲೆ ನಿಗದಿಯಾಗಿದೆ.
ಬೆಳ್ಳಿ ದರದಲ್ಲಿ 800 ರೂಪಾಯಿ ಏರಿಕೆ
ಯುಗಾದಿ ಹಬ್ಬದಂದು ಇಂದು ಒಂದೇ ದಿನದಲ್ಲಿ 1 ಕೆಜಿ ಬೆಳ್ಳಿ ಬೆಲೆ 800 ರೂ. ಏರಿಕೆ ಕಂಡಿದೆ. ಭಾರತದಲ್ಲಿ 1 ಕೆಜಿ ಬೆಳ್ಳಿಯ ದರ ನಿನ್ನೆ 66,800 ರೂ. ಇದ್ದುದು ಇಂದು 67,600 ರೂ.ಗೆ ಏರಿಕೆಯಾಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 71,700 ರೂ, ಮೈಸೂರು- 71,700 ರೂ., ಮಂಗಳೂರು- 71,700 ರೂ., ಮುಂಬೈ- 67,600 ರೂ, ಚೆನ್ನೈ- 71,700 ರೂ, ದೆಹಲಿ- 67,600 ರೂ, ಹೈದರಾಬಾದ್- 71,700 ರೂ, ಕೊಲ್ಕತ್ತಾ- 67,600 ರೂಪಾಯಿ ಬೆಲೆ ನಿಗದಿಯಾಗಿದೆ.
ಇದನ್ನೂ ಓದಿ: Bengaluru Airport: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟ 10ರಿಂದ 25ಕ್ಕೆ ಹೆಚ್ಚಳ!
ಒಟ್ಟಾರೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರದ ಬೆಲೆಯಲ್ಲಿ ಏರಿಕೆ - ಇಳಿಕೆಯ ಹಾವು ಏಣಿ ಆಟ ಮುಂದುವರಿದಿದೆ. ಬೆಳ್ಳಿ ದರ ಕೂಡ ಏರಿಳಿತ ಕಾಣುತ್ತಿದೆ. ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ಸೇರಿ ಹಲವು ಕಾರಣಗಳಿಂದ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ. ಷೇರು ಮಾರುಕಟ್ಟೆಯ ಪ್ರಭಾವದಿಂದಲೂ ಚಿನ್ನದ ಬೆಲೆ ಏರಿಕೆ - ಇಳಿಕೆಯಾಗಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ