• Home
  • »
  • News
  • »
  • business
  • »
  • Budget Planning: ವೈಯಕ್ತಿಕ ಬಜೆಟ್ ಪ್ಲಾನ್ ಮಾಡುವಾಗ ಈ 5 ಪ್ರಮುಖ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಿ

Budget Planning: ವೈಯಕ್ತಿಕ ಬಜೆಟ್ ಪ್ಲಾನ್ ಮಾಡುವಾಗ ಈ 5 ಪ್ರಮುಖ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನಿಮ್ಮ ಬಜೆಟ್ ನಿಮ್ಮ ಜೀವನದಲ್ಲಿ ಏನಾದರೂ ಬದಲಾದರೆ ಅದು ಹೊಂದಿಕೊಳ್ಳುವಂತಿರಬೇಕು.

  • Trending Desk
  • 3-MIN READ
  • Last Updated :
  • Share this:

ಹೊಸ ವರ್ಷಕ್ಕೆ (New Year) ಅನೇಕರು ಒಂದಿಷ್ಟು ಗುರಿಗಳನ್ನಿಟ್ಟುಕೊಳ್ಳುತ್ತಾರೆ. ಈ ವರ್ಷ ಹೀಗೆಯೇ ಮಾಡಬೇಕು ಎಂಬ ನಿರ್ಧಾರ ತೆಗೆದುಕೊಂಡಿರುತ್ತಾರೆ. ಅದರಲ್ಲಿ ಬಜೆಟ್‌ ನಿರ್ವಹಣೆ (Budget Planning) ಕೂಡ ಒಂದು. ಇದು ಅನೇಕರ ಹೊಸ ವರ್ಷದ ಸಂಕಲ್ಪಗಳಲ್ಲಿ (New Year Resolution) ಮುಖ್ಯವಾದದ್ದಾಗಿರುತ್ತದೆ. ಅನೇಕ ಜನರು 2023 ಅನ್ನು ಬಜೆಟ್ ಮಾಡುವುದು, ಯೋಜನೆ ಮಾಡುವುದು ಮತ್ತು ಉಳಿಸುವುದು ಹೇಗೆ (Money Saving) ಎಂದು ಯೋಚಿಸುವ ಮೂಲಕ ಪ್ರಾರಂಭಿಸುತ್ತಾರೆ. ಬಜೆಟ್‌ ಅನ್ನೋದು ಆದಾಯ ಮತ್ತು ವೆಚ್ಚವನ್ನು (Income And Expenditure) ಮೇಲ್ವಿಚಾರಣೆ ಮಾಡಲು ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ. ದೊಡ್ಡ ಹಣಕಾಸಿನ ಗುರಿಗಳನ್ನು ಹೊಂದಿರುವಾಗ ನಿಮಗೆ ಅದರ ಮೇಲ್ವಿಚಾರಣೆ ಮಾಡೋದಕ್ಕೆ ವೈಯಕ್ತಿಕ ಬಜೆಟ್‌ (Personal Budget) ಸಹಾಯ ಮಾಡುತ್ತದೆ.


ಹಣವನ್ನು ಉಳಿಸಲು, ನಿಮ್ಮ ಸಾಲಗಳನ್ನು ಕಡಿಮೆ ಮಾಡಲು ಮತ್ತು ಆರಾಮದಾಯಕ ಜೀವನವನ್ನು ನಡೆಸುವಲ್ಲಿ ಬಜೆಟ್ ಹೆಚ್ಚಿನ ಕೊಡುಗೆ ನೀಡುತ್ತದೆ. ಅಲ್ಲದೇ ಇದರಿಂದ ನಿಮ್ಮ ಮಾನಸಿಕ ಆರೋಗ್ಯವನ್ನು ಸುಧಾರಿಸುವಲ್ಲಿ ಕೂಡ ಇದು ಮುಖ್ಯ ಪಾತ್ರ ವಹಿಸುತ್ತದೆ.


ತಜ್ಞರ ಪ್ರಕಾರ, ನೀವು ಬಜೆಟ್‌ ರಚಿಸುವಾಗ ಕೆಲವೊಂದು ಪ್ರಶ್ನೆಗಳನ್ನು ಕೇಳಿಕೊಳ್ಳುವುದು ಉತ್ತಮ. ಇದಕ್ಕೆ ನಿಮಗೆ ಸಿಗುವ ಉತ್ತರದ ಸಹಾಯದಿಂದ ನೀವು ಸರಿಯಾದ ದಾರಿಯಲ್ಲಿ ಸಾಗಬಹುದು. ಅದಕ್ಕಾಗಿ 5 ಪ್ರಮುಖ ಸಲಹೆಗಳು ಇಲ್ಲಿವೆ.


tips for managing your personal budget stg mrq
ಸಾಂದರ್ಭಿಕ ಚಿತ್ರ


1.ಆರ್ಥಿಕ ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳಿ: ಎಲ್ಲಕ್ಕಿಂತ ಮೊದಲು ನೀವು ಆರ್ಥಿಕ ಪರಿಸ್ಥಿತಿಗಳನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ. ಹಾಗಂತ ನೀವು ವೃತ್ತಿಪರ ಅರ್ಥಶಾಸ್ತ್ರಜ್ಞರಾಗಿರಬೇಕಾಗಿಲ್ಲ.


ಆದರೆ ಉಚಿತ ವ್ಯಾಪಾರ ನೋಂದಣಿ, ಸಣ್ಣ ವ್ಯಾಪಾರ ಅಭಿವೃದ್ಧಿ ನಿಧಿಗಳು ಮತ್ತು ಹೊಸ ಹಣದ ನೋಟುಗಳ ಮುದ್ರಣದಂತಹ ಹೊಸ ಬೆಳವಣಿಗೆಗಳ ಮೇಲೆ ಗಮನವಿರಲಿ.


ಅಲ್ಲದೇ ಹಣದುಬ್ಬರ, ನಿರುದ್ಯೋಗ ಅಂತಾರಷ್ಟ್ರೀಯ ಆರ್ಥಿಕ ಪರಿಸ್ಥಿತಿಗಳ ಬಗ್ಗೆ ಗಮನ ಇರಬೇಕು. ಇಂತಹ ವಿಷಯಗಳ ಮೇಲಿನ ಜ್ಞಾನವು ನಿಮ್ಮ ಸ್ವಂತ ಬಜೆಟ್ ಅನ್ನು ರಚಿಸಲು ಸಹಾಯ ಮಾಡುತ್ತವೆ.


2.ನಿಮ್ಮ ಆದಾಯದ ಮೂಲಗಳನ್ನು ಪರಿಶೀಲಿಸಿ: ನಿರ್ದಿಷ್ಟ ಆದಾಯದ ಮೂಲವನ್ನು ಹೊಂದಿರುವುದು ಬಜೆಟ್‌ನ ಮೂಲಾಧಾರವಾಗಿದೆ.


ನಿಮ್ಮ ಆದಾಯದ ಬಗ್ಗೆ ನೀವು ಕೇಳಬೇಕಾದ ಕೆಲವು ಪ್ರಮುಖ ಪ್ರಶ್ನೆಗಳೆಂದರೆ, ನನ್ನ ಪ್ರಸ್ತುತ ಆದಾಯ ಏನು? ನನ್ನ ಆದಾಯವನ್ನು ನಾನು ಯಾವುದಕ್ಕಾಗಿ ಬಳಸುತ್ತೇನೆ? ನನ್ನ ಆದಾಯವನ್ನು ಗಮನಿಸಿದರೆ ನಾನು ಉಳಿಸಲು ಸಾಧ್ಯವೇ? ಆದಾಯದ ಯಾವ ಪ್ರಮಾಣವನ್ನು ನಾನು ಉಳಿಸುತ್ತೇನೆ? ಯಾವ ಪ್ರಮಾಣದಲ್ಲಿ ಖರ್ಚು ಮಾಡುತ್ತೇನೆ? ಇದಕ್ಕಿಂತ ಹೆಚ್ಚಿನದನ್ನು ಗಳಿಸುವ ಸಾಮರ್ಥ್ಯ ನನ್ನಲ್ಲಿದೆಯೇ? ನನ್ನ ಆದಾಯವನ್ನು ನಾನು ಹೇಗೆ ಸುಧಾರಿಸಬಹುದು? ಇದಕ್ಕೆ ಸಿಗುವ ಉತ್ತರಗಳು ನಿಮ್ಮ ಬಜೆಟ್‌ ನಿರ್ಧರಿಸುವಲ್ಲಿ ನಿಮಗೆ ಸಹಾಯಕವಾಗುತ್ತವೆ.


ಈ ಮಧ್ಯೆ ಪ್ರತಿಯೊಬ್ಬರೂ ತಮ್ಮ ಬಜೆಟ್‌ ರಚಿಸುವಾಗ ಆರೋಗ್ಯ ಸಮಸ್ಯೆಗಳು, ಹಣದುಬ್ಬರ, ನಿರುದ್ಯೋಗ, ಆರ್ಥಿಕ ಹಿಂಜರಿತ ಮತ್ತು ಬೆಲೆ ಆಘಾತಗಳಂತಹ ಅನಿಶ್ಚಿತ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.


3.ಖರ್ಚುಗಳನ್ನು ಮೌಲ್ಯಮಾಪನ ಮಾಡಿ: ನಮ್ಮ ಖರ್ಚುಗಳನ್ನು ಪರಿಷ್ಕರಿಸುವ ಮುಖ್ಯ ಉದ್ದೇಶವೆಂದರೆ ಖರ್ಚು ಅಭ್ಯಾಸಗಳನ್ನು ಸುಧಾರಿಸುವುದು.


ನಮ್ಮ ಖರ್ಚುಗಳನ್ನು ಪರಿಶೀಲಿಸುವಾಗ ನಾನು ಎಷ್ಟು ಖರ್ಚು ಮಾಡುತ್ತೇನೆ? ಎಷ್ಟನ್ನು ಉಳಿಸುತ್ತೇನೆ? ಎಂಬುದು ಗೊತ್ತಾಗುತ್ತದೆ. ಇದು ಗೊತ್ತಾದಾಗ ನಮ್ಮ ಅನಿಯಮಿತ ವೆಚ್ಚಗಳು ಯಾವವು? ನನ್ನ ಬಳಿ ಎಷ್ಟು ದುಡ್ಡಿದೆ ಹಾಗೂ ನಾನು ಯಾವ್ಯಾವ ಖರ್ಚುಗಳನ್ನು ಕಡಿಮೆ ಮಾಡಬಹುದು ಎಂಬುದಾಗಿ ನಿಮಗೆ ತಿಳಿಯುತ್ತದೆ. ಇದರಿಂದ ನಿಮ್ಮ ಖರ್ಚು ವೆಚ್ಚಗಳನ್ನು ಮರುಮೌಲ್ಯಮಾಪನ ಮಾಡಲು ಸಾಧ್ಯವಾಗುತ್ತದೆ.


tips for managing your personal budget stg mrq
ಸಾಂದರ್ಭಿಕ ಚಿತ್ರ


4. ಉಳಿತಾಯದ ಮೂಲಕ ಹಣಕಾಸನ್ನು ಸ್ಥಿರಗೊಳಿಸಿ: ಉಳಿತಾಯ ಮಾಡುವ ಮೂಲಕ ನೀವು ಆರ್ಥಿಕ ಸ್ಥಿರತೆ ಕಾಯ್ದುಕೊಳ್ಳಬಹುದು. ಅದರ ಮೂಲಕ ಹೆಚ್ಚಿನ ಹಣವನ್ನೂ ಗಳಿಸಬಹುದು.


ಷೇರುಗಳು, ಬಾಂಡ್‌ಗಳು, ಕಿರು ಬಂಡವಾಳ ಮತ್ತು ಉತ್ಪಾದನೆಯಂಥದ್ದರಲ್ಲಿ ಹೂಡಿಕೆ ಮಾಡಿದರೆ ಹಣದ ಮೌಲ್ಯವೂ ಹೆಚ್ಚಾಗುತ್ತದೆ. ಕೆಲವೊಮ್ಮೆ ಉಳಿತಾಯ ಮಾಡದೇ ಖರ್ಚು ಮಾಡುವುದು ಕಠಿಣ ಪರಿಸ್ಥಿತಿಗಳಿಗೆ ಕಾರಣವಾಗಬಹುದು.


ಹಾಗಾಗಿ ದಿನಗಳ, ವಾರಗಳ ಅಥವಾ ಮಾಸಿಕವಾಗಿ ಉಳಿತಾಯ ಮಾಡುವಂಥ ವಿಧಾನಗಳನ್ನು ಅನುಸರಿಸಬಹುದು.


tips for managing your personal budget stg mrq
ಸಾಂದರ್ಭಿಕ ಚಿತ್ರ


5.ಹೊಂದಿಕೊಳ್ಳುವ ಬಜೆಟ್: ನಿಮ್ಮ ಬಜೆಟ್ ನಿಮ್ಮ ಜೀವನದಲ್ಲಿ ಏನಾದರೂ ಬದಲಾದರೆ ಅದು ಹೊಂದಿಕೊಳ್ಳುವಂತಿರಬೇಕು. ಉದಾಹರಣೆಗೆ, ಯಾವುದೋ ಸಂದರ್ಭದಲ್ಲಿ ನೀವು ಹಣವನ್ನು ಉಳಿಸಿದ್ದೀರಿ ಎಂದಾದರೆ ಅದನ್ನು ಲಾಭ ಬರಬಹುದಾದ ಷೇರುಗಳಲ್ಲಿ ಹೂಡಿಕೆ ಮಾಡಬಹುದು.


ಇದನ್ನೂ ಓದಿ: Pensioners: ಪಿಂಚಣಿದಾರರಿಗೆ ಗುಡ್ ನ್ಯೂಸ್, ಈ ಪ್ರಕ್ರಿಯೆ ಈಗ ಮತ್ತಷ್ಟು ಸರಳ!


ಕೆಲವೊಮ್ಮೆ ಆರೋಗ್ಯ ಅಥವಾ ಇನ್ಯಾವುದೋ ಅನಿವಾರ್ಯ ಕಾರಣಗಳಿಗಾಗಿ ಖರ್ಚು ಹೆಚ್ಚಾಗಬಹುದು. ಆದ್ದರಿಂದ ನಿಮ್ಮ ಜೀವನದಲ್ಲಿ ಆಗುವಂಥ ಬದಲಾವಣೆಗಳಿಗೆ ನಿಮ್ಮ ಬಜೆಟ್‌ ಹೊಂದಿಕೊಳ್ಳುವಂತಿರಬೇಕು ಅಷ್ಟೇ.

Published by:Mahmadrafik K
First published: