Money Saving: ಈ ಟೆಕ್ನಿಕ್ ಬಳಸಿದ್ರೆ ವಿದ್ಯಾರ್ಥಿಗಳು ಪಾಕೆಟ್​ ಮನಿಯಲ್ಲೂ ಸಿಕ್ಕಾಪಟ್ಟೆ ಹಣ ಉಳಿಸಬಹುದು!

ಪಾಕೆಟ್ ಮನಿ ಉಳಿಸುವ ಟಿಪ್ಸ್ (ಸಾಂದರ್ಭಿಕ ಚಿತ್ರ)

ಪಾಕೆಟ್ ಮನಿ ಉಳಿಸುವ ಟಿಪ್ಸ್ (ಸಾಂದರ್ಭಿಕ ಚಿತ್ರ)

Pocket Money Saving: ಹಣವನ್ನು ಉಳಿಸುವುದರಿಂದ ಅನೇಕ ಪ್ರಯೋಜನಗಳಿವೆ. ಅದು ಉನ್ನತ ಶಿಕ್ಷಣಕ್ಕೆ ಧನಸಹಾಯ ಅಥವಾ ನಿರ್ದಿಷ್ಟ ವಸ್ತುವನ್ನು ಖರೀದಿಸಲು ಸಹಾಯವಾಗುತ್ತದೆ.

  • Share this:

ವಿದ್ಯಾರ್ಥಿಗಳ (Students) ಪಾಲಿಗೆ ಅವರ ಪೋಷಕರು ಕೊಡುವ ಪಾಕೆಟ್‌ ಮನಿ (Pocket Money) ಬಹಳ ಮುಖ್ಯವಾಗಿದೆ. ಕೆಲವರು ಆ ಪಾಕೆಟ್‌ ಮನಿಯಲ್ಲೇ ಕೆಲವಷ್ಟನ್ನು ಉಳಿಸುತ್ತಾರೆ. ಇನ್ನೂ ಕೆಲವರು ಅಷ್ಟನ್ನೂ ಖಾಲಿ ಮಾಡುತ್ತಾರೆ. ಇನ್ನೂ ಕೆಲವರಿಗೆ ಅದು ಸಾಕಾಗುವುದೇ ಇಲ್ಲ. ಆದರೆ ಪಾಕೆಟ್ ಮನಿಯನ್ನು ಉಳಿಸುವುದು ವಿದ್ಯಾರ್ಥಿಗಳಿಗೆ ಬಹುಮುಖ್ಯವಾಗಿದೆ. ಏಕೆಂದರೆ ಅದು ಆರ್ಥಿಕ ಶಿಸ್ತು (Economic Discipline ) ಮತ್ತು ಜವಾಬ್ದಾರಿಯನ್ನು, ಹಣದ ಮೌಲ್ಯವನ್ನು (Money Value) ಕಲಿಸುತ್ತದೆ. ಉತ್ತಮ ಉಳಿತಾಯ ಅಭ್ಯಾಸಗಳನ್ನು ಬೆಳೆಸುತ್ತದೆ.


ಕೆಲವೊಮ್ಮೆ ಅನಿರೀಕ್ಷಿತ ಖರ್ಚುಗಳು ಬಂದಾಗ ಇದೇ ಉಳಿತಾಯದ ಹಣ  ಉಪಯೋಗಕ್ಕೆ ಬರುತ್ತದೆ. ಅವರು ಇತರರ ಮೇಲೆ ಅವಲಂಬಿತರಾಗದೆ, ಸಾಲ ಪಡೆದುಕೊಳ್ಳದೇ ಸ್ವತಂತ್ರವಾಗಿ ಅಂತಹ ಸಂದರ್ಭಗಳನ್ನು ನಿಭಾಯಿಸಬಹುದು.


ಇದಲ್ಲದೆ, ಪಾಕೆಟ್ ಹಣವನ್ನು ಉಳಿಸುವುದರಿಂದ ಅನೇಕ ಪ್ರಯೋಜನಗಳಿವೆ. ಅದು ಉನ್ನತ ಶಿಕ್ಷಣಕ್ಕೆ ಧನಸಹಾಯ ಅಥವಾ ನಿರ್ದಿಷ್ಟ ವಸ್ತುವನ್ನು ಖರೀದಿಸಲು ಸಹಾಯವಾಗುತ್ತದೆ. ತಮಗೆ ಬೇಕಾದದ್ದನ್ನು ಖರೀದಿ ಮಾಡಲು ಅವರು ಯಾರನ್ನೂ ಅವಲಂಬಿಸಬೇಕಾಗುವುದಿಲ್ಲ.


tips and trics to save pocket money stg mrq
ಸಾಂದರ್ಭಿಕ ಚಿತ್ರ


ವಿದ್ಯಾರ್ಥಿಗಳು ತಮ್ಮ ಪಾಕೆಟ್ ಹಣವನ್ನು ಹೇಗೆ ಸರಿಯಾಗಿ ಬಳಸಿಕೊಳ್ಳಬಹುದು ಎಂಬುದಕ್ಕೆ ಸಲಹೆಗಳು ಇಲ್ಲಿವೆ.


*ಬಜೆಟ್ ಹೊಂದಿಸಿ: ನಿಮ್ಮ ಪಾಕೆಟ್ ಹಣವನ್ನು ನಿರ್ವಹಿಸುವ ಮೊದಲ ಹಂತವೆಂದರೆ ಬಜೆಟ್ ಹೊಂದಿಸುವುದು. ಇದು ನಿಮ್ಮ ಖರ್ಚನ್ನು ಟ್ರ್ಯಾಕ್ ಮಾಡಲು ಸಹಕಾರಿ. ಅಲ್ಲದೇ ನೀವು ಅಗತ್ಯಕ್ಕಿಂತ ಹೆಚ್ಚು ಖರ್ಚು ಮಾಡುತ್ತಿಲ್ಲ ಎಂದು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ.


* ಖರ್ಚಿನ ಬಗ್ಗೆ ಗಮನವಿರಲಿ: ನಿಮ್ಮ ಖರ್ಚಿನ ಬಗ್ಗೆ ಗಮನಹರಿಸುವುದು ಮುಖ್ಯ. ಬೇಡವಾಗಿದ್ದನ್ನು, ಅನಗತ್ಯವಾಗಿದ್ದಕ್ಕೆ ನೀವು ಹೆಚ್ಚು ಹಣವನ್ನು ಪೋಲು ಮಾಡುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಬಜೆಟ್‌ನಲ್ಲಿ ನಿಮ್ಮ ಖರ್ಚುಗಳನ್ನು ಟ್ರ್ಯಾಕ್ ಮಾಡುವುದು ಅತ್ಯುತ್ತಮ ಮಾರ್ಗವಾಗಿದೆ.


* ಖರ್ಚುಗಳನ್ನು ಪಟ್ಟಿ ಮಾಡಿ: ಸಾಮಾನ್ಯವಾಗಿ ನೀವು ಎಷ್ಟು ಹಣವನ್ನು ಖರ್ಚು ಮಾಡಬೇಕೆಂದು ನಿಮಗೆ ತಿಳಿದಿರುತ್ತದೆ. ಅದಕ್ಕನುಗುಣವಾಗಿ ನಿಮ್ಮ ವೆಚ್ಚಗಳ ಪಟ್ಟಿಮಾಡಿ. ಇದರಿಂದ ನಿಮ್ಮ ಹಣ ಎಲ್ಲಿಗೆ ಹೋಗುತ್ತಿದೆ ಎಂಬುದನ್ನು ತಿಳಿಯಬಹುದು. ಹಾಗೆಯೇ ಅನಗತ್ಯ ವೆಚ್ಚಗಳನ್ನು ಕಡಿಮೆ ಮಾಡಬಹುದು.


* ಮನೆಯಲ್ಲಿ ಅಡುಗೆ ಮಾಡಿ: ವಿದ್ಯಾರ್ಥಿಗಳಿಗೆ ನಿಯಮಿತವಾಗಿ ಹೊರಗೆ ತಿನ್ನುವುದು ದುಬಾರಿಯಾಗಬಹುದು. ಆದ್ದರಿಂದ ಸಾಧ್ಯವಾದಷ್ಟು ಮನೆಯಲ್ಲಿಯೇ ಊಟವನ್ನು ತಯಾರಿಸಲು ಪ್ರಯತ್ನಿಸಿ. ಇದರಿಂದ ಹಣವೂ ಉಳಿಯುತ್ತದೆ ಹಾಗೆಯೇ ಆರೋಗ್ಯವೂ ಚೆನ್ನಾಗಿರುತ್ತದೆ.


tips and trics to save pocket money stg mrq
ಸಾಂದರ್ಭಿಕ ಚಿತ್ರ


* ಖರ್ಚುಗಳನ್ನು ಹಂಚಿಕೊಳ್ಳಿ: ನೀವು ಸ್ನೇಹಿತರೊಂದಿಗೆ ಹೊರಗೆ ಹೋಗುತ್ತಿದ್ದರೆ ಎಲ್ಲರೂ ಸಮಾನವಾಗಿ ಖರ್ಚುಗಳನ್ನು ಹಂಚಿಕೊಂಡಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.


ಉದಾಹರಣೆಗೆ, ನೀವು ಎಲ್ಲಾದರೂ ಕ್ಯಾಬ್‌ ಮಾಡಿಸಿಕೊಂಡು ಹೋದರೆ ಅಥವಾ ಸಿನಿಮಾಕ್ಕೋ, ಊಟಕ್ಕೋ ಹೊರಗೆ ಹೋದರೆ ಎಲ್ಲರೂ ವೆಚ್ಚಗಳನ್ನು ಸಮಾನವಾಗಿ ಹಂಚಿಕೊಂಡಿದ್ದಾರೆ ಎಂದು ತಿಳಿದುಕೊಳ್ಳಿ. ಇದರಿಂದ ನಿಮ್ಮ ಪಾಕೆಟ್‌ಗೊಂದೇ ಕತ್ತರಿ ಬೀಳದೇ ನೀವು ನಿರಾಳತೆಯನ್ನು ಅನುಭವಿಸಬಹುದು.


* ಅನಗತ್ಯ ಖರೀದಿಗಳನ್ನು ತಪ್ಪಿಸಿ: ಖರ್ಚುಗಳ ಕುರಿತು ನೀವು ಜಾಗರೂಕರಾಗಿರುವುದು ಹಾಗೂ ಅನಗತ್ಯ ಎನಿಸಿದ್ದನ್ನು ಖರೀದಿಸದೇ ಇರುವುದು ಅಗತ್ಯ. ಉದ್ವೇಗದಲ್ಲಿ ನೀವು ಖರೀದಿ ಮಾಡಲು ತೊಡಗಿದರೆ ಅದು ನಿಮಗೆ ಹೊರೆಯಾಗಬಹುದು.


ಆದ್ದರಿಂದ ನೀವು ಏನನ್ನಾದರೂ ಖರೀದಿಸುವ ಮೊದಲು ನಿಮಗೆ ನಿಜವಾಗಿಯೂ ಅದು ಅಗತ್ಯವಿದೆಯೇ ಎಂದು ಯೋಚಿಸಿ.


* ಭವಿಷ್ಯಕ್ಕಾಗಿ ಉಳಿಸಿ: ನೀವು ಪ್ರತಿ ತಿಂಗಳು ಸ್ವಲ್ಪ ಹಣವನ್ನು ಮಾತ್ರ ಉಳಿಸಬಹುದಾದರೂ, ಅದು ಕಾಲಾನಂತರದಲ್ಲಿ ಹೆಚ್ಚಿನ ಮೊತ್ತವಾಗುತ್ತದೆ. ಆದ್ದರಿಂದ ಉಳಿತಾದ ಅಕೌಂಟ್‌ ತೆರೆಯುವುದನ್ನು ಪರಿಗಣಿಸಿ. ಪ್ರತಿ ತಿಂಗಳು ಅದರಲ್ಲಿ ಹಣವನ್ನು ಠೇವಣಿ ಮಾಡುವ ಅಭ್ಯಾಸ ಮಾಡಿ.




* ನಿಮಗಾಗಿ ಹೂಡಿಕೆ ಮಾಡಿ: ನಿಮ್ಮ ಪಾಕೆಟ್ ಹಣವನ್ನು ನಿಮ್ಮಲ್ಲಿ ಹೂಡಿಕೆ ಮಾಡಬಹುದು. ಉದಾಹರಣೆಗೆ ಯಾವುದಾದರೂ ನಿಮ್ಮಿಷ್ಟದ ಕ್ಲಾಸ್‌ಗಳಿಗೆ ಸೇರುವುದು, ಪುಸ್ತಕ ಖರೀದಿಸುವುದು, ಕ್ಲಬ್‌ಗೆ ಸೇರಬಹುದು. ನಿಮ್ಮಲ್ಲಿ ಹೂಡಿಕೆ ಮಾಡುವುದರಿಂದ ನಿಮ್ಮದೇ ಅಭಿವೃದ್ಧಿಗೆ ನೀವು ಕೊಡುಗೆ ನೀಡಿದಂತಾಗುತ್ತದೆ.


* ಹಣಕಾಸಿನ ಗುರಿಗಳನ್ನು ಹೊಂದಿಸಿ: ಇಂತಿಷ್ಟು ದಿನದಲ್ಲಿ ಇಷ್ಟು ಉಳಿತಾಯ ಮಾಡಬಹುದು ಎಂಬುದನ್ನು ಮನಸ್ಸಿನಲ್ಲಿ ಲೆಕ್ಕ ಹಾಕಿ. ಇದು ಹಣಕಾಸಿನ ಗುರಿಗಳನ್ನು ಹೊಂದಲು ಸಹಾಯಕವಾಗಿದೆ. ಆದ್ದರಿಂದ ನಿಮ್ಮ ಗುರಿಗಳನ್ನು ತಲುಪಲು ಟ್ರ್ಯಾಕ್‌ನಲ್ಲಿರುವಿರಿ ಎಂದು ಖಚಿತಪಡಿಸಿಕೊಳ್ಳಿ.


ಇದನ್ನೂ ಓದಿ: Onion Price : ₹30ರಿಂದ 2 ರೂಪಾಯಿಗೆ ಕುಸಿದ ಈರುಳ್ಳಿ ಬೆಲೆ! ಪಾತಾಳಕ್ಕಿಳಿದ ರೇಟ್‌ನಿಂದ ಕಂಗಾಲಾದ ಬೆಳೆಗಾರರು


* ಅಗತ್ಯವಿದ್ದರೆ ಸಹಾಯ ಕೇಳಿ: ನಿಮ್ಮ ಪಾಕೆಟ್ ಮನಿಯನ್ನು ನಿರ್ವಹಿಸಲು ನೀವು ಹೆಣಗಾಡುತ್ತಿದ್ದರೆ, ನಿಮ್ಮ ಪೋಷಕರು, ಶಿಕ್ಷಕರು ಅಥವಾ ಆರ್ಥಿಕ ಸಲಹೆಗಾರರಿಂದ ಸಹಾಯವನ್ನು ಪಡೆಯಬಹುದು.

First published: