• Home
  • »
  • News
  • »
  • business
  • »
  • Government Banks: ಈ ಬಾರಿ ಸರ್ಕಾರಿ ಬ್ಯಾಂಕ್‌ಗಳಿಗೆ ಭರ್ಜರಿ ಲಾಭ, ಹಿಂದೆಂದೂ ಆಗಿರದಷ್ಟು ಪ್ರಾಫಿಟ್​!

Government Banks: ಈ ಬಾರಿ ಸರ್ಕಾರಿ ಬ್ಯಾಂಕ್‌ಗಳಿಗೆ ಭರ್ಜರಿ ಲಾಭ, ಹಿಂದೆಂದೂ ಆಗಿರದಷ್ಟು ಪ್ರಾಫಿಟ್​!

ಬ್ಯಾಂಕ್‌

ಬ್ಯಾಂಕ್‌

ಇತ್ತೀಚಿನ ವರದಿಯ ಪ್ರಕಾರ ಸಪ್ಟೆಂಬರ್‌ ತ್ರೈಮಾಸಿಕ ಅವಧಿಯಲ್ಲಿ ಸರ್ಕಾರಿ ಬ್ಯಾಂಕ್‌ಗಳು ಶೇಕಡಾ 50% ರಷ್ಟು ಲಾಭವನ್ನು ಗಳಿಸಿದೆ ಎಂದು ವರದಿ ಮಾಡಿದ್ದಾರೆ. ಯಾವೆಲ್ಲಾ ಬ್ಯಾಂಕುಗಳು ಇಷ್ಟು ಲಾಭವನ್ನು ಪಡೆದಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

  • Share this:

ಇದೀಗ ಜನರೆಲ್ಲರೂ ಯಾವುದೇ ವ್ಯವಹಾರಗಳನ್ನು (Business) ಆರಂಭಿಸಬೇಕಾದರೆ ಬ್ಯಾಂಕಿನ (Bank) ಮೊರೆ ಹೋಗುತ್ತಾರೆ. ಅದ್ರಲ್ಲೂ ಈ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು (Government Bank) ಬಹಳ ಉನ್ನತ ಮಟ್ಟದಲ್ಲಿ ಸೌಲಭ್ಯವನ್ನು ತನ್ನ ಗ್ರಾಹಕರಿಗೆ (Customer) ನೀಡುತ್ತದೆ. ಈ ಪರಿಣಾಮವಾಗಿ ಜನರು ಮನೆ ಕಟ್ಟಲು, ವ್ಯವಹಾರ ಪ್ರಾರಂಭಿಸಲು, ಏನಾದರು ಕೆಲಸಕಾರ್ಯಗಳಿಗೆ ಹಣ ಹೂಡಿಕೆ ಅಥವಾ ಸಾಲ (Loan) ಸೌಲಭ್ಯಗಳನ್ನು ಪಡೆಯಬೇಕಾದರೂ ಈ ಬ್ಯಾಂಕ್‌ಗಳಿಂದಲೇ ಪಡೆಯುತ್ತಾರೆ. ಇದರಿಂದ ಬ್ಯಾಂಕ್‌ಗಳ ವ್ಯವಹಾರ ಮಾದರಿಯಲ್ಲಿ ಬಹಳ ಉತ್ತಮ ರೀತಿಯಲ್ಲಿ ಬೆಳವಣಿಗೆಯಾಗಲು ಸಾಧ್ಯವಾಗುತ್ತದೆ. ಈ ಬೆಳವಣಿಗೆಯೇ ಬ್ಯಾಂಕಿನ ಲಾಭಗಳು (Profit) ಹೆಚ್ಚಾಗಲು ಒಂದು ರೀತಿಯಲ್ಲಿ ಕಾರಣ ಅಂತ ಹೇಳಬಹುದು.


ಇತ್ತೀಚಿನ ವರದಿಯ ಪ್ರಕಾರ ಸಪ್ಟೆಂಬರ್‌ ತ್ರೈಮಾಸಿಕ ಅವಧಿಯಲ್ಲಿ ಸರ್ಕಾರಿ ಬ್ಯಾಂಕ್‌ಗಳು ಶೇಕಡಾ 50% ರಷ್ಟು ಲಾಭವನ್ನು ಗಳಿಸಿದೆ ಎಂದು ವರದಿ ಮಾಡಿದ್ದಾರೆ. ಯಾವೆಲ್ಲಾ ಬ್ಯಾಂಕುಗಳು ಇಷ್ಟು ಲಾಭವನ್ನು ಪಡೆದಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.


ಎಷ್ಟು ರೂಪಾಯಿ ಲಾಭ ಗಳಿಸಿದೆ?


ಸರಕಾರಿ ಸ್ವಾಮ್ಯದ 12 ಬ್ಯಾಂಕುಗಳ ಅಗತ್ಯವಿಲ್ಲದ ಸಾಲಗಳನ್ನು (ಎನ್‌ಪಿಎ) ಕಡಿಮೆ ಮಾಡುವ ಸರಕಾರದ ಪ್ರಯತ್ನಗಳು ಉತ್ತಮ ಫಲಿತಾಂಶ ನೀಡಿವೆ. ಇದರ ಪರಿಣಾಮ ಬ್ಯಾಂಕ್‌ಗಳ ಲಾಭ ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಶೇ.50ರಷ್ಟು ಹೆಚ್ಚಾಗಿದೆ. ಈ ಅವಧಿಯಲ್ಲಿ ಬ್ಯಾಂಕ್‌ಗಳು 25,685 ಕೋಟಿ ರೂಪಾಯಿ ಲಾಭ ದಾಖಲಿಸಿವೆ.


ಇದನ್ನೂ ಓದಿ: ಮತ್ತಷ್ಟು ಕುಸಿದ ಚಿನ್ನದ ದರ, ಬೆಳ್ಳಿ ಕೊಂಚ ಏರಿಕೆ: ಹೀಗಿದೆ ಇಂದಿನ ರೇಟ್!


ಇದರ ಬಗ್ಗೆ ಹಣಕಾಸು ಸಚಿವರ ಟ್ವೀಟ್:‌


ಈ ಬಗ್ಗೆ ಟ್ವೀಟ್‌ ಮಾಡಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, "ಈ ಬ್ಯಾಂಕ್‌ಗಳ ನಿವ್ವಳ ಲಾಭವು 2022-23ರ ಮೊದಲಾರ್ಧದಲ್ಲಿ ಶೇ. 32ರಷ್ಟು ಏರಿಕೆಯಾಗಿದ್ದು, 40,991 ಕೋಟಿ ರೂ. ಏರಿಕೆಯಾಗಿದೆ. ಎನ್‌ಪಿಎಗಳನ್ನು ಕಡಿಮೆ ಮಾಡಲು ಮತ್ತು ಬ್ಯಾಂಕ್‌ಗಳ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ಸರಕಾರ ನಿರಂತರ ಪ್ರಯತ್ನ ಹಾಕಿತ್ತು. ಇದರ ಫಲಿತಾಂಶ ಈಗ ಕಾಣುತ್ತಿದೆ,'' ಎಂದು ತಮ್ಮ ಟ್ವಿಟರ್‌ನಲ್ಲಿ ಟ್ವೀಟ್‌ ಅನ್ನು ಹಂಚಿಕೊಂಡಿದ್ದಾರೆ.


ಯಾವ ಬ್ಯಾಂಕ್‌ಗಳಲ್ಲಿ ಲಾಭ ಕಡಿಮೆಯಾಗಿದೆ?


ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಮತ್ತು ಬ್ಯಾಂಕ್‌ ಆಫ್‌ ಇಂಡಿಯಾ ಲಾಭದಲ್ಲಿ ಶೇ. 9 ರಿಂದ 63ರಷ್ಟು ಇಳಿಕೆಯಾಗಿದೆ. ಅನುಪಯುಕ್ತ ಸಾಲಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದರಿಂದ ಅವರ ಲಾಭವು ಕಡಿಮೆಯಾಗಿದೆ ಎಂದು ವರದಿ ಮಾಡಿದ್ದಾರೆ.


ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಯಾವ ಬ್ಯಾಂಕ್‌ ಎಷ್ಟು ಲಾಭ ಗಳಿಸಿದೆ?

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ13,265 ಕೋಟಿ ರೂಪಾಯಿಶೇಕಡಾ 74% ರಷ್ಟು ಏರಿಕೆ
ಕೆನರಾ ಬ್ಯಾಂಕ್2,525 ಕೋಟಿ ರೂಪಾಯಿಶೇಕಡಾ 89% ರಷ್ಟು ಏರಿಕೆ
ಯುಕೊ ಬ್ಯಾಂಕ್504 ಕೋಟಿ ರೂಪಾಯಿಶೇಕಡಾ 145% ರಷ್ಟು ಏರಿಕೆ
ಬ್ಯಾಂಕ್‌ ಆಫ್‌ ಬರೋಡಾ3,312.42 ಕೋಟಿ ರೂಪಾಯಿಶೇಕಡಾ 58.70% ರಷ್ಟು ಏರಿಕೆ
ಇತರ 10 ಬ್ಯಾಂಕ್‌ಗಳ ಲಾಭಶೇಕಡಾ 13% ರಿಂದ ಶೇ. 145% ರವರೆಗೆ ಏರಿಕೆ
ಬ್ಯಾಂಕ್‌ ಆಫ್‌ ಮಹಾರಾಷ್ಟ್ರ535 ಕೋಟಿ ರೂಪಾಯಿಶೇಕಡಾ 103% ರಷ್ಟು ಲಾಭ ಏರಿಕೆ

ವಾಣಿಜ್ಯ ಬ್ಯಾಂಕುಗಳು ಈ ಬಾರಿ ಅಧಿಕ ಲಾಭ ಗಳಿಸಿದೆ:


ಈ ಬಾರಿ ಬ್ಯಾಂಕ್‌ಗಳಲ್ಲಿ ವಾಣಿಜ್ಯ ಬ್ಯಾಂಕ್‌ ಕೂಡ ಲಾಭವನ್ನು ಗಳಿಸಿದೆ. ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ದೇಶದ ವಾಣಿಜ್ಯ ಬ್ಯಾಂಕ್‌ಗಳ ಲಾಭ ಸುಮಾರು 60,000 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಲಾಭದ ಪ್ರಮಾಣವು ಕಳೆದ ವರ್ಷದ ಇದೇ ಸಮಯಕ್ಕೆ ಹೋಲಿಸಿದರೆ ಶೇಕಡಾ 59% ರಷ್ಟು ಏರಿಕೆಯಾಗಿದೆ. ಅಂದರೆ 37,567 ಕೋಟಿ ರೂಪಾಯಿ ದಾಖಲಾಗಿದೆ.


ಇದನ್ನೂ ಓದಿ: 1 ಲಕ್ಷ ಹೂಡಿಕೆ ಮಾಡಿದ್ರೆ ಒಂದೇ ವರ್ಷದಲ್ಲಿ ಸಿಗುತ್ತೆ 10 ಲಕ್ಷ!


ಸೆಪ್ಟೆಂಬರ್‌ ತ್ರೈಮಾಸಿಕದ ವರದಿಯಲ್ಲಿ ಖಾಸಗಿ ಬ್ಯಾಂಕ್‌ಗಳ ಲಾಭ:

ಎಚ್‌ಡಿಎಫ್‌ಸಿ ಬ್ಯಾಂಕ್10,605 ಕೋಟಿ ರೂಪಾಯಿಶೇಕಡಾ 20% ಏರಿಕೆ
ಐಸಿಐಸಿಐ ಬ್ಯಾಂಕ್7,758 ಕೋಟಿ ರೂಪಾಯಿಶೇಕಡಾ 37% ಏರಿಕೆ
ಆ್ಯಕ್ಸಿಸ್‌ ಬ್ಯಾಂಕ್5,330 ಕೋಟಿ ರೂಪಾಯಿಶೇಕಡಾ 70% ಏರಿಕೆ
ಕೋಟಕ್‌ ಬ್ಯಾಂಕ್2,581 ಕೋಟಿ ರೂಪಾಯಿಶೇಕಡಾ 27% ಏರಿಕೆ

ಇದಿಷ್ಟು ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಬ್ಯಾಂಕ್‌ಗಳು ಲಾಭಗಳಿಸಿರುವಂತಹ ವರದಿಗಳಾಗಿವೆ.

Published by:ವಾಸುದೇವ್ ಎಂ
First published: