LIC Benefits: ಎಲ್​ಐಸಿಯ ಈ ಯೋಜನೆಯಲ್ಲಿ ದಿನಕ್ಕೆ 200 ರೂ ಉಳಿಸಿದ್ರೆ ಸಾಕು, 28 ಲಕ್ಷ ರೂ ಸಿಗುತ್ತೆ!

ಎಲ್ ಐಸಿ ಜೀವನ್ ಪ್ರಗತಿ ಯೋಜನೆಯು ನಾನ್ ಲಿಂಕ್ ಪಾಲಿಸಿ ಆಗಿದೆ. ಪಾಲಿಸಿದಾರನ ದಿನದ ವಿಮೆಯ ಮೊತ್ತ 200 ರೂ. ಆದಲ್ಲಿ 20 ವರ್ಷಗಳ ನಂತರ ಪಾಲಿಸಿದಾರನು 28 ಲಕ್ಷ ರೂ.ಗಳನ್ನು ಪಡೆದುಕೊಳ್ಳುತ್ತಾನೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ದೇಶದಲ್ಲಿ ಭಾರತೀಯ ಜೀವ ವಿಮಾ ನಿಗಮವು (LIC) ತನ್ನದೇ ಆದ ಛಾಪು ಮೂಡಿಸಿದೆ. ಪಾಲಿಸಿದಾರರ ಹಣವನ್ನು ಸರಿಯಾಗಿ ತಲುಪಿಸಿ, ಪಾಲಿಸಿದಾರರ ಕುಟುಂಬಗಳಿಗೆ ಒಳಿತಾಗುವ ನಿಟ್ಟಿನಲ್ಲಿ ಎಲ್ ಐಸಿ ಕೆಲಸ ನಿರ್ವಹಿಸುತ್ತಾ ಬಂದಿದೆ. ಜನರಿಗೆ ಅನುಕೂಲವಾಗುವಂಥಹ ಅನೇಕ ಪಾಲಿಸಿ (Policy) ಗಳನ್ನು ಒದಗಿಸಿದೆ. ವ್ಯಕ್ತಿಯ ಸಾವಿನ ನಂತರವೂ ಕುಟುಂಬ (Families) ಗಳಿಗೆ ನ್ಯಾಯಬದ್ಧವಾಗಿ ಹಣವನ್ನು ಒದಗಿಸಿದೆ. ಅಷ್ಟೇ ಅಲ್ಲ ಆರ್ಥಿಕ ನಷ್ಟ, ಪ್ರಾಕೃತಿಕ ವಿಪತ್ತು, ಹಳ್ಳಿಗಳ ಅಭಿವೃದ್ಧಿ (Development) ಮಾಡಿದೆ. ಎಲ್ ಐಸಿ ಏಜೆಂಟರು (LIC agents) ಗಳನ್ನ ನೇಮಿಸಿಕೊಂಡು ಉದ್ಯೋಗ ನೀಡುವ ಮೂಲಕ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಹಲವು ಉತ್ತಮ ಪಾಲಿಸಿ ನೀಡಿರುವ ಎಲ್ ಐಸಿ ಈಗ ‘ಜೀವನ್ ಪ್ರಗತಿ ಯೋಜನೆ’(Jeevan Pragati plan) ಯನ್ನು ಮುನ್ನೆಲೆಗೆ ತಂದಿದೆ.

    ಏನಿದು ಜೀವನ್ ಪ್ರಗತಿ ಯೋಜನೆ..?

    ಎಲ್ ಐಸಿ ಜೀವನ್ ಪ್ರಗತಿ ಯೋಜನೆಯು ನಾನ್ ಲಿಂಕ್ ಪಾಲಿಸಿ ಆಗಿದೆ. ಈ ಪಾಲಿಸಿಯಲ್ಲಿ ದಿನಕ್ಕೆ 200 ರೂ.ಗಳನ್ನು ಹೂಡಿಕೆ ಮಾಡಬಹುದು. ಇದರಲ್ಲಿ 15 ಸಾವಿರ ರೂ.ಗಿಂತ ಹೆಚ್ಚು ಪಿಂಚಣಿ ಪಡೆಯಬಹುದು. ಪಾಲಿಸಿದಾರನು ತಿಂಗಳಿಗೆ 6 ಸಾವಿರ ರೂಪಾಯಿಯಂತೆ, 20 ವರ್ಷಗಳವರೆಗೆ ಹೂಡಿಕೆ ಮಾಡಿದರೆ ಯೋಜನೆಯ ಮೆಚ್ಯೂರಿಟಿ ಲಾಭದ ನಂತರ 28 ಲಕ್ಷ ಮೊತ್ತವನ್ನು ಪಡೆದುಕೊಳ್ಳುತ್ತಾನೆ.

    ಪಾಲಿಸಿಯನ್ನು 12 ವರ್ಷ ವಯಸ್ಸಿನವರು ಆರಂಭಿಸಬಹುದು. ಸುಮಾರು 45 ವರ್ಷಗಳವರೆಗೆ ಹೂಡಿಕೆ ಅಥವಾ ಪಾಲಿಸಿ ಪಡೆಯಬಹುದು. ಪಾಲಿಸಿದಾರನು ಮೂರು ವರ್ಷದವರೆಗೆ ಪ್ರೀಮಿಯಂ ಪಾವತಿ ಮಾಡಿದ್ದರೆ ಪಾಲಿಸಿ ಹಾಗೂ ಸೆರೆಂಡರ್ ಮೌಲ್ಯವನ್ನು ತೆಗೆದುಕೊಳ್ಳಬಹುದು.

    ಇದನ್ನೂ ಓದಿ: ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ರಾಜ್ಯ ದೊಡ್ಡ ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದೆ; ಸಿಎಂಗೆ ಸಿದ್ದರಾಮಯ್ಯ ಆರ್ಥಿಕ ಸಲಹೆ

    ಭದ್ರತೆ ಮತ್ತು ಹೆಚ್ಚಿನ ಉಳಿತಾಯ

    ಜೀವನ್ ಪ್ರಗತಿ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ಭದ್ರತೆ ಮತ್ತು ಹೆಚ್ಚಿನ ಉಳಿತಾಯ ಪಡೆಯಬಹುದು. ಮೊದಲ 5 ವರ್ಷ ವಿಮಾ ಮೊತ್ತ ಒಂದೇ ಆಗಿರುತ್ತದೆ. ಮುಂದೆ 6 ರಿಂದ 10 ವರ್ಷಗಳಲ್ಲಿ ಶೇ. 25 ರಿಂದ ಶೇ. 125ರವರೆಗೆ ಹೆಚ್ಚುಗೊಳ್ಳುತ್ತದೆ. ಮುಂದೆ 11 ವರ್ಷದಿಂದ 15 ವರ್ಷಗಳವರೆಗೆ ವಿಮೆಯ ಮೊತ್ತ ಶೇ. 150 ಹಾಗೂ 16 ರಿಂದ 20 ವರ್ಷದವರೆಗೆ ಶೇ. 200 ರಷ್ಟು ವಿಮೆಯ ಮೊತ್ತ ಇರುತ್ತದೆ.

    ಇನ್ನು ಪಾಲಿಸಿದಾರನು ಅಕಾಲಿಕವಾಗಿ ಸಾವನ್ನಪ್ಪಿದರೆ ವಿಮೆಯ ಮೊತ್ತ, ಠೇವಣಿ ಬೋನಸ್, ಕೊನೆಯ ಹಂತದ ಬೋನಸ್ ಇದ್ದಲ್ಲಿ ಪಾಲಿಸಿದಾರರು ಮಾಡಿಸಿರುವ ನಾಮಿನಿಗೆ ಕೊಡಲಾಗುತ್ತದೆ. ಪಾಲಿಸಿ ಅಡಿಯಲ್ಲಿ ಬರುವ ಆಕಸ್ಮಿಕ ಸಾವು ಮತ್ತು ಅಂಗವೈಕಲ್ಯಕ್ಕೆ ಹೆಚ್ಚುವರಿ ಪ್ರೀಮಿಯಂ ಪಾವತಿ ಮಾಡಬೇಕಾಗುತ್ತದೆ.

    ಇದನ್ನೂ ಓದಿ: ಆರ್ಥಿಕತೆಯನ್ನು ಕಾಡುತ್ತಿದೆ ಕೊರೋನಾ, ಬಡವರ ತವರಾಯಿತೇ ಭಾರತ? ಇಲ್ಲಿದೆ ಜಿಡಿಪಿ ಕುಸಿತದ ವಾಸ್ತವ ಚಿತ್ರಣ!

    20 ವರ್ಷಗಳ ನಂತರ ಸಿಗಲಿದೆ 28 ಲಕ್ಷ ರೂ.

    ಈ ಪಾಲಿಸಿಯಲ್ಲಿ ಪಾಲಿಸಿದಾರನು 2ಲಕ್ಷ ರೂ.ಗಳ ಪಾಲಿಸಿ ತೆಗೆದುಕೊಂಡರೆ ಮೊದಲ ಐದು ವರ್ಷ ವಿಮೆಯ ಮೊತ್ತ 2 ಲಕ್ಷ ರೂ. ಆಗುತ್ತದೆ. 6 ರಿಂದ 10 ವರ್ಷಕ್ಕೆ 2.50 ಲಕ್ಷ ರೂ., 15 ವರ್ಷಕ್ಕೆ 3 ಲಕ್ಷ ರೂ., 16 ರಿಂದ 20 ವರ್ಷಕ್ಕೆ 4 ಲಕ್ಷ ರೂ. ಆಗುತ್ತದೆ. ಪಾಲಿಸಿದಾರನ ದಿನದ ವಿಮೆಯ ಮೊತ್ತ 200 ರೂ. ಆದಲ್ಲಿ 20 ವರ್ಷಗಳ ನಂತರ ಪಾಲಿಸಿದಾರನು 28 ಲಕ್ಷ ರೂ.ಗಳನ್ನು ಪಡೆದುಕೊಳ್ಳುತ್ತಾನೆ.

    ಇನ್ನು ಜೀವನ್ ಪ್ರಗತಿ ಪಾಲಿಸಿಯನ್ನು ಚಿಕ್ಕ ವಯಸ್ಸಿನಿಂದಲೇ ಆರಂಭಿಸುವ ಅವಕಾಶವಿದ್ದು, ಕಡಿಮೆ ಅವಧಿಯಲ್ಲಿ ವಿಮೆಯ ಮೊತ್ತ ದುಪ್ಪಟ್ಟಾಗುತ್ತದೆ. ಇದರಿಂದ ಪಾಲಿಸಿದಾರನು ಭವಿಷ್ಯದ ಕನಸುಗಳನ್ನು ನನಸು ಮಾಡಿಕೊಳ್ಳಲು ಈ ಮೊತ್ತ ಸಹಕಾರಿಯಾಗಲಿದೆ. ಮನೆ, ಸ್ವಂತ ವ್ಯಾಪಾರ ಸೇರಿದಂತೆ ಅನೇಕ ಕೆಲಸ ಕಾರ್ಯಗಳಿಗೆ ಈ ಮೊತ್ತ ಅನುಕೂಲಕರವಾಗಲಿದೆ.
    Published by:renukadariyannavar
    First published: