ಇಂಡೋ-ಸ್ವಿಸ್ ಬಿಲಿಯನೇರ್ ದಂಪತಿ (Indo-Swiss Billionaire Couple) ಪಂಕಜ್ ಮತ್ತು ರಾಧಿಕಾ ಓಸ್ವಾಲ್ (Pankaj and Radhika Oswal)ಪ್ರಸ್ತುತ, ಅವರು ಖರೀದಿ ಮಾಡಿದ ಹೊಸ ಮನೆಯಿಂದಾಗಿ ಭಾರೀ ಸುದ್ದಿಯಲ್ಲಿದ್ದಾರೆ. ಈ ಯಶಸ್ವಿ ದಂಪತಿಗಳಿಬ್ಬರು 200 ಮಿಲಿಯನ್ ಮೌಲ್ಯದ ವಿಲ್ಲಾವನ್ನು ಖರೀದಿ ಮಾಡಿದ್ದಾರೆ. ಮೂಲತಃ ಗ್ರೀಕ್ ಉದ್ಯಮಿ, ಸಮಾಜವಾದಿ ಮತ್ತು ಒನಾಸಿಸ್ ಉತ್ತರಾಧಿಕಾರಿ ಕ್ರಿಸ್ಟಿನಾ ಒನಾಸಿಸ್‌ಗೆ ಸೇರಿದ ಸ್ವಿಸ್ ಭವನವನ್ನು ಓಸ್ವಾಲ್ ದಂಪತಿ ಖರೀದಿ ಮಾಡಿದ್ದಾರೆ. ಮನೆಗೆ ತಮ್ಮ ಮಕ್ಕಳ ಹೆಸರಿನ ಮೊದಲ ಅಕ್ಷರವನ್ನು ತೆಗೆದುಕೊಳ್ಳುವ ಮೂಲಕ ʻವಿಲ್ಲಾ ವರಿʼ ಎಂಬ ಹೆಸರನ್ನು ತಮ್ಮ ಹೊಸ ಬಂಗಲೆಗೆ ಇಟ್ಟಿದ್ದಾರೆ. ಇದೀಗ ಈ ವಿಲ್ಲಾ ವಿಶ್ವದ ಟಾಪ್ 10 ಅತ್ಯಂತ ದುಬಾರಿ ಮನೆಗಳಲ್ಲಿ ಒಂದಾಗಿದೆ.
ಇಂಟೀರಿಯರ್ ಡಿಸೈನರ್ ಜೆಫ್ರಿ ವಿಲ್ಕೆಸ್ ನೇತೃತ್ವದಲ್ಲಿ ಅಲಂಕಾರ
ವಿಶ್ವಪ್ರಸಿದ್ಧ ಇಂಟೀರಿಯರ್ ಡಿಸೈನರ್ ಜೆಫ್ರಿ ವಿಲ್ಕೆಸ್ ಅವರ ಮಾರ್ಗದರ್ಶನದಲ್ಲಿ ಈ ಮನೆಯನ್ನು ಅಲಂಕಾರ ಮಾಡಲಾಗಿದ್ದು, ಲಕ್ಸುರಿ ಪೀಠೋಪಕರಣ, ಅಲಂಕಾರಿಕ ವಸ್ತುಗಳಿಂದ ಅದ್ಧೂರಿಯಾಗಿ ಮನೆಯನ್ನು ಅಲಂಕರಿಸಲಾಗಿದೆ.
ಖ್ಯಾತನಾಮರ ಮನೆಗಳನ್ನು ವಿನ್ಯಾಸ ಮಾಡಿರುವ ವಿಲ್ಕೆಸ್
ಇಂಟೀರಿಯರ್ ಡಿಸೈನರ್ ಜೆಫ್ರಿ ವಿಲ್ಕೆಸ್ ಅವರು ಈ ಹಿಂದೆ ಐಕಾನಿಕ್ ಒಬೆರಾಯ್ ರಾಜ್ವಿಲಾಸ್, ಒಬೆರಾಯ್ ಉದಯವಿಲಾಸ್, ಮ್ಯಾಂಡರಿನ್ ಓರಿಯಂಟಲ್ ಮತ್ತು ಲೀಲಾ ಹೋಟೆಲ್‌ಗಳನ್ನು ವಿನ್ಯಾಸಗೊಳಿಸಿದ್ದಾರೆ.
ಇದನ್ನೂ ಓದಿ: ಎಣ್ಣೆ ಪ್ರಿಯರಿಗೆ ಮತ್ತೊಂದು ಬಿಗ್ ಶಾಕ್, ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ!
40,000 ಚದರ ಮೀಟರ್‌ಗಳಷ್ಟು ವ್ಯಾಪಿಸಿರುವ, ಸ್ವಿಸ್‌ನ ಗಿಂಗಿನ್ಸ್‌ನಲ್ಲಿ ಇರುವ ಈ ಭವ್ಯ ಬಂಗಲೆ ಲೇಕ್ಸೈಡ್ ಸಿಟಿ ಜಿನೀವಾದಿಂದ ಕೇವಲ 15 ನಿಮಿಷ ದೂರವಿದೆ. ದಂಪತಿಗಳು ಖರೀದಿ ಮಾಡಿರುವ ಬಂಗಲೆ ʻವಿಲ್ಲಾ ವರಿʼ, ಪ್ರಸ್ತುತ ಕ್ಯಾಂಟನ್ ಆಫ್ ವಾಡ್‌ನಲ್ಲಿರುವ ಅತಿದೊಡ್ಡ ಆಸ್ತಿಯಾಗಿದೆ.
ಮಕ್ಕಳ ಜೊತೆ ಸ್ವಿಸ್‌ನಲ್ಲಿ ದಂಪತಿ ವಾಸ
ಪಂಕಜ್ ಮತ್ತು ರಾಧಿಕಾ ಓಸ್ವಾಲ್ ಕಳೆದ ದಶಕದಿಂದ ಸ್ವಿಟ್ಜರ್ಲೆಂಡ್‌ನಲ್ಲಿ ತಮ್ಮ ಹೆಣ್ಣುಮಕ್ಕಳಾದ 24 ವರ್ಷ ವಯಸ್ಸಿನ ವಸುಂಧರಾ ಮತ್ತು 18 ವರ್ಷದ ರಿದಿಯೊಂದಿಗೆ ನೆಲೆಸಿದ್ದಾರೆ. ಇತ್ತೀಚೆಗಷ್ಟೇ ಈ ಮನೆಯನ್ನು ಖರೀದಿ ಮಾಡಿದ್ದು, ವಿಲ್ಲಾಗೆ ವರಿ ಎಂಬ ಹೆಸರಿಟ್ಟಿದ್ದಾರೆ.
ಮಕ್ಕಳು ಸಹ ಪೋಷಕರಂತೆ ವಿದ್ಯಾವಂತರು ಮತ್ತು ಉನ್ನತ ಕೆಲಸದಲ್ಲಿದ್ದಾರೆ. ದೊಡ್ಡ ಮಗಳು ವಸುಂಧರಾ ಅವರು ಹಣಕಾಸು ಕ್ಷೇತ್ರದಲ್ಲಿ ಉನ್ನತ ಶ್ರೇಣಿಯಲ್ಲಿ ಕೆಲಸ ಮಾಡುತ್ತಿದ್ದು, ನಂತರ PRO ಇಂಡಸ್ಟ್ರೀಸ್‌ನ ಕಾರ್ಯನಿರ್ವಾಹಕ ನಿರ್ದೇಶಕಿ ಮತ್ತು 'ಆಕ್ಸಿಸ್ ಮಿನರಲ್ಸ್' ನ ಡೈರೆಕ್ಟರ್ ಜನರಲ್ ಕೂಡ ಆಗಿದ್ದಾರೆ.
ರಿದಿ ಲಂಡನ್‌ನ ವಿಶ್ವವಿದ್ಯಾನಿಲಯದಲ್ಲಿ ಕೆಮಿಕಲ್ ಇಂಜಿನಿಯರಿಂಗ್ ಓದುತ್ತಿದ್ದಾರೆ ಮತ್ತು ಇಂಡೋ-ವೆಸ್ಟರ್ನ್ ಪಾಪ್ ಸ್ಪೇಸ್‌ನಲ್ಲಿ ಯಶಸ್ವಿ ಗಾಯಕ-ಗೀತರಚನೆಕಾರರಾಗಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ.
3 ಶತಕೋಟಿ ಡಾಲರ್ ಮೌಲ್ಯದ ವ್ಯವಹಾರ ಹೊಂದಿರುವ ದಂಪತಿ
3 ಶತಕೋಟಿ USD ಗಿಂತ ಹೆಚ್ಚಿನ ಮೌಲ್ಯದ ಹೊರತಾಗಿಯೂ, ಪೆಟ್ರೋಕೆಮಿಕಲ್ಸ್, ರಿಯಲ್ ಎಸ್ಟೇಟ್, ರಸಗೊಬ್ಬರಗಳು ಮತ್ತು ಗಣಿಗಾರಿಕೆಯನ್ನು ಒಳಗೊಂಡಿರುವ ಗಮನಾರ್ಹ ವ್ಯಾಪಾರ ಬಂಡವಾಳವನ್ನು ಹೊಂದಿರುವ ಪಂಕಜ್ ಓಸ್ವಾಲ್ ಕುಟುಂಬವು ಯಾವಾಗಲೂ ಕುಟುಂಬ ಮತ್ತು ಮನೆಯಲ್ಲಿರಲು ಬಯಸುವ ವ್ಯಕ್ತಿಗಳು. ಹೀಗಾಗಿ ಮನೆ ಎಂಬ ನೆಮ್ಮದಿ ತಾಣದಲ್ಲಿ ಕಾಲಕಳೆಯಲು ಭವ್ಯವಾದ ವಿಲ್ಲಾವನ್ನು ಖರೀದಿ ಮಾಡಿದ್ದಾರೆ.
ಬಹು-ಶತಕೋಟಿ ಡಾಲರ್ ಜಾಗತಿಕ ಸಂಘಟಿತ ಸಂಸ್ಥೆಯಾದ 'ಓಸ್ವಾಲ್ ಗ್ರೂಪ್ ಗ್ಲೋಬಲ್' 'PRO ಇಂಡಸ್ಟ್ರೀಸ್ PTE LTD' ಯಂತಹ ಕಂಪನಿಗಳನ್ನು ಹೊಂದಿದೆ. ಇದು ಪೂರ್ವ ಆಫ್ರಿಕಾದಲ್ಲಿ ಅತಿದೊಡ್ಡ ಅತ್ಯಾಧುನಿಕ ಎಥೆನಾಲ್ ಸ್ಥಾವರವನ್ನು ಹೊಂದಿದೆ ಮತ್ತು 'ಆಕ್ಸಿಸ್ ಮಿನರಲ್ಸ್' ಅನ್ನು ಸಹ ಹೊಂದಿದೆ.
ಪಶ್ಚಿಮ ಆಫ್ರಿಕಾದಲ್ಲಿ ಅತಿದೊಡ್ಡ ಬಾಕ್ಸೈಟ್ ಗಣಿಗಾರಿಕೆ ಯೋಜನೆಗಳು ಮತ್ತು ಆಸ್ಟ್ರೇಲಿಯಾದಲ್ಲಿ ವಿಶ್ವದ ಅತಿದೊಡ್ಡ ದ್ರವ ಅಮೋನಿಯಾ ಉತ್ಪಾದನಾ ಕಂಪನಿ 'ಬರ್ರಪ್ ಫರ್ಟಿಲೈಸರ್ಸ್'. ವ್ಯಾಪಾರವನ್ನು ಹೊಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ