Career Tips: 2022-23ರ ಉದ್ಯೋಗಾಕಾಂಕ್ಷಿಗಳ ತಯಾರಿ ಮತ್ತು ಅಗತ್ಯ ಕ್ರಮಗಳು ಹೀಗಿದ್ದರೆ ಉತ್ತಮ

ಇಂದು ಉದ್ಯೋಗವಕಾಶಗಳು ಹೆಚ್ಚಿವೆ ಆದರೆ ಅದನ್ನು ಪಡೆದುಕೊಳ್ಳಲು ನಾವು ಪರಿಶ್ರಮ ಹಾಕಬೇಕು. ಕೇವಲ ಶಿಕ್ಷಣ, ಪದವಿಗಳನ್ನು ಮಾತ್ರ ಇಂದಿನ ಕಂಪನಿಗಳು ಮಾನದಂಡಗಳಾಗಿ ಪರಿಗಣಿಸುವುದಿಲ್ಲ. ಅವುಗಳ ಜೊತೆಗೆ ಸಂವಹನ ಕೌಶಲ್ಯ, ಲೀಡರ್ ಶಿಫ್, ಎಲ್ಲವುಗಳ ಬಗ್ಗೆಯೂ ಕೇಂದ್ರಿಕರಿಸುತ್ತದೆ. ಹೀಗಾಗಿ ಹೊಸದಾಗಿ ಉದ್ಯೋಗ ಸೇರಲು ಬಯಸಲು ಪ್ರತಿಯೊಬ್ಬ ಯುವಕ-ಯುವತಿ ತಯಾರಿ ಸರಿಯಾದ ರೀತಿಯಲ್ಲಿರಬೇಕು.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರತಿಯೊಂದಕ್ಕೂ ಪೈಪೋಟಿ ಇದೆ. ಶಿಕ್ಷಣ (Education) ಮುಗಿಸಿದ ಪ್ರತಿಯೊಬ್ಬರು ಉದ್ಯೋಗವನ್ನು (Employment) ಹುಡುಕಲು ಆರಂಭಿಸುತ್ತಾರೆ. ಜಗತ್ತು ತಂತ್ರಜ್ಞಾನ, ಕೈಗಾರಿಕೆ ಎಲ್ಲಾ ಕ್ಷೇತ್ರದಲ್ಲೂ ಕ್ಷಿಪ್ರವಾಗಿ ಬೆಳವಣಿಗೆ ಕಾಣುತ್ತಿದೆ. ಹೀಗಾಗಿ ಪ್ರತಿ ಕಂಪನಿಯೂ (Company) ಪ್ರತಿಭೆಯ ಅನ್ವೇಷಣೆಯಲ್ಲಿ (Pursuit of Talent) ತೊಡಗಿರುತ್ತದೆ. ಇಂದು ಉದ್ಯೋಗವಕಾಶಗಳು ಹೆಚ್ಚಿವೆ ಆದರೆ ಅದನ್ನು ಪಡೆದುಕೊಳ್ಳಲು ನಾವು ಪರಿಶ್ರಮ ಹಾಕಬೇಕು. ಕೇವಲ ಶಿಕ್ಷಣ, ಪದವಿಗಳನ್ನು ಮಾತ್ರ ಇಂದಿನ ಕಂಪನಿಗಳು ಮಾನದಂಡಗಳಾಗಿ ಪರಿಗಣಿಸುವುದಿಲ್ಲ. ಅವುಗಳ ಜೊತೆಗೆ ಸಂವಹನ ಕೌಶಲ್ಯ, ಲೀಡರ್ ಶಿಫ್, ಎಲ್ಲವುಗಳ ಬಗ್ಗೆಯೂ ಕೇಂದ್ರಿಕರಿಸುತ್ತದೆ. ಹೀಗಾಗಿ ಹೊಸದಾಗಿ ಉದ್ಯೋಗ ಸೇರಲು ಬಯಸಲು ಪ್ರತಿಯೊಬ್ಬ ಯುವಕ-ಯುವತಿ ತಯಾರಿ ಸರಿಯಾದ ರೀತಿಯಲ್ಲಿರಬೇಕು.

ನೀವು ಬಯಸಿದ ಉದ್ಯೋಗವನ್ನು ಪಡೆಯಬೇಕೆಂದರೆ ಅದಕ್ಕೆ ಬೇಕಾದ ಎಲ್ಲಾ ಪೂರ್ವ ತಯಾರಿ ಕೂಡ ಪ್ರಮುಖವಾಗಿ ಅಗತ್ಯ. ರೆಸ್ಯೂಮ್ ಇರಲಿ, ಸಂದರ್ಶನದಲ್ಲಿ ಹೇಗೆ ಆತ್ಮವಿಶ್ವಾಸದಿಂದ ಮಾತನಾಡಬೇಕು ಎಲ್ಲವನ್ನೂ ಸರಿಯಾದ ಹಂತಗಳನ್ನು ಅನುಸರಿಸುವ ಮೂಲಕ ಸಿದ್ಧತೆ ಮಾಡಿಕೊಂಡಿರಬೇಕು.

ಸಂಪೂರ್ಣ ವಿವರಗಳನ್ನೊಳಗೊಂಡ ರೆಸ್ಯೂಮ್ ಬಹಳ ಮುಖ್ಯವಾಗಿರುತ್ತದೆ 
ಉದ್ಯೋಗ ಪಡೆಯುವುದರಲ್ಲಿ ಮೊದಲ ಹಾಗು ಪ್ರಮುಖ ಪಾತ್ರ ವಹಿಸುವುದು, ನಿಮ್ಮ ವಿವರಗಳನ್ನೊಳಗೊಂಡ ರೆಸ್ಯೂಮ್. ಇಂದು ನೀವು ಯಾವುದೇ ಉದ್ಯೋಗಕ್ಕೆ ಅರ್ಜಿ ಹಾಕಬೇಕಾದ್ರೆ ಈ ರೆಸ್ಯೂಮ್ ನಿಮಗೆ ಅತ್ಯಗತ್ಯ. ಇಲ್ಲಿ ಅತ್ಯಂತ ನಿರ್ಣಾಯಕ ಹಂತವೆಂದರೆ ರೆಸ್ಯೂಮ್ ಮೇಲೆ ನೀವು ಏನು ಮಾಡಬೇಕೆಂದು ಸ್ಪಷ್ಟವಾಗಿ ಬರೆಯಬೇಕು. ಆ ಪಟ್ಟಿಯಲ್ಲಿ ಇರುವ ವಿಷಯಗಳು ನಿಮ್ಮ ಬಗ್ಗೆ ಕಂಪನಿಗೆ ಸಂಪೂರ್ಣವಾಗಿ ತಿಳಿಸುವಂತೆ ಅಭರ್ಯರ್ಥಿಗಳು ಅದನ್ನು ತಯಾರಿಸಬೇಕು. ಈ ಹಿಂದೆ ಹೇಳಿದಂತೆ ರೆಸ್ಯೂಮ್ ಒಬ್ಬರ ಸ್ಟೋರಿ ಬೋರ್ಡ್ ಆಗಿರುತ್ತದೆ. ನಿಮ್ಮನ್ನು ಪ್ರಸ್ತುತಪಡಿಸಲು ಪರಿಣಾಮಕಾರಿ ಮತ್ತು ನಿಖರವಾದ ರೆಸ್ಯೂಮ್ ಅನ್ನು ನಿರ್ಮಿಸುವುದು ಮುಖ್ಯ ಹಂತವಾಗಿದೆ. ಇದು ನಿಮ್ಮ ಸ್ಟೋರಿಬೋರ್ಡ್ ಅನ್ನು ಕಂಪನಿಗೆ ತಿಳಿಸುತ್ತದೆ.

ಇದನ್ನೂ ಓದಿ: Job Seeker's Mindset: ಹೊಸದಾಗಿ ಉದ್ಯೋಗ ಹುಡುಕುತ್ತಿರುವವರ ಮೈಂಡ್ಸೆಟ್ ಹೇಗಿರಬೇಕು?

ರೆಸ್ಯೂಮ್ ಅನ್ನು ಮೂರು ಭಾಗಗಳಾಗಿ ವಿಂಗಡಿಸಿ ಮತ್ತು ಮೇಲಾಗಿ ಅದನ್ನು ಒಂದೇ ಪುಟವನ್ನಾಗಿ ಮಾಡಿ. ರೆಸ್ಯೂಮ್ ನಲ್ಲಿ ನಿಮ್ಮ ಕೌಶಲ್ಯಗಳು, ಬಹುಮುಖತೆ ಮತ್ತು ದೃಷ್ಟಿಯನ್ನು ಹೈಲೈಟ್ ಮಾಡಬೇಕು.

ನಿಮ್ಮ ರೆಸ್ಯೂಮ್ ಅನ್ನು ನಾಲ್ಕು ಭಾಗಗಳಾಗಿ ವಿಂಗಡಿಸಲು ಶಿಫಾರಸು ಮಾಡಲಾಗುವುದು. ಅವು
1) ನಿಮ್ಮ ಅನುಭವ ಮತ್ತು ನೀವು ಏನು ಮಾಡಲು ಬಯಸುತ್ತೀರಿ ಎಂಬುದನ್ನು ಹೇಳಲು ಚಿಕ್ಕದಾಗಿ ಬರೆಯಬೇಕು. ಈ ಮೂಲಕ ನಿಮ್ಮ ಪರಿಚಯವನ್ನು ನೇಮಕ ಮಾಡಿಕೊಳ್ಳುವವರಿಗೆ ಮಾಡಿಸಬೇಕು.
2) ನಿಮ್ಮ ಪರಿಣತಿ ಮತ್ತು ಕೌಶಲ್ಯಗಳು
3) ನಿಮ್ಮ ಅನುಭವ
4) ನಿಮ್ಮ ಗಮನಾರ್ಹ ಪಠ್ಯೇತರ ಅನ್ವೇಷಣೆಗಳು

ರೆಸ್ಯೂಮ್ ನಲ್ಲಿ ವಿವರಗಳನ್ನು ಕ್ರಮಬದ್ಧವಾಗಿ ಅರ್ಥಪೂರ್ಣವಾಗಿ ಬರೆಯುವುದು ಮುಖ್ಯ 
ವಿವರಗಳನ್ನು ಕ್ರಮಬದ್ಧವಾಗಿ ಅರ್ಥಪೂರ್ಣವಾಗಿ ಬರೆಯುವುದೇ ಸುಂದರ ರೆಸ್ಯೂಮ್ನ ಹಿಂದಿರುವ ಗುಟ್ಟು. ಸರಳವಾಗಿರುವ ರೆಸ್ಯೂಮ್ ಗಳು ಹೆಚ್ಚು ಗಮನ ಸೆಳೆಯುತ್ತವೆ. ರೆಸ್ಯೂಂನಲ್ಲಿ ಎಲ್ಲವನ್ನೂ ಹೇಳಬೇಕೆಂದು ನಾವು ಬಯಸುವುದು ಸಹಜ. ಆದರೆ ಸಂದರ್ಶಕನು ನಮ್ಮ ರೆಸ್ಯೂಂನ್ನು ಓದಲು ಕೇವಲ ಕೆಲವೇ ಸೆಕೆಂಡ್ಗಳನ್ನು ಮಾತ್ರ ವ್ಯಯಿಸುತ್ತಾನೆ. ಆದ್ದರಿಂದ ಅತ್ಯಂತ ಮಹತ್ವದ ಮಾಹಿತಿಯನ್ನು (ರೆಸ್ಯೂಂನಲ್ಲಿ ) ಹೈಲೈಟ್ ಮಾಡುವುದೂ ಅಷ್ಟೇ ಮುಖ್ಯ. ನಿಮ್ಮಿಂದ ಏನೆಲ್ಲಾ ಮಾಡಲು ಸಾಧ್ಯ ಅನ್ನೋದು ಅವರಿಗೆ ನಿಮ್ಮ ರೆಸ್ಯೂಮ್ ನೋಡಿ ತಿಳಿಯುವಂತಿರಬೇಕು.

ನೆಟ್‌ವರ್ಕಿಂಗ್ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಬೇಕು
ಹೆಚ್ಚಿನ ಉದ್ಯೋಗಾಕಾಂಕ್ಷಿಗಳು ಬಳಸದಿರುವ ಕಡಿಮೆ ಮೌಲ್ಯಮಾಪನದ ಕೌಶಲ್ಯವೆಂದರೆ ನೆಟ್‌ವರ್ಕಿಂಗ್. ಉದ್ಯಮದಲ್ಲಿ ಗೆಳೆಯರೊಂದಿಗೆ ನೆಟ್‌ವರ್ಕಿಂಗ್ ಪ್ರಾರಂಭಿಸಲು ಇದು ಸಹಾಯ ಮಾಡುತ್ತದೆ. ಮೂಲಭೂತವಾಗಿ, ನಿಮ್ಮ ಸಂವಹನ ಕೌಶಲ್ಯಗಳನ್ನು ಮತ್ತು ಆ ಮೂಲಕ ನಿಮ್ಮ ಆತ್ಮವಿಶ್ವಾಸವನ್ನು ಅಭಿವೃದ್ಧಿಪಡಿಸುವಲ್ಲಿ ನೀವು ಕೆಲಸ ಮಾಡಬೇಕು.

ಇದನ್ನೂ ಓದಿ:  Strong Resume: ಉದ್ಯೋಗಾಕಾಂಕ್ಷಿಗಳಿಗೆ ಸ್ಟ್ರಾಂಗ್ ರೆಸ್ಯೂಮ್ ಮಾಡಿಕೊಳ್ಳುವುದು ಹೇಗೆ ಮತ್ತು ಏಕೆ ಮುಖ್ಯ ಗೊತ್ತಾ? ಇಲ್ಲಿದೆ ನೋಡಿ

ಈ ಕಂಪನಿಗಳಲ್ಲಿ ನಿಖರವಾಗಿ ಏನಾಗುತ್ತದೆ ಮತ್ತು ನೀವು ಹೇಗೆ ಮೌಲ್ಯವನ್ನು ಸೇರಿಸಬಹುದು ಎಂಬುದನ್ನು ಕಂಡುಹಿಡಿಯಲು ಉದ್ಯೋಗ ಮಂಡಳಿಗಳು ಮತ್ತು ನೆಟ್‌ವರ್ಕಿಂಗ್ ಸೈಟ್‌ಗಳಲ್ಲಿ ಬಲವಾದ ಪ್ರೊಫೈಲ್ ಅನ್ನು ರಚಿಸಬೇಕು.
Published by:Ashwini Prabhu
First published: