ಸ್ಟಾರ್ಟ್​ಅಪ್​ Repos Energy ಅದೃಷ್ಟವನ್ನೇ ಬದಲಾಯಿಸಿತು ರತನ್​ ಟಾಟಾರ ಆ ಒಂದು ಫೋನ್​ ಕಾಲ್!

ದೇಶದ ಅಭಿವೃದ್ಧಿ ವಿಚಾರ ಬಂದಾಗ ರತನ್​ ಟಾಟಾ ಯಾವತ್ತೂ ಮುಂಚೂಣಿಯಲ್ಲಿರುತ್ತಾರೆ. ಸದ್ಯ ಸ್ಟಾರ್ಟ್​ಅಪ್​ Repos Energy ರತನ್​ ಟಾಟಾ ತಮ್ಮ ಕಂಪನಿ ವಿಚಾರದಲ್ಲಿ ಹೇಗೆಲ್ಲಾ ಸಹಾಯ ಮಾಡಿದ್ದಾರೆ ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ರತನ್ ಟಾಟಾ

ರತನ್ ಟಾಟಾ

  • Share this:
ನವದೆಹಲಿ(ಆ. 07): ಪುಣೆ ಮೂಲದ ಮೊಬೈಲ್ ಇಂಧನ ವಿತರಣಾ ಸ್ಟಾರ್ಟ್ಅಪ್ ರೆಪೋಸ್ ಎನರ್ಜಿಯ (Repos Energy) ಸಂಸ್ಥಾಪಕರು ತಮ್ಮ ಆರಂಭಿಕ ದಿನಗಳನ್ನು ನೆನಪಿಸಿಕೊಂಡಿದ್ದಾರೆ ಮತ್ತು ಪ್ರಸಿದ್ಧ ಕೈಗಾರಿಕೋದ್ಯಮಿ ರತನ್ ಟಾಟಾ (Ratan Tata) ಅವರ ಫೋನ್ ಕರೆ ತಮ್ಮ ಅದೃಷ್ಟವನ್ನು ಹೇಗೆ ಬದಲಾಯಿಸಿತು ಎಂದು ಬಹಿರಂಗಪಡಿಸಿದ್ದಾರೆ. ರತನ್ ಟಾಟಾ ಈ ಸ್ಟಾರ್ಟಪ್ ನಲ್ಲಿ ಹೂಡಿಕೆ ಮಾಡಿದ್ದಾರೆ. ಇತ್ತೀಚೆಗೆ ರೆಪೋಸ್ ಎನರ್ಜಿ ಸಾವಯವ ತ್ಯಾಜ್ಯದಿಂದ ಚಾಲಿತ 'ಮೊಬೈಲ್ ಎಲೆಕ್ಟ್ರಿಕ್ ಚಾರ್ಜಿಂಗ್ ವೆಹಿಕಲ್' ಅನ್ನು ಬಿಡುಗಡೆ ಮಾಡಿದೆ.

ರೆಪೋಸ್ ಎನರ್ಜಿ ಕೆಲವು ವರ್ಷಗಳ ಹಿಂದೆ ಪ್ರಾರಂಭವಾಯಿತು

ಮನಿಕಂಟ್ರೋಲ್‌ನಲ್ಲಿನ ವರದಿಯ ಪ್ರಕಾರ, ರೆಪೋಸ್ ಎನರ್ಜಿಯನ್ನು ಕೆಲವು ವರ್ಷಗಳ ಹಿಂದೆ ಅದಿತಿ ಭೋಸ್ಲೆ ವಾಲುಂಜ್ ಮತ್ತು ಚೇತನ್ ವಾಲುಂಜ್ ಪ್ರಾರಂಭಿಸಿದರು. ಸ್ವಲ್ಪ ಸಮಯದ ನಂತರ, ಅದನ್ನು ಮುಂದಕ್ಕೆ ಕೊಂಡೊಯ್ಯಲು ಒಬ್ಬ ಮಾರ್ಗದರ್ಶಕರ ಅಗತ್ಯವಿದೆ ಮತ್ತು ಮಾರ್ಗದರ್ಶಕ ಈ ಕ್ಷೇತ್ರದಲ್ಲಿ ಈ ಮೊದಲು ಕೆಲಸ ಮಾಡಿದ ವ್ಯಕ್ತಿಯಾಗಿರಬೇಕೆಂದು ಅವರು ಅರಿತುಕೊಂಡರು. ಆಗ ಇಬ್ಬರ ಮನದಲ್ಲೂ ಬಂದ ಮೊದಲ ಹೆಸರೇ ರತನ್ ಟಾಟಾ.

ಇದನ್ನೂ ಓದಿ:  Nano Car Secret: ನ್ಯಾನೋ ಕಾರು ತಯಾರಾಗಿದ್ದು ಹೇಗೆ? ಸ್ವತಃ ರತನ್ ಟಾಟಾ ಬಿಚ್ಚಿಟ್ರು ರಹಸ್ಯ

ರತನ್ ಟಾಟಾ ಅವರನ್ನು ಭೇಟಿಯಾಗುವ ನಿರ್ಧಾರ ಕೈಬಿಡದ ಅದಿತಿ

ಆಗ ಅದಿತಿ ಭೋಸ್ಲೆ ವಾಲುಂಜ್ ರತನ್ ಟಾಟಾ ಅವರನ್ನು ಭೇಟಿ ಮಾಡಲು ನಿರ್ಧರಿಸಿದರು. ಆದರೆ ಚೇತನ್ ತಕ್ಷಣ ಅವರನ್ನು ಅಡ್ಡಿಪಡಿಸಿದರು ಮತ್ತು "ನಾವಂದುಕೊಂಡಂತೆ ನಮ್ಮನ್ನು ಭೇಟಿಯಾಗುವ ಅವಕಾಶ ಸಿಗಲು ಅವರು ನಮ್ಮ ನೆರೆಹೊರೆಯವರಲ್ಲ" ಎಂದು ಅದಿತಿಗೆ ಹೇಳಿದರು. ಆದರೆ ಅದಿತಿ ಮಾತ್ರ ರತನ್ ಟಾಟಾರನ್ನು ಭೇಟಿಯಾಗುವ ಭರವಸೆಯನ್ನು ಬಿಡಲಿಲ್ಲ. ಅದಿತಿ ಸೋಶಿಯಲ್ ಮಿಡಿಯಾ ಪ್ಲಾಟ್​ಫಾರಂ ಲಿಂಕ್ಡಿನ್​ನಲ್ಲಿ ಈ ಬಗ್ಗೆ ಪೋಸ್ಟ್​ ಒಂದನ್ನು ಮಾಡಿದ್ದು, “ನಾವಿಬ್ಬರೂ ವ್ಯವಹಾರ ಅಧ್ಯಯನಗಳ ಬಗ್ಗೆ ಯಾವುದೇ ಔಪಚಾರಿಕ ಶಿಕ್ಷಣ ಪಡೆದಿರಲಿಲ್ಲ, ಆದರೆ ಯಾವುದಾದರೂ ಒಂದು ನೆಪ ವ್ಯಕ್ತಿಯೊಬ್ಬನ ಜೀವನದ ವೈಫಲ್ಯಕ್ಕರ ಅಡಿಪಾಯವಾಗುತ್ತದೆ ಎಂಬುವುದನ್ನು ನಾವು ನಮ್ಮ ಜೀವನದಲ್ಲಿ ಬಹಳ ಬೇಗನೆ ಕಲಿತಿದ್ದೆವು. ಎಲ್ಲರೂ ನಮ್ಮ ಬಳಿ ನೀವು ರತನ್​ ಟಾಟಾರನ್ನು ಭೇಟಿಯಾಗಲು ಸಾಧ್ಯವಿಲ್ಲ ಎನ್ನುತ್ತಿದ್ದರು. ಆದರೆ ಈ ಎಲ್ಲಾ ನೆಪಗಳನ್ನು ನಾವು ಕಡೆಗಣಿಸಿದೆವು. ಆಗುವುದಿಲ್ಲ ಎಂಬುವುದು ಸಮಸ್ಯೆಯೊಂದಕ್ಕೆ ಪರಿಹಾರ ಅಲ್ಲ ಎಂಬುವುದು ನಮ್ಮ ಅಭಿಪ್ರಾಯವಾಗಿತ್ತು ಎಂದಿದ್ದಾರೆ.

Ratan Tata angry over fake accounts on Facebook stg asp

ಕೈಬರಹದ ಪತ್ರದೊಂದಿಗೆ ರತನ್ ಟಾಟಾ ಅವರಿಗೆ 3D ಪ್ರಸ್ತುತಿ ಕಳುಹಿಸಿದೆವು
ಗ್ರಾಹಕರಿಗೆ ಯಾವುದೇ ಶಕ್ತಿ ಅಥವಾ ಇಂಧನದ ವಿತರಣೆ ಮತ್ತು ವಿತರಣಾ ವ್ಯವಸ್ಥೆಯನ್ನು ಪರಿವರ್ತಿಸಲು ರೆಪೋಸ್ ಎನರ್ಜಿ ತಂತ್ರಜ್ಞಾನವನ್ನು ಹೇಗೆ ಬಳಸಲು ಬಯಸುತ್ತದೆ ಎಂಬುದರ ಕುರಿತು ತಾನು 3D ಪ್ರಸ್ತುತಿಯನ್ನು ರಚಿಸಿದೆ, ಬಳಿಕ ನಂತರ ಈ 3ಡಿ ಪ್ರಸ್ತುತಿಯನ್ನು ರತನ್ ಟಾಟಾ ಅವರಿಗೆ ಕೈ ಬರಹದ ಪತ್ರದೊಂದಿಗೆ ಕಳುಹಿಸಿದೆ ಎಂದ್ಉ ಅದಿತಿ ಹೇಳಿದ್ದಾರೆ.

ರತನ್ ಟಾಟಾ ಅವರ ಮನೆಯ ಹೊರಗೆ 12 ಗಂಟೆಗಳ ಕಾಲ ಕಾದೆವು

ಇದಲ್ಲದೆ, ಅವರು ರತನ್ ಟಾಟಾ ಅವರನ್ನು ಪರಿಚಯಿಸುವ ಕೆಲವು ಮೂಲಗಳನ್ನು ಸಹ ಸಂಪರ್ಕಿಸಿದರು ಮತ್ತು ರತನ್ ಟಾಟಾ ಅವರ ಮನೆಯ ಹೊರಗೆ 12 ಗಂಟೆಗಳ ಕಾಲ ಕಾಯುತ್ತಿದ್ದರು, ಆದರೆ ಅವರು ಭೇಟಿಯಾಗಲು ಸಾಧ್ಯವಾಗಲಿಲ್ಲ. ದಣಿದಿದ್ದ ಅವರು ರಾತ್ರಿ 10 ಗಂಟೆ ಸುಮಾರಿಗೆ ತಮ್ಮ ಹೋಟೆಲ್‌ಗೆ ಹಿಂತಿರುಗಿದರು, ಅಷ್ಟರಲ್ಲೇ ಅದಿತಿಗೆ ಒಂದು ಫೋನ್ ಕರೆ ಬಂದಿತ್ತು. ಆ ಕ್ಷಣವನ್ನು ನೆನಪಿಸಿಕೊಂಡ ಅದಿತಿ, “ಆ ಸಮಯದಲ್ಲಿ ನಾನು ಫೋನ್ ಎತ್ತುವ ಮನಸ್ಥಿತಿಯಲ್ಲಿ ಇರಲಿಲ್ಲ, ಆದರೆ ನಾನು ಅದನ್ನು ತೆಗೆದುಕೊಂಡೆ ಆ ಕಡೆರಯಿಂದ ‘ಹಲೋ, ನಾನು ಅದಿತಿಯೊಂದಿಗೆ ಮಾತನಾಡಬಹುದೇ ಎಂದು ಧ್ವನಿ ಬಂತು.

"ನಾನು ರತನ್ ಟಾಟಾ ಮಾತನಾಡುತ್ತಿದ್ದೇನೆ. ನಿಮ್ಮ ಪತ್ರ ನನಗೆ ಸಿಕ್ಕಿತು. ನಾವು ಭೇಟಿಯಾಗಬಹುದೇ?"

ಕರೆಯ ವಿಚಾರದ ಬಗ್ಗೆ ಮತ್ತಷ್ಟು ಮಾಹಿತಿ ನೀಡಿದ ಅದಿತಿ, ನೀವ್ಯಾರು ಎಂದು ಕೇಳಿದೆ. ಆದರೆ ಒಳಗೊಳಗೇ ತಾವಿಬ್ಬರೂ ಹಲವಾರು ಸಮಯದಿಂದ ಕಾಯುತ್ತಿದ್ದ ಕತರೆಯೇ ಇದು ಎಂಬುವುದನ್ನು ಅರಿತುಕೊಂಡಿದ್ದೆ ಎಂದು ಅದಿತಿ ಹೇಳಿದ್ದಾರೆ. ಇನ್ನು ಅತ್ತ ಅದಿತಿಗೆ ಇನ್ನೊಂದು ಕಡೆಯಿಂದ “ನಾನು ರತನ್ ಟಾಟಾ ಮಾತನಾಡುತ್ತಿದ್ದೇನೆ. ನಿಮ್ಮ ಪತ್ರ ನನಗೆ ಸಿಕ್ಕಿತು. ನಾವು ಭೇಟಿಯಾಗಬಹುದೇ?" ಎಂಬ ಧ್ವನಿ ಕೇಳಿಸಿತ್ತು.

ಇದನ್ನೂ ಓದಿ:  Ratan Tata: ದೇಶದ ಹೆಮ್ಮೆಯ ಉದ್ಯಮಿ ರತನ್ ಟಾಟಾ ಬರ್ತ್ ಡೇ ಆಚರಿಸಿಕೊಂಡ ರೀತಿ ನೀವೇ ನೋಡಿ

ಆ ಸಮಯದಲ್ಲಿ ತನಗೆ ಏನು ಹೇಳಬೇಕೆಂದು ಅರ್ಥವಾಗಲಿಲ್ಲ ಎಂದು ಅದಿತಿ ಭೋಸ್ಲೆ ವಾಲುಂಜ್ ಹೇಳಿದ್ದಾರೆ. “ಮರುದಿನ ನಾವು ಬೆಳಿಗ್ಗೆ 10.45 ಕ್ಕೆ ಅವರ ಮನೆಗೆ ತಲುಪಿದ್ದೇವೆ ಮತ್ತು ನಮ್ಮ ಪ್ರಸ್ತುತಿಯನ್ನು ನೀಡಲು ಲಿವಿಂಗ್ ರೂಮಿನಲ್ಲಿ ಅವರಿಗಾಗಿ ಕಾಯುತ್ತಿದ್ದೆವು. ಸರಿಯಾಗಿ 11 ಗಂಟೆಗೆ ನೀಲಿ ಅಂಗಿ ಧರಿಸಿದ ಎತ್ತರದ ಮತ್ತು ಸುಂದರ ವ್ಯಕ್ತಿಯೊಬ್ಬರು ನಮ್ಮ ಕಡೆಗೆ ಬಂದರು. ಬೆಳಿಗ್ಗೆ 11 ಗಂಟೆಗೆ ಆರಂಭವಾದ ಮೀಟಿಂಗ್ ಮಧ್ಯಾಹ್ನ 2 ಗಂಟೆಯವರೆಗೆ ನಡೆಯಿತು. ಆ ಮೂರು ತಾಸು ನಮಗೆ ಧ್ಯಾನದಂತಿದ್ದವು, ಅಲ್ಲಿ ಅವರು ನಮ್ಮ ಆಲೋಚನೆಗಳನ್ನು ಆಲಿಸಿದರು, ತಮ್ಮ ಅನುಭವಗಳನ್ನು ಹಂಚಿಕೊಂಡರು ಮತ್ತು ನಮಗೆ ಮಾರ್ಗದರ್ಶನ ನೀಡಿದರು ಎಂದಿದ್ದಾರೆ ಅದಿತಿ.

ರತನ್ ಟಾಟಾ ಅವರು ನನ್ನಿಂದ ಏನು ನಿರೀಕ್ಷಿಸುತ್ತೀರಿ ಎಂದು ಕೇಳಿದರು, ಅದಕ್ಕೆ ದಂಪತಿ "ಸರ್, ಜನರ ಸೇವೆ ಮಾಡಲು ಮತ್ತು ನಮ್ಮ ದೇಶವನ್ನು ಜಾಗತಿಕಗೊಳಿಸಲು ನಮಗೆ ಸಹಾಯ ಮಾಡಿ. ನಮಗೆ ಮಾರ್ಗದರ್ಶನ ನೀಡಿ." ಎಂದಿದ್ದಾರೆ.ಕೂಡಲೇ ರತನ್ ಟಾಟಾ ಸರಿ ಆಯ್ತು ಎಂದಿದ್ದಾರೆ.

2019 ರಲ್ಲಿ ರತನ್ ಟಾಟಾ ಅವರಿಂದ ಮೊದಲ ಟೋಕನ್ ಹೂಡಿಕೆ ಮತ್ತು ಏಪ್ರಿಲ್ 2022 ರಲ್ಲಿ ಎರಡನೇ ಹೂಡಿಕೆಯನ್ನು ಸ್ವೀಕರಿಸಲಾಗಿದೆ. "ಟಾಟಾ ಮೋಟಾರ್ಸ್ ನಮಗೆ ಸಹಾಯ ಮಾಡುತ್ತಿದೆ, ರತನ್ ಟಾಟಾ ಅವರೊಂದಿಗೆ ಮಾತನಾಡುತ್ತಿದೆ.ಅವರಿಗೆ ಅವರ ಮೊದಲ ಮೊಬೈಲ್ ಇಂಧನ ಕೇಂದ್ರವನ್ನು ತೋರಿಸುವುದು ಮತ್ತು ಅವರ ಪ್ರತಿಕ್ರಿಯೆಯನ್ನು ಪಡೆಯುವುದು, 2019 ರಲ್ಲಿ ಅವರ ಮೊದಲ ಟೋಕನ್ ಹೂಡಿಕೆ ಮತ್ತು ಏಪ್ರಿಲ್ 2022 ರಲ್ಲಿ ಎರಡನೇ ಹೂಡಿಕೆಯನ್ನು ಪಡೆಯುವುದು. ಇದೆಲ್ಲವೂ ಈ ತಂಡವಿಲ್ಲದೇ ಸಾಧ್ಯವಾಗುತ್ತಿರಲಿಲ್ಲ ಎಂದಿದ್ದಾರೆ.
Published by:Precilla Olivia Dias
First published: