• Home
  • »
  • News
  • »
  • business
  • »
  • RBI Rules: ಕ್ಯಾಶ್‌, ಇಂಟರ್ನೆಟ್ ಇಲ್ಲದಿದ್ರೂ ಹಣ ಪಾವತಿಸಲು ಆರ್‌ಬಿಐ ತಂದಿದೆ ಹೊಸ ರೂಲ್ಸ್‌! ಹೀಗೆ ಮಾಡಿ

RBI Rules: ಕ್ಯಾಶ್‌, ಇಂಟರ್ನೆಟ್ ಇಲ್ಲದಿದ್ರೂ ಹಣ ಪಾವತಿಸಲು ಆರ್‌ಬಿಐ ತಂದಿದೆ ಹೊಸ ರೂಲ್ಸ್‌! ಹೀಗೆ ಮಾಡಿ

 ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈಗ ವಹಿವಾಟುಗಳು ಆಫ್‌ಲೈನ್ ಆಗಿರುವುದರಿಂದ, ಸ್ವಲ್ಪ ವಿಳಂಬದ ನಂತರ ನಿಮಗೆ ಈ ವಹಿವಾಟಿನ ಸಂದೇಶವನ್ನು ನೀವು ಸ್ವೀಕರಿಸುತ್ತೀರಿ ಎಂದು ಹೇಳಲಾಗುತ್ತಿದೆ.

  • Share this:

ಈಗಂತೂ ಕೋವಿಡ್-19 ವೈರಸ್ (Covid-19 virus) ಹಾವಳಿಂದಾಗಿ ಮನೆಯಿಂದ ಹೆಚ್ಚು ಆಚೆ ಬಾರದ ಬಹುತೇಕರು ಆನ್‌ಲೈನ್ ವಹಿವಾಟುಗಳ (Online Transactions) ಮೇಲೆ ಹೆಚ್ಚು ಅವಲಂಬಿತರಾಗಿದ್ದನ್ನು ನಾವು ನೋಡಬಹುದಾಗಿದೆ. ಈಗಂತೂ ಜನರು ಪೇಟಿಎಂ, (Paytm,) ಫೋನ್ ಪೇ ಮತ್ತು ಗೂಗಲ್ ಪೇ (Google Pay) ನಂತಹವುಗಳ ಮೇಲೆ ಹೆಚ್ಚು ಅವಲಂಬಿಸಿ ಜನರು ಯಾವುದೇ ನಗದು ಹಣವನ್ನು ಜೊತೆಯಲ್ಲಿ ಹೆಚ್ಚಾಗಿ ಇರಿಸಿಕೊಳ್ಳುತ್ತಿಲ್ಲ. ಅವರು ಯಾವುದೇ ವಸ್ತುಗಳನ್ನು ಖರೀದಿಸಲು ಅಂಗಡಿಗೆ ಹೋದರೇ ಅಲ್ಲಿ ಆನ್‌ಲೈನ್ ವಹಿವಾಟುಗಳನ್ನು ಸ್ವೀಕರಿಸುವುದಿಲ್ಲ ಅಥವಾ ಕೆಲವೊಮ್ಮೆ ಈ ರೀತಿಯ ವಹಿವಾಟುಗಳನ್ನು ಮಾಡಲು ಇಂಟರ್ನೆಟ್ ಸಂಪರ್ಕವಿಲ್ಲದೇ ಇರುವಾಗ ಮಾತ್ರ ನಾವು ನಗದು ಹಣವನ್ನು ನೀಡುತ್ತೇವೆ. ಇಲ್ಲದಿದ್ದರೆ ಹೆಚ್ಚಾಗಿ ಬಹುತೇಕರು ಈಗ ಆನ್‌ಲೈನ್‌ನಲ್ಲಿಯೇ ಹಣ ಪಾವತಿ ಮಾಡುತ್ತಿದ್ದಾರೆ.


ಇಲ್ಲಿದೆ ಒಂದು ಪರಿಹಾರ
ಒಂದು ವೇಳೆ ನಿಮ್ಮ ಬಳಿ ಹಣವು ಇಲ್ಲ ಮತ್ತು ನಿಮ್ಮ ಮೊಬೈಲ್ ಫೋನ್‌ನಲ್ಲಿ ಇಂಟರ್ನೆಟ್ ಸಂಪರ್ಕ ಸಹ ಇಲ್ಲವಾಗಿದ್ದು, ನೀವು ಒಂದು ಅಂಗಡಿಗೆ ಹೋಗಿ ದಿನಸಿಗಳನ್ನು ಖರೀದಿಸಿದ್ದೀರಿ ಎಂದುಕೊಳ್ಳಿರಿ. ಆಗ ಆ ಅಂಗಡಿಯವನಿಗೆ ಹಣವನ್ನು ಹೇಗೆ ಪಾವತಿಸುತ್ತೀರಿ ಎಂದು ನೀವು ಯೋಚನೆಯಲ್ಲಿ ಮುಳುಗಿದ್ದರೆ, ಇಲ್ಲಿದೆ ಒಂದು ಪರಿಹಾರ.


ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತಕ್ಷಣದಿಂದ ಜಾರಿಗೆ ಬರುವಂತೆ ಕಾರ್ಡ್‌ಗಳು, ವ್ಯಾಲೆಟ್‌ ಅಥವಾ ಮೊಬೈಲ್ ಸಾಧನಗಳಂತಹ ಯಾವುದೇ ಚಾನೆಲ್ ಅಥವಾ ಸಾಧನವನ್ನು ಬಳಸಿ ಸಣ್ಣ ಮೌಲ್ಯದ ಪಾವತಿಗಳನ್ನು ಆಫ್‌ಲೈನ್‌ನಲ್ಲಿ ಸಹ ಮಾಡುವಂತಹ ಅವಕಾಶ ನೀಡಿದೆ. ಅಂದರೆ ಬಳಕೆದಾರರು ಯಾವುದೇ ಮೊಬೈಲ್ ಫೋನ್ ಅಥವಾ ವ್ಯಾಲೆಟ್ ಬಳಸಿ ಇಂಟರ್ನೆಟ್ ಸಂಪರ್ಕವಿಲ್ಲದೆ 200 ರೂಪಾಯಿಗಳವರೆಗೆ ಯಾವುದೇ ವಹಿವಾಟು ನಡೆಸಬಹುದು. ಹೊಸ ನಿಯಮದ ಪ್ರಕಾರ ಆಫ್‌ಲೈನ್ ಪಾವತಿಗಳು 200 ರೂಪಾಯಿಗೆ ಸೀಮಿತವಾಗಿದೆ.


ಇದನ್ನೂ ಓದಿ: Gold Discount: ರಿಯಾಯಿತಿ ದರದಲ್ಲಿ ಚಿನ್ನ ಖರೀದಿಸಬೇಕಾ? RBI ನೀಡುತ್ತಿರುವ ಹೊಸ ಆಫರ್ ಏನು?


ಮುಖಾಮುಖಿ ಪಾವತಿ
ಈಗ, ಯಾವುದೇ ಇಂಟರ್ನೆಟ್ ಸಂಪರ್ಕವಿಲ್ಲದೆ ಆಫ್‌ಲೈನ್ ಪಾವತಿಯನ್ನು ಮಾಡಬಹುದು. ಹೊಸ ಚೌಕಟ್ಟಿನ ಅಡಿಯಲ್ಲಿ, ಕಾರ್ಡ್‌ಗಳು, ವ್ಯಾಲೆಟ್‌ಗಳು ಅಥವಾ ಮೊಬೈಲ್ ಸಾಧನಗಳಂತಹ ಯಾವುದೇ ಸಾಧನಗಳನ್ನು ಬಳಸಿಕೊಂಡು ಅಂತಹ ಪಾವತಿಗಳನ್ನು ಮುಖಾಮುಖಿಯಾಗಿ ನಡೆಸಬಹುದು. ಈ ವಹಿವಾಟುಗಳಿಗೆ ಬಳಕೆದಾರರು ಹೆಚ್ಚುವರಿ ಹಂತವನ್ನು ಮಾಡಬೇಕಾಗುತ್ತದೆ.


ಸೆಪ್ಟೆಂಬರ್ 2020 ರಿಂದ ಜೂನ್ 2021ರ ಅವಧಿಯಲ್ಲಿ ಆರ್‌ಬಿಐ ಈ ಹೊಸ ಸಣ್ಣ ಮೌಲ್ಯದ ವಹಿವಾಟು ಕಾರ್ಯಕ್ರಮದ 3 ಯಶಸ್ವಿ ಯೋಜನೆಗಳನ್ನು ದೇಶದ ವಿವಿಧ ಭಾಗಗಳಲ್ಲಿ ಮಾಡಿದೆ. ಈ ಪರೀಕ್ಷೆಗಳು ಒಟ್ಟು 2.41 ಲಕ್ಷ ವಹಿವಾಟುಗಳನ್ನು 1.16 ಕೋಟಿ ರೂಪಾಯಿ ಮೌಲ್ಯದಲ್ಲಿ ಹೊಂದಿವೆ. ಈಗ ವಹಿವಾಟುಗಳು ಆಫ್‌ಲೈನ್ ಆಗಿರುವುದರಿಂದ, ಸ್ವಲ್ಪ ವಿಳಂಬದ ನಂತರ ನಿಮಗೆ ಈ ವಹಿವಾಟಿನ ಸಂದೇಶವನ್ನು ನೀವು ಸ್ವೀಕರಿಸುತ್ತೀರಿ ಎಂದು ಹೇಳಲಾಗುತ್ತಿದೆ.


ಆರ್‌ಬಿಐನ ಇತ್ತೀಚಿನ ಹೆಜ್ಜೆ
ಈಗ, ಈ ವಹಿವಾಟುಗಳು ಹೇಗೆ ಸಾಗುತ್ತವೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ, ಆದರೆ ನಮ್ಮ ಊಹೆಯ ಪ್ರಕಾರ ಸ್ಮಾರ್ಟ್‌ಫೋನ್‌ಗಳಲ್ಲಿ ಸಿಮ್ ಸೇವೆಗಳ ಮೂಲಕ ಮತ್ತು ಇಂಟರ್ನೆಟ್ ಅಗತ್ಯವಿಲ್ಲದ ವೈಶಿಷ್ಟ್ಯ ಫೋನ್ ಗಳ ಮೂಲಕ ಇದನ್ನು ಸುಗಮಗೊಳಿಸಬಹುದು. ಇಲ್ಲಿ ಕೆಲಸ ಮಾಡುವುದು ಬರೀ ಫೋನ್ ಸಂಖ್ಯೆ. ದೇಶದಲ್ಲಿ ಡಿಜಿಟಲ್ ಹಣ ಪಾವತಿಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಆರ್‌ಬಿಐನ ಇತ್ತೀಚಿನ ಹೆಜ್ಜೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.


ಇದನ್ನೂ ಓದಿ: Offline payments: ಆಫ್‌ಲೈನ್‌ ಪಾವತಿಗೆ ಮಿತಿ ವಿಧಿಸಿದ ಆರ್‌ಬಿಐ


ಆರ್‌ಬಿಐ ಪ್ರಕಾರ, "ಈ ಕಾರ್ಡ್‌ಗಳು, ವ್ಯಾಲೆಟ್‌ಗಳು, ಮೊಬೈಲ್ ಸಾಧನಗಳು ಮುಂತಾದ ಯಾವುದೇ ಸಾಧನಗಳನ್ನು ಬಳಸಿ ಆಫ್‌ಲೈನ್ ಹಣ ಪಾವತಿಗಳನ್ನು ಮಾಡಬಹುದು. ಆದರೆ ಈ ರೀತಿಯ ಹಣ ಪಾವತಿಗಳನ್ನು ಮುಖಾಮುಖಿ ಮೋಡ್‌ನಲ್ಲಿ ಮಾತ್ರ ಮಾಡಬೇಕು" ಎಂದು ತಿಳಿಸಿದೆ.

Published by:vanithasanjevani vanithasanjevani
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು