Breakup: ಹರಾಜಿಗೆ ಬಂತು ಆ ನಟನ ಬ್ರೇಕಪ್​ ಲೆಟರ್​​, 15 ಲಕ್ಷಕ್ಕೆ ಸೇಲ್​ ಆಗುತ್ತಂತೆ!

ಹರಾಜಿಗೆ ಬಂದ ಬ್ರೇಕಪ್​ ಲೆಟರ್​

ಹರಾಜಿಗೆ ಬಂದ ಬ್ರೇಕಪ್​ ಲೆಟರ್​

70 ವರ್ಷಗಳ ಹಿಂದೆ ನಡೆದ ನಟನೊಬ್ಬನ ಬ್ರೇಕಪ್ (Actor Breakup) ಕಥೆ ಮತ್ತೆ ಮುನ್ನೆಲೆಗೆ ಬಂದಿರುವುದು ಈ ಬಾರಿಯ ಸುದ್ದಿ ವಿಶೇಷ. ದಿ ಗಾಡ್‌ಫಾದರ್‌ನ (The Godfather) ಶ್ರೇಷ್ಠ ನಟ ಮತ್ತು ಆಸ್ಕರ್ ವಿಜೇತ (Oscar Winner) ಮರ್ಲಾನ್ ಬ್ರಾಂಡೊ (Marlon Brando) ಅವರ ಬ್ರೇಕಪ್ ಲೆಟರ್ ಈಗ ಹರಾಜಾಗಲಿದೆ.

ಮುಂದೆ ಓದಿ ...
  • Share this:

ಬಣ್ಣದ ಜಗತ್ತಿನಲ್ಲಿ, ನಟ-ನಟಿಯರ ಬ್ರೇಕಪ್ (Breakup) ಮತ್ತು ಪ್ಯಾಚ್-ಅಪ್​ಗಳ ಕಥೆಗಳು ತುಂಬಾ ಸಾಮಾನ್ಯವಾಗಿದೆ. ಈಗ ಯಾಕೆ ಬ್ರೇಕಪ್​ ವಿಷಯ ಅಂತೀರಾ? ಅದಕ್ಕೂ ಒಂದು ಕಾರಣವಿದೆ. 70 ವರ್ಷಗಳ ಹಿಂದೆ ನಡೆದ ನಟನೊಬ್ಬನ ಬ್ರೇಕಪ್ (Actor Breakup) ಕಥೆ ಮತ್ತೆ ಮುನ್ನೆಲೆಗೆ ಬಂದಿರುವುದು ಈ ಬಾರಿಯ ಸುದ್ದಿ ವಿಶೇಷ. ದಿ ಗಾಡ್‌ಫಾದರ್‌ನ (The Godfather) ಶ್ರೇಷ್ಠ ನಟ ಮತ್ತು ಆಸ್ಕರ್ ವಿಜೇತ (Oscar Winner) ಮರ್ಲಾನ್ ಬ್ರಾಂಡೊ (Marlon Brando) ಅವರ ಬ್ರೇಕಪ್ ಲೆಟರ್ ಈಗ ಹರಾಜಾಗಲಿದೆ. ನಟ-ನಟಿಯರ ಜೊತೆ ಒಂದು ಸೆಲ್ಫಿ ತೆಗೆದುಕೊಳ್ಳುವುದಕ್ಕೆ ನಮ್ಮ ಜನ ಏನು ಮಾಡಬೇಕಾದರೂ ಮಾಡುತ್ತಾರೆ. ಇನ್ನೂ ನಟ-ನಟಿಯರು ಬಳಸಿರುವ ವಸ್ತುಗಳನ್ನು ಕೆಲವೊಮ್ಮೆ ಅಭಿಮಾನಿಗಳು ಕೇಳುತ್ತಾರೆ. ಇಲ್ಲವಾದರೆ ಸ್ಟಾರ್​ ನಟ-ನಟಿಯರು ಬಳಸಿರುವ ವಸ್ತುಗಳನ್ನು ಹರಾಜು ಹಾಕುವ ಸಂಪ್ರಾದಾಯ ಹೊರ ದೇಶದಲ್ಲಿದೆಯಂತೆ.


15 ಲಕ್ಷಕ್ಕೆ 'ಬ್ರೇಕಪ್ ಲೆಟರ್' ಮಾರಾಟ!


ಮರ್ಲಾನ್ ಬ್ರಾಂಡೊ  ಅವರು 1940 ರಲ್ಲಿ ತನ್ನ ಗೆಳತಿಗೆ ಈ ಪತ್ರವನ್ನು ಬರೆದಿದ್ದರು. ಈ ಪತ್ರದಲ್ಲಿ ತನ್ನ ಗೆಳತಿಯ ಜೊತೆ ಏಕೆ ಬ್ರೇಕಪ್​ ಮಾಡಿಕೊಳ್ಳುತ್ತಿದ್ದೇನೆ ಎಂದು ಅವರು ವಿವರಿಸಿದ್ದರು. ಮರ್ಲಾನ್ ಬ್ರಾಂಡೊ  ಅವರ ಸ್ಟಾರ್‌ಡಮ್ ಹೆಚ್ಚುತ್ತಿರುವ ಸಮಯದಲ್ಲಿ ಈ ಪತ್ರವನ್ನು ಬೋಸ್ಟನ್ ಮೂಲದ RR ಹರಾಜು ಪಟ್ಟಿ ಮಾಡಿದೆ. ಪೆನ್ಸಿಲ್‌ನಲ್ಲಿ ಬರೆದಿರುವ ಈ ಮೂರು ಪುಟಗಳ ಟಿಪ್ಪಣಿಯಲ್ಲಿ ಹಲವು  ತಪ್ಪುಗಳಿವೆ. ಮುಂದಿನ ವಾರ ನಡೆಯಲಿರುವ ಹರಾಜಿನಲ್ಲಿ ಈ ಪತ್ರವನ್ನು 15,000 ಡಾಲರ್‌ಗೆ ಮಾರಾಟ ಮಾಡಬಹುದು.


ಮೊದಲ ಭೇಟಿಯಲ್ಲಿ ಪ್ರೀತಿ, ನಂತರ ಬ್ರೇಕಪ್!


ಬ್ರಾಂಡೊ ಫ್ರೆಂಚ್ ನಟಿ ಸೊಲಾಂಜ್ ಪೊಡೆಲ್ ಅವರಿಗೆ ಈ ಬ್ರೇಕಪ್ ಪತ್ರವನ್ನು ಬರೆದಿದ್ದರು. ನ್ಯೂಯಾರ್ಕ್‌ನಲ್ಲಿ ಎ ಸ್ಟ್ರೀಟ್‌ಕಾರ್ ನೇಮ್ಡ್ ಡಿಸೈರ್ ತಯಾರಿಕೆಯ ಸಮಯದಲ್ಲಿ ಇಬ್ಬರೂ ಭೇಟಿಯಾಗಿದ್ದರು. ನಂತರ ಅವರ ಪ್ರೀತಿ ನಿಧಾನವಾಗಿ ಅರಳಿತು. ಆದರೆ ಸ್ವಲ್ಪ ಸಮಯದ ನಂತರ ಇಬ್ಬರ ನಡುವಿನ ಸಂಬಂಧ ಹಾಳಾಗಿತ್ತು. ಬ್ರಾಂಡೊ ಹಾಲಿವುಡ್‌ನಲ್ಲಿ ಪ್ರಚಂಡ ಸ್ಟಾರ್‌ಡಮ್ ಗಳಿಸಿದರು, ಆದರೆ ಪೊಡೆಲ್ ಛಾಯಾಗ್ರಾಹಕರಾದರು.


ನಟ ಬರೆದಿದ್ದ ಬ್ರೇಕಪ್​ ಲೆಟರ್​


ಇದನ್ನೂ ಓದಿ: ಸಿನಿಮಾ ತಾರೆಯರು ಮದುವೆಯಾಗೋ ಈ ಸ್ಥಳದ ಬಾಡಿಗೆಗಿಂತ ಬೆಂಗ್ಳೂರಲ್ಲಿ ಡ್ಯೂಪ್ಲೆಕ್ಸ್ ಮನೆ ಚೀಪ್!


ಬ್ರಾಂಡೊ ಈ  ಪತ್ರದಲ್ಲಿ, "ದಯವಿಟ್ಟು ಈ ಪತ್ರವನ್ನು ಮುಕ್ತ ಹೃದಯದಿಂದ ಸ್ವೀಕರಿಸಿ ಏಕೆಂದರೆ ಇದನ್ನು ನಾಲ್ಕನೇ ಬಾರಿಗೆ ಪ್ರಾಮಾಣಿಕವಾಗಿ ಬರೆಯಲಾಗಿದೆ, ಆದ್ದರಿಂದ ನೀವು ನನ್ನನ್ನು ಸಂಪೂರ್ಣ ಬೋರ್ ಎಂದು ಪರಿಗಣಿಸುವುದಿಲ್ಲ, ನಾನು ನಿಮಗೆ ವಿವರಿಸಲು ಈ ಪತ್ರವನ್ನು ಬರೆಯುತ್ತಿದ್ದೇನೆ. ಅವಮಾನವನ್ನು ಬಯಸುವುದಿಲ್ಲ" ಎಂದು  ಪತ್ರದಲ್ಲಿ ಬ್ರಾಂಡೊ ತನ್ನ ಗೆಳತಿಗೆ ಕ್ಷಮೆಯಾಚಿಸಿದ್ದರು.


20 ನೇ ಶತಮಾನದ ಅತ್ಯಂತ ಪ್ರಭಾವಶಾಲಿ ತಾರೆ!


ಪೊಡೆಲ್ ಅವರನ್ನು ಯಾವಾಗಲೂ "ವಾತ್ಸಲ್ಯ, ಗೌರವ ಮತ್ತು ಮೆಚ್ಚುಗೆಯೊಂದಿಗೆ" ನೆನಪಿಸಿಕೊಳ್ಳುತ್ತಾರೆ ಎಂದು ನಟ ಹೇಳಿದ್ದರು. 2004 ರಲ್ಲಿ ನಿಧನರಾದ ಬ್ರಾಂಡೊ ಅವರನ್ನು 20 ನೇ ಶತಮಾನದ ಅತ್ಯಂತ ಪ್ರಭಾವಶಾಲಿ ತಾರೆಗಳಲ್ಲಿ ಪರಿಗಣಿಸಲಾಗಿದೆ.



ಆರು ದಶಕಗಳ ವೃತ್ತಿಜೀವನದಲ್ಲಿ, ಅವರು ಎರಡು ಆಸ್ಕರ್‌ಗಳು, ಎರಡು ಗೋಲ್ಡನ್ ಗ್ಲೋಬ್‌ಗಳು ಮತ್ತು ಮೂರು ಬ್ರಿಟಿಷ್ ಅಕಾಡೆಮಿ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದರು.

Published by:ವಾಸುದೇವ್ ಎಂ
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು