ಮನೆಯಲ್ಲಿ ತಿಂಡಿ ರೆಡಿ ಮಾಡೋಕೆ ಟೈಮ್ ಇಲ್ಲ. ತುಂಬಾ ಹಸಿವಾಗ್ತಿದೆ. ಫಟಾಫಟ್ ಅಂತಾ ಏನಾದ್ರೂ ತಿನ್ನಬೇಕು. ವೆರೈಟಿಯಾಗಿರೋ ಫುಡ್ ಟೇಸ್ಟ್ ಮಾಡಬೇಕು. ಹೀಗೆ ಅನಿಸಿದಾಗಲೆಲ್ಲಾ ಈಗ ತಕ್ಷಣ ತಲೆಗೆ ಬರೋದೇ ಸ್ವಿಗ್ಗಿ, ಝೊಮ್ಯಾಟೊ. ಹೌದು, ಮನೆಯಲ್ಲಿ ಕೂತು, ಹೋಟೆಲ್, ರೆಸ್ಟೋರೆಂಟ್‌ಗಳಿಂದ ಊಟ ತರಿಸಿಕೊಳ್ಳೋರಿಗೆ ಅಂತಾನೇ ಹತ್ತಾರು ಆ್ಯಪ್‌ಗಳಿವೆ. ಸ್ವಿಗ್ಗಿ (Swiggy), ಝೊಮ್ಯಾಟೊ (Zomato), ಉಬರ್ ಫುಡ್‌ನಂತಹ (Uber Food) ಕಂಪನಿಗಳು ಸಿಟಿ ಜನರಿಗಾಗಿಯೇ ಜನ್ಮಎತ್ತಿವೆ. ಥಟ್ ಅಂತ ತಿಂಡಿ, ಊಟ ಬೇಕು ಅನ್ನೋರು, ಫಟ್ ಅಂತ ಆನ್‌ಲೈನ್‌ನಲ್ಲಿ ಬುಕ್ ಮಾಡ್ತಾರೆ. ಆದರೆ, ಇತ್ತೀಚೆಗೆ ಡೆಲಿವರಿ ಚಾರ್ಜ್ (Delivery Charge), ಅದು ಇದು ಅಂತ ಆನ್‌ಲೈನ್ ಆ್ಯಪ್‌ಗಳು (Online App) ಸಿಕ್ಕಾಪಟ್ಟೆ ಹಣ ಪೀಕುತ್ತಿವೆ.
ಇದಕ್ಕೆಲ್ಲಾ ಪರಿಹಾರವೆಂಬಂತೆ ಈಗ ಒಂದು ಗುಡ್‌ನ್ಯೂಸ್ ಬಂದಿದೆ. ಅದೇನಂದ್ರೆ, ಸ್ವಿಗ್ವಿ, ಝೊಮ್ಯಾಟೊದಂತಹ ಕಂಪನಿಗೆ ಟಕ್ಕರ್ ಕೊಡಲು ಭಾರತ ಸರ್ಕಾರವೇ ರೆಡಿಯಾಗಿದೆ.
ಸರ್ಕಾರದಿಂದಲೇ ಬಂದಿದೆ ಓಎನ್‌ಡಿಸಿ ಆ್ಯಪ್
ನಿಜ, ಸರ್ಕಾರ ಡಿಜಿಟಲ್ ಜಮಾನಕ್ಕೆ ತೆರೆದುಕೊಳ್ತಿದೆ. ಆನ್‌ಲೈನ್‌ನಲ್ಲಿ ದೈತ್ಯರಾಗಿರುವ ಕಂಪನಿಗಳಿಗೆ ಸೆಡ್ಡು ಹೊಡೆಯಲು ಮುಂದಾಗಿದೆ. ಇದೀಗ ಒಎನ್‌ಡಿಸಿ (ಆನ್‌ಲೈನ್ ನೆಟ್‌ವರ್ಕ್ ಫಾರ್ ಡಿಜಿಟಲ್ ಕಾಮರ್ಸ್) ಫ್ಲಾಟ್‌ಫಾರ್ಮ್ನಡಿ ಫೂಡ್ ಡೆಲಿವರಿ ಸರ್ವೀಸ್ ಕೊಡ್ತಿದೆ.
ಇದನ್ನೂ ಓದಿ: ಭಾರತದಲ್ಲಿ ನೌಕರರ ಸಂಬಳ 50 ಸಾವಿರಕ್ಕಿಂತ ಕಡಿಮೆ! ಪಾಕಿಸ್ತಾನ, ಚೀನಾದಲ್ಲಿ ಎಷ್ಟಿದೆ ಗೊತ್ತಾ?
ವಿಷಯ ಅಂದ್ರೆ, ಸ್ವಿಗ್ಗಿ ಮತ್ತು ಜೊಮೊಟೋ ಕಂಪನಿಗಳು ಗ್ರಾಹಕರು ಮತ್ತು ಹೋಟೆಲ್‌ನವರ ನಡುವೆ ಮೂರನೇ ವ್ಯಕ್ತಿಗಳಾಗಿ ಕಾರ್ಯನಿರ್ವಹಿಸುತ್ತಿದ್ರು.
ಆದರೆ, ಒಎನ್‌ಡಿಸಿ ಆ್ಯಪ್ ಈ ರೀತಿ ಇರಲ್ಲ. ಇದು ಗ್ರಾಹಕರು ಮತ್ತು ಹೋಟೆಲ್‌ನವರ ನಡುವೆ ನೇರವಾದ ಸಂಪರ್ಕ ಕಲ್ಪಿಸುತ್ತಿದೆ. ಹೀಗಾಗಿ, ಇಲ್ಲಿ ಕಂಪನಿಯೊಂದರ ಬಟ್ಟೆ ತೊಟ್ಟು ಡೆಲಿವರಿ ಬಾಯ್‌ಗಳು ಬರೋದಿಲ್ಲ. ನೇರವಾಗಿ ಹೋಟೆಲ್, ರೆಸ್ಟೋರೆಂಟ್‌ನ ಕಡೆಯವರೇ ಮನೆ ಬಾಗಿಲಿಗೆ ಬಂದು ಫುಡ್ ಕೊಡ್ತಾರೆ.
ಸ್ವಿಗ್ವಿ, ಜೊಮ್ಯಾಟೊಗಿಂತಲೂ ಕಡಿಮೆ ರೇಟ್!
ಈ ಮೊದಲು ಸ್ವಿಗ್ಗಿ, ಝೊಮ್ಯಾಟೊಗಳಲ್ಲಿ 150 ರೂಪಾಯಿ ಬೆಲೆಯ ಫುಡ್ ಆರ್ಡರ್ ಮಾಡಿದ್ರೆ ಅದಕ್ಕೆ ಸರ್ವೀಸ್ ಚಾರ್ಜ್, ಡೆಲಿವರಿ ಚಾರ್ಜ್, ಇತರೆ ಚಾರ್ಜ್ಗಳನ್ನು ಸೇರಿಸಿ 210 ರೂಪಾಯಿಯಿಂದ 220 ರೂಪಾಯಿ ತನಕ ಬಿಲ್ ಮಾಡ್ತಾರೆ. ಆದರೆ ಭಾರತ ಸರ್ಕಾರ ನಿರ್ಮಿಸಿರುವ ಈ ಆ್ಯಪ್‌ನಲ್ಲಿ ಹಾಗಲ್ಲ. ಇಲ್ಲಿ ರೆಸ್ಟೋರೆಂಟ್‌ನಲ್ಲಿ ಇರುವ ಮೌಲ್ಯದಷ್ಟೇ ಹಣವನ್ನ ಗ್ರಾಹಕರು ಪೇಮಾಡಿದ್ರೆ ಸಾಕು. ಹೀಗಾಗಿ, ಸ್ವಿಗ್ಗಿ, ಝೊಮ್ಯಾಟೊಗಿಂತಲೂ ಈ ಆ್ಯಪ್‌ನಲ್ಲಿ ಕಡಿಮೆ ಬೆಲೆ ಫುಡ್ ಸಿಗುತ್ತೆ.
ಅಂದಹಾಗೇ, ಭಾರತ ಸರ್ಕಾರದ ಈ ಒಎನ್‌ಡಿಸಿ ಆ್ಯಪ್ ಈಗಾಗಲೇ ಕಾರ್ಯನಿರ್ವಹಿಸುತ್ತಿದೆ. 2022ರ ಸೆಪ್ಟೆಂಬರ್‌ನಲ್ಲೇ ಈ ಆ್ಯಪ್ ಲಾಂಚ್ ಆಗಿದೆ. ಬೆಂಗಳೂರಿನಲ್ಲಿ ಮೊದಲ ಬಾರಿಗೆ ಇದು ಬಳಕೆಗೆ ಬಂದು.. ಆದರೆ ಇತ್ತೀಚೆಗೆ ಇದು ಜನಪ್ರಿಯತೆ ಪಡೆದು ಕೊಳ್ತಿದೆ. ಪ್ರತಿದಿನವು ಆ ಆ್ಯಪ್ ಮೂಲಕ ಜನರು ಸುಮಾರು 10 ಸಾವಿರ ಆರ್ಡರ್‌ಗಳನ್ನ ಮಾಡುತ್ತಿದ್ದಾರೆ.
ಇನ್ನು, ಕಳೆದ ಕೆಲ ದಿನದಿಂದ ಜನರೇ ಬೆಲೆಗಳಲ್ಲಿ ಕಂಪೇರ್ ಮಾಡುತ್ತಿದ್ದಾರೆ. ಸ್ಕ್ರೀನ್ ಶಾಟ್ ಮೂಲಕ ಸ್ವಿಗ್ಗಿ, ಜೊಮ್ಯಾಟೊ ಮತ್ತು ಸರ್ಕಾರದ ನಡುವಣ ಆ್ಯಪ್ ಗೆ ಇರುವ ಬೆಲೆ ಹೋಲಿಕೆ ಮಾಡುತ್ತಿದ್ದಾರೆ.
ಪೇಟಿಎಮ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಿ
ಈ ಒಎನ್‌ಡಿಸಿ ಆ್ಯಪ್ ಯೂಸ್ ಮಾಡೋದು ಬಹಳ ಸುಲಭ. ಪೇಟಿಎಂ ಮೂಲಕ ಒಎನ್‌ಡಿಸಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬಹುದು. ಹಾಗೇ, ಹೋಟೆಲ್, ರೆಸ್ಟೋರೆಂಟ್‌ನವರು ಕೂಡ ಇದೇ ಆ್ಯಪ್ ಮೂಲಕ ಗ್ರಾಹಕರಿಗೆ ಫುಡ್ ಸಪ್ಲೈ ಮಾಡಬಹುದು.
ಮತ್ತೊಂದು ಸಂಗತಿ ಅಂದರೆ ಈ ಆ್ಯಪ್ ಮೂಲಕ ಕೇವಲ ಊಟ ಮಾತ್ರವಲ್ಲ, ದಿನಸಿ, ಗೃಹ ಬಳಕೆ ವಸ್ತುಗಳು, ಸ್ವಚ್ಛತೆ ಮಡುವ ಸಲಕರಣೆಗಳನ್ನೂ ಆರ್ಡರ್ ಮಾಡಬಹುದು. ಈ ಆ್ಯಪ್ ಕೇವಲ ಸ್ವಿಗ್ಗಿ, ಜೊಮ್ಯಾಟೊಗೆ ಮಾತ್ರವಲ್ಲ, ಜಿಪ್ಟೋ, ಬ್ಲಿಂಕಿಟ್‌ನಂತಹ ಆ್ಯಪ್‌ಗಳಿಗೂ ಈ ಪೈಪೋಟಿ ಕೊಡುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ