ಈಗೆಲ್ಲಾ ನಾವು ಸಾಮಾನ್ಯವಾಗಿ ಮನೆಯಿಂದಲೇ ಹೋಟೆಲ್ ಊಟವನ್ನು ಆರ್ಡರ್ (Hotel Food Order) ಮಾಡಿಕೊಳ್ಳಲು ಫುಡ್ ಅಗ್ರಿಗೆಟರ್ಗಳಾದ (Aggregator) ಸ್ವಿಗ್ಗಿ ಮತ್ತು ಝೊಮ್ಯಾಟೊವನ್ನು (Zomato) ಬಳಸುತ್ತೇವೆ. ಈ ಅಪ್ಲಿಕೇಷನ್ಗಳಲ್ಲಿ ಹೊಟೇಲ್ ಊಟದ ಬಿಲ್ ಮೇಲೆ ಅನೇಕ ರೀತಿಯ ಡಿಸ್ಕೌಂಟ್ಗಳು ಸಹ ಇರುವುದನ್ನು ನಾವು ನೋಡುತ್ತಿರುತ್ತೇವೆ. ಹೊಟೇಲ್ ಗೆ ಹೋಗಿ ಊಟವನ್ನು ಆರ್ಡರ್ ಮಾಡಿ ಬರುವುದಕ್ಕಿಂತಲೂ ಬೇಕಾದ ಆಹಾರ ಪದಾರ್ಥಗಳನ್ನು ಮನೆಗೆ ತರಿಸಿಕೊಳ್ಳುವುದು ನಮಗೆ ಎಷ್ಟೋ ಸಲ ಅನುಕೂಲ ಅಂತ ಅನ್ನಿಸಿರುತ್ತದೆ.
ಹೊಸದಾದ ಫುಡ್ ಅಗ್ರಿಗೇಟರ್ ಅಪ್ಲಿಕೇಷನ್ ಬಂದಿದೆ
ಈಗ ಮುಂಬೈ ಹೋಟೆಲ್ಗಳು ಆಹಾರ ವಿತರಣೆಗಾಗಿ ತಮ್ಮದೇ ಆದ ಆನ್ಲೈನ್ ಪ್ಲಾಟ್ಫಾರ್ಮ್ ‘ವಾಯು’ ವನ್ನು ಶುರು ಮಾಡಿವೆಯಂತೆ. ಇತರ ಫುಡ್ ಅಗ್ರಿಗೇಟರ್ಗಳಿಗಿಂತಲೂ ಇದು ಶೇಕಡಾ 15 ರಿಂದ 20 ರಷ್ಟು ಅಗ್ಗವಾಗಿರಲಿದೆ ಎಂದು ಭರವಸೆ ನೀಡಿವೆ.
ವಾಯು ಎಂದು ಹೆಸರಿಸಲಾದ ಆಹಾರ ವಿತರಣಾ ಅಪ್ಲಿಕೇಶನ್, ಹೆಚ್ಚಿನ ಕಮಿಷನ್ ಗಳು, ಪಕ್ಷಪಾತದ ವಿಮರ್ಶೆಗಳು ಮತ್ತು ಕಳಪೆ ಗುಣಮಟ್ಟ ಎಂಬ ರಿವೀವ್ ಗಳನ್ನು ಪಡೆದ ಎಷ್ಟೋ ಆನ್ಲೈನ್ ಆಹಾರ ವಿತರಣಾ ಸೇವೆಗಳೊಂದಿಗೆ ರೆಸ್ಟೋರೆಂಟ್ ಗಳು ಮತ್ತು ಗ್ರಾಹಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುತ್ತದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಈ ಬ್ಯುಸಿನೆಸ್ಗೆ ಬೇಕಿರೋದು ಶುಚಿ-ರುಚಿ, ಇಷ್ಟಿದ್ರೆ ಸಾಕು ಕೈ ತುಂಬಾ ಆದಾಯ ಫಿಕ್ಸ್!
ಟೆಕ್ ಉದ್ಯಮಿಗಳಾದ ಅನಿರುದ್ಧ ಕೊಟ್ಗಿರೆ ಮತ್ತು ಮಂದರ್ ಲಾಂಡೆ ಸ್ಥಾಪಿಸಿದ ಡೆಸ್ಟೆಕ್ ಹೋರೆಕಾದ ಉತ್ಪನ್ನವಾದ ವಾಯು, ಮುಂಬೈ ಮೂಲದ ಇಂಡಿಯನ್ ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್ (AHAR) ಮತ್ತು ಇತರ ಉದ್ಯಮ ಸಂಸ್ಥೆಗಳ ಬೆಂಬಲವನ್ನು ಹೊಂದಿದೆ.
ಇದು ಭಗತ್ ತಾರಾಚಂದ್, ಮಹೇಶ್ ಲಂಚ್ ಹೋಮ್, ಬನಾನಾ ಲೀಫ್, ಶಿವ ಸಾಗರ್, ಗುರು ಕೃಪಾ, ಕೀರ್ತಿ ಮಹಲ್, ಪರ್ಷಿಯನ್ ದರ್ಬಾರ್ ಮತ್ತು ಲಾಡು ಸಾಮ್ರಾಟ್ ಸೇರಿದಂತೆ 1,000 ಕ್ಕೂ ಹೆಚ್ಚು ಮುಂಬೈ ರೆಸ್ಟೋರೆಂಟ್ ಗಳೊಂದಿಗೆ ಗ್ರಾಹಕರನ್ನು ಸಂಪರ್ಕಿಸುವ ಸಾಫ್ಟ್‌ವೇರ್ ಮತ್ತು ಸರ್ವೀಸ್ ಎಂದರೆ ಸಾಸ್ ಪ್ಲಾಟ್ಫಾರ್ಮ್ ಆಗಿದೆ.
‘ವಾಯು’ ರೆಸ್ಟೋರೆಂಟ್ ಗಳಿಂದ ಯಾವುದೇ ಕಮಿಷನ್ ಶುಲ್ಕವನ್ನು ವಿಧಿಸುವುದಿಲ್ವಂತೆ..
ವರದಿಗಳ ಪ್ರಕಾರ, ವಾಯು ರೆಸ್ಟೋರೆಂಟ್ ಗಳಿಂದ ಯಾವುದೇ ಕಮಿಷನ್ ಶುಲ್ಕವನ್ನು ವಿಧಿಸುವುದಿಲ್ಲವಂತೆ, ಇದು ಗ್ರಾಹಕರಿಗೆ ಸ್ಪರ್ಧಾತ್ಮಕ ಬೆಲೆಗಳು ಮತ್ತು ಉತ್ತಮ ಮೌಲ್ಯವನ್ನು ನೀಡಲು ಅನುವು ಮಾಡಿಕೊಡುತ್ತದೆ.
ಈ ವೇದಿಕೆಯು ಗ್ರಾಹಕರಿಗೆ ಕೈಗೆಟುಕುವ, ಸಮಯೋಚಿತ, ಆರೋಗ್ಯಕರ ಮತ್ತು ಗುಣಮಟ್ಟದ ಆಹಾರವನ್ನು ಒದಗಿಸುವ ಗುರಿಯನ್ನು ಹೊಂದಿದೆ ಮತ್ತು ಹೆಚ್ಚಿನ ಬೆಲೆಗಳು, ವಿಳಂಬವಾಗುವುದು, ಕಳಪೆ ನೈರ್ಮಲ್ಯ, ಕಡಿಮೆ ಗುಣಮಟ್ಟ ಮತ್ತು ಗ್ರಾಹಕರ ಬೆಂಬಲದ ಕೊರತೆಯ ಸಮಸ್ಯೆಗಳನ್ನು ಈ ಅಪ್ಲಿಕೇಷನ್ ತಪ್ಪಿಸುತ್ತದೆ.
ಇದಕ್ಕೆ ಬ್ರಾಂಡ್ ಅಂಬಾಸಿಡರ್ ನಟ ಸುನಿಲ್ ಶೆಟ್ಟಿ..
ಇದೆಲ್ಲದರ ಮಧ್ಯೆ ಈ ಕಂಪನಿಯು ನಟ ಮತ್ತು ಹೋಟೆಲ್ ಉದ್ಯಮಿಯಾದ ಸುನಿಲ್ ಶೆಟ್ಟಿ ಅವರನ್ನು ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿದೆ.
"ವಾಯು ಆ್ಯಪ್ ಕಮಿಷನ್ ಮುಕ್ತ ಮಾದರಿಯನ್ನು ಅಳವಡಿಸಿಕೊಳ್ಳುವ ಮೂಲಕ ಆನ್ಲೈನ್ ಆಹಾರ ವಿತರಣಾ ಉದ್ಯಮವನ್ನು ಪರಿವರ್ತಿಸುತ್ತದೆ. ಪ್ರತಿ ಮಳಿಗೆಗೆ ತಿಂಗಳಿಗೆ 1,000 ರೂಪಾಯಿಗಳ ಪರಿಚಯಾತ್ಮಕ ಬೆಲೆಯಲ್ಲಿ ನಾವು ರೆಸ್ಟೋರೆಂಟ್ ಗಳೊಂದಿಗೆ ನಿಗದಿತ ಶುಲ್ಕ ಒಪ್ಪಂದವನ್ನು ಹೊಂದಿದ್ದೇವೆ. ನಂತರ, ಇದನ್ನು ತಿಂಗಳಿಗೆ 2,000 ರೂಪಾಯಿಗೆ ಹೆಚ್ಚಿಸಲಾಗುವುದು" ಎಂದು ಇದರ ಸ್ಥಾಪಕ ಅನಿರುದ್ಧ ಕೊಟ್ಗಿರೆ ಹೇಳಿದ್ದಾರೆ.
ಈ ‘ವಾಯು’ ಆ್ಯಪ್ ಅನ್ನು ಬಳಸುವುದು ಹೇಗೆ?
ವರದಿಗಳ ಪ್ರಕಾರ, ಈ ಅಪ್ಲಿಕೇಶನ್ ರೆಸ್ಟೋರೆಂಟ್ ಮಾಲೀಕರಿಗೆ ಆನ್ಲೈನ್ ಆರ್ಡರ್ಗಳ ಮೇಲೆ ಹೆಚ್ಚಿನ ನಮ್ಯತೆ ಮತ್ತು ನಿಯಂತ್ರಣವನ್ನು ನೀಡುತ್ತದೆ. ಯುಪಿಐ, ಪೇಟಿಎಂ, ಗೂಗಲ್ ಪೇ, ನೆಟ್ ಬ್ಯಾಂಕಿಂಗ್ ಮತ್ತು ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ಗಳಂತಹ ವಿವಿಧ ವಿಧಾನಗಳನ್ನು ಬಳಸಿಕೊಂಡು ಅವರು ತಮ್ಮ ಬ್ಯಾಂಕ್ ಖಾತೆಗಳಿಗೆ ನೇರ ಪಾವತಿಗಳನ್ನು ಪಡೆಯಬಹುದು.
ಈ ಅಪ್ಲಿಕೇಶನ್ ಶೀಘ್ರದಲ್ಲೇ ಸರ್ಕಾರದ ಒಎನ್‌ಡಿಸಿ ಪ್ಲಾಟ್ಫಾರ್ಮ್ನೊಂದಿಗೆ ಸಂಯೋಜಿಸಲಿದೆ ಮತ್ತು ಮುಂಬರುವ ತಿಂಗಳುಗಳಲ್ಲಿ ಹೆಚ್ಚಿನ ನಗರಗಳಿಗೆ ಇದು ವಿಸ್ತರಿಸಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ