PM Kisan: ಪಿಎಂ ಕಿಸಾನ್ ರೈತರಿಗೆ ಹೊಸ ನಿಯಮ, ಈ ದಾಖಲೆ ಕೊಟ್ರೆ ಮಾತ್ರ ಸಿಗುತ್ತೆ ಹಣ!

ಈ ಯೋಜನೆಯಲ್ಲಿ ವಂಚನೆ ತಡೆಯಲು ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಅರ್ಹ ರೈತರಿಗೆ ಮಾತ್ರ ಈ ಸಹಾಯವನ್ನು ಖಚಿತಪಡಿಸಿಕೊಳ್ಳಲು eKYC (PM Kisan eKYC) ಕಡ್ಡಾಯಗೊಳಿಸಿದೆ. ರೈತರು ಜುಲೈ 31, 2022 ರೊಳಗೆ ಇಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪಿಎಂ ಕಿಸಾನ್ (PM Kisan)​ ಯೋಜನೆಯಿಂದ ಅದೆಷ್ಟೋ ಮಂದಿ ರೈತ (Farmers) ರಿಗೆ ಉಪಯೋಗವಾಗುತ್ತಿದೆ.  31 ಮೇ 2022 ರಂದು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಪ್ರಧಾನಿ ನರೇಂದ್ರ ಮೋದಿ ಅವರು 10 ಕೋಟಿ ರೈತರ ಖಾತೆಗಳಿಗೆ 2000 ಕೋಟಿ ರೂಪಾಯಿ ಆರ್ಥಿಕ ನೆರವನ್ನು ವರ್ಗಾಯಿಸಿದ್ದಾರೆ. ಈ ಯೋಜನೆಯಡಿ ಇದು 11 ನೇ ಕಂತು. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (Prime Minister Kisan Samman Nidhi) ಮುಖಾಂತರ ಕೇಂದ್ರ ಸರ್ಕಾರ ರೈತ (Formers) ರಿಗೆ ವರ್ಷಕ್ಕೆ ಮೂರು ಕಂತುಗಳಲ್ಲಿ ಒಟ್ಟು 6000ರೂ. ಆರ್ಥಿಕ ಸಹಾಯ ನೀಡುತ್ತದೆ. 12 ನೇ ಕಂತು ಕೂಡ ಕೆಲವೇ ದಿನಗಳಲ್ಲಿ ರೈತರ ಖಾತೆಗೆ ಬರಲಿದೆ ಎಂದು ಹೇಳಲಾಗುತ್ತಿದೆ. ಈ ನಡುವೆ ಇದೀಗ ಪಿಎಂ ಕಿಸಾನ್​ ಹಣ ಪಡೆಯಬೇಕಾದರೆ ಈ ಹೊಸ ನಿಯಮವನ್ನು ಪಾಲಿಸಲೇ ಬೇಕು ಅದೇನು ಅಂತೀರಾ? ಮುಂದೆ ನೋಡಿ.

ವಂಚನೆ ತಡೆಯಲು ಹೊಸ ನಿಯಮ!

ಈ ಯೋಜನೆಯಲ್ಲಿ ವಂಚನೆ ತಡೆಯಲು ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಅರ್ಹ ರೈತರಿಗೆ ಮಾತ್ರ ಈ ಸಹಾಯವನ್ನು ಖಚಿತಪಡಿಸಿಕೊಳ್ಳಲು eKYC (PM Kisan eKYC) ಕಡ್ಡಾಯಗೊಳಿಸಿದೆ. ರೈತರು ಜುಲೈ 31, 2022 ರೊಳಗೆ ಇಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಇದರ ಜತೆಗೆ ಕೇಂದ್ರ ಸರ್ಕಾರ ಮತ್ತೊಂದು ನಿಯಮ ಜಾರಿಗೆ ತರುತ್ತಿದೆ. ಪಿಎಂ ಕಿಸಾನ್ಇನ್ನೊಂದು ದಾಖಲೆಯು ಯೋಜನೆಯ ಮೂಲಕ ಪ್ರಯೋಜನಗಳನ್ನು ಪಡೆಯುವುದನ್ನು ಕಡ್ಡಾಯಗೊಳಿಸುತ್ತಿದೆ. ಈ ದಾಖಲೆ ನೀಡಿದರೆ ಮಾತ್ರ ನೀವು ಪಿಎಂ ಕಿಸಾನ್​ ಹಣವನ್ನು ಪಡೆಯಬಹುದು.

ಪಡಿತರ ಚೀಟಿ ಸಂಖ್ಯೆ ಕೊಟ್ರೆ ಮಾತ್ರ ಹಣ!

ಸರ್ಕಾರ ರೂಪಿಸುವ ಯಾವುದೇ ಯೋಜನೆಗೆ ಕೆಲವು ಅರ್ಹತೆಗಳಿವೆ. ಆ ಅರ್ಹತೆಗಳನ್ನು ಹೊಂದಿರುವವರನ್ನು ಯೋಜನೆಗೆ ಆಯ್ಕೆ ಮಾಡಲಾಗುತ್ತದೆ. ಪ್ರಧಾನ ಮಂತ್ರಿ ಕಿಸಾನ್ ಯೋಜನೆಯು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಹೂಡಿಕೆ ಸಹಾಯವನ್ನು ಒದಗಿಸುತ್ತದೆ. ಆದರೆ, ಪಿಎಂ ಕಿಸಾನ್ ಯೋಜನೆ ಕೆಲವು ರೈತರಿಗೆ ಅನ್ವಯಿಸುವುದಿಲ್ಲ. ಪಿಎಂ ಕಿಸಾನ್ ನೋಂದಣಿಯ ಸಮಯದಲ್ಲಿ ರೈತರು ತಮ್ಮ ಪಡಿತರ ಚೀಟಿ ಸಂಖ್ಯೆಯನ್ನು ಸಹ ಒದಗಿಸಬೇಕಾಗುತ್ತದೆ. ಪಡಿತರ ಚೀಟಿ ಸಂಖ್ಯೆ ನೀಡಿದ ರೈತರ ಅರ್ಜಿಗಳನ್ನು ಮಾತ್ರ ಪರಿಗಣಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: ಕೃಷಿ ಅಧಿಕಾರಿಗಳ ಮಹಾ ನಿರ್ಲಕ್ಷ್ಯ! ಮೃತಪಟ್ಟ 33 ಸಾವಿರ ರೈತರ ಖಾತೆಗೆ ಬಂತು ಪಿಎಂ ಕಿಸಾನ್​ ಹಣ

ಅರ್ಹ ರೈತರನ್ನು ಗುರುತಿಸುವ ಜತೆಗೆ ಹಗರಣಗಳನ್ನು ತಡೆಯಲು ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ರೈತರು ನೋಂದಣಿ ಸಮಯದಲ್ಲಿ ತಮ್ಮ ಪಡಿತರ ಚೀಟಿ ಸಂಖ್ಯೆಯನ್ನು ಬಹಿರಂಗಪಡಿಸಬೇಕು. ಪಿಎಂ ಕಿಸಾನ್ ಪೋರ್ಟಲ್‌ನಲ್ಲಿ ಜೆರಾಕ್ಸ್ ಪ್ರತಿಯನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ. ಭೂಮಿಯ ವಿವರ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಮತ್ತಿತರ ದಾಖಲೆಗಳ ಹಾರ್ಡ್ ಕಾಪಿಗಳ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ಈಗಾಗಲೇ ಹೇಳಿದೆ. ನೀವು ಮಾಡಬೇಕಾಗಿರುವುದು ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡುವುದು.

ಇದನ್ನೂ ಓದಿ: ಸರ್ಕಾರದ ವೆಬ್‌ಸೈಟ್‌ನಿಂದ ಕೋಟಿಗಟ್ಟಲೆ ರೈತರ ಆಧಾರ್ ಮಾಹಿತಿ ಸೋರಿಕೆ

ಅಪ್‌ಲೋಡ್ ಮಾಡಿದ ದಾಖಲೆಗಳನ್ನು ಪರಿಶೀಲಿಸಿದ ನಂತರ ರೈತರು ಎಲ್ಲಾ ಅರ್ಹತೆಗಳನ್ನು ಹೊಂದಿದ್ದರೆ ಅವರನ್ನು ಪ್ರಧಾನ ಮಂತ್ರಿ ಕಿಸಾನ್ ಯೋಜನೆಗೆ ಆಯ್ಕೆ ಮಾಡಲಾಗುತ್ತದೆ. ವರ್ಷಕ್ಕೆ 6,000 ರೂಪಾಯಿ ಹೂಡಿಕೆ ನೆರವು ಪಡೆಯುತ್ತಾರೆ. ಪ್ರತಿ ನಾಲ್ಕು ತಿಂಗಳಿಗೊಮ್ಮೆ 2 ಸಾವಿರ ರೂ.ನಂತೆ ರೈತರ ಖಾತೆಗೆ ಹಣ ಜಮೆಯಾಗುತ್ತದೆ. ಆದ್ದರಿಂದ ರೈತರು ನೋಂದಣಿ ಸಮಯದಲ್ಲಿ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.
Published by:Vasudeva M
First published: