World Tour: 135 ದೇಶ, 3 ವರ್ಷ! ಪ್ರಪಂಚ ಸುತ್ತಬೇಕು ಅಂದುಕೊಂಡಿದ್ರೆ ಈ ಟ್ರಿಪ್​ಗೆ ಹೋಗಿ ಬನ್ನಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇಂಥ ದೊಡ್ಡ ಪ್ರವಾಸ ಯಾರು ನಡೆಸ್ತಿದ್ದಾರೆ? ಇಷ್ಟು ದೇಶ ಅಂದ್ರೆ ಎಷ್ಟು ದುಡ್ಡು ಖರ್ಚಾಗಬಹುದು? ಇಂಥ ನೂರು ಅನುಮಾನಗಳು ನಿಮಗೆ ಬರಬಹುದು. ಅದಕ್ಕೆಲ್ಲಾ ಉತ್ತರ ಇಲ್ಲಿದೆ ನೋಡಿ.

  • Share this:

    ಎಲ್ಲರಿಗೂ ಒಂದು ಆಸೆಯಂತೂ (Desire) ಖಂಡಿತ ಇರುತ್ತೆ. ಅದೇನಪ್ಪಾ ಅಂದ್ರೆ ದೇಶ-ವಿದೇಶ ಸುತ್ತೋದು. ಆದರೆ ಇದು ಎಲ್ಲರಿಗೂ ಸಾಧ್ಯವಾಗದಿರಬಹುದು. ಯಾಕೆಂದರೆ ದೇಶ-ವಿದೇಶ ಸುತ್ತೋದಿಕ್ಕೆ ದುಡ್ಡು (Money) ಬೇಕು. ಆದರೆ ಕೆಲವರಿಗೆ ದುಡ್ಡು ಇದ್ದರೂ ಪ್ರಪಂಚ (World) ಸುತ್ತೋದು ಹೇಗೆ ಅಂತ ಗೊತ್ತಿರಲ್ಲ. ಅಂಥವರಿಗೆ ಒಂದು ಅದ್ಭುತ ಅವಕಾಶ ಇದು ಅಂದರೆ ತಪ್ಪಾಗಲ್ಲ. ವರ್ಲ್ಡ್​​​ ಟೂರ್​  ಒನ್ (World Tour One)​ ಮೂಲಕ ನೀವು ಇಡೀ ಪ್ರಪಂಚವನ್ನೇ ರೌಂಡ್​ ಹಾಕಬಹುದು. 135 ದೇಶಗಳು (135 Countries) ಮತ್ತು 7 ಖಂಡಗಳನ್ನು (7 Continents) ನೀವು ನೋಡಿ ಬರಬಹುದು. ಈ ಪ್ರಪಂಚದ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು.


    ಇಂಥ ದೊಡ್ಡ ಪ್ರವಾಸ ಯಾರು ನಡೆಸ್ತಿದ್ದಾರೆ? ಇಷ್ಟು ದೇಶ ಅಂದ್ರೆ ಎಷ್ಟು ದುಡ್ಡು ಖರ್ಚಾಗಬಹುದು? ಇಂಥ ನೂರು ಅನುಮಾನಗಳು ನಿಮಗೆ ಬರಬಹುದು. ಅದಕ್ಕೆಲ್ಲಾ ಉತ್ತರ ಇಲ್ಲಿದೆ ನೋಡಿ.


    ವರ್ಲ್ಡ್​​​ ಟೂರ್​ ಒನ್ ಟ್ರಿಪ್ !


    ಲೈಫ್ LC ಕ್ರೂಸಸ್ ವಿಶ್ವ ಪ್ರವಾಸಕ್ಕಾಗಿ ಬುಕಿಂಗ್‌ಗಳನ್ನು ಆಹ್ವಾನಿಸುತ್ತಿದೆ. ಈ ಟ್ರಿಪ್​ನ ವಿಶೇಷ ಏನಪ್ಪಾ ಅಂದ್ರೆ ನೀವು ಈ ಟ್ರಿಪ್​ ಮುಗಿಸಿ ವಾಪಾಸ್​ ಬರೋಕೆ 3 ವರ್ಷ ಬೇಕು. ಶಾಕ್​ ಆಗ್ಬೇಡಿ. 135 ದೇಶ ಸುತ್ತೋದು ಅಂದ್ರೆ ಸುಮ್ನೆನಾ ಹೇಳಿ. ಈ ಟ್ರಿಪ್​ ಮತ್ತೊಂದು ದೊಡ್ಡ ವಿಶೇಷ ಅಂದ್ರೆ ಇದು ಕ್ರೂಸ್​ ಹಡಗಿನ ಪ್ರವಾಸ. ನೀವು ಸಮುದ್ರದ ಮೂಲಕವೇ ಸಂಚರಿಸಿ ವಿಶ್ವವನ್ನು ಸುತ್ತಬೇಕು. ಕ್ರೂಸ್ ಹಡಗು MV ಜೆಮಿನಿ ಮುಖಾಂತರ ದೇಶಗಳನ್ನು ಸುತ್ತಬಹುದು.


    ಎಲ್ಲಿಂದ ಈ ಟ್ರಿಪ್​ ಆರಂಭವಾಗುತ್ತೆ!


    ಈ ವಿಶ್ವ ಪ್ರವಾಸವು ನವೆಂಬರ್ 1 ರಿಂದ ಇಸ್ತಾನ್‌ಬುಲ್‌ನಿಂದ ಪ್ರಾರಂಭವಾಗಲಿದೆ. ಈ ಪ್ರವಾಸದ ಭಾಗವಾಗಿ ಪ್ರಯಾಣಿಕರು 375 ಬಂದರುಗಳಿಗೆ ಭೇಟಿ ನೀಡಲಿದ್ದಾರೆ. ಸುಮಾರು 135 ದೇಶಗಳಿಗೆ ಭೇಟಿ ನೀಡಲಾಗುತ್ತೆ. ಎಲ್ಲಾ ಖಂಡಗಳಿಗೂ ಹೋಗಬಹುದು. ಹಡಗು ಸುಮಾರು 1,30,000 ಮೈಲುಗಳಷ್ಟು ಪ್ರಯಾಣಿಸಲಿದೆ.


    ಈ ಟ್ರಿಪ್​ನಲ್ಲಿ ಏನೆನೆಲ್ಲಾ ನೋಡ್ಬಬಹುದು!


    ಭಾರತದ ತಾಜ್‌ಮಹಲ್‌ನಿಂದ ರಿಯೊ ಡಿ ಜನೈರೊದ ಕ್ರೈಸ್ಟ್ ದಿ ರಿಡೀಮರ್ ಪ್ರತಿಮೆ, ಮೆಕ್ಸಿಕೊದ ಚಿಚೆನ್ ಇಟ್ಜಾ, ಚೀನಾದ ಮಹಾಗೋಡೆ, ಮಚು ಪಿಚು, ಗಿಜಾ ಪಿರಮಿಡ್‌ಗಳವರೆಗೆ ನೀವು ವಿಶ್ವದ ಅದ್ಭುತಗಳನ್ನು ನೋಡಬಹುದು. ಆದರೆ ಈ ಪ್ರವಾಸ ಸ್ವಲ್ಪ ಕಾಸ್ಟ್ಲಿ. ಈ ಟ್ರಿಪ್​ನ ಒಟ್ಟು ಬೆಲೆ 30 ಸಾವಿರ. ಭಾರತದ ಕರೆನ್ಸಿ ಪ್ರಕಾರ 24, 60,796 ರೂಪಾಯಿಗಳು. ಇದು ಕೇವಲ ಒಂದು ವರ್ಷಕ್ಕೆ ಮಾತ್ರ. ಮೂರು ವರ್ಷಕ್ಕೆ ರೂ. 75 ಲಕ್ಷ ಖರ್ಚಾಗುತ್ತೆ.


    ಇದನ್ನೂ ಓದಿ: ಇದು ಸಮುದ್ರದಲ್ಲಿ ಚಲಿಸೋ ಸ್ವರ್ಗ, ಮಾರಾಟಕ್ಕಿದೆ ವಿಶ್ವದ ದುಬಾರಿ ಕ್ರೂಸ್ ಬೋಟ್!


    ವಿಶ್ವದ 13 ಅದ್ಭುತಗಳನ್ನು ನೋಡಬಹುದು!


    ಈ ಮೂರು ವರ್ಷಗಳಲ್ಲಿ ವಿಶ್ವ ಪ್ರವಾಸದ ಭಾಗವಾಗಿ ಗ್ರಾಹಕರು ವಿಶ್ವದ 14 ಅದ್ಭುತಗಳಲ್ಲಿ 13 ಅನ್ನು ನೋಡಬಹುದು. ದಕ್ಷಿಣ ಆಫ್ರಿಕಾ, ಅಂಟಾರ್ಟಿಕಾ, ಕೆರಿಬಿಯನ್, ಮಧ್ಯ ಅಮೇರಿಕಾ, ಉತ್ತರ ಅಮೆರಿಕ, ಹವಾಯಿ, ಇತರ ಸ್ಥಳಗಳನ್ನು ಹೊರತುಪಡಿಸಿ. ದೇವಾಲಯಗಳು, ಪರ್ವತಗಳು, ಕಣಿವೆಗಳು, ಕಡಲತೀರಗಳು ಮತ್ತು ಇತರ ಅನೇಕ ಜಾಗಗಳಿಗೆ ಭೇಟಿ ನೀಡಬಹುದು.


    MV ಜೆಮಿನಿ ಕ್ರೂಸ್​​ನ ವಿಶೇಷತೆ ಏನು?


    MV ಜೆಮಿನಿ ಹಡಗು 2 ಸಭೆ ಕೊಠಡಿಗಳು, 14 ಕಚೇರಿಗಳು, ವ್ಯಾಪಾರ ಗ್ರಂಥಾಲಯ, ವಿಶ್ರಾಂತಿ ಕೋಣೆ, ಕೆಫೆ ಇತ್ಯಾದಿಗಳನ್ನು ಹೊಂದಿದೆ. ಆಫೀಸ್ ಡ್ಯೂಟಿ ಇರುವವರೂ ಈ ಪ್ರವಾಸಕ್ಕೆ ಹೋಗಬಹುದು. ಅವರು ತಮ್ಮ ಕೆಲಸವನ್ನು ಮಾಡಬಹುದು. ಸ್ಪಾ, ಈಜುಕೊಳ, ವಿಶ್ವ ದರ್ಜೆಯ ಊಟ ಕೂಡ ಇಲ್ಲಿ ಸಿಗುತ್ತೆ. ಇನ್ನೂ ಈ ಕ್ರೂಸ್​ನಲ್ಲಿ 1,074 ಮಂದಿಗೆ ಮಾತ್ರ ಈ 135 ದೇಶಗಳನ್ನು ಸುತ್ತುವ ಅವಕಾಶ ಸಿಗುತ್ತೆ.

    Published by:ವಾಸುದೇವ್ ಎಂ
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು