Rameshwaram Cafe: ಬೆಂಗಳೂರಿನ ಈ ಕೆಫೆ ತಿಂಗಳಿಗೆ 4.5 ಕೋಟಿ ರೂಪಾಯಿಯ ಬ್ಯುಸಿನೆಸ್​ ಮಾಡುತ್ತಂತೆ!

 ರಾಮೇಶ್ವರ್ ಕೆಫೆ

ರಾಮೇಶ್ವರ್ ಕೆಫೆ

ಬಿ2ಬಿ ಮಾರ್ಕೆಟ್ ಪ್ಲೇಸ್ ಉಡಾನ್ ನ ಸಹ-ಸಂಸ್ಥಾಪಕರಾದ ಸುಜೀತ್ ಕುಮಾರ್ ಇತ್ತೀಚೆಗೆ ಪಾಡ್​​ಕಾಸ್ಟ್​​ನಲ್ಲಿ ಕೆಫೆಯ ಬಗ್ಗೆ ಮಾತಾಡುವಾಗ ಬೆಂಗಳೂರಿನ ರಾಮೇಶ್ವರಂ ಕೆಫೆಯ ಆಸಕ್ತಿಕರವಾದ ವಿವರಗಳನ್ನು ಹಂಚಿಕೊಂಡಿದ್ದಾರೆ.

  • Share this:

ನೀವು ಮುಂದಿನ ಬಾರಿ ಬೆಂಗಳೂರಿಗೆ (Bengaluru) ಹೋದರೆ ಜೆಪಿ ನಗರದಲ್ಲಿರುವಂತಹ ರಾಮೇಶ್ವರಂ ಕೆಫೆಗೆ ಹೋಗುವುದನ್ನ ಮಾತ್ರ ಮರೀಬೇಡಿ. ಈ ಕೆಫೆ ತುಂಬಾನೇ ಫೇಮಸ್ ಆಗಿದ್ದು, ಇಲ್ಲಿ ಸಿಗುವ ಉಪಾಹಾರಗಳನ್ನು (Breakfast) ನೀವು ಒಮ್ಮೆ ಟೇಸ್ಟ್ ಮಾಡಿದರೆ ಮತ್ತೆ ಮತ್ತೆ ಈ ಕೆಫೆಗೆ ತಿಂಡಿ ತಿನ್ನಲು ಬರುವುದರಲ್ಲಿ ಸಂದೇಹವೆ ಇಲ್ಲವಂತೆ. ಈ ಕ್ವಿಕ್ ಸರ್ವೀಸ್ ರೆಸ್ಟೋರೆಂಟ್ (QSR) ಮಳಿಗೆಯು ತಿಂಗಳಿಗೆ 4.5 ಕೋಟಿ ರೂಪಾಯಿಗಳ ವ್ಯವಹಾರವನ್ನು (Business) ಮಾಡುತ್ತದೆ. ಆದರೆ ನೀವು ಒಂದು ಕ್ಷಣ ಇದನ್ನು ಕೂಡಲೇ ನಂಬಲಿಕ್ಕಿಲ್ಲ.


ಆದರೆ ಇದು ಇಷ್ಟೊಂದು ಬ್ಯುಸಿನೆಸ್​ ಮಾಡುತ್ತೆ ಅಂತ ಬಿ2ಬಿ ಮಾರ್ಕೆಟ್ ಪ್ಲೇಸ್ ಉಡಾನ್ ನ ಸಹ-ಸಂಸ್ಥಾಪಕರಾದ ಸುಜೀತ್ ಕುಮಾರ್ ಇತ್ತೀಚೆಗೆ ಪಾಡ್​​ಕಾಸ್ಟ್​​ನಲ್ಲಿ ಕೆಫೆಯ ಬಗ್ಗೆ ಮಾತಾಡುವಾಗ ಈ ಆಸಕ್ತಿಕರವಾದ ವಿವರಗಳನ್ನು ಹಂಚಿಕೊಂಡಿದ್ದಾರೆ.


ರಾಮೇಶ್ವರಂ ಕೆಫೆ ದಿನಕ್ಕೆ 7,500 ಬಿಲ್ ಗಳನ್ನು ನೀಡುತ್ತಾರಂತೆ


ಸುಜೀತ್ ಅವರು "ನೀವು ರಾಮೇಶ್ವರಂ ಕೆಫೆಯನ್ನು ನೋಡಿದರೆ, ಅವರು ದಿನಕ್ಕೆ 7,500 ಬಿಲ್ ಗಳನ್ನು ನೀಡುತ್ತಾರೆ. ಈ ಕೆಫೆ ತುಂಬಾ ದೊಡ್ಡದೇನಲ್ಲ, 10/10 ಅಥವಾ 10/15 ಚದರ ಅಡಿಗಳಷ್ಟಿದೆ. ತಿಂಗಳಿಗೆ 4.5 ಕೋಟಿ ರೂಪಾಯಿಗಳ ವ್ಯವಹಾರವನ್ನು ಈ ಕೆಫೆ ಮಾಡುತ್ತದೆ ಮತ್ತು ವರ್ಷಕ್ಕೆ ಸುಮಾರು 50 ಕೋಟಿ ರೂಪಾಯಿ ಸಹ ಗಳಿಸುತ್ತದೆ. ಇದರಿಂದ ಅವರು ಯೋಗ್ಯವಾದ ಲಾಭವನ್ನು ಸಹ ಗಳಿಸುತ್ತಾರೆ. ಸುಮಾರು 70 ಪ್ರತಿಶತದಷ್ಟು ಒಟ್ಟು ಲಾಭಾಂಶವಿದೆ" ಅಂತ ಹೇಳಿದರು ಸುಜೀತ್.


ಇದನ್ನೂ ಓದಿ: ದೇಶಕ್ಕೆ ಎಷ್ಟು ಬೇಕೋ ಅಷ್ಟು ನೋಟುಗಳನ್ನು ಸರ್ಕಾರ ಯಾಕೆ ಮುದ್ರಿಸೋದಿಲ್ಲ? ಇಲ್ಲಿದೆ ಅಸಲಿ ಕಾರಣ!


ಕುಮಾರ್ ಭಾರತದಲ್ಲಿ ಛಾಪು ಮೂಡಿಸಿರುವ ಕ್ಯೂಎಸ್ಆರ್ ಮಳಿಗೆಗಳ ಉದಾಹರಣೆಗಳನ್ನು ಉಲ್ಲೇಖಿಸುತ್ತಿದ್ದರು. ಎಡ್ಟೆಕ್ ಯುನಿಕಾರ್ನ್ ಅನ್ಅಕಾಡೆಮಿ ಮತ್ತು ಕಾಫಿ ಮಳಿಗೆಯಾದ ಥರ್ಡ್ ವೇವ್ ಕಾಫಿ ಸೇರಿದಂತೆ ಕಂಪನಿಗಳಲ್ಲಿ 150 ಕ್ಕೂ ಹೆಚ್ಚು ಹೂಡಿಕೆಗಳನ್ನು ಮಾಡಿರುವುದಾಗಿ ಅವರು ಹೇಳಿದ್ದಾರೆ.


'ಡಬ್ಲ್ಯುಟಿಎಫ್ ಇ-ಕಾಮರ್ಸ್' ಎಂಬ ಎಪಿಸೋಡ್ ನಲ್ಲಿ ಮಾತಾಡಿದ್ರು ಸುಜೀತ್ ಕುಮಾರ್


ಭಾರತೀಯ ಸ್ಟಾಕ್ ಬ್ರೋಕರೇಜ್ ಸಂಸ್ಥೆ ಜೆರೋಧಾದ ಸಹ ಸಂಸ್ಥಾಪಕ ನಿಖಿಲ್ ಕಾಮತ್, ಫ್ಯೂಚರ್ ಗ್ರೂಪ್ ನ ಸಂಸ್ಥಾಪಕ ಕಿಶೋರ್ ಬಿಯಾನಿ ಮತ್ತು ಮೀಶೋದ ಸಹ ಸಂಸ್ಥಾಪಕ ವಿದಿತ್ ಆತ್ರೆ ಅವರೊಂದಿಗೆ ಕಾಮತ್ ಅವರ ಪಾಡ್ಕಾಸ್ಟ್ ಸರಣಿಯ ಮೂರನೇ ಎಪಿಸೋಡ್ 'ಡಬ್ಲ್ಯುಟಿಎಫ್ ಈಸ್ ಇ-ಕಾಮರ್ಸ್' ನಲ್ಲಿ ಕುಮಾರ್ ಇದೆಲ್ಲವನ್ನು ಹಂಚಿಕೊಂಡರು.


ಸುಜೀತ್ ಕುಮಾರ್​ ಮತ್ತು ರಾಮೇಶ್ವರ್ ಕೆಫೆ


ಈ ಎಪಿಸೋಡ್ ನಲ್ಲಿ ಬಂದ ಅತಿಥಿಗಳು ಭಾರತೀಯ ರಿಟೈಲ್ ವ್ಯಾಪಾರ, ಆನ್ಲೈನ್ ಮತ್ತು ಆಫ್ಲೈನ್ ನಲ್ಲಿ ವ್ಯವಹಾರವನ್ನು ಬೆಳೆಸುವುದು ಹೇಗೆ, ಭಾರತ ಮತ್ತು ವಿದೇಶಗಳಲ್ಲಿ ಉದ್ಯಮಶೀಲತೆ ಮತ್ತು ಹೂಡಿಕೆ ಪರಿಸರ ವ್ಯವಸ್ಥೆ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಚರ್ಚಿಸಿದರು. ಸುಜೀತ್ ಕುಮಾರ್ ಅವರು ಇ-ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್ ನಲ್ಲಿ ಕೆಲಸ ಮಾಡಿದ್ದ ಅನುಭವವನ್ನು ಸಹ ಇಲ್ಲಿ ಹಂಚಿಕೊಂಡರು, ಅಲ್ಲಿ ಅವರು 2008 ರಿಂದ 2016 ರವರೆಗೆ ಕಾರ್ಯಾಚರಣೆಗಳ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರಂತೆ.


ಮಾಜಿ ಫ್ಲಿಪ್‌ಕಾರ್ಟ್ ಕಾರ್ಯನಿರ್ವಾಹಕರಾದ ಅಮೋದ್ ಮಾಳವೀಯ ಮತ್ತು ವೈಭವ್ ಗುಪ್ತಾ ಅವರೊಂದಿಗೆ ಉಡಾನ್ ಅನ್ನು ಪ್ರಾರಂಭಿಸಲು ಕುಮಾರ್ ವಾಲ್‌ಮಾರ್ಟ್ ಬೆಂಬಲಿತ ಕಂಪನಿಯನ್ನು ತೊರೆದರಂತೆ.
ಸುಜೀತ್ ಅವರಿಗೆ ದೆಹಲಿ ಬಿಟ್ಟು ಬೆಂಗಳೂರಿಗೆ ಬರುವ ಮನಸ್ಸಿರಲಿಲ್ವಂತೆ


ಐಐಟಿ-ದೆಹಲಿ ದಿನಗಳಿಂದಲೂ ದೆಹಲಿಯಿಂದ ಬೆಂಗಳೂರಿಗೆ ಸ್ಥಳಾಂತರಗೊಳ್ಳಲು ಬಗ್ಗೆ ಅವರು ಆಸಕ್ತಿ ಹೊಂದಿರಲಿಲ್ಲ ಅಂತ ಸುಜೀತ್ ಅವರು ತಮ್ಮ ಈ ಸಂಭಾಷಣೆಯ ಸಮಯದಲ್ಲಿ ಹಂಚಿಕೊಂಡರು.


ಫ್ಲಿಪ್‌ಕಾರ್ಟ್ ನಲ್ಲಿ ಕೆಲಸಕ್ಕೆ ಸೇರುವ ಬಗ್ಗೆ ನಾನು ಖಚಿತವಿರಲಿಲ್ಲ, ಆದರೆ ಕಂಪನಿಯ ಸಹ ಸಂಸ್ಥಾಪಕ ಸಚಿನ್ ಬನ್ಸಾಲ್ ಅವರು ಮದುವೆಗೆ ಹಾಜರಾಗುವ ನೆಪದಲ್ಲಿ ಮೊದಲು ಬೆಂಗಳೂರಿಗೆ ಭೇಟಿ ನೀಡುವಂತೆ ಮನವೊಲಿಸಿದರು ಎಂದು ಅವರು ಹೇಳಿದರು. ಈ ಎಪಿಸೋಡ್ ಯೂಟ್ಯೂಬ್ ನಲ್ಲಿ ಸುಮಾರು 77,000 ವೀಕ್ಷಣೆಗಳು ಮತ್ತು 2,600 ಲೈಕ್ ಗಳನ್ನು ಗಳಿಸಿದೆ.

top videos
    First published: