Samosa Singh: ಸಮೋಸಾ ಮಾರೋಕೆ 30 ಲಕ್ಷ ಸಂಬಳದ ಕೆಲಸ ಬಿಟ್ಟ ದಂಪತಿ, ಈಗ ದಿನಕ್ಕೆ 12 ಲಕ್ಷ ದುಡಿತಿದ್ದಾರೆ!

 ಶಿಖರ್ ವೀರ್ ಸಿಂಗ್, ನಿಧಿ ಸಿಂಗ್

ಶಿಖರ್ ವೀರ್ ಸಿಂಗ್, ನಿಧಿ ಸಿಂಗ್

ಈ ದಂಪತಿಗಳು ಬೆಂಗಳೂರಿನಲ್ಲಿ ಒಂದು ಅಂಗಡಿಯನ್ನು ಸ್ಥಾಪಿಸಿ ಅದರಲ್ಲಿ ಸಮೋಸಾಗಳನ್ನು ಮಾರಾಟ ಮಾಡುವುದಕ್ಕೆ ಶುರು ಮಾಡಿದರು. ಹೀಗೆ ಶುರು ಮಾಡಿದ ಸಣ್ಣ ವ್ಯವಹಾರ (Business) ಇಂದು ಈ ಇಬ್ಬರ ಜೀವನವನ್ನೇ ಬದಲಾಯಿಸಿದೆ ಅಂತ ಹೇಳಬಹುದು.

  • Trending Desk
  • 4-MIN READ
  • Last Updated :
  • Bangalore [Bangalore], India
  • Share this:

‘ಮನಸ್ಸಿದ್ದರೆ ಮಾರ್ಗ’ ಅಂತ ನಾವೆಲ್ಲಾ ಆಗಾಗ್ಗೆ ಕೇಳುವ ಗಾದೆ ಮಾತುಗಳಲ್ಲಿ ಇದು ಸಹ ಒಂದು ಅಂತ ಹೇಳಿದರೆ ಬಹುಶಃ ತಪ್ಪಾಗಲಿಕ್ಕಿಲ್ಲ. ಇಲ್ಲಿ ಈ ಮಾತನ್ನು ಬೆಂಗಳೂರಿನ ದಂಪತಿಗಳು (Bengaluru Couple) ನಿಜ ಮಾಡಿದ್ದಾರೆ ನೋಡಿ. ನಾವು ಭಾರತಿಯರಿಗೆ ತುಂಬಾನೇ ಪ್ರಿಯವಾದ ಒಂದು ಸ್ನ್ಯಾಕ್ಸ್ (Favriout Snacks) ಎಂದರೆ ಅದು ಸಮೋಸಾ (Samosa) ಅಂತ ಹೇಳಬಹುದು ನೋಡಿ. ಹೌದು.. ಈ ದಂಪತಿಗಳು ಬೆಂಗಳೂರಿನಲ್ಲಿ ಒಂದು ಅಂಗಡಿಯನ್ನು ಸ್ಥಾಪಿಸಿ ಅದರಲ್ಲಿ ಸಮೋಸಾಗಳನ್ನು ಮಾರಾಟ ಮಾಡುವುದಕ್ಕೆ ಶುರು ಮಾಡಿದರು. ಹೀಗೆ ಶುರು ಮಾಡಿದ ಸಣ್ಣ ವ್ಯವಹಾರ (Business) ಇಂದು ಈ ಇಬ್ಬರ ಜೀವನವನ್ನೇ ಬದಲಾಯಿಸಿದೆ ಅಂತ ಹೇಳಬಹುದು.


ಸಮೋಸಾ ಮಾರಿ ಲಕ್ಷ ಲಕ್ಷ ಎಣಿಸಿದ ದಂಪತಿಗಳು!


ಬೆಂಗಳೂರಿನ ನಿಧಿ ಸಿಂಗ್ ಮತ್ತು ಅವರ ಪತಿ ಶಿಖರ್ ವೀರ್ ಸಿಂಗ್, ಒಂದು ಸಮಯದಲ್ಲಿ ಹೆಚ್ಚಿನ ವೇತನದ ಪ್ಯಾಕೇಜ್ ಗಳೊಂದಿಗೆ ಸುರಕ್ಷಿತ ವೃತ್ತಿಜೀವನವನ್ನು ಹೊಂದಿದ್ದರು. ಈ ಇಬ್ಬರು ಉನ್ನತ ಶಿಕ್ಷಣ ಪಡೆದ ವೃತ್ತಿಪರರು, ಸಮೋಸಾ ಮಾರಾಟವನ್ನು ಪ್ರಾರಂಭಿಸಲು ಆಯ್ಕೆ ಮಾಡಿಕೊಂಡಿದ್ದು ಕೆಲವರಿಗೆ ಆಶ್ಚರ್ಯಗೊಳಿಸಬಹುದು. ಆದರೆ ಈಗ ಅವರ ಕೆಲಸದ ಸಂಬಳಕ್ಕಿಂತಲೂ ಹೆಚ್ಚು ಹಣವನ್ನು ಇವರಿಬ್ಬರು ಗಳಿಸುತ್ತಿದ್ದಾರೆ ಅಂತ ಹೇಳಬಹುದು.


ಸಮೋಸಾ ಮಾರೋಕೆ 30 ಲಕ್ಷ ಸಂಬಳದ ಕೆಲಸ ಬಿಟ್ಟ ದಂಪತಿ!


ಮದುವೆಯಾಗಿ ಐದು ವರ್ಷಗಳಾದ ನಿಧಿ ಮತ್ತು ಶಿಖರ್ ಎಲ್ಲವನ್ನೂ ತೊರೆದು ಸ್ಟಾರ್ಟ್ ಅಪ್ ವ್ಯವಹಾರವನ್ನು ಶುರು ಮಾಡಲು ನಿರ್ಧರಿಸಿದರು ಮತ್ತು ವ್ಯವಹಾರ ಶುರು ಮಾಡುವ ಮತ್ತು ಮಾಡಿದ ಆರಂಭದಲ್ಲಿ ಜೀವನ ತುಂಬಾನೇ ಕಠಿಣ ಅಂತ ಅನ್ನಿಸಿತ್ತಂತೆ. ಆದರೆ ಅದನ್ನು ಹಾಗೆಯೇ ಬಿಡದೆ ಮುಂದುವರೆಸಿದ್ದರಿಂದ ಈಗ ಅವರು ತಮ್ಮ ವ್ಯವಹಾರದ ಮುಂದಿನ ಹಂತವನ್ನು ಪ್ರಾರಂಭಿಸಲು ಯೋಚಿಸುತ್ತಿದ್ದಾರೆ ಅಂತ ಹೇಳಬಹುದು.


ಈ ಇಬ್ಬರು ಮೊದಲ ಬಾರಿ ಭೇಟಿಯಾದದ್ದು ಹರಿಯಾಣದಲ್ಲಂತೆ!


ಬಯೋಟೆಕ್ನಾಲಜಿಯಲ್ಲಿ ಬಿಟೆಕ್ ಓದುತ್ತಿದ್ದಾಗ ಶಿಖರ್ ವೀರ್ ಸಿಂಗ್ ಮತ್ತು ನಿಧಿ ಸಿಂಗ್ ಮೊದಲ ಬಾರಿಗೆ ಹರಿಯಾಣದಲ್ಲಿ ಭೇಟಿಯಾದರು. ನಂತರ ಶಿಖರ್ ಹೈದರಾಬಾದ್ ನ ಇನ್ಸ್ಟಿಟ್ಯೂಟ್ ಆಫ್ ಲೈಫ್ ಸೈನ್ಸಸ್ ನಿಂದ ಎಂಟೆಕ್ ಪಡೆದರು. ಅವರು 2015 ರಲ್ಲಿ ತಮ್ಮ ಕೆಲಸವನ್ನು ತೊರೆದಾಗ, ಅವರು ಬಯೋಕಾನ್ ನಲ್ಲಿ ಪ್ರಧಾನ ವಿಜ್ಞಾನಿಯಾಗಿ ಕೆಲಸ ಮಾಡುತ್ತಿದ್ದರು.


ಇದನ್ನೂ ಓದಿ: ಸಾವಿರಾರು ಮಹಿಳೆಯರಿಗೆ ಬದುಕು ಕಟ್ಟಿಕೊಟ್ಟ ವಿಜಯಪುರದ ಮಲ್ಲಮ್ಮ; ಇವರ ಜೀವನವೇ ಸ್ಪೂರ್ತಿಗೀತೆ!


ಏತನ್ಮಧ್ಯೆ, ನಿಧಿ ಸಹ ಗಂಡನಂತೆ ಕಾರ್ಪೊರೇಟ್ ಜಗತ್ತಿಗೆ ಪ್ರವೇಶಿಸಿದರು ಮತ್ತು ಗುರುಗ್ರಾಮದ ಫಾರ್ಮಾ ಕಂಪನಿಯಲ್ಲಿ 30 ಲಕ್ಷ ರೂಪಾಯಿಗಳ ವೇತನ ಪ್ಯಾಕೇಜ್ ಪಡೆದು ಬಹಳ ಯಶಸ್ವಿಯಾಗಿದ್ದರು. ಅವರು ಬಿಸಿನೆಸ್ ಡೆವಲಪ್ಮೆಂಟ್ ಅಸೋಸಿಯೇಟ್ ಆಗಿ ಸೇರಿಕೊಂಡರು ಮತ್ತು ಅವರ ಮೊದಲ ಸಂಬಳ 17,000 ರೂಪಾಯಿ ಆಗಿತ್ತು. ಈ ದಂಪತಿಗಳು 2015 ರಲ್ಲಿ ತಮ್ಮ ತಮ್ಮ ಉದ್ಯೋಗಗಳನ್ನು ಬಿಟ್ಟು ಬೆಂಗಳೂರಿನಲ್ಲಿ "ಸಮೋಸಾ ಸಿಂಗ್" ಅನ್ನು ಶುರು ಮಾಡಲು ನಿರ್ಧರಿಸಿದರು.


ಬೆಂಗಳೂರಿನ ‘ಸಮೋಸಾ ಸಿಂಗ್’ ನಲ್ಲಿ 12 ಲಕ್ಷ ಮೌಲ್ಯದ ಸಮೋಸಾ ಮಾರಾಟ


ನಿಧಿ ಮತ್ತು ಶಿಖರ್ ಇಬ್ಬರೂ ಶ್ರೀಮಂತ ಹಿನ್ನೆಲೆಯಿಂದ ಬಂದವರು. ಆಕೆಯ ತಂದೆ ವಕೀಲರು. ಅವರ ತಂದೆ ಚಂಡೀಗಢ ಮತ್ತು ಅಂಬಾಲಾದಲ್ಲಿ ಆಭರಣ ಮಳಿಗೆಗಳನ್ನು ಹೊಂದಿದ್ದಾರೆ. ಆದರೆ ಇವರಿಬ್ಬರು ತಮ್ಮದೇ ಆದ ಏನನ್ನಾದರೂ ಮಾಡಲು ಬಯಸಿದ್ದರು ಮತ್ತು ಆದ್ದರಿಂದ, ತಮ್ಮ ಸ್ವಂತ ಉಳಿತಾಯದಿಂದ ‘ಸಮೋಸಾ ಸಿಂಗ್’ ಅನ್ನು ಪ್ರಾರಂಭಿಸಿದರು.


ಆದಾಗ್ಯೂ, ದೊಡ್ಡ ಅಡುಗೆಮನೆ ಸ್ಥಳದ ಅಗತ್ಯವಿದ್ದಾಗ ಮತ್ತು ಅವರಿಗೆ ಹಣದ ಅಗತ್ಯವಿದ್ದಾಗ ಅವರು ತಮ್ಮ ದುಬಾರಿ ಕನಸಿನ ಅಪಾರ್ಟ್ಮೆಂಟ್ ಅನ್ನು ಮಾರಾಟ ಮಾಡಿದರು. ಅಲ್ಲಿ ಅವರು ಕೇವಲ ಒಂದು ದಿನ ಮಾತ್ರ ಉಳಿದಿದ್ದರು. ಅವರು ಮನೆಯನ್ನು ಮಾರಾಟ ಮಾಡಿದರು ಮತ್ತು ಆ ಹಣದಿಂದ ಬೆಂಗಳೂರಿನಲ್ಲಿ ಒಂದು ಕಾರ್ಖಾನೆಯನ್ನು ಬಾಡಿಗೆಗೆ ಪಡೆದರು.


ಓದುತ್ತಿರುವಾಗಲೇ ಈ ವ್ಯವಹಾರದ ಕಲ್ಪನೆ ಬಂದಿತ್ತಂತೆ!


ಅವರು ನಂಬಿದಂತೆ ಅವರ ವ್ಯವಹಾರವು ತುಂಬಾನೇ ವೇಗವಾಗಿ ಬೆಳೆಯಿತು, ಅವರ ದೈನಂದಿನ ಆದಾಯವು ದಿನಕ್ಕೆ ಲಕ್ಷಗಳಲ್ಲಿತ್ತು. ಶಿಖರ್ ಓದುತ್ತಿರುವಾಗಲೇ ಈ ವ್ಯವಹಾರದ ಕಲ್ಪನೆ ಅವರಿಗೆ ಬಂದಿತ್ತಂತೆ. ಅವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯೊಂದರ ಹೊರಗೆ ಸಮೋಸಾಗಳನ್ನು ಮಾರಾಟ ಮಾಡಲು ಬಯಸಿದ್ದರು. ಆದರೆ ಆಗ ನಿಧಿ ಅವರನ್ನು ವಿಜ್ಞಾನಿಯಾಗುವತ್ತ ಗಮನ ಹರಿಸುವಂತೆ ಸಲಹೆ ನೀಡಿದ್ದರಂತೆ.


ದಿನಕ್ಕೆ 14 ಲಕ್ಷ ಗಳಿಸಿದ ಸಮೋಸ ಸಿಂಗ್!


ಆದಾಗ್ಯೂ, ಒಂದು ದಿನ, ಫುಡ್ ಕೋರ್ಟ್ ನಲ್ಲಿ ಒಬ್ಬ ಹುಡುಗ ಸಮೋಸಾಕ್ಕಾಗಿ ಅಳುತ್ತಿರುವುದನ್ನು ನೋಡಿದ ನಂತರ, ಶಿಖರ್ ಗೆ ತನ್ನ ಯೋಜನೆ ಸರಿಯಾಗಿದೆ ಎಂದು ಮನವರಿಕೆಯಾಯಿತು. ಅವರು ಕೆಲಸವನ್ನು ಬಿಟ್ಟು ಬೆಂಗಳೂರಿಗೆ ತೆರಳಿದರು ಮತ್ತು ತಮ್ಮದೇ ಆದ ಸಮೋಸಾ ಸಿಂಗ್ ಅನ್ನು ಶುರು ಮಾಡಿದರು.


ನಂತರ ಇಬ್ಬರೂ ತಮ್ಮ ಮೆನುವಿನಲ್ಲಿ ಹಲವಾರು ರೀತಿಯ ಸಮೋಸಾಗಳನ್ನು ಪರಿಚಯಿಸಿದರು. ಅವರ ಬಳಿ ಸಿಗುವ ಅತ್ಯಂತ ಜನಪ್ರಿಯ ಸಮೋಸಾಗಳೆಂದರೆ ಅವು ಬಟರ್ ಚಿಕನ್ ಮತ್ತು ಕಡಾಯಿ ಪನೀರ್ ಸಮೋಸಾ ಅಂತ ಹೇಳಬಹುದು. ಅವರು ಈಗಾಗಲೇ ದೇಶಾದ್ಯಂತ ಸುಮಾರು 40 ಮಳಿಗೆಗಳನ್ನು ಹೊಂದಿದ್ದಾರೆ ಮತ್ತು ಈಗ ತಮ್ಮ ವ್ಯವಹಾರವನ್ನು ಮತ್ತಷ್ಟು ವಿಸ್ತರಿಸಲು ಯೋಜಿಸುತ್ತಿದ್ದಾರೆ.

Published by:ವಾಸುದೇವ್ ಎಂ
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು